Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 12:11 - ಕನ್ನಡ ಸತ್ಯವೇದವು C.L. Bible (BSI)

11 ಹೌದು, ಹಾಳುಮಾಡಿದ್ದಾರೆ ಪಾಳುಬಿದ್ದು ಅದು ನನಗೆ ಗೋಳಿಡುತ್ತಿದೆ ಯಾವನೂ ಗಮನಕ್ಕೆ ತಂದುಕೊಳ್ಳದೆ ನಾಡೆಲ್ಲ ಬಿಕೋ ಎನ್ನುತ್ತಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಹೌದು, ಹಾಳುಮಾಡಿದ್ದಾರೆ, ಅದು ಹಾಳಾಗಿ ನನಗೆ ಗೋಳಿಡುತ್ತದೆ; ಯಾರೂ ಗಮನಿಸದೆ ಇರುವುದರಿಂದ ದೇಶವೆಲ್ಲಾ ಹಾಳುಬಿದ್ದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಹೌದು, ಹಾಳು ಮಾಡಿದ್ದಾರೆ, ಅದು ಹಾಳಾಗಿ ನನಗೆ ಗೋಳಿಡುತ್ತದೆ; ಯಾವನೂ ಮನಸ್ಸಿಗೆ ತಾರದ್ದರಿಂದ ದೇಶವೆಲ್ಲಾ ಹಾಳುಬಿದ್ದಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಹೌದು, ಮರಳುಭೂಮಿಯನ್ನಾಗಿ ಮಾಡಿದ್ದಾರೆ. ಅದು ಒಣಗಿಹೋಗಿ ನಿಸ್ಸತ್ವವಾಗಿದೆ. ಅಲ್ಲಿ ಯಾರೂ ವಾಸಿಸುವದಿಲ್ಲ. ಇಡೀ ದೇಶವೇ ಬರಿದಾದ ಮರಳುಗಾಡಾಗಿದೆ. ಆ ತೋಟವನ್ನು ನೋಡಿಕೊಳ್ಳುವದಕ್ಕೆ ಯಾರೂ ಉಳಿದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಅದನ್ನು ಹಾಳು ಮಾಡಿದ್ದಾರೆ. ಅದು ಒಣಗಿ ಬರಿದಾಗಿ ಹೋಗಿದೆ. ದೇಶವೆಲ್ಲಾ ಹಾಳಾಯಿತು. ಆದಾಗ್ಯೂ ಒಬ್ಬನಾದರೂ ಅದನ್ನು ಮನಸ್ಸಿಗೆ ತರುವುದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 12:11
23 ತಿಳಿವುಗಳ ಹೋಲಿಕೆ  

ದೈವಶಾಪದ ನಿಮಿತ್ತ ದೇಶ ದುಃಖಿಸುತ್ತಿದೆ ವ್ಯಭಿಚಾರದಿಂದ ನಾಡು ತುಂಬಿತುಳುಕುತ್ತಿದೆ ಅಡವಿಯ ಹುಲ್ಲುಗಾವಲು ಬಾಡಿದೆ. ನಾಡಿನ ಜನರು ಹಿಡಿದೋಡುತ್ತಿರುವ ಮಾರ್ಗ ದುರ್ಮಾರ್ಗ ಅನ್ಯಾಯ ಸಾಧನೆಗಾಗಿಯೆ ಅವರ ಅಧಿಕಾರ ಪ್ರಯೋಗ.


ಎಂದೇ ಸುರಿಸಿದನಾತ ರೋಷಾಗ್ನಿಯನು, ಯುದ್ಧದ ರೌದ್ರವನು ಅವರ ಮೇಲೆಲ್ಲ; ಸುತ್ತಲು ಉರಿ ಹತ್ತಿದರೂ ಅವರು ಅರಿಯಲಿಲ್ಲ, ದಹಿಸಿದರೂ ಅವರು ಕಲಿಯಲಿಲ್ಲ.


“ಜುದೇಯ ನಾಡು ದುಃಖಿಸುತ್ತಿದೆ ಅದರ ಪುರದ್ವಾರಗಳು ಬಹಳ ಕಪ್ಪಾಗಿವೆ. ಜೆರುಸಲೇಮಿನವರ ಗೋಳಾಟ ಕೇಳಿಸುತ್ತಿದೆ.


ನನ್ನ ನಾಮಕ್ಕೆ ಮಹಿಮೆ ಸಲ್ಲಿಸಬೇಕು. ಇದನ್ನು ನೀವು ಮನದಟ್ಟು ಮಾಡಿಕೊಳ್ಳಬೇಕು. ನನ್ನ ಈ ಮಾತಿಗೆ ಕಿವಿಗೊಡದಿದ್ದರೆ ನಿಮಗೆ ಶಾಪವನ್ನು ತರುವೆನು. ನಿಮ್ಮ ವರಮಾನಗಳನ್ನೆಲ್ಲ ಶಾಪವಾಗಿ ಮಾರ್ಪಡಿಸುವೆನು; ಈಗಾಗಲೇ ಮಾರ್ಪಡಿಸಿರುವೆನು. ನನ್ನ ಆಜ್ಞೆಯನ್ನು ನಿಮ್ಮಲ್ಲಿ ಯಾರೂ ಮನದಟ್ಟು ಮಾಡಿಕೊಂಡಿಲ್ಲ.


“ಯಾಜಕರಿಗೂ ನಾಡಿನ ಸಕಲ ಜನರಿಗೂ ಹೀಗೆಂದು ತಿಳಿಸಲು: ನೀವು ಕಳೆದ ಎಪ್ಪತ್ತು ವರ್ಷಗಳಿಂದ 5ನೇ ಮತ್ತು 7ನೇ ತಿಂಗಳುಗಳಲ್ಲಿ ಉಪವಾಸಮಾಡಿ ಗೋಳಾಡಿದ್ದು ನನಗೋಸ್ಕರವೋ?


ಈ ನಗರವನ್ನು ಭಯಾನಕ ಹಾಗೂ ಹಾಸ್ಯಾಸ್ಪದ ಸ್ಥಳವನ್ನಾಗಿಸುವೆನು. ಹಾದುಹೋಗುವವರೆಲ್ಲರು ಅದಕ್ಕೆ ಒದಗಿದ ವಿಪತ್ತನ್ನು ಕಂಡು ನಿಬ್ಬೆರಗಾಗಿ ಹೀಗಳೆಯುವರು.


ಸರ್ವೇಶ್ವರಾ, ನಿಮ್ಮನ್ನು ಅರಿತುಕೊಳ್ಳದವರ ಮೇಲೆ ನಿಮ್ಮ ನಾಮವನ್ನು ಉಚ್ಚರಿಸದವರ ಮೇಲೆ ನಿಮ್ಮ ಕೋಪಾಗ್ನಿಯನ್ನು ಸುರಿದುಬಿಡಿ. ಅವರು ಯಕೋಬ್ಯರನ್ನು ಕಬಳಿಸಿದ್ದಾರೆ ಹೌದು, ಪೂರ್ತಿಯಾಗಿ ಕಬಳಿಸಿಬಿಟ್ಟಿದ್ದಾರೆ ಅವರ ನಿವಾಸಗಳನ್ನು ನಾಶಮಾಡಿದ್ದಾರೆ.


ಇದೋ ಸುದ್ದಿ, ಕೇಳಿಬರುತ್ತಿದೆ ಸುದ್ದಿ ! ದೊಡ್ಡ ಕೋಲಾಹಲವೆದ್ದಿದೆ ಉತ್ತರ ನಾಡಿನಲ್ಲಿ : ‘ಅದನ್ನು ನರಿಗಳ ಬೀಡಾಗಿಸಿರಿ ಜುದೇಯದ ನಗರಗಳನ್ನು ನಾಶಮಾಡಿ.’


ಸರ್ವೇಶ್ವರ : “ಹಾಳು ದಿಬ್ಬಗಳನ್ನಾಗಿಸುವೆನು ಜೆರುಸಲೇಮನ್ನು ನರಿಗಳ ಹಕ್ಕೆಯನ್ನಾಗಿಸುವೆನು ಜುದೇಯ ಪಟ್ಟಣಗಳನ್ನು ಜನರಿಲ್ಲದ ಬೀಳುಭೂಮಿಯನ್ನಾಗಿಸುವೆನು ಅವುಗಳನ್ನು.”


ಜೆರುಸಲೇಮ್, ಎಚ್ಚರಿಕೆಯಿಂದ ನಡೆದುಕೊ. ಇಲ್ಲವಾದರೆ ನಾನು ನಿನ್ನನ್ನು ಅಗಲಿಬಿಡುವೆನು. ನಿನ್ನನ್ನು ಪಾಳುಬಿದ್ದ ನಿರ್ಜನ ಪ್ರದೇಶವಾಗಿಸುವೆನು.”


ಸಜ್ಜನರು ಸಾಯುತ್ತಾರೆ, ಆದರೆ ಯಾರೂ ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ. ಶರಣರು ಕಣ್ಮರೆಯಾಗುತ್ತಾರೆ, ‘ಇವರು ಕೇಡಿನಿಂದ ಪಾರಾದರು’ ಎಂದು ಯಾರೂ ಅರ್ಥಮಾಡಿಕೊಳ್ಳುವುದಿಲ್ಲ.


ಔತಣ ನಡೆವ ಮನೆಗೆ ಹೋಗುವುದಕ್ಕಿಂತ ಗೋಳಾಟವಿರುವ ಮನೆಗೆ ಹೋಗುವುದು ಲೇಸು, ಎಲ್ಲಾ ಮಾನವರ ಅಂತಿಮ ಗತಿ ಸಾವೇ. ಜೀವಂತರು ಇದನ್ನು ಮನಸ್ಸಿನಲ್ಲಿಡುವರು.


ಸೃಷ್ಟಿಸಮಸ್ತವು ಇಂದಿನವರೆಗೆ ನರಳುತ್ತಾ ಪ್ರಸವವೇದನೆಪಡುತ್ತಾ ಇದೆ ಎಂಬುದು ನಮಗೆ ತಿಳಿದಿದೆ.


ನಾನು ನಿಮ್ಮ ನಾಡನ್ನು ಸಂಪೂರ್ಣವಾಗಿ ಹಾಳುಮಾಡಿದಾಗ ಅದರಲ್ಲಿ ನೆಲಸುವ ಶತ್ರುಗಳು ಅದನ್ನು ನೋಡಿ ಚಕಿತರಾಗುವರು.


ನಾಶನದ ಮೇಲೆ ನಾಶನದ ಸುದ್ದಿ, ನಾಡೆಲ್ಲ ಕಾಡಾಯಿತು. ದಿಢೀರೆಂದು ನಮ್ಮ ಗುಡಾರಗಳು, ಕ್ಷಣಮಾತ್ರದಲ್ಲಿ ನಮ್ಮ ಡೇರೆಗಳು ತುಂಡುತುಂಡಾದವು !


ಸರ್ವೇಶ್ವರ ಸ್ವಾಮಿ ಹೀಗೆಂದಿದ್ದಾರೆ : ನಾಡೆಲ್ಲ ಬಟ್ಟಬರಿದಾಗುವುದು; ಆದರೆ ನಾನು ಅದನ್ನು ಸಂಪೂರ್ಣವಾಗಿ ಲಯಮಾಡುವುದಿಲ್ಲ.


ಲೋಕ ದುಃಖಿಸುವುದು ಆಕಾಶ ಕಪ್ಪಗಾಗುವುದು ಇದು ಸರ್ವೇಶ್ವರ ಆಡಿದ ಮಾತು. ಇದನ್ನು ಬದಲಾಯಿಸುವಂತಿಲ್ಲ. ಇದು ಅವರ ತೀರ್ಮಾನ; ಇದನ್ನು ರದ್ದುಗೊಳಿಸುವಂತಿಲ್ಲ.


ಈ ನಾಡೆಲ್ಲ ಹಾಳಾಗಿ ಇದನ್ನು ನೋಡುವವರು ನಿಬ್ಬೆರಗಾಗುವರು. ಇದರ ಜನರು ಎಪ್ಪತ್ತು ವರ್ಷ ಕಾಲ ಬಾಬಿಲೋನಿನ ಅರಸನಿಗೆ ಗುಲಾಮರಾಗಿ ಇರುವರು.


ಹೊಲಗದ್ದೆಗಳು ಹಾಳಾಗಿವೆ; ಧರೆ ದುಃಖಿಸುತ್ತಿದೆ; ಬಿತ್ತಿದ ದವಸಧಾನ್ಯ ಮಣ್ಣುಪಾಲಾಗಿದೆ; ದ್ರಾಕ್ಷಿಹಣ್ಣು ಒಣಗಿಹೋಗಿದೆ; ಎಣ್ಣೆ ಮರಗಳು ಬಾಡಿಹೋಗಿವೆ.


ಇಂಥವುಗಳಿಗಾಗಿ ನಾನು ಅವರನ್ನು ಹಿಂಸಿಸಬಾರದೆ? ಇಂಥ ಜನಾಂಗದ ಮೇಲೆ ಸೇಡನ್ನು ತೀರಿಸಿಕೊಳ್ಳದಿರುವೆನೆ?”


ನಾನು : ಪರ್ವತಗಳಿಗಾಗಿ ಅತ್ತು ಗೋಳಾಡುವೆನು ಅಡವಿಯ ಕಾವಲುಗಳಿಗಾಗಿ ಶೋಕಗೀತೆಯನ್ನು ಹಾಡುವೆನು ಅವು ಸುಟ್ಟುಹೋಗಿವೆ, ಯಾರೂ ಅಲ್ಲಿ ಹಾದುಹೋಗರು. ದನಕರುಗಳ ಸದ್ದೂ ಕಿವಿಗೆ ಬೀಳದು ತೊಲಗಿಹೋಗಿವೆ ಮೃಗಪಕ್ಷಿಗಳೂ !


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು