Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೆರೆಮೀಯ 11:13 - ಕನ್ನಡ ಸತ್ಯವೇದವು C.L. Bible (BSI)

13 ಎಲೈ ಯೆಹೂದ ಜನರೇ, ನಿಮಗೆ ಎಷ್ಟು ನಗರಗಳಿವೆಯೋ ಅಷ್ಟೂ ದೇವರುಗಳಿದ್ದಾರೆ. ಜೆರುಸಲೇಮಿನಲ್ಲಿ ಹಾದಿಬೀದಿಗಳು ಎಷ್ಟಿವೆಯೋ ಅಷ್ಟೂ ಬಲಿಪೀಠಗಳಿವೆ, ಆ ತುಚ್ಛ ದೇವತೆ ಬಾಳನಿಗೆ ಧೂಪಾರತಿಯೆತ್ತಲು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಯೆಹೂದದವರೇ, ನಿಮ್ಮ ಪಟ್ಟಣಗಳೆಷ್ಟೋ ನಿಮ್ಮ ದೇವರುಗಳೂ ಅಷ್ಟು. ಯೆರೂಸಲೇಮಿನ ಬೀದಿಗಳೆಷ್ಟೋ ತುಚ್ಛ ದೇವತೆಯಾದ ಬಾಳನಿಗೆ ಹೋಮ ಮಾಡುವುದಕ್ಕಾಗಿ ನೀವು ಮಾಡಿಕೊಂಡಿರುವ ಬಲಿಪೀಠಗಳೂ ಅಷ್ಟು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಯೆಹೂದದವರೇ, ನಿಮ್ಮ ಪಟ್ಟಣಗಳೆಷ್ಟೋ ನಿಮ್ಮ ದೇವರುಗಳೂ ಅಷ್ಟು; ಯೆರೂಸಲೇವಿುನ ಬೀದಿಗಳೆಷ್ಟೋ ತುಚ್ಫದೇವತೆಯಾದ ಬಾಳನಿಗೆ ಹೋಮಮಾಡುವದಕ್ಕಾಗಿ ನೀವು ಮಾಡಿಕೊಂಡಿರುವ ಬಲಿಪೀಠಗಳೂ ಅಷ್ಟು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 “ಯೆಹೂದದ ಜನರೇ, ನೀವು ಅನೇಕ ವಿಗ್ರಹಗಳನ್ನು ಇಟ್ಟುಕೊಂಡಿದ್ದೀರಿ. ಯೆಹೂದದಲ್ಲಿ ಎಷ್ಟು ಪಟ್ಟಣಗಳಿವೆಯೋ, ಅಷ್ಟು ವಿಗ್ರಹಗಳಿವೆ. ತುಚ್ಛ ದೇವರಾದ ಬಾಳನನ್ನು ಪೂಜಿಸಲು ನೀವು ಅನೇಕ ಬಲಿಪೀಠಗಳನ್ನು ಕಟ್ಟಿಕೊಂಡಿದ್ದೀರಿ. ಜೆರುಸಲೇಮಿನಲ್ಲಿ ಎಷ್ಟು ಬೀದಿಗಳಿವೆಯೋ ಅಷ್ಟು ಬಲಿಪೀಠಗಳಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಓ ಯೆಹೂದವೇ, ನಿನ್ನ ಪಟ್ಟಣಗಳಷ್ಟು ನಿನ್ನ ದೇವರುಗಳು ಇದ್ದವು. ಯೆರೂಸಲೇಮಿಗೆ ಎಷ್ಟು ಬೀದಿಗಳೋ, ಅಷ್ಟು ಬಲಿಪೀಠಗಳನ್ನು ನಾಚಿಗೆಗೆ ಎಂದರೆ, ಅಷ್ಟು ಬಲಿಪೀಠಗಳನ್ನು ಬಾಳನಿಗೆ ಧೂಪವನ್ನರ್ಪಿಸುವುದಕ್ಕೆ ಇಟ್ಟಿದ್ದೀ.’

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೆರೆಮೀಯ 11:13
24 ತಿಳಿವುಗಳ ಹೋಲಿಕೆ  

“ಎಲೈ ಯೆಹೂದ ಜನರೇ, ನೀವು ನಿರ್ಮಿಸಿಕೊಂಡ ದೇವರುಗಳು ಎಲ್ಲಿ? ನಿಮಗೆ ಕೇಡು ಸಂಭವಿಸಿದಾಗ ನಿಮ್ನನ್ನು ಉದ್ಧರಿಸಲು ಅವರು ಶಕ್ತರಾಗಿದ್ದರೆ ಎದ್ದುಬರಲಿ ! ನಿಮಗೆ ನಗರಗಳು ಎಷ್ಟಿವೆಯೋ ಅಷ್ಟೂ ದೇವರುಗಳು ಇದ್ದಾರೆ!


ಇಸ್ರಯೇಲರ ಅರಸ ಸೊಲೊಮೋನನು ಸಿದೋನ್ಯರ ಅಷ್ಟೋರೆತ್, ಮೋವಾಬ್ಯರ ಕೆಮೋಷ್, ಅಮ್ಮೋನಿಯರ ಮಿಲ್ಕೋಮ್ ಎಂಬ ಅಸಹ್ಯ ವಿಗ್ರಹಗಳಿಗಾಗಿ ಜೆರುಸಲೇಮಿನ ಎದುರಿನಲ್ಲೂ ಎಘ್ನಪರ್ವತದ ದಕ್ಷಿಣದಿಕ್ಕಿನಲ್ಲೂ ಸ್ಥಾಪಿಸಿದ ಪೂಜಾಸ್ಥಳಗಳನ್ನು ಇವನು ಹೊಲೆಮಾಡಿದನು.


ಆದರೂ ಗಿಲ್ಯಾದಿನಲ್ಲಿ ಅಧರ್ಮ ನೆಲೆಗೊಂಡಿದೆ. ಅದಕ್ಕೆ ದುರ್ಗತಿ ಕಾದಿದೆ. ಗಿಲ್ಗಾಲಿನಲ್ಲಿ ಬಸವನಿಗೆ ಯಜ್ಞಗಳನ್ನು ಅರ್ಪಿಸಲಾಗುತ್ತಿದೆ. ಅಲ್ಲಿನ ಯಜ್ಞವೇದಿಗಳು ಪುಡಿಪುಡಿಯಾಗುವುವು; ಉಳುವ ನೇಗಿಲಿಗೆ ಸಿಕ್ಕುವ ಕಲ್ಲುಕುಪ್ಪೆಗಳಾಗುವುವು.”


ತಮ್ಮ ಗಂಡುಹೆಣ್ಣು ಮಕ್ಕಳನ್ನು ಮೋಲೆಕ್ ದೇವತೆಗೆ ಆಹುತಿಕೊಡುವುದಕ್ಕಾಗಿ ಬೆನ್‍ಹಿನ್ನೋಮ್ ಕಣಿವೆಯಲ್ಲಿ ಬಾಳ್‍ದೇವತೆಗೆ ಪೂಜಾಸ್ಥಳಗಳನ್ನು ಕಟ್ಟಿಸಿದ್ದಾರೆ. ಹೀಗೆ ಯೆಹೂದ ಕುಲವನ್ನೆ ಪಾಪಕ್ಕೆ ಸಿಕ್ಕಿಸಿದ್ದಾರೆ. ನಾನು ಇಂಥ ಅಸಹ್ಯ ಕಾರ್ಯವನ್ನು ವಿಧಿಸಲಿಲ್ಲ. ಅದರ ಯೋಚನೆಕೂಡ ನನ್ನ ಮನಸ್ಸಿನಲ್ಲಿ ಸುಳಿಯಲಿಲ್ಲ.”


ತಮ್ಮ ಮಕ್ಕಳನ್ನು ಬಾಳ್‍ದೇವತೆಗೆ ಆಹುತಿಕೊಡಲು ಆ ದೇವತೆಗೆ ಬಲಿಪೀಠಗಳನ್ನು ಕೂಡ ಏರ್ಪಡಿಸಿದ್ದಾರೆ. ನಾನು ಇಂಥ ಆಚಾರಗಳನ್ನು ವಿಧಿಸಲಿಲ್ಲ. ಅದರ ಮಾತನ್ನೇ ಎತ್ತಲಿಲ್ಲ. ಅಂಥದ್ದು ನನ್ನ ಮನಸ್ಸಿಗೂ ತೋಚಿದ್ದಿಲ್ಲ.


ಕಳವು, ಕೊಲೆ, ವ್ಯಭಿಚಾರಗಳನ್ನು ಮಾಡುತ್ತೀರಿ. ಸುಳ್ಳುಸಾಕ್ಷಿ ಹೇಳುತ್ತೀರಿ. ಬಾಳನಿಗೆ ಧೂಪಾರತಿ ಎತ್ತುತ್ತೀರಿ. ಕಂಡು ಕೇಳದ ಅನ್ಯದೇವತೆಗಳನ್ನು ಆರಾಧಿಸುತ್ತೀರಿ.


ನಾವು ಚಿಕ್ಕಂದಿನಿಂದ ನೋಡಿರುವಂತೆ ನಮ್ಮ ಪಿತೃಗಳು ದುಡಿದದ್ದನ್ನೂ ಅವರ ದನಕುರಿಗಳನ್ನೂ ಅವರ ಗಂಡುಹೆಣ್ಣು ಮಕ್ಕಳನ್ನೂ ಬಾಳ್ ದೇವತೆ ಕಬಳಿಸುತ್ತಾ ಬಂದಿದೆ.


ದೇಶದಲ್ಲಿ ವಿಗ್ರಹಗಳು ತುಂಬಿ ತುಳುಕುತ್ತಿವೆ. ಜನರು ತಮ್ಮ ಕೈಯಿಂದ ಮಾಡಿದ ವಿಗ್ರಹಗಳನ್ನೇ ಪೂಜಿಸುತ್ತಿದ್ದಾರೆ.


“ಸರ್ವಶಕ್ತ ಸರ್ವೇಶ್ವರನಾದ ನಾನೇ ಈ ಇಸ್ರಯೇಲನ್ನೂ ಜುದೇಯವನ್ನೂ ನೆಟ್ಟಿ ಬೆಳೆಸಿದೆ. ಆದರೆ ಈಗ ‘ನಿನಗೆ ಕೇಡು,’ ಎಂದು ಶಪಿಸುತ್ತಿದ್ದೇನೆ. ಏಕೆಂದರೆ ಬಾಳನಿಗೆ ಧೂಪಾರತಿಯೆತ್ತಿ, ನನ್ನನ್ನು ಕೆಣಕಿ, ತಮಗೇ ಕೆಡುಕನ್ನು ಮಾಡಿಕೊಂಡಿದ್ದಾರೆ.


ಈ ಜನರು ನನ್ನನ್ನು ತೊರೆದು ಬಿಟ್ಟು ತಮಗಾಗಲಿ, ತಮ್ಮ ಪೂರ್ವಜರಿಗಾಗಲಿ, ಜುದೇಯದ ಅರಸರಿಗಾಗಲಿ ತಿಳಿಯದ ಅನ್ಯದೇವತೆಗಳಿಗೆ ಧೂಪಾರತಿ ಎತ್ತಿದ್ದಾರೆ. ಈ ಸ್ಥಳವನ್ನು ಅಪವಿತ್ರಗೊಳಿಸಿದ್ದಾರೆ. ನಿರ್ದೋಷಿಗಳ ರಕ್ತದಿಂದ ತುಂಬಿಸಿದ್ದಾರೆ.


ನೀವು, ನಿಮ್ಮ ಪೂರ್ವಜರು, ನಿಮ್ಮ ಅರಸರು, ಅಧಿಕಾರಿಗಳು, ಜನಸಾಮಾನ್ಯರು ಮತ್ತು ನೀವೆಲ್ಲರು ಜುದೇಯದ ಊರುಗಳಲ್ಲೂ ಜೆರುಸಲೇಮಿನ ಬೀದಿಗಳಲ್ಲೂ ಎತ್ತಿದ ಧೂಪಾರತಿ ಸರ್ವೇಶ್ವರನ ನೆನಪಿನಲ್ಲಿ ಇದೆ ಅಲ್ಲವೆ? ಅದನ್ನು ಅವರು ಮರೆತುಬಿಟ್ಟಿದ್ದಾರೆಯೇ?


“ಮೋವಾಬಿನ ಪೂಜಾಸ್ಥಾನಗಳಲ್ಲಿ ಬಲಿಯರ್ಪಿಸುವುದನ್ನೂ ತಮ್ಮ ದೇವರುಗಳಿಗೆ ಧೂಪಾರತಿಯೆತ್ತುವುದನ್ನೂ ನಿಲ್ಲಿಸುವೆನು. ಇದು ಸರ್ವೇಶ್ವರನಾದ ನನ್ನ ನುಡಿ.


“ನೀನು ಈ ದುಷ್ಕೃತ್ಯಗಳನ್ನೆಲ್ಲಾ ನಡೆಸಿದ್ದಲ್ಲದೆ ಪ್ರತಿಯೊಂದು ಚೌಕದಲ್ಲಿ ಮಂಟಪವನ್ನು ಮಾಡಿ ಜಗಲಿಯನ್ನು ಕಟ್ಟಿಕೊಂಡಿರುವೆ.


ಬೆಂಗಾಡಿನಲ್ಲಿ ದ್ರಾಕ್ಷೆ ಸಿಕ್ಕಿದಂತೆ ಇಸ್ರಯೇಲ್ ನನಗೆ ಸಿಕ್ಕಿತು. ಅಂಜೂರದ ಮರದ ಮೊತ್ತಮೊದಲ ಹಣ್ಣು ಕಣ್ಣಿಗೆ ಬೀಳುವಂತೆ ನಿಮ್ಮ ಪಿತೃಗಳು ನನಗೆ ಕಾಣಿಸಿಕೊಂಡರು. ಆದರೆ ಅವರು ಬಾಳ್‍ಪೆಗೋರಿಗೆ ಬಂದು ಬಾಳ್ ದೇವತೆಯ ಭಕ್ತರಾದರು. ಅವರು ನೆಚ್ಚಿಕೊಂಡ ದೇವತೆಯಂತೆ ನೀಚರಾದರು.


ಅನ್ಯದೇವತೆಗಳಿಗೆ ಧೂಪಹಾಕುವುದಕ್ಕಾಗಿ ಜುದೇಯದ ಎಲ್ಲ ಪಟ್ಟಣಗಳಲ್ಲೂ ಪೂಜಾಸ್ಥಳಗಳನ್ನು ನಿರ್ಮಿಸಿದನು. ಹೀಗೆ ತನ್ನ ಪಿತೃಗಳ ದೇವರಾದ ಸರ್ವೇಶ್ವರನನ್ನು ರೇಗಿಸಿದನು.


ನಾವೇ ತಂದುಕೊಂಡ ಅವಮಾನವೆಂಬ ಹಾಸಿಗೆಯಲ್ಲಿ ಬಿದ್ದಿರೋಣ. ನಾಚಿಕೆಯೆಂಬ ಹೊದಿಕೆ ನಮ್ಮನ್ನು ಮುಚ್ಚಿಬಿಡಲಿ. ಚಿಕ್ಕತನದಿಂದ ಈವರೆಗು ನಾವೂ ನಮ್ಮ ಪೂರ್ವಜರೂ ನಮ್ಮ ದೇವರಾದ ಸರ್ವೇಶ್ವರ ಸ್ವಾಮಿಗೆ ಇದಿರಾಗಿ ಪಾಪಮಾಡುತ್ತಾ ಬಂದಿರುವುದು ನಿಶ್ಚಯ. ಆ ಸ್ವಾಮಿಯ ಮಾತನ್ನು ಕೇಳದೆಹೋದೆವಲ್ಲಾ!” ಎಂದು ಮೊರೆಯಿಡುತ್ತಿದ್ದಾರೆ.


ಸರ್ವೇಶ್ವರ ಸ್ವಾಮಿ ಜುದೇಯದ ಜನರಿಗೆ ಹೀಗೆನ್ನುತ್ತಾರೆ : “ಜುದೇಯದ ಪಾಪವನ್ನು ಕಬ್ಬಿಣದ ಲೇಖನಿಯಿಂದ, ವಜ್ರದ ಮೊನೆಯಿಂದ ಬರೆಯಲಾಗಿದೆ. ಅದನ್ನು ನಿಮ್ಮ ಜನರ ಹೃದಯದ ಹಲಗೆಯ ಮೇಲೂ ಅವರ ಬಲಿಪೀಠಗಳ ಕೊಂಬುಗಳ ಮೇಲೂ ಕೆತ್ತಲಾಗಿದೆ.


ನನ್ನ ಜನರಾದರೋ ನನ್ನನ್ನು ಮರೆತು ವ್ಯರ್ಥವಿಗ್ರಹಗಳಿಗೆ ಧೂಪಾರತಿ ಎತ್ತಿದ್ದುಂಟು. ಸನಾತನ ಸನ್ಮಾರ್ಗಗಳಲ್ಲಿ ಮುಗ್ಗರಿಸಿ ಸರಿಯಲ್ಲದ ಸೀಳುದಾರಿಯಲ್ಲಿ ಅಲೆದದ್ದುಂಟು.


ಆದರೂ ಅವರು ಕಿವಿಗೊಟ್ಟು ಕೇಳಲಿಲ್ಲ. ಅನ್ಯದೇವತೆಗಳಿಗೆ ಧೂಪಾರತಿ ಎತ್ತುವುದನ್ನು ನಿಲ್ಲಿಸಲಿಲ್ಲ. ತಮ್ಮ ದುರಾಚಾರವನ್ನು ಕೈಬಿಡಲಿಲ್ಲ.


ಇಸ್ರಯೇಲ್ ಸೊಂಪಾಗಿ ಬೆಳೆದ ದ್ರಾಕ್ಷಾಲತೆ, ಫಲಭರಿತ ದ್ರಾಕ್ಷಾಬಳ್ಳಿ, ಅದರ ಫಲ ಹೆಚ್ಚಿದಂತೆಲ್ಲ ಬಲಿಪೀಠಗಳು ಹೆಚ್ಚಿಕೊಂಡಿವೆ. ಆ ನಾಡು ಅಭಿವೃದ್ಧಿಯಾದಂತೆಲ್ಲ, ಹೆಚ್ಚು ಸುಂದರವಾದ ವಿಗ್ರಹಸ್ತಂಭಗಳು ನಿರ್ಮಿತವಾಗಿವೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು