ಯೆರೆಮೀಯ 2:37 - ಕನ್ನಡ ಸತ್ಯವೇದವು C.L. Bible (BSI)37 ಅಲ್ಲಿಂದಲೂ ನಿರಾಶೆಯಿಂದ ತಲೆಯ ಮೇಲೆ ಕೈಹೊತ್ತು ಹೊರಡುವಿರಿ. ನೀವು ಯಾರಲ್ಲಿ ನಂಬಿಕೆಯಿಟ್ಟಿದ್ದಿರೋ ಅವರನ್ನು ಸರ್ವೇಶ್ವರನಾದ ನಾನು ನಿರಾಕರಿಸಿದ್ದೇನೆ. ಅವರಿಂದ ನಿಮ್ಮ ಕಾರ್ಯ ಕೈಗೂಡದು.” ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201937 ಅಲ್ಲಿಂದಲೂ ತಲೆಯ ಮೇಲೆ ಕೈಹೊತ್ತುಕೊಂಡು ಹೊರಡುವಿ; ಏಕೆಂದರೆ ನಿನ್ನ ಭರವಸೆಗಳನ್ನು ಯೆಹೋವನು ನಿರಾಕರಿಸಿದ್ದಾನೆ; ಅವುಗಳ ಮುಖಾಂತರ ನಿನ್ನ ಕಾರ್ಯವು ಕೈಗೂಡುವುದಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)37 ಅಲ್ಲಿಂದಲೂ ತಲೆಯ ಮೇಲೆ ಕೈಯಿಟ್ಟುಕೊಂಡು ಹೊರಡುವಿ; ಏಕಂದರೆ ನಿನ್ನ ಭರವಸಗಳನ್ನು ಯೆಹೋವನು ನಿರಾಕರಿಸಿದ್ದಾನೆ; ಅವುಗಳ ಮುಖಾಂತರ ನಿನ್ನ ಕಾರ್ಯವು ಸಾಗದು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್37 ಕೊನೆಗೆ ನೀನು ಈಜಿಪ್ಟನ್ನು ಬಿಡುವೆ, ನಾಚಿಕೆಯಿಂದ ತಲೆಯ ಮೇಲೆ ಕೈಯಿಟ್ಟುಕೊಂಡು ಹೊರಡುವೆ. ನೀನು ಆ ದೇಶಗಳನ್ನು ನಂಬಿರುವೆ, ಆದರೆ ಆ ದೇಶಗಳಿಂದ ನಿನಗೆ ಯಾವ ಅನುಕೂಲವೂ ಆಗದು. ಯೆಹೋವನು ಆ ದೇಶಗಳನ್ನು ನಿರಾಕರಿಸಿದ್ದಾನೆ.” ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ37 ಹೌದು, ಅಲ್ಲಿಂದ ಸಹ ನಿನ್ನ ಕೈಗಳನ್ನು ತಲೆಯ ಮೇಲೆ ಇಟ್ಟುಕೊಂಡು ಹೊರಟು ಹೋಗುವೆ. ಏಕೆಂದರೆ ಯೆಹೋವ ದೇವರು ನೀನು ಭರವಸೆ ಇಟ್ಟವುಗಳನ್ನು ತಿರಸ್ಕರಿಸಿದ್ದಾರೆ, ಅವುಗಳ ಮುಖಾಂತರ ನಿನ್ನ ಕಾರ್ಯ ಸಫಲವಾಗುವುದಿಲ್ಲ.” ಅಧ್ಯಾಯವನ್ನು ನೋಡಿ |