Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 12:8 - ಕನ್ನಡ ಸತ್ಯವೇದವು C.L. Bible (BSI)

8 ನನ್ನ ಸೊತ್ತಾದ ಜನತೆ ನನ್ನ ಪಾಲಿಗೆ ಅರಣ್ಯದ ಸಿಂಹದಂತೆ ನನಗೆದುರಾಗಿ ಅದು ಗರ್ಜಿಸಿದೆ, ಎಂದೇ ಅದನ್ನು ಹಗೆಮಾಡಿರುವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ನನ್ನ ಸ್ವಾಸ್ತ್ಯವಾದ ಜನವು ನನ್ನ ಪಾಲಿಗೆ ಅರಣ್ಯದಲ್ಲಿರುವ ಸಿಂಹದಂತಿದೆ; ಅದು ನನ್ನ ಮೇಲೆ ಗರ್ಜಿಸಿದೆ; ಆದಕಾರಣ ಅದನ್ನು ಹಗೆಮಾಡಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ನನ್ನ ಸ್ವಾಸ್ತ್ಯವಾದ ಜನವು ನನ್ನ ಪಾಲಿಗೆ ಅರಣ್ಯದಲ್ಲಿರುವ ಸಿಂಹದಂತಿದೆ; ಅದು ನನ್ನ ಮೇಲೆ ಗರ್ಜಿಸಿದೆ; ಆದಕಾರಣ ಅದನ್ನು ಹಗೆಮಾಡಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ನನ್ನ ‘ಸ್ವಾಸ್ತ್ಯವಾದ ಜನರು’ ನನಗೊಂದು ಅರಣ್ಯದ ಸಿಂಹದಂತಾಗಿದ್ದಾರೆ. ಅವರು ನನ್ನನ್ನು ಕಂಡು ಗರ್ಜಿಸುತ್ತಾರೆ. ಆದ್ದರಿಂದಲೇ ನಾನು ಅವರಿಗೆ ವಿಮುಖನಾದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ನನ್ನ ಸೊತ್ತು ನನಗೆ ಅಡವಿಯಲ್ಲಿರುವ ಸಿಂಹದ ಹಾಗಾಯಿತು. ಅದು ನನಗೆ ವಿರೋಧವಾಗಿ ಕೂಗುತ್ತದೆ. ಆದ್ದರಿಂದ ಅದನ್ನು ಹಗೆ ಮಾಡಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 12:8
8 ತಿಳಿವುಗಳ ಹೋಲಿಕೆ  

ಸೇನಾಧೀಶ್ವರ ದೇವರಾದ ಸರ್ವೇಶ್ವರಸ್ವಾಮಿ ಪ್ರಮಾಣಮಾಡಿ ಹೇಳಿದ್ದೇನೆಂದರೆ: “ಯಕೋಬ ವಂಶದವರ ಉದ್ಧಟತನವನ್ನು ದ್ವೇಷಿಸುತ್ತೇನೆ. ಅವರ ಮೋಜಿನ ಮಹಲುಗಳನ್ನು ತೃಣೀಕರಿಸುತ್ತೇನೆ. ಅವರ ರಾಜಧಾನಿಯನ್ನೂ ಅದರಲ್ಲಿರುವುದೆಲ್ಲವನ್ನೂ ಶತ್ರುವಶಕ್ಕೆ ಒಪ್ಪಿಸುತ್ತೇನೆ.”


“ಅವರ ದುಷ್ಟತನ ಗಿಲ್ಗಾಲಿನಲ್ಲೇ ಪ್ರಾರಂಭವಾಯಿತು. ಅಲ್ಲೇ ಅವರು ನನ್ನ ದ್ವೇಷಕ್ಕೆ ಗುರಿಯಾದರು. ಅವರ ಪಾಪಕೃತ್ಯಗಳ ನಿಮಿತ್ತ ನನ್ನ ಆಲಯದಿಂದ ಹೊರಗಟ್ಟುವೆನು. ಅವರನ್ನು ಇನ್ನು ಪ್ರೀತಿಸೆನು; ಅವರ ಅಧಿಕಾರಿಗಳೆಲ್ಲ ದ್ರೋಹಿಗಳೇ.


ಒಂದೇ ತಿಂಗಳೊಳಗೆ ಮೂವರು ಕುರುಬರನ್ನು ಕೆಲಸದಿಂದ ತೆಗೆದುಹಾಕಿದೆ. ಅನಂತರ ನನಗೆ ಕುರಿಗಳ ಬಗ್ಗೆ ಅಸಹ್ಯವಾಯಿತು. ಕುರಿಗಳು ಸಹ ನನ್ನ ಬಗ್ಗೆ ಬೇಸರಗೊಂಡವು.


ಬಾಬಿಲೋನಿನವರು ಯುವಸಿಂಹಗಳಂತೆ ಒಟ್ಟಿಗೆ ಗರ್ಜಿಸುವರು, ಸಿಂಹದ ಮರಿಗಳಂತೆ ಗುರುಗುಟ್ಟುವರು.


ಶತ್ರುಗಳು ಯುವ ಸಿಂಹಗಳಂತೆ ಅವನಿಗೆ ವಿರುದ್ಧ ಗರ್ಜಿಸಿ ಆರ್ಭಟಿಸುತ್ತಿವೆ; ಅವನ ನಾಡನ್ನು ಹಾಳುಮಾಡಿವೆ, ಅವನ ಊರುಗಳು ಸುಟ್ಟು ನಿರ್ಜನವಾಗಿವೆ.


ಹೌದು, ನಿಮಗೆ ತಪ್ಪುಮಾಡಿ ನಿಮ್ಮನ್ನು ಅಲ್ಲಗಳೆದಿದ್ದೇವೆ. ನಮ್ಮ ದೇವರಾದ ನಿಮ್ಮನ್ನು ಹಿಂಬಾಲಿಸದೆ ಹಿಂದಿರುಗಿದ್ದೇವೆ; ಹಿಂಸಾಚಾರವನ್ನೂ ದಂಗೆ ಏಳುವುದನ್ನೂ ಪ್ರಚೋದಿಸಿದ್ದೇವೆ. ನಮ್ಮ ಅಂತರಾಲೋಚನೆಗಳು ಹುಸಿ; ನಮ್ಮ ಬಾಯಿಮಾತು ಸುಳ್ಳು.


ಇವಳು ಮುಚ್ಚುಮರೆಯಿಲ್ಲದೆ ಹಾದರಮಾಡಿ ತನ್ನ ಮಾನವನ್ನೇ ಕೆಡಿಸಿಕೊಂಡಾಗ ನನ್ನ ಅನುರಾಗ, ಮೊದಲು ಇವಳ ಅಕ್ಕನಿಂದ ದೂರವಾದ ಹಾಗೆ, ಇವಳಿಂದಲೂ ದೂರವಾಯಿತು.


ಅದಕ್ಕೆ ಸರ್ವೇಶ್ವರ: “ಇತ್ತೀಚೆಗೆ ನನ್ನ ಜನರಿಗೆ ನೀವೇ ಶತ್ರುಗಳು. ಜಗಳಮಾಡಲು ಒಪ್ಪದೆ, ಸಮಾಧಾನದಿಂದ ತಿರುಗಾಡುವರ ಮೇಲಂಗಿಯನ್ನು ಕಸಿದುಕೊಳ್ಳುತ್ತೀರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು