Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 2:12 - ಕನ್ನಡ ಸತ್ಯವೇದವು C.L. Bible (BSI)

12 ಆಕಾಶ ಮಂಡಲವೇ, ಇದನ್ನು ಕೇಳಿ ನಿಬ್ಬೆರಗಾಗು; ತತ್ತರಿಸಿ ಹಾಳಾಗು!” ಇದು ಸರ್ವೇಶ್ವರ ಸ್ವಾಮಿಯ ವಾಣಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಆಕಾಶಮಂಡಲವೇ, ಇದಕ್ಕೆ ಬೆಚ್ಚಿಬೆರಗಾಗು, ತತ್ತರಿಸು, ಹಾಳಾಗು” ಎಂದು ಯೆಹೋವನು ನುಡಿಯುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಆಕಾಶ ಮಂಡಲವೇ, ಇದಕ್ಕೆ ಬೆಚ್ಚಿಬೆರಗಾಗು, ತತ್ತರಿಸು, ಹಾಳಾಗು ಎಂದು ಯೆಹೋವನು ನುಡಿಯುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 “ಆಕಾಶಮಂಡಲವೇ, ನಡೆದ ಸಂಗತಿಗಳಿಗಾಗಿ ಬೆಚ್ಚಿಬೆರಗಾಗು! ಭಯದಿಂದ ನಡುಗು!” ಎಂದು ಯೆಹೋವನು ನುಡಿಯುತ್ತಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಆಕಾಶಗಳೇ, ಇದಕ್ಕೆ ನೀವು ಆಶ್ಚರ್ಯಪಡಿರಿ, ಭಯಭ್ರಾಂತಿಗೊಳ್ಳಿರಿ, ತೀರ ಹಾಳಾಗಿರಿ,” ಎಂದು ಯೆಹೋವ ದೇವರು ಹೇಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 2:12
10 ತಿಳಿವುಗಳ ಹೋಲಿಕೆ  

ಆಕಾಶಮಂಡಲವೇ, ಕೇಳು; ಭೂಮಂಡಲವೇ, ಆಲಿಸು; ಸರ್ವೇಶ್ವರಸ್ವಾಮಿ ಆಡುತ್ತಿರುವ ಮಾತುಗಳಿಗೆ ಕಿವಿಗೊಡು: “ನಾನು ಸಾಕಿ ಸಲಹಿದ ಮಕ್ಕಳೇ ನನಗೆ ದ್ರೋಹವೆಸಗಿದ್ದಾರೆ.


“ಬೆಟ್ಟಗಳೇ, ಸರ್ವೇಶ್ವರಸ್ವಾಮಿಯ ಆಪಾದನೆಯನ್ನು ಕೇಳಿರಿ. ಭೂಮಿಯ ಸ್ಥಿರವಾದ ಅಸ್ತಿಭಾರಗಳೇ, ಕಿವಿಗೊಡಿ. ಆ ಸ್ವಾಮಿಗೆ ತನ್ನ ಪ್ರಜೆಯ ಮೇಲೆ ವ್ಯಾಜ್ಯವಿದೆ; ಅವರು ಇಸ್ರಯೇಲಿನ ವಿರುದ್ಧ ವಾದಿಸುವುದನ್ನು ಗಮನಿಸಿರಿ.”


ನಾಡೇ, ನಾಡೇ, ಎಲೈ ನಾಡೇ, ಸರ್ವೇಶ್ವರನ ಮಾತಿಗೆ ಕಿವಿಗೊಡು.


ಜಗವೇ ಕೇಳು. ಇದೋ, ಈ ಜನರು ನನ್ನ ಮಾತುಗಳನ್ನು ಕೇಳದೆ, ನನ್ನ ಧರ್ಮಬೋಧನೆಯನ್ನು ಅಸಡ್ಡೆಮಾಡಿದ್ದಾರೆ. ಆದ್ದರಿಂದ ಅವರ ಮೇಲೆ ಕೇಡನ್ನು ಬರಮಾಡುವೆನು. ಅವರ ಯೋಜನೆಗಳಿಗೆ ಅದೇ ತಕ್ಕ ಪ್ರತಿಫಲ.


ಆಕಾಶಮಂಡಲವೇ, ಕೇಳು ನಾ ಹೇಳುವುದನು ಭೂಮಂಡಲವೇ, ಆಲಿಸು ನನ್ನ ಮಾತುಗಳನು.


ಆಗ ನಡುಮಧ್ಯಾಹ್ನ. ಆಗಿನಿಂದ ಮೂರು ಗಂಟೆಯವರೆಗೂ ನಾಡಿನಲ್ಲೆಲ್ಲಾ ಕತ್ತಲೆ ಕವಿಯಿತು.


ನಾನು ಭೂಮಿಯನ್ನು ನೋಡಿದೆ, ಅದು ಬಿಕೋ ಎನ್ನುತ್ತಿತ್ತು. ಆಕಾಶವನ್ನು ದಿಟ್ಟಿಸಿದೆ, ಅದರಲ್ಲಿ ಬೆಳಕೇ ಇರಲಿಲ್ಲ.


ನಿಮ್ಮನ್ನು ನೀವೇ ಬೆರಗುಮಾಡಿಕೊಂಡು ನಿಬ್ಬೆರಗಾಗಿರಿ. ಕುರುಡು ಮಾಡಿಕೊಂಡು ಕಡುಕುರುಡರಾಗಿರಿ. ಮದ್ಯಪಾನ ಮಾಡದೆಯೇ ಮತ್ತರಾಗಿರಿ, ಕುಡಿಯದೆಯೇ ಓಲಾಡಿರಿ.


ಸರ್ವೇಶ್ವರ ಇಂತೆಂದರು : “ಇಂಥ ಸುದ್ದಿಯನ್ನು ಯಾರು ಕೇಳಿದ್ದಾರೆಂದು ಅನ್ಯಜನಾಂಗಗಳಲ್ಲೆ ವಿಚಾರಿಸಿರಿ. ಇಸ್ರಯೇಲೆಂಬ ಯುವತಿ ಕೇವಲ ಅಸಹ್ಯಕಾರ್ಯವನ್ನೆ ಎಸಗಿದ್ದಾಳೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು