Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 16:5 - ಕನ್ನಡ ಸತ್ಯವೇದವು C.L. Bible (BSI)

5 ಸರ್ವೇಶ್ವರ ಮತ್ತೆ ನನಗೆ ಹೀಗೆಂದರು : “ನೀನು ಸಾವು ಜರುಗಿದ ಮನೆಗಳಿಗೆ ಹೋಗಬೇಡ. ಅಲ್ಲಿ ನಡೆಯುವ ಗೋಳಾಟದಲ್ಲಿ ಸೇರಬೇಡ. ಎದೆಬಡಿದುಕೊಂಡು ಸಂತಾಪ ಸೂಚಿಸಬೇಕಾಗಿಲ್ಲ. ಏಕೆಂದರೆ, ನಾನು ದಯಪಾಲಿಸಿದ ಶಾಂತಿಯನ್ನೂ ಪ್ರೀತಿಯನ್ನೂ ಕೃಪೆಯನ್ನೂ ಆ ಜನರಿಂದ ತೆಗೆದುಬಿಟ್ಟಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಯೆಹೋವನು ನನಗೆ, “ಗೋಳಾಟದ ಮನೆಯಲ್ಲಿ ಸೇರಬೇಡ, ಪ್ರಲಾಪಿಸಲಿಕ್ಕೆ ಹೋಗಬೇಡ, ಅವರಿಗಾಗಿ ಎದೆ ಬಡಿದುಕೊಳ್ಳಲೂ ಬೇಡ. ನಾನು ದಯಪಾಲಿಸಿದ ಸಮಾಧಾನವನ್ನು, ಅಂದರೆ ನನ್ನ ಪ್ರೀತಿಯನ್ನೂ ಹಾಗು ಕೃಪೆಯನ್ನೂ ಈ ಜನರಿಂದ ತೆಗೆದುಬಿಟ್ಟಿದ್ದೇನಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಯೆಹೋವನು [ನನಗೆ] ಹೀಗೆ ಹೇಳಿದ್ದಾನೆ - ಗೋಳಾಟದ ಮನೆಯಲ್ಲಿ ಸೇರಬೇಡ, ಪ್ರಲಾಪಿಸಲಿಕ್ಕೆ ಹೋಗಬೇಡ, ಅವರಿಗಾಗಿ ಎದೆ ಬಡುಕೊಳ್ಳಲೂಬೇಡ; ನಾನು ದಯಪಾಲಿಸಿದ ಸಮಾಧಾನವನ್ನು, ಅಂದರೆ ನನ್ನ ಪ್ರೀತಿಯನ್ನೂ ಕೃಪೆಯನ್ನೂ ಈ ಜನರಿಂದ ತೆಗೆದುಬಿಟ್ಟಿದ್ದೇನಷ್ಟೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಯೆಹೋವನು ಹೇಳಿದನು: “ಯೆರೆಮೀಯನೇ, ಜನರು ಶವಸಂಸ್ಕಾರದ ಊಟಮಾಡುತ್ತಿರುವ ಮನೆಯೊಳಗೆ ನೀನು ಹೋಗಬೇಡ. ಸತ್ತವರ ಸಂಗಡ ಅಳುವದಕ್ಕಾಗಲಿ ಅಥವಾ ನಿನ್ನ ದುಃಖವನ್ನು ಸೂಚಿಸುವದಕ್ಕಾಗಲಿ, ನೀನು ಅಲ್ಲಿಗೆ ಹೋಗಬೇಡ. ಏಕೆಂದರೆ ನಾನು ಅವರ ಮೇಲಿನ ನನ್ನ ಕೃಪೆಯನ್ನು ಹಿಂತೆಗೆದುಕೊಂಡಿದ್ದೇನೆ. ನಾನು ಯೆಹೂದದ ಈ ಜನರಿಗೆ ಕರುಣೆಯನ್ನು ತೋರಿಸುವದಿಲ್ಲ. ನಾನು ಅವರಿಗೋಸ್ಕರ ವ್ಯಥೆಪಡುವದಿಲ್ಲ.” ಇದು ಯೆಹೋವನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ಯೆಹೋವ ದೇವರು ಹೀಗೆ ಹೇಳುತ್ತಾರೆ: “ದುಃಖದ ಮನೆಯಲ್ಲಿ ಪ್ರವೇಶಿಸಬೇಡ, ಅವರ ಸಂಗಡ ಗೋಳಾಡುವುದಕ್ಕೂ, ದುಃಖ ಪಡುವುದಕ್ಕೂ ಹೋಗಬೇಡ. ಏಕೆಂದರೆ ನಾನು ನನ್ನ ಸಮಾಧಾನವನ್ನೂ, ಪ್ರೀತಿಯನ್ನೂ, ಕನಿಕರವನ್ನೂ ಈ ಜನರಿಂದ ತೆಗೆದುಹಾಕಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 16:5
13 ತಿಳಿವುಗಳ ಹೋಲಿಕೆ  

ಮರಗಳ ರೆಂಬೆಕೊಂಬೆಗಳು ಒಣಗಿ ಮುರಿದುಹೋಗಿವೆ. ಹೆಂಗಸರ ಕೈಗೆ ಒಲೆಪಾಲಾಗುವ ಸೌದೆಯಾಗಿವೆ. ಈ ಪ್ರಜೆಗಳು ಮಂದಮತಿಗಳೇ ಸರಿ. ಈ ಕಾರಣ, ಸೃಷ್ಟಿಕರ್ತನು ಇವರನ್ನು ಕರುಣಿಸನು. ನಿರ್ಮಿಸಿದಾತನು ಇವರಿಗೆ ದಯೆ ತೋರಿಸನು.


ಆಗ ನಾನು ಅವರ ಮೇಲೆ ಬಹಳ ಸಿಟ್ಟುಗೊಂಡು, ಅವರನ್ನು ಬಿಟ್ಟು, ಅವರಿಗೆ ವಿಮುಖನಾಗುವೆನು. ಆದುದರಿಂದ ಅವರು ಸಂಹಾರಕ್ಕೆ ಗುರಿಯಾಗುವರು; ಅನೇಕ ಕಷ್ಟಗಳೂ ವಿಪತ್ತುಗಳೂ ಅವರಿಗೆ ಒದಗುವುವು. ಆಗ ಅವರು, ‘ನಮ್ಮ ದೇವರು, ನಮ್ಮ ಮಧ್ಯೆ ಇಲ್ಲದೆ ಹೋದುದರಿಂದಲೇ ಈ ವಿಪತ್ತುಗಳೆಲ್ಲಾ ನಮಗೆ ಸಂಭವಿಸಿವೆ,’ ಎಂದುಕೊಳ್ಳುವರು.


ಆಗ ಕೆಂಪು ಕುದುರೆ ಒಂದು ಹೊರಟುಬಂದಿತು. ಅದರ ಮೇಲೆ ಒಬ್ಬನು ಕುಳಿತಿದ್ದನು. ವಿಶ್ವದಲ್ಲಿ ಶಾಂತಿಯನ್ನು ಅಳಿಸಿಹಾಕಿ ಲೋಕದ ಜನರು ಒಬ್ಬರನ್ನೊಬ್ಬರು ಕೊಲ್ಲುವಂತೆ ಮಾಡುವ ಅಧಿಕಾರವನ್ನು ಅವನಿಗೆ ಕೊಡಲಾಗಿತ್ತು. ಇದಲ್ಲದೆ, ಅವನಿಗೆ ದೊಡ್ಡ ಖಡ್ಗವನ್ನೂ ಸಹ ಕೊಡಲಾಗಿತ್ತು.


ಆ ಕಾಲಕ್ಕೆ ಹಿಂದೆ ಆಳುಗಳಿಗೆ ಕೂಲಿ ಕೊಡುವುದಕ್ಕಾಗಲೀ ಎತ್ತುಗಾಡಿಗಳಿಗೆ ಬಾಡಿಗೆ ಕೊಡುವುದಕ್ಕಾಗಲೀ ಯಾರಿಗೂ ಶಕ್ತಿ ಇರಲಿಲ್ಲ. ನಾಡಿನಿಂದ ಹೋಗುವವರಿಗಾಗಲೀ ನಾಡಿನೊಳಗೆ ಪ್ರವೇಶಿಸುವವರಿಗಾಗಲಿ ಶತ್ರುಗಳ ಕಾಟದಿಂದ ರಕ್ಷಣೆ ಇರಲಿಲ್ಲ. ಒಬ್ಬರಿಗೊಬ್ಬರು ಹಗೆಗಳಾಗಿರುವಂತೆ ಮಾಡಿದ್ದೆ.


ನೆನೆಸಿಕೋ ಪ್ರಭು, ನಿನ್ನ ನಿರಂತರ ಕರುಣೆಯನು I ಆದಿಯಿಂದ ನೀ ತೋರಿದಚಲ ಪ್ರೀತಿಯನು II


ನಾಡಿನ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೆ ಕೊಳ್ಳೆಗಾರರು ಕಾಡುಗುಡ್ಡೆಗಳ ಮೇಲೆಲ್ಲ ಕಂಡುಬಂದಿದ್ದಾರೆ. ಕಬಳಿಸಿಬಿಡುವುದು ನನ್ನ ಖಡ್ಗ ಯಾರಿಗು ನೆಮ್ಮದಿಯಿಲ್ಲದ ಹಾಗೆ.


ಹಿರಿಕಿರಿಯರಾದ ಎಲ್ಲರನ್ನು ಒಬ್ಬರಿಗೊಬ್ಬರು ಬಡಿದಾಡುವಂತೆ ಮಾಡುವೆನು. ಅವರನ್ನು ಉಳಿಸೆನು, ಕನಿಕರಿಸೆನು, ಕರುಣಿಸೆನು, ಹಾಗು ನಾಶಮಾಡದೆ ಬಿಡೆನು,’ ಇದು ಸರ್ವೇಶ್ವರನಾದ ನನ್ನ ನುಡಿ.”


ಈ ಕಾರಣಗಳ ನಿಮಿತ್ತ ನೀವಾಗಲಿ ನಿಮ್ಮ ಪೂರ್ವಜರಾಗಲಿ ನೋಡದ ನಾಡಿಗೆ ನಿಮ್ಮನ್ನು ಇಲ್ಲಿಂದ ಎಸೆದುಬಿಡುವೆನು. ಅಲ್ಲಿ ಹಗಲಿರುಳೂ ಅನ್ಯದೇವತೆಗಳಿಗೆ ಸೇವೆಮಾಡುವಿರಿ, ನನ್ನ ದಯೆ ದಾಕ್ಷಿಣ್ಯ ಮಾತ್ರ ನಿಮಗೆ ದೊರಕದು".


ಶಾಂತಿಸಮಾಧಾನಕ್ಕೆ ನಾನು ದೂರವಾದೆ ಸುಖಸಂತೋಷವನ್ನು ಮರೆತುಹೋದೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು