Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 21:1 - ಕನ್ನಡ ಸತ್ಯವೇದವು C.L. Bible (BSI)

1 ಅರಸ ಚಿದ್ಕೀಯನು ಮಲ್ಕೀಯನ ಮಗನಾದ ಪಷ್ಹೂರನನ್ನು ಹಾಗು ಯಾಜಕ ಮಾಸೇಯನ ಮಗನಾದ ಜೆಫನ್ಯನನ್ನು ಯೆರೆಮೀಯನ ಬಳಿಗೆ ದೂತರನ್ನಾಗಿ ಕಳುಹಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಅರಸನಾದ ಚಿದ್ಕೀಯನು ಮಲ್ಕೀಯನ ಮಗನಾದ ಪಷ್ಹೂರನನ್ನೂ, ಯಾಜಕನು ಮಾಸೇಯನ ಮಗನು ಆದ ಚೆಫನ್ಯನನ್ನೂ ಯೆರೆಮೀಯನ ಬಳಿಗೆ ಕಳುಹಿಸಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಅರಸನಾದ ಚಿದ್ಕೀಯನು ಮಲ್ಕೀಯನ ಮಗನಾದ ಪಷ್ಹೂರನನ್ನೂ ಯಾಜಕ ಮಾಸೇಯನ ಮಗನಾದ ಚೆಫನ್ಯನನ್ನೂ ಯೆರೆಮೀಯನ ಬಳಿಗೆ ಕಳುಹಿಸಿ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಯೆಹೋವನಿಂದ ಯೆರೆಮೀಯನಿಗೆ ಈ ಸಂದೇಶ ಬಂದಿತು. ಯೆಹೂದದ ರಾಜನಾದ ಚಿದ್ಕೀಯನು ಮಲ್ಕೀಯನ ಮಗನಾದ ಪಷ್ಹೂರನನ್ನೂ ಮಾಸೇಯನ ಮಗನಾದ ಯಾಜಕ ಚೆಫನ್ಯನನ್ನೂ ಯೆರೆಮೀಯನ ಬಳಿಗೆ ಕಳುಹಿಸಿದಾಗ ಈ ಸಂದೇಶ ಬಂದಿತು. ಪಷ್ಹೂರ ಮತ್ತು ಚೆಫನ್ಯರು ಯೆರೆಮೀಯನಿಗೆ ರಾಜನ ಸಂದೇಶವನ್ನು ತಂದಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಅರಸನಾದ ಚಿದ್ಕೀಯನು ಮಲ್ಕೀಯನ ಮಗ ಪಷ್ಹೂರನನ್ನೂ, ಮಾಸೇಯನ ಮಗನಾದ ಯಾಜಕನಾದ ಚೆಫನ್ಯನನ್ನೂ ಯೆರೆಮೀಯನ ಬಳಿಗೆ ಕಳುಹಿಸಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 21:1
20 ತಿಳಿವುಗಳ ಹೋಲಿಕೆ  

ಹೀಗಿರುವಲ್ಲಿ ಅರಸ ಚಿದ್ಕೀಯನು ಶೆಲೆಮ್ಯನ ಮಗ ಯೆಹೂಕಲನನ್ನು ಮತ್ತು ಯಾಜಕ ಮಾಸೇಯನ ಮಗ ಚೆಫನ್ಯನನ್ನು ಯೆರೆಮೀಯನ ಬಳಿಗೆ ಕಳಿಸಿ, “ನಮಗಾಗಿ ನಮ್ಮ ದೇವರಾದ ಸರ್ವೇಶ್ವರನನ್ನು ಪ್ರಾರ್ಥಿಸು” ಎಂದು ವಿನಂತಿಸಿದನು.


“ಇಸ್ರಯೇಲರ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರ ಇಂತೆನ್ನುತ್ತಾರೆ - ‘ನೀನು ಜೆರುಸಲೇಮಿನಲ್ಲಿರುವ ಜನರೆಲ್ಲರಿಗೂ ಯಾಜಕನಾದ ಮಾಸೇಯನ ಮಗ ಚೆಫನ್ಯನಿಗೂ ಸಮಸ್ತ ಯಾಜಕರಿಗೂ ನಿನ್ನ ಹೆಸರಿನಲ್ಲೆ ಪತ್ರ ಬರೆದು ಕಳಿಸಿರುವೆ. ಚೆಫನ್ಯನಿಗೆ ನೀನು ಹೀಗೆಂದು ಬರೆದಿರುವೆ:


ರಕ್ಷಾದಳದ ನಾಯಕ ನೆಬೂಜರದಾನನು ಹಿಡಿದುಕೊಂಡು ಹೋದ ಜನರಲ್ಲಿ ಮಹಾಯಾಜಕ ಸೆರಾಯನು, ಎರಡನೇ ದರ್ಜೆಯ ಯಾಜಕ ಜೆಫನ್ಯನು, ಮೂರು ಮಂದಿ ದ್ವಾರಪಾಲಕರು ಸೇರಿದ್ದರು.


ಯೆರೆಮೀಯನು ಜನರೆಲ್ಲರಿಗೆ, “ಸರ್ವೇಶ್ವರ ಸ್ವಾಮಿ ಹೀಗೆನ್ನುತ್ತಾರೆ: ನಗರದಲ್ಲಿ ನಿಲ್ಲುವವನು ಖಡ್ಗ-ಕ್ಷಾಮ-ವ್ಯಾಧಿಗಳಿಂದ ಸಾಯುವನು. ನಗರವನ್ನು ಬಿಟ್ಟುಹೋಗಿ ಬಾಬಿಲೋನಿಯರನ್ನು ಮರೆಹೋಗುವವನು ಬದುಕುವನು. ತನ್ನ ಪ್ರಾಣವೊಂದನ್ನಾದರೂ ಬಾಚಿಕೊಂಡು ಹೋಗಿ ಬದುಕುವನು.


ಯೋಷೀಯನ ಮಗ ಚಿದ್ಕೀಯನು ಯೆಹೋಯಾಕೀಮನ ಮಗ ಕೊನ್ಯನಿಗೆ ಬದಲಾಗಿ ರಾಜ್ಯವಾಳುತ್ತಿದ್ದನು. ಬಾಬಿಲೋನಿನ ಅರಸ ನೆಬೂಕದ್ನೆಚ್ಚರನು ಅವನನ್ನು ಜುದೇಯದ ನಾಡಿಗೆ ಅರಸನನ್ನಾಗಿಸಿದ್ದನು.


ಇವರೂ ದೇವಾಲಯದ ಸೇವೆ ನಡೆಸುತ್ತಿದ್ದ ಇವರ ಬಂಧುಗಳೂ ಎಂಟುನೂರಿಪ್ಪತ್ತ ಎರಡು ಮಂದಿ. ಇವರಲ್ಲದೆ ಅದಾಯನೆಂಬವನು ಇನ್ನೊಬ್ಬನು. ಇವನು ಯೆರೋಹಾಮನ ಮಗ; ಇವನು ಪೆಲಲ್ಯನ ಮಗ; ಇವನು ಅಮ್ಚೀಯ ಮಗ; ಇವನು ಜೆಕರ್ಯನ ಮಗ; ಇವನು ಪಷ್ಹೂರನ ಮಗ; ಇವನು ಮಲ್ಕೀಯನ ಮಗ.


ಯೋಷೀಯನಿಗೆ ನಾಲ್ಕು ಜನಮಕ್ಕಳು: ಯೋಹಾನಾನ್, ಯೆಹೋಯಾಕೀಮ್, ಚಿದ್ಕೀಯ ಮತ್ತು ಶಲ್ಲೂಮ್.


ಸರ್ವೇಶ್ವರಸ್ವಾಮಿ ಬಾಬಿಲೋನಿಯದ ಅರಸನನ್ನು ಅವರ ಮೇಲೆ ಬರಮಾಡಿ ಎಲ್ಲರನ್ನೂ ಅವನ ಕೈಗೊಪ್ಪಿಸಿದರು. ಅವನು ಅವರ ಯುವ ಯೋಧರನ್ನು ಅವರ ಪವಿತ್ರಾಲಯದಲ್ಲೇ ಕತ್ತಿಯಿಂದ ಸಂಹರಿಸಿದನು. ಯುವಕರನ್ನು, ಕನ್ಯೆಯರನ್ನು, ವೃದ್ಧರನ್ನು ಹಾಗು ಅತಿವೃದ್ಧರನ್ನು ಕನಿಕರಿಸದೆ ಎಲ್ಲರನ್ನು ಕೊಲ್ಲಿಸಿದನು.


ಯಾಜಕನಾದ ಚೆಫನ್ಯನು ಈ ಪತ್ರವನ್ನು ನನ್ನ ಮುಂದೆ ಓದಿದನು.


“ಇಸ್ರಯೇಲರ ದೇವರಾದ ಸರ್ವೇಶ್ವರ ಹೀಗೆ ಎನ್ನುತ್ತಾರೆ - ನನ್ನ ಅಭಿಪ್ರಾಯವನ್ನು ವಿಚಾರಿಸಲು ನಿಮ್ಮನ್ನು ನನ್ನ ಬಳಿಗೆ ಕಳಿಸಿದ ಜುದೇಯದ ಅರಸನಿಗೆ ಹೀಗೆಂದು ಹೇಳಿರಿ: ‘ಇಗೋ, ನಿಮ್ಮ ಸಹಾಯಕ್ಕೆ ಹೊರಟಿರುವ ಫರೋಹನ ಸೈನ್ಯವು ಸ್ವದೇಶಕ್ಕೆ ಹಿಂದಿರುಗುವುದು.


ಬಳಿಕ ಅರಸ ಚಿದ್ಕೀಯನು ಅವನನ್ನು ಕರೆಯಿಸಿ, “ದೇವರಿಂದ ಯಾವುದಾದರು ಸಂದೇಶ ದೊರೆಯಿತೊ?” ಎಂದು ಮನೆಯಲ್ಲಿ ಗುಟ್ಟಾಗಿ ವಿಚಾರಿಸಿದನು. ಯೆರೆಮೀಯನು, “ಹೌದು, ದೊರೆಯಿತು. ತಾವು ಬಾಬಿಲೋನಿನ ಅರಸನ ಕೈಗೆ ಸಿಕ್ಕಿಬೀಳುವಿರಿ,” ಎಂದನು.


ಅರಸ ಚಿದ್ಕೀಯನು ಪ್ರವಾದಿ ಯೆರೆಮೀಯನನ್ನು ಸರ್ವೇಶ್ವರನ ಆಲಯದ ಮೂರನೆಯ ಬಾಗಿಲ ಬಳಿಗೆ ಕರೆತರಿಸಿ, “ನಾನು ನಿನ್ನಲ್ಲಿ ಒಂದು ವಿಷಯವನ್ನು ಕೇಳುತ್ತೇನೆ, ನನಗೆ ಏನನ್ನೂ ಮರೆಮಾಡಬೇಡ,” ಎಂದನು.


“ನಮ್ಮ ಪೂರ್ವಜರು ನಮಗೆ ಸಿಕ್ಕಿರುವ ಈ ಗ್ರಂಥವಾಕ್ಯಗಳಿಗೆ ಕಿವಿಗೊಡದೆ ಹಾಗು ಅವುಗಳನ್ನು ಕೈಕೊಳ್ಳದೆಹೋದುದರಿಂದ ಸರ್ವೇಶ್ವರನ ಉಗ್ರಕೋಪಕ್ಕೆ ಪಾತ್ರರಾಗಿದ್ದೇವೆ. ಆದುದರಿಂದ ನೀವು ನನಗಾಗಿ ಜನರಿಗಾಗಿ ಹಾಗು ಎಲ್ಲಾ ಯೆಹೂದ್ಯರಿಗಾಗಿ ಸರ್ವೇಶ್ವರನ ಬಳಿಗೆ ಹೋಗಿ ಈ ಗ್ರಂಥವಾಕ್ಯಗಳ ವಿಷಯವಾಗಿ ವಿಚಾರಿಸಿರಿ,” ಎಂದು ಆಜ್ಞಾಪಿಸಿದನು.


ಇಗ್ದಲ್ಯನ ಮಗನೂ ದೇವರ ಮನುಷ್ಯನೂ ಆದ ಹಾನಾನನ ಮಕ್ಕಳ ಕೋಣೆಯೊಳಕ್ಕೆ, ಅಂದರೆ ಪದಾಧಿಕಾರಿಗಳ ಕೋಣೆಯ ಪಕ್ಕದಲ್ಲಿ, ಶಲ್ಲೂಮನ ಮಗನೂ ದ್ವಾರಪಾಲಕನೂ ಆದ ಮಾಸೇಯನ ಕೋಣೆಯ ಮೇಲ್ಗಡೆಯಿರುವ ಕೋಣೆಯೊಳಕ್ಕೆ ಅವರೆಲ್ಲರನ್ನು ಬರಮಾಡಿದೆನು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು