Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 20:7 - ಕನ್ನಡ ಸತ್ಯವೇದವು C.L. Bible (BSI)

7 ಸರ್ವೇಶ್ವರಾ, ನೀವು ನನ್ನನ್ನು ಮರುಳಾಗಿಸಿದಿರಿ. ನಾನು ಮರುಳಾದೆ. ನೀವು ನನ್ನನ್ನು ಗೆದ್ದುಬಿಟ್ಟಿರಿ, ನೀವು ನನಗಿಂತ ಬಲಿಷ್ಠರಲ್ಲವೆ? ಎಲ್ಲರು ನನ್ನನ್ನು ಅಣಕಿಸುವವರೆ, ದಿನವೆಲ್ಲ ನಾನು ಅಪಹಾಸ್ಯಕ್ಕೆ ಬಲಿಯಾದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಯೆಹೋವನೇ, ನೀನು ನನ್ನನ್ನು ಮರುಳುಗೊಳಿಸಿದಿ, ನಾನು ಮರುಳಾದೆನು; ನೀನು ನನಗಿಂತ ಬಲಿಷ್ಠನಾಗಿ ಗೆದ್ದುಕೊಂಡಿ; ನಾನು ಹಗಲೆಲ್ಲಾ ಗೇಲಿಗೆ ಗುರಿಯಾಗಿದ್ದೇನೆ, ಎಲ್ಲರೂ ನನ್ನನ್ನು ಅಣಕಿಸುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಯೆಹೋವನೇ, ನೀನು ನನ್ನನ್ನು ಮರುಳುಗೊಳಿಸಿದಿ. ನಾನು ಮರುಳಾದೆನು; ನೀನು ನನಗಿಂತ ಬಲಿಷ್ಟನಾಗಿ ಗೆದ್ದುಕೊಂಡಿ; ನಾನು ಹಗಲೆಲ್ಲಾ ಗೇಲಿಗೆ ಗುರಿಯಾಗಿದ್ದೇನೆ, ಎಲ್ಲರೂ ನನ್ನನ್ನು ಅಣಕಿಸುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಯೆಹೋವನೇ, ನೀನು ನನ್ನನ್ನು ಮರುಳುಗೊಳಿಸಿದೆ, ನಿಜವಾಗಿಯೂ ನಾನು ಮರುಳಾದೆನು, ನೀನು ನನಗಿಂತ ಬಲಿಷ್ಠನಾದುದರಿಂದ ಗೆದ್ದೆ. ನಾನೊಂದು ತಮಾಷೆಯಾಗಿದ್ದೇನೆ. ಹಗಲೆಲ್ಲ ಜನರು ನನ್ನನ್ನು ಕಂಡು ನಗುತ್ತಾರೆ. ನನ್ನನ್ನು ಗೇಲಿ ಮಾಡುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಓ ಯೆಹೋವ ದೇವರೇ, ನೀವು ನನ್ನನ್ನು ಮರುಳಾಗಿಸಿದಿರಿ. ನಾನು ಮರುಳಾದೆನು. ನೀವು ನನಗಿಂತ ಬಲಿಷ್ಠನಾಗಿದ್ದು ಜಯಿಸಿದಿರಿ. ನಾನು ಪ್ರತಿದಿನ ಪರಿಹಾಸ್ಯಕ್ಕೆ ಗುರಿಯಾಗಿದ್ದೇನೆ. ಪ್ರತಿಯೊಬ್ಬನು ನನ್ನನ್ನು ಹಾಸ್ಯಮಾಡುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 20:7
32 ತಿಳಿವುಗಳ ಹೋಲಿಕೆ  

ಇಗೋ, ದಂಡನೆಯ ದಿನಗಳು ಸಮೀಪಿಸಿವೆ; ಮುಯ್ಯಿ ತೀರಿಸುವ ದಿನಗಳು ಬಂದಿವೆ. ಇಸ್ರಯೇಲರಿಗೆ ಇದು ತಿಳಿದಿರಲಿ. “ಪ್ರವಾದಿಯು ಹುಚ್ಚನು; ದೇವರಾತ್ಮಪ್ರೇರಿತನು ಮೂರ್ಖನು,” ಎಂದು ಹೇಳಿಕೊಳ್ಳುತ್ತೀರಿ. ಅತ್ಯಧಿಕವಾಗಿರುವ ನಿಮ್ಮ ಅಧರ್ಮ, ಮಿತಿಮೀರಿರುವ ನಿಮ್ಮ ದ್ವೇಷ ಇದಕ್ಕೆ ಕಾರಣ.


ಹಾಸ್ಯಾಸ್ಪದನಾದೆ ಸ್ವಜನರೆಲ್ಲರಿಗೆ ಗುರಿಯಾದೆ ಅವರ ದಿನನಿತ್ಯದ ಗೇಲಿ ಲಾವಣಿಗಳಿಗೆ.


ದೇವರಾತ್ಮ ನನ್ನನ್ನು ಎತ್ತಿಕೊಂಡುಹೋಯಿತು. ಸರ್ವೇಶ್ವರನ ಹಸ್ತಸ್ಪರ್ಶದಿಂದ ನಾನು ಅತಿ ಪರವಶನಾಗಿದ್ದು ವ್ಯಥೆಗೊಳ್ಳುತ್ತಾ ಮನಸ್ತಾಪಪಡುತ್ತಾ ಮುನ್ನಡೆದೆ.


‘ಸರ್ವೇಶ್ವರನ ವಿಷಯವನ್ನು ಪ್ರಕಟಿಸೆನು, ಅವರ ಹೆಸರಿನಲ್ಲಿ ಇನ್ನು ಮಾತಾಡೆನು’ ಎಂದುಕೊಂಡೆನಾದರೆ ನನ್ನ ಹೃದಯದೊಳು ಸಂಕಟ ಉಂಟಾಗುತ್ತದೆ. ಸುಡುಬೆಂಕಿ ನನ್ನೆಲುಬುಗಳಲ್ಲಿ ಅಡಗಿದೆಯೋ ಎಂಬಂತೆ ಅದನ್ನು ತಡೆತಡೆದು ದಣಿದಿರುವೆ, ಇನ್ನು ಸಹಿಸಲಾಗದಿದೆ.


ಇನ್ನೂ ಕೆಲವರು ಹಾಸ್ಯ ಪರಿಹಾಸ್ಯ, ಏಟುಪೆಟ್ಟು, ಸೆರೆಸಂಕಲೆಗಳನ್ನು ಅನುಭವಿಸಿದರು.


ಜೀವನೋಪಾಯಕ್ಕಾಗಿ ಬಾರ್ನಬ ಮತ್ತು ನಾನು ಮಾತ್ರ ದುಡಿಯಬೇಕೇ?


ಸತ್ತವರ ಪುನರುತ್ಥಾನದ ಬಗ್ಗೆ ಪೌಲನು ಮಾತಾಡಿದಾಗ ಕೆಲವರು ಪರಿಹಾಸ್ಯಮಾಡಿದರು. ಉಳಿದವರು, “ಈ ವಿಷಯದ ಬಗ್ಗೆ ನೀನು ಇನ್ನೊಮ್ಮೆ ಹೇಳಬಹುದು, ಆಗ ಕೇಳುತ್ತೇವೆ,” ಎಂದರು.


ಕೆಲವು ಎಪಿಕೂರಿಯ ಮತ್ತು ಸ್ತೋಯಿಕ ತತ್ವಶಾಸ್ತ್ರಜ್ಞರೂ ಕೂಡ ಅವನೊಡನೆ ವಾದಿಸಿದರು. ಕೆಲವರು “ಈ ಬಾಯಿಬಡುಕ ಹೇಳುವುದಾದರೂ ಏನು?” ಎಂದರು. ಪೌಲನು ಯೇಸುಸ್ವಾಮಿಯ ವಿಷಯವಾಗಿಯೂ ಪುನರುತ್ಥಾನದ ವಿಷಯವಾಗಿಯೂ ಬೋಧಿಸುತ್ತಿದ್ದುದರಿಂದ ಮತ್ತೆ ಕೆಲವರು ‘ಇವನು ವಿದೇಶೀಯ ದೇವರುಗಳ ಬಗ್ಗೆ ಮಾತನಾಡುವಂತೆ ಕಾಣುತ್ತದೆ,’ ಎಂದರು.


ಕಡೆಗೆ ಹೆರೋದನು ತನ್ನ ಸೈನಿಕರೊಡನೆ ಸೇರಿ ಯೇಸುವನ್ನು ಅಣಕಿಸಿ ಅವಮಾನಪಡಿಸಿದನು. ರಾಜವಸ್ತ್ರವನ್ನು ವೇಷಭೂಷಣವಾಗಿ ಅವರಿಗೆ ತೊಡಿಸಿ ಪಿಲಾತನ ಬಳಿಗೆ ಮರಳಿ ಕಳುಹಿಸಿಕೊಟ್ಟನು.


ಹಣದಾಶೆಯಿಂದ ಕೂಡಿದ್ದ ಫರಿಸಾಯರು ಈ ಮಾತುಗಳನ್ನೆಲ್ಲಾ ಕೇಳಿ, ಯೇಸುವನ್ನು ಪರಿಹಾಸ್ಯಮಾಡಿದರು.


ನಾನಾದರೋ ಸರ್ವೇಶ್ವರಸ್ವಾಮಿಯ ಆತ್ಮಪ್ರೇರಣೆಯಿಂದ, ಅವರ ಬಲಪರಾಕ್ರಮದಿಂದ, ನ್ಯಾಯನೀತಿಯಿಂದ ತುಂಬಿದವನು. ಯಕೋಬ ವಂಶಕ್ಕೆ ಅದರ ದ್ರೋಹವನ್ನು, ಇಸ್ರಯೇಲ್ ವಂಶಕ್ಕೆ ಅದರ ಪಾಪವನ್ನು ಪ್ರಕಟಿಸಲು ಸಮರ್ಥನು.


‘ಸರ್ವೇಶ್ವರ ನಿನ್ನನ್ನು ಯೆಹೋಯಾದನ ಸ್ಥಾನದಲ್ಲಿ ದೇವಾಲಯದ ಯಾಜಕನನ್ನಾಗಿ ನೇಮಿಸಿದ್ದಾರೆ. ಯಾವನಾದರು ಮೈದುಂಬಿ ಪ್ರವಾದಿಯಾಗಿ ನಟಿಸಿದ್ದೇ ಆದರೆ ಅವನನ್ನು ಕೊಳಕ್ಕೆಹಾಕಿ, ಕೊರಳಿಗೆ ಕವೆಯೊಡ್ಡುವ ಅಧಿಕಾರವನ್ನು ನಿನಗೆ ವಹಿಸಿದ್ದಾರೆ.


ನಾನಾದರೋ ‘ಕೇಡನ್ನು ಬರಮಾಡಿ’ ಎಂದು ನಿಮ್ಮನ್ನು ತವಕಪಡಿಸಲಿಲ್ಲ. ಅನಿವಾರ್ಯ ವಿಪತ್ತಿನ ದಿನವನ್ನು ನಾನು ಅಪೇಕ್ಷಿಸಲಿಲ್ಲ. ಇದು ನಿಮಗೆ ತಿಳಿದ ವಿಷಯ. ನನ್ನ ಮಾತುಗಳು ನಿಮ್ಮ ಸಮಕ್ಷಮದಲ್ಲೇ ನನ್ನ ಬಾಯಿಂದ ಹೊರಟವು.


ನನಗೇಕೆ ನಿರಂತರವಾದ ವೇದನೆ? ಗುಣವಾಗದ ಗಡಸು ಗಾಯ? ನೀರು ಇರುವುದಾಗಿ ತೋರಿಸಿಕೊಳ್ಳುವ ಕಳ್ಳ ತೊರೆಯಾಗಬೇಕೆ ನೀವು ನನಗೆ?”


“ನನ್ನ ಹೆತ್ತತಾಯೇ, ನನ್ನ ಗತಿಯನ್ನು ಏನು ಹೇಳಲಿ! ಜಗದ ಜನರಿಗೆಲ್ಲ ನಾನೊಬ್ಬ ಜಗಳಗಂಟಿಗ, ವ್ಯಾಜ್ಯಗಾರ. ನಾನು ಹಣವನ್ನು ಸಾಲವಾಗಿ ಕೊಟ್ಟವನಲ್ಲ, ಕೊಂಡವನೂ ಅಲ್ಲ. ಆದರೂ ನನ್ನನ್ನು ಎಲ್ಲರು ಶಪಿಸುವವರೇ.


ಎಲೀಷನು ಅಲ್ಲಿಂದ ಬೇತೇಲಿಗೆ ಹೊರಟನು. ಅಲ್ಲಿನ ಗುಡ್ಡವನ್ನು ಹತ್ತುತ್ತಿರುವಾಗ ಆ ಊರಿನ ಹುಡುಗರು ಹೊರಗೆ ಬಂದರು. “ಬೋಳು ತಲೆಯವನೇ, ಏರು; ಬೋಳುತಲೆಯವನೇ ಏರು,” ಎಂದು ಕೂಗಿ ಅವನನ್ನು ಅಣಕಿಸಿದರು.


ನೀತಿವಂತನೂ ನಿರ್ದೋಷಿಯೂ ಆದ ನಾನು ದೇವರನ್ನು ಪ್ರಾರ್ಥಿಸಿ ಪ್ರತ್ಯುತ್ತರಕ್ಕಾಗಿ ಕಾದಿರಲು ಗೆಳೆಯರ ಗೇಲಿಪರಿಹಾಸ್ಯಕೆ ಗುರಿಯಾದೆನು.


ಹಾಸ್ಯ ಅಪಹಾಸ್ಯ ಮಾಡಿದರು ಗರ್ವಿಷ್ಠರೆನ್ನನು I ಆದರೂ ನಾ ಬಿಡಲಿಲ್ಲ ನಿನ್ನ ಧರ್ಮಶಾಸ್ತ್ರವನು II


ಇದನ್ನು ಕೇಳಿದ ಅರಸ ಚಿದ್ಕೀಯನು ಯೆರೆಮೀಯನಿಗೆ, “ಬಾಬಿಲೋನಿಯದವರು ತಮ್ಮನ್ನು ಮರೆಹೊಕ್ಕಿರುವ ಯೆಹೂದ್ಯರಿಗೆ ನನ್ನನ್ನು ಒಪ್ಪಿಸಬಹುದು. ಅವರು ನನ್ನನ್ನು ಹಿಂಸಿಸಬಹುದು ಎಂಬ ಸಂಶಯ ನನಗಿದೆ,” ಎಂದು ಉತ್ತರಕೊಟ್ಟನು.


ಆಗ ಅವನು ಹೀಗೆಂದು ಮೊರೆಯಿಟ್ಟನು: “ಸ್ವಾಮೀ, ಈ ರೀತಿ ಸಂಭವಿಸುವುದೆಂದು ನಾನು ಸ್ವದೇಶವನ್ನು ಬಿಡುವ ಮುನ್ನವೇ ನಿಮಗೆ ಹೇಳಿದ್ದೆನಲ್ಲವೆ? ಈ ಕಾರಣದಿಂದಲೇ ಅಲ್ಲವೆ ನಾನು ತಾರ್ಷಿಷಿಗೆ ಓಡಿಹೋಗಲು ಪ್ರತ್ನಿಸಿದ್ದು? ನೀವು ಪ್ರೀತಿಸ್ವರೂಪಿ, ಕರುಣಾಮಯಿ, ಸಹನಾಶೀಲರಾದ ದೇವರು, ವಿಧಿಸಬೇಕೆಂದಿದ್ದ ಶಿಕ್ಷೆಯನ್ನು ಹಿಂತೆಗೆದುಕೊಳ್ಳುವ ದೇವರು - ಎಂದು ಆಗಲೇ ನನಗೆ ತಿಳಿದಿತ್ತು.


ಅಂಥವರ ಲಾವಣಿಗೆ ನಾನೀಗ ಗುರಿಯಾದೆ ಅವರ ಕಟ್ಟುಕತೆಗಳಿಗೆ ಅಡ್ಡಹೆಸರಾದೆ.


ಜನರು ಅನುಸರಿಸುವ ಮಾರ್ಗದಲ್ಲಿ ನಾನು ನಡೆಯಬಾರದೆಂದು ಸರ್ವೇಶ್ವರ ನನ್ನ ಮೇಲೆ ಬಲವಾಗಿ ಕೈಯನ್ನಿಟ್ಟು ಎಚ್ಚರಿಕೆ ಇತ್ತರು:


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು