ಯೆರೆಮೀಯ 20:18 - ಕನ್ನಡ ಸತ್ಯವೇದವು C.L. Bible (BSI)18 ಗರ್ಭ ಬಿಟ್ಟು ನಾನೇಕೆ ಹೊರಬಂದೆ? ಕಷ್ಟದುಃಖಗಳನ್ನು ಅನುಭವಿಸುವುದಕ್ಕೊ? ಅವಮಾನದಲ್ಲೆ ಬಾಳಿನ ದಿನಗಳನ್ನೆಲ್ಲ ಕಳೆಯುವುದಕ್ಕೊ? ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201918 ನಾನು ಶ್ರಮದುಃಖಗಳನ್ನು ನೋಡುವುದಕ್ಕೂ, ನನ್ನ ಆಯುಸ್ಸು ಅವಮಾನದಿಂದ ಕ್ಷಯಿಸುವುದಕ್ಕೂ ಗರ್ಭದಿಂದ ಏಕೆ ಹೊರಟು ಬಂದೆನು? ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)18 ನಾನು ಶ್ರಮದುಃಖಗಳನ್ನು ನೋಡುವದಕ್ಕೂ ನನ್ನ ಆಯುಸ್ಸು ಅವಮಾನದಿಂದ ಕ್ಷಯಿಸುವದಕ್ಕೂ ಗರ್ಭದಿಂದ ಏಕೆ ಹೊರಟುಬಂದೆನು? ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್18 ನಾನು ತಾಯಿಯ ಗರ್ಭದಿಂದ ಏಕೆ ಹೊರಬರಬೇಕಿತ್ತು? ನಾನು ಕಷ್ಟವನ್ನು ಮತ್ತು ದುಃಖವನ್ನು ಕಂಡಿರುವೆನಷ್ಟೇ. ನನ್ನ ಜೀವನವು ನಾಚಿಕೆಯಲ್ಲಿಯೇ ಕೊನೆಗೊಳ್ಳುವುದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ18 ನಾನು ಕಷ್ಟವನ್ನೂ, ಚಿಂತೆಯನ್ನೂ ನೋಡುವುದಕ್ಕೂ, ನನ್ನ ದಿವಸಗಳು ನಾಚಿಕೆಯಲ್ಲಿ ಕಳೆದುಹೋಗುವುದಕ್ಕೂ ಗರ್ಭದಿಂದ ಹೊರಗೆ ಬಂದದ್ದು ಏಕೆ? ಅಧ್ಯಾಯವನ್ನು ನೋಡಿ |