ಯೆರೆಮೀಯ 2:3 - ಕನ್ನಡ ಸತ್ಯವೇದವು C.L. Bible (BSI)3 “ಎಲೈ ಇಸ್ರಯೇಲ್, ನೀನು ನನಗೆ ಮೀಸಲಾದವಳು, ನನ್ನ ಬೆಳೆಯ ಪ್ರಥಮ ಫಲ. ಯಾರು ಯಾರು ಅದನ್ನು ತಿಂದರೋ ಅವರು ದ್ರೋಹಿಗಳು, ಕೇಡಿಗೆ ಗುರಿಯಾದವರು, ಎನ್ನುತ್ತಾರೆ ಸರ್ವೇಶ್ವರ.” ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20193 ಇಸ್ರಾಯೇಲ್ ಯೆಹೋವನ ಬೆಳೆಯ ಪ್ರಥಮಫಲವಾಗಿ ಆತನಿಗೆ ಮೀಸಲಾಗಿತ್ತು; ಅದನ್ನು ತಿಂದವರೆಲ್ಲರೂ ದೋಷಿಗಳಾಗಿ ಕೇಡಿಗೆ ಗುರಿಯಾಗುವರು. ಇದು ಯೆಹೋವನು ನುಡಿ.’” ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)3 ಇಸ್ರಾಯೇಲು ಯೆಹೋವನ ಬೆಳೆಯ ಪ್ರಥಮಫಲವಾಗಿ ಆತನಿಗೆ ಮೀಸಲಾಗಿತ್ತು; ಅದನ್ನು ತಿಂದುಬಿಟ್ಟವರೆಲ್ಲರೂ ದೋಷಿಗಳಾಗಿ ಕೇಡಿಗೆ ಗುರಿಯಾದರು ಎಂದು ಯೆಹೋವನು ಅನ್ನುತ್ತಾನೆ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್3 ಇಸ್ರೇಲಿನ ಜನರು ಯೆಹೋವನಿಗೆ ಒಂದು ಪವಿತ್ರವಾದ ಕಾಣಿಕೆಯಾಗಿದ್ದರು. ಅವರು ಯೆಹೋವನ ಬೆಳೆಯ ಪ್ರಥಮ ಫಲವಾಗಿದ್ದರು. ಇಸ್ರೇಲಿನ ಜನರನ್ನು ಪೀಡಿಸಲು ಪ್ರಯತ್ನಿಸಿದವರನ್ನು ಯಾರಾದರೂ ಆಗಿರಲಿ, ದೋಷಿಗಳೆಂದು ನಿರ್ಣಯಿಸಲಾಗುತ್ತಿತ್ತು. ಆ ಕೆಟ್ಟ ಜನರಿಗೆ ಕೇಡಾಗುತ್ತಿತ್ತು.’” ಇದು ಯೆಹೋವನ ಸಂದೇಶ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ3 ಇಸ್ರಾಯೇಲು ಯೆಹೋವ ದೇವರಿಗೆ ಪರಿಶುದ್ಧವೂ, ಆತನ ಹುಟ್ಟುವಳಿಯ ಪ್ರಥಮ ಫಲವೂ ಆಗಿದೆ ಅವಳನ್ನು ತಿಂದು ಬಿಟ್ಟವರೆಲ್ಲರೂ ಅಪರಾಧಿಗಳಾಗುವರು. ಅವರಿಗೆ ಕೇಡು ಬರುವುದು,’ ” ಎಂದು ಯೆಹೋವ ದೇವರು ಹೇಳುತ್ತಾರೆ. ಅಧ್ಯಾಯವನ್ನು ನೋಡಿ |