Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 19:7 - ಕನ್ನಡ ಸತ್ಯವೇದವು C.L. Bible (BSI)

7 ಈ ಸ್ಥಳದಲ್ಲಿ ಯೆಹೂದ್ಯರ ಮತ್ತು ಜೆರುಸಲೇಮಿನವರ ಯೋಜನೆಗಳನ್ನು ಮಣ್ಣುಪಾಲಾಗಿಸುವೆನು. ಅವರ ಶತ್ರುಗಳ ಹಾಗು ಕೊಲೆಗಡುಕರ ಕತ್ತಿಗೆ ಅವರನ್ನು ತುತ್ತಾಗಿಸುವೆನು. ಅವರ ಹೆಣಗಳನ್ನು ಆಕಾಶದ ಪಕ್ಷಿಗಳಿಗೂ ಭೂಜಂತುಗಳಿಗೂ ಆಹಾರವಾಗಿಸುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ನಾನು ಈ ಸ್ಥಳದಲ್ಲಿ ಯೆಹೂದ್ಯರ ಮತ್ತು ಯೆರೂಸಲೇಮಿನವರ ಆಲೋಚನೆಯನ್ನು ಮಣ್ಣುಪಾಲುಮಾಡಿ, ಅವರ ಪ್ರಾಣವನ್ನು ಹುಡುಕುವ ಶತ್ರುಗಳ ಖಡ್ಗದಿಂದ ಅವರನ್ನು ಬೀಳಿಸಿ, ಆ ಹೆಣಗಳನ್ನು ಆಕಾಶದ ಪಕ್ಷಿಗಳಿಗೂ ಮತ್ತು ಭೂಜಂತುಗಳಿಗೂ ಆಹಾರವನ್ನಾಗಿ ಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ನಾನು ಈ ಸ್ಥಳದಲ್ಲಿ ಯೆಹೂದ್ಯರ ಮತ್ತು ಯೆರೂಸಲೇವಿುನವರ ಆಲೋಚನೆಯನ್ನು ಚೆಲ್ಲಿ ಮಣ್ಣುಪಾಲುಮಾಡಿ ಅವರ ಪ್ರಾಣವನ್ನು ಹುಡುಕುವ ಶತ್ರುಗಳ ಖಡ್ಗದಿಂದ ಅವರನ್ನು ಬೀಳಿಸಿ ಆ ಹೆಣಗಳನ್ನು ಆಕಾಶಪಕ್ಷಿಗಳಿಗೂ ಭೂಜಂತುಗಳಿಗೂ ಆಹಾರವನ್ನಾಗಿ ಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಈ ಸ್ಥಳದಲ್ಲಿ ನಾನು ಯೆಹೂದದ ಮತ್ತು ಜೆರುಸಲೇಮಿನ ಜನರ ಯೋಜನೆಗಳನ್ನು ಹಾಳು ಮಾಡುತ್ತೇನೆ. ಶತ್ರುವು ಈ ಜನರನ್ನು ಬೆನ್ನಟ್ಟಿ ಬರುವನು. ನಾನು ಈ ಸ್ಥಳದಲ್ಲಿ ಖಡ್ಗದಿಂದ ಯೆಹೂದದ ಜನರ ಕೊಲೆಯಾಗುವಂತೆ ಮಾಡುವೆನು. ಅವರ ಹೆಣಗಳು ಪಕ್ಷಿಗಳಿಗೆ ಮತ್ತು ಕಾಡುಪ್ರಾಣಿಗಳಿಗೆ ಆಹಾರವಾಗುವಂತೆ ಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 “ ‘ನಾನು ಈ ಸ್ಥಳದಲ್ಲಿ ಯೆಹೂದದ, ಯೆರೂಸಲೇಮಿನ ಆಲೋಚನೆಯನ್ನು ಶೂನ್ಯ ಮಾಡುವೆನು. ಅವರ ಶತ್ರುಗಳ ಮುಂದೆಯೂ, ಅವರ ಪ್ರಾಣವನ್ನು ಹುಡುಕುವವರ ಕೈಯಿಂದಲೂ ಅವರನ್ನು ಖಡ್ಗದಿಂದ ಬೀಳುವಂತೆ ಮಾಡುವೆನು. ಅವರ ಹೆಣಗಳನ್ನು ಆಕಾಶದ ಪಕ್ಷಿಗಳಿಗೂ, ಕಾಡುಮೃಗಗಳಿಗೂ ಆಹಾರವಾಗಿ ಕೊಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 19:7
32 ತಿಳಿವುಗಳ ಹೋಲಿಕೆ  

ನಾನು ನಿಮ್ಮ ಮೇಲೆ ಕಡುಕೋಪಗೊಳ್ಳುವೆನು; ನೀವು ನಿಮ್ಮ ಶತ್ರುಗಳ ಮುಂದೆಯೇ ಸೋತುಬೀಳುವಿರಿ; ನಿಮ್ಮ ವೈರಿಗಳು ನಿಮ್ಮನ್ನು ಆಳುವರು. ಯಾರೂ ಬೆನ್ನಟ್ಟಿ ಬರದಿದ್ದರೂ ನೀವು ಹೆದರಿ ಓಡುವಿರಿ.


ಅವರು ಘೋರ ಮರಣಕ್ಕೆ ಗುರಿಯಾಗುವರು. ಅವರಿಗಾಗಿ ಯಾರೂ ದುಃಖಿಸುವುದಿಲ್ಲ. ಅವರನ್ನು ಯಾರೂ ಹೂಣುವುದಿಲ್ಲ. ಅವರು ಗೊಬ್ಬರವಾಗಿ ಭೂಮಿಯ ಮೇಲೆ ಬಿದ್ದಿರುವರು. ಖಡ್ಗದಿಂದ ಹಾಗು ಕ್ಷಾಮದಿಂದ ಅವರು ನಾಶವಾಗುವರು. ಅವರ ಹೆಣಗಳು ಆಕಾಶದ ಪಕ್ಷಿಗಳಿಗೂ ಭೂಮಿಯ ಜಂತುಗಳಿಗೂ ಆಹಾರವಾಗುವುವು.”


ಇವರೆಲ್ಲರನ್ನು ಶತ್ರುಗಳ ವಶಕ್ಕೆ ಒಪ್ಪಿಸುವೆನು. ಇವರ ಪ್ರಾಣವನ್ನು ಹುಡುಕುವ ಶತ್ರುಗಳ ಕೈಗೆ ಕೊಡುವೆನು. ಇವರ ಹೆಣಗಳು ಆಕಾಶದ ಪಕ್ಷಿಗಳಿಗೂ ಭೂಜಂತುಗಳಿಗೂ ಆಹಾರವಾಗುವುವು.


ಏಳು ಮಕ್ಕಳನ್ನು ಕಳೆದುಕೊಂಡ ತಾಯಿ ಪ್ರಾಣಬಿಟ್ಟಂತಿದ್ದಾಳೆ ದುಃಖದಿಂದ ಬಳಲಿ ಅವಳ ಪಾಲಿಗೆ ಸೂರ್ಯ ಮುಳುಗಿದ್ದಾನೆ ಹಾಡುಹಗಲಲ್ಲೆ. ಆಶಾಭಂಗಪಟ್ಟಿದ್ದಾಳೆ, ಅವಮಾನಕ್ಕೆ ಈಡಾಗಿದ್ದಾಳೆ. ಖಡ್ಗಕ್ಕೆ ಗುರಿಮಾಡುವೆ ಅವಳ ಉಳಿದ ಸಂತಾನವನ್ನು ಶತ್ರುಗಳ ಕಣ್ಣೆದುರಿಗೆ. ಇದು ಸರ್ವೇಶ್ವರನಾದ ನನ್ನ ನುಡಿ.”


‘ನಾವೆಲ್ಲಿಗೆ ಹೋಗಬೇಕು?’ ಎಂದು ಕೇಳಿಯಾರು. ಆಗ ನೀನು ಅವರಿಗೆ : ‘ಇದು ಸರ್ವೇಶ್ವರನ ಸಂದೇಶ: ಮರಣವ್ಯಾಧಿಗೆ ಗೊತ್ತಾದವರು ಮರಣವ್ಯಾಧಿಗೆ ಖಡ್ಗಕ್ಕೆ ಗೊತ್ತಾದವರು ಖಡ್ಗಕ್ಕೆ ಕ್ಷಾಮಕ್ಕೆ ಗೊತ್ತಾದವರು ಕ್ಷಾಮಕ್ಕೆ ಸೆರೆಗೆ ಗೊತ್ತಾದವರು ಸೆರೆಗೆ ಗುರಿಯಾಗಿ ಸಾಯುವರು’ ಎಂದು ಹೇಳು.


ಈ ಜನರ ಹೆಣಗಳು ಆಕಾಶಪಕ್ಷಿಗಳಿಗೂ ಭೂಜಂತುಗಳಿಗೂ ಆಹಾರವಾಗುವುವು. ಅವುಗಳನ್ನು ಬೆದರಿಸಿ ಓಡಿಸಲು ಯಾರೂ ಇರುವುದಿಲ್ಲ.


ಧರ್ಮಶಾಸ್ತ್ರವನ್ನು ಪಾಲಿಸುವುದರಿಂದ ಮಾತ್ರ ದೇವರ ವಾಗ್ದಾನಕ್ಕೆ ಬಾಧ್ಯತೆ ದೊರಕುವುದಾದರೆ, ಮಾನವನ ವಿಶ್ವಾಸವೂ ವ್ಯರ್ಥ; ದೇವರ ವಾಗ್ದಾನವೂ ನಿರರ್ಥಕ.


‘ವಿಶ್ವಾಸದ ಮೂಲಕ’ ಎಂದು ಒತ್ತಿ ಹೇಳುವಾಗ ಧರ್ಮಶಾಸ್ತ್ರವನ್ನು ನಾವು ಅಲ್ಲಗಳೆಯುತ್ತೇವೆಂದು ಅರ್ಥವೆ? ಎಂದಿಗೂ ಇಲ್ಲ. ಬದಲಿಗೆ ಧರ್ಮಶಾಸ್ತ್ರದ ನಿಲುವನ್ನು ಸಮರ್ಥಿಸುತ್ತೇವೆ.


ಸ್ವಾಮಿಯ ಅಪ್ಪಣೆಯಿಲ್ಲದೆ ಯಾರ ಮಾತೂ ಸಾರ್ಥಕವಾಗದು.


ಅವರ ಪ್ರಾಣವನ್ನು ಹುಡುಕುವ ಬಾಬಿಲೋನಿಯದ ಅರಸನಾದ ನೆಬೂಕದ್ನೆಚ್ಚರನ ಮತ್ತು ಅವರ ಸೇವಕರ ಕೈಗೆ ಅವರನ್ನು ಒಪ್ಪಿಸಿಬಿಡುವೆನು. ಆ ಬಳಿಕ ಈಜಿಪ್ಟಿನಲ್ಲಿ ಪೂರ್ವಕಾಲದ ಹಾಗೆ ಜನರು ವಾಸಿಸುವರು. ಇದು ಸರ್ವೇಶ್ವರನಾದ ನನ್ನ ನುಡಿ.”


ನಿನ್ನ ಪ್ರಾಣ ಹುಡುಕುತ್ತಿರುವವರ ಕೈಗೆ, ನಿನ್ನಲ್ಲಿ ಭಯಹುಟ್ಟಿಸುವವರ ಕೈಗೆ, ಅಂದರೆ ಬಾಬಿಲೋನಿನ ಅರಸ ನೆಬೂಕದ್ನೆಚ್ಚರನ ಮತ್ತು ಬಾಬಿಲೋನಿನ ಜನರ ಕೈಗೆ ನಿನ್ನನ್ನು ಕೊಟ್ಟುಬಿಡುವೆನು.


ಇವನನ್ನು ಜೆರುಸಲೇಮಿನ ಬಾಗಿಲ ಹೊರಗಡೆ ಬಿಸಾಡುವರು ಕತ್ತೆಗೆ ತಕ್ಕ ಮರ್ಯಾದೆಯೊಂದಿಗೆ ಹೂಣುವರು.”


ಆದರೆ ಈಗ ಅವರ ಮಕ್ಕಳು ಕ್ಷಾಮಕ್ಕೆ ಗುರಿಯಾಗಲಿ. ಕತ್ತಿಗೆ ತುತ್ತಾಗಲಿ. ಅವರ ಮಡದಿಯರು ವಿಧವೆಯರಾಗಲಿ, ಮಕ್ಕಳನ್ನು ಕಳೆದುಕೊಳ್ಳಲಿ, ಅವರ ಗಂಡಂದಿರು ಸತ್ತುಬೀಳಲಿ. ಯುವಕರು ಕಾಳಗ-ಕತ್ತಿಗೆ ಬಲಿಯಾಗಲಿ.


ಅವರು ಪ್ರೀತಿಸಿ, ಸೇವಿಸಿ, ಹಿಂಬಾಲಿಸಿ, ಆಶ್ರಯಿಸಿ, ಪೂಜಿಸಿದ ಸೂರ್ಯ,‍ ಚಂದ್ರ, ತಾರಾಗಣಗಳ ಎದುರಿಗೇ ಆ ಎಲುಬುಗಳನ್ನು ಹರಡಿಬಿಡುವರು. ಅವುಗಳನ್ನು ಯಾರೂ ಕೂಡಿಸಿ ಮತ್ತೆ ಹೂಣಿಡುವುದಿಲ್ಲ. ಅವು ಭೂಮಿಯ ಮೇಲೆ ಗೊಬ್ಬರದಂತೆ ಬಿದ್ದಿರುವುವು.


ವ್ಯರ್ಥವಾಗುವುದು ನೀವು ಮಾಡಿದ ಸಮಾಲೋಚನೆ; ಕೈಗೂಡದು ನೀವು ಮಾಡಿದ ಪ್ರತಿಜ್ಞೆ; ಕಾರಣ, ದೇವನಿರುವನು ನಮ್ಮೊಡನೆ.”


ಸರ್ವೇಶ್ವರನ ಮುಂದೆ ನಿಲ್ಲಬಲ್ಲ ಜ್ಞಾನವಿಲ್ಲ, ವಿವೇಚನೆಯಿಲ್ಲ, ಆಲೋಚನೆಯಿಲ್ಲ.


‘ನಾವು ಜ್ಞಾನಿಗಳು. ಸರ್ವೇಶ್ವರನ ಧರ್ಮಶಾಸ್ತ್ರ ನಮ್ಮಲ್ಲಿದೆ’ ಎಂದು ನೀವು ಹೇಗೆ ತಾನೇ ಹೇಳಬಲ್ಲಿರಿ? ಧರ್ಮಶಾಸ್ತ್ರಿಗಳ ಸುಳ್ಳು ಲೇಖನಿ ಅದನ್ನು ಸುಳ್ಳನ್ನಾಗಿ ಮಾಡಿದೆ.


ಜ್ಞಾನಿಗಳು ನಾಚಿಕೆಪಡುವರು, ನಿಬ್ಬೆರಗಾಗಿ ಬೋನಿಗೆ ಸಿಕ್ಕಿಬೀಳುವರು. ಏಕೆಂದರೆ ಸರ್ವೇಶ್ವರನಾದ ನನ್ನ ಮಾತನ್ನು ಅವರು ನಿರಾಕರಿಸಿದ್ದಾರೆ. ಇದು ತಾನೋ ಅವರ ಜ್ಞಾನ?


ಆದಕಾರಣ, ಸರ್ವೇಶ್ವರನಾದ ನಾನು ಹೇಳುತ್ತೇನೆ, ಕೇಳು: ಈ ನಗರವನ್ನು ಕಸ್ದೀಯರ ವಶಕ್ಕೆ, ಅಂದರೆ ಬಾಬಿಲೋನಿನ ಅರಸ ನೆಬೂಕದ್ನೆಚ್ಚರನ ಕೈಗೆ ಸಿಕ್ಕಿಸಲಿದ್ದೇನೆ. ಅವನು ಇದನ್ನು ಆಕ್ರಮಿಸುವನು.


ಶತ್ರುಗಳ ಕತ್ತಿಯ ಮೂಲಕ ನಿಮ್ಮನ್ನು ಸಂಹರಿಸುವೆನು.ನೀವು ನನ್ನ ನಿಬಂಧನವನ್ನು ಮೀರಿದುದರಿಂದ ಆ ಕತ್ತಿ ಪ್ರತಿದಂಡನೆ ಮಾಡುವುದು. ನೀವು ನಿಮ್ಮ ಪಟ್ಟಣಗಳಲ್ಲಿ ಕೂಡಿರುವಾಗ ಅಂಟುರೋಗವುಂಟಾಗುವಂತೆ ಮಾಡುವೆನು. ಹೀಗೆ ನೀವು ಶತ್ರುಗಳಿಗೆ ಶರಣಾಗುವಿರಿ.


ಅವರು ಈ ದಿನ ನಿನ್ನನ್ನು ನನ್ನ ಕೈಗೆ ಒಪ್ಪಿಸಿಕೊಡುವರು. ನಾನು ನಿನ್ನನ್ನು ಕೊಂದು, ನಿನ್ನ ತಲೆಯನ್ನು ಕಡಿದು, ಫಿಲಿಷ್ಟಿಯ ಸೈನ್ಯದ ಶವಗಳನ್ನು ಆಕಾಶದ ಪಕ್ಷಿಗಳಿಗೂ ವನ್ಯಮೃಗಗಳಿಗೂ ಹಂಚಿಕೊಡುವೆನು. ಇದರಿಂದ ಇಸ್ರಯೇಲರ ಸಂಗಡ ದೇವರಿದ್ದಾರೆಂಬುದು ಜಗತ್ತಿಗೆಲ್ಲಾ ತಿಳಿದುಬರುವುದು.


ನನ್ನ ಪ್ರಜೆಗಳಲ್ಲಿ ಉಳಿದಿರುವವರನ್ನು ತಳ್ಳಿಬಿಟ್ಟು ಶತ್ರುಗಳ ಕೈಗೆ ಒಪ್ಪಿಸುವೆನು. ಅವರ ಶತ್ರುಗಳೆಲ್ಲಾ ಬಂದು ಅವರನ್ನು ಸುಲಿದು ಸೂರೆಮಾಡುವರು.


ಇಂತಿರಲು ಇವರ ಮಧ್ಯೆ ಎಸಗುವೆನು ಅಧಿಕಾಶ್ಚರ್ಯವಾದ ಅದ್ಭುತಕಾರ್ಯಗಳನು, ಅಳಿವುದು ಇವರ ಜ್ಞಾನಿಗಳ ಜ್ಞಾನವು, ಅಡಗುವುದು ವಿವೇಕಿಗಳ ವಿವೇಕವು".


ಬಳಿಕ ನಾನು ಜುದೇಯದ ಅರಸ ಚಿದ್ಕೀಯನನ್ನೂ ಅವನ ಸೇವಕರನ್ನೂ ಹಾಗೂ ವ್ಯಾಧಿ, ಖಡ್ಗ, ಕ್ಷಾಮಗಳಿಂದ ಅಳಿಯದೆ ಉಳಿದ ಪ್ರಜೆಗಳನ್ನೂ ಬಾಬಿಲೋನಿನ ಅರಸ ನೆಬೂಕದ್ನೆಚ್ಚರನ ಕೈಗೂ ಅವರ ಪ್ರಾಣವನ್ನು ಹುಡುಕುತ್ತಿರುವ ಅವರ ಶತ್ರುಗಳ ಕೈಗೂ ಬಿಟ್ಟುಬಿಡುವೆನು. ಅವನು ಅವರನ್ನು ಕತ್ತಿಯಿಂದ ಕೊಂದುಹಾಕುವನು. ಅವರನ್ನು ಕರುಣಿಸನು, ಕನಿಕರಿಸನು, ಉಳಿಯಗೊಳಿಸನು.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು