Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 13:20 - ಕನ್ನಡ ಸತ್ಯವೇದವು C.L. Bible (BSI)

20 “ಜೆರುಸಲೇಮ್, ಕಣ್ಣೆತ್ತಿ ನೋಡು, ಉತ್ತರದಿಂದ ಬರುವವರನ್ನು ನೋಡು. ನಿನಗೆ ಒಪ್ಪಿಸಿದ ಹಿಂಡು, ಅಂದವಾದ ಆ ನಿನ್ನ ಹಿಂಡು ಎಲ್ಲಿ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

20 ಚೀಯೋನೇ, ಕಣ್ಣೆತ್ತು, ಉತ್ತರ ದಿಕ್ಕಿನಿಂದ ಬರುವವರನ್ನು ನೋಡು. ನಿನಗೆ ಒಪ್ಪಿಸಿದ ಹಿಂಡು, ನಿನ್ನ ಅಂದವಾದ ಹಿಂಡೂ ಎಲ್ಲಿ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

20 [ಚೀಯೋನೇ] ಕಣ್ಣೆತ್ತು, ಬಡಗಲಿಂದ ಬರುವವರನ್ನು ನೋಡು; ನಿನಗೆ ಒಪ್ಪಿಸಿದ ಹಿಂಡು, ನಿನ್ನ ಅಂದವಾದ ಹಿಂಡು ಎಲ್ಲಿ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

20 ಜೆರುಸಲೇಮೇ, ಮುಖವೆತ್ತಿ ನೋಡು. ಉತ್ತರ ದಿಕ್ಕಿನಿಂದ ಬರುವ ಶತ್ರುಗಳನ್ನು ನೋಡು. ನಿನ್ನ ಮಂದೆ ಎಲ್ಲಿದೆ? ದೇವರು ನಿನಗೆ ಆ ಸುಂದರವಾದ ಮಂದೆಯನ್ನು ದಯಪಾಲಿಸಿದನು. ನೀನು ಆ ಮಂದೆಯನ್ನು ನೋಡಿಕೊಳ್ಳಬೇಕಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

20 ಚೀಯೋನೇ, ಕಣ್ಣೆತ್ತು, ಉತ್ತರ ದಿಕ್ಕಿನಿಂದ ಬರುವವರನ್ನು ನೋಡು, ನಿನಗೆ ಒಪ್ಪಿಸಿದ ಹಿಂಡು, ನಿನ್ನ ಅಂದವಾದ ಹಿಂಡು ಎಲ್ಲಿ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 13:20
14 ತಿಳಿವುಗಳ ಹೋಲಿಕೆ  

ಮತ್ತೆ ಸರ್ವೇಶ್ವರ ಸ್ವಾಮಿ, “ಇಗೋ, ಉತ್ತರದಿಂದ ಒಂದು ರಾಷ್ಟ್ರ ಬರುತ್ತಿದೆ. ಅದು ಮಹಾ ಬಲಿಷ್ಠ ರಾಷ್ಟ್ರ. ಜಗದ ಕಟ್ಟಕಡೆಯಿಂದ ಹೊರಟುಬರುತ್ತಿದೆ.


ಇಗೋ, ಬಾಬಿಲೋನಿನವರನ್ನು ಹುರಿದುಂಬಿಸಲಿದ್ದೇನೆ. ಅವರು ಭಯೋತ್ಪಾದಕರು ಹಾಗೂ ಉಗ್ರಗಾಮಿಗಳು. ಅವರು ಜಗದ ಉದ್ದಗಲಕ್ಕೂ ಹರಡಿ ತಮ್ಮದಲ್ಲದ ನಾಡುಗಳನ್ನು ಆಕ್ರಮಿಸಿಕೊಳ್ಳಲು ಸಂಚರಿಸುವರು.


ಇಸ್ರಯೇಲರ ದೇವರಾದ ಸರ್ವೇಶ್ವರ, ತಮ್ಮ ಜನರೆಂಬ ಕುರಿಗಳನ್ನು ಮೇಯಿಸುವ ಕುರಿಗಾಹಿಗಳ ದ್ರೋಹವನ್ನು ಅರಿತಿದ್ದಾರೆ. ಅಂಥವರನ್ನು ಕುರಿತು ಹೀಗೆನ್ನುತ್ತಾರೆ : “ನೀವು ನನ್ನ ಮಂದೆಯನ್ನು ಚದರಿಸಿ ಓಡಿಸಿಬಿಟ್ಟಿದ್ದೀರಿ. ಅವುಗಳ ಬಗ್ಗೆ ಎಚ್ಚರ ವಹಿಸಲೇ ಇಲ್ಲ. ನಿಮ್ಮ ನೀಚಕಾರ್ಯಗಳ ನಿಮಿತ್ತ ನಿಮ್ಮನ್ನು ವಿಚಾರಣೆಗೆ ಗುರಿಪಡಿಸುವೆನು.


ಅದಕ್ಕೆ ಸ್ವಾಮಿ ನನಗೆ ಹೀಗೆಂದರು : “ಈ ನಾಡಿನ ನಿವಾಸಿಗಳೆಲ್ಲರ ಮೇಲೆ ಉತ್ತರದಿಂದ ಕೇಡು ಉಕ್ಕಿಬರುವುದು.


ನೀವು ಕಿವಿಗೊಡದಿದ್ದರೆ ನಿಮ್ಮ ಗರ್ವದ ನಿಮಿತ್ತ ನನ್ನ ಮನ ಗೋಳಾಡುವುದು ಗುಟ್ಟಾಗಿ. ನೀವು ಸೆರೆಯಾಗಿ ಹೋಗುವುದರಿಂದ ಅಳುವೆನು ಸರ್ವೇಶ್ವರನ ಮುಂದೆ ಬಹಳವಾಗಿ. ನನ್ನ ಕಣ್ಣುಗಳಿಂದ ಕಂಬನಿ ಹರಿವುದು ಧಾರಾಕಾರವಾಗಿ.


ಇದೋ ಸುದ್ದಿ, ಕೇಳಿಬರುತ್ತಿದೆ ಸುದ್ದಿ ! ದೊಡ್ಡ ಕೋಲಾಹಲವೆದ್ದಿದೆ ಉತ್ತರ ನಾಡಿನಲ್ಲಿ : ‘ಅದನ್ನು ನರಿಗಳ ಬೀಡಾಗಿಸಿರಿ ಜುದೇಯದ ನಗರಗಳನ್ನು ನಾಶಮಾಡಿ.’


ಇಗೋ, ಉತ್ತರದ ರಾಜ್ಯಗಳನ್ನೆಲ್ಲಾ ನಾನು ಕರೆಯುವೆನು; ಅವರು ಬಂದು ಜೆರುಸಲೇಮಿನ ಊರಬಾಗಿಲುಗಳ ಎದುರಿನಲ್ಲೂ ಅದರ ಎಲ್ಲ ಪೌಳಿಗೋಡೆಗಳ ಸುತ್ತಲೂ ಜುದೇಯದ ಎಲ್ಲ ನಗರಗಳಲ್ಲೂ ತಮ್ಮ ತಮ್ಮ ಸಿಂಹಾಸನಗಳನ್ನು ಹಾಕಿಕೊಳ್ಳುವರು.


ಆತನ ಕೋಪಾಗ್ನಿಯ ನಿಮಿತ್ತ ಹಾಯಾದ ಗೋಮಾಳಗಳ ಧ್ವಂಸ!


ಪ್ರಜೆಗಳ ಬಹುಸಂಖ್ಯೆ ಅರಸನಿಗೆ ಅತಿ ಹಿರಿಮೆ; ಪ್ರಜೆಗಳ ಕೊರತೆ ರಾಜಕುವರನಿಗೂ ಅಂಜಿಕೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು