Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯೂದನು 1:3 - ಕನ್ನಡ ಸತ್ಯವೇದವು C.L. Bible (BSI)

3 ಪ್ರಿಯ ಸಹೋದರರೇ, ನಮ್ಮೆಲ್ಲರಿಗೂ ಲಭಿಸಿರುವ ಜೀವೋದ್ಧಾರವನ್ನು ಕುರಿತು ಬರೆಯಲು ಅತ್ಯಾಸಕ್ತನಾಗಿದ್ದೆನು. ಆದರೆ, ದೇವಜನರಿಗೆ ಒಮ್ಮೆಗೇ ಶಾಶ್ವತವಾಗಿ ಕೊಡಲಾಗಿರುವ ವಿಶ್ವಾಸವನ್ನು ಕಾಪಾಡಿಕೊಳ್ಳುವುದಕ್ಕಾಗಿ ಹೋರಾಡಬೇಕೆಂದು ನಿಮ್ಮನ್ನು ಪ್ರೋತ್ಸಾಹಿಸಿ ಬರೆಯುವುದು ಅವಶ್ಯವೆಂದು ತೋರಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಪ್ರಿಯರೇ, ನಮಗೆ ಹುದುವಾಗಿರುವ ರಕ್ಷಣೆಯ ವಿಷಯದಲ್ಲಿ ನಿಮಗೆ ಬರೆಯುವುದಕ್ಕೆ ಪೂರ್ಣಾಸಕ್ತಿಯಿಂದ ಪ್ರಯತ್ನ ಮಾಡುತ್ತಿದ್ದಾಗ, ದೇವಜನರಿಗೆ ಶಾಶ್ವತವಾಗಿರುವಂತೆ ಒಂದೇ ಸಾರಿ ಒಪ್ಪಿಸಲ್ಪಟ್ಟ ನಂಬಿಕೆಯನ್ನು ಕಾಪಾಡಿಕೊಳ್ಳುವುದಕ್ಕೆ, ನೀವು ಹೋರಾಡಬೇಕೆಂದು ಎಚ್ಚರಿಸಿ ಬರೆಯುವುದು ನನಗೆ ಅವಶ್ಯವೆಂದು ತೋರಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಪ್ರಿಯರೇ, ನಮಗೆ ಹುದುವಾಗಿರುವ ರಕ್ಷಣೆಯ ವಿಷಯದಲ್ಲಿ ನಿಮಗೆ ಬರೆಯುವದಕ್ಕೆ ಪೂರ್ಣಾಸಕ್ತಿಯಿಂದ ಪ್ರಯತ್ನಮಾಡುತ್ತಿದ್ದಾಗ ದೇವಜನರಿಗೆ ಶಾಶ್ವತವಾಗಿರುವಂತೆ ಒಂದೇ ಸಾರಿ ಒಪ್ಪಿಸಲ್ಪಟ್ಟ ನಂಬಿಕೆಯನ್ನು ಕಾಪಾಡಿಕೊಳ್ಳುವದಕ್ಕೆ ನೀವು ಹೋರಾಡಬೇಕೆಂದು ಎಚ್ಚರಿಸಿ ಬರೆಯುವದು ಅವಶ್ಯವೆಂದು ತೋಚಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಪ್ರಿಯ ಸ್ನೇಹಿತರೇ, ನಾವೆಲ್ಲರೂ ಹಂಚಿಕೊಳ್ಳುವ ರಕ್ಷಣೆಯನ್ನು ಕುರಿತು ನಿಮಗೆ ಬರೆಯಬೇಕೆಂದು ನಾನು ಬಹಳವಾಗಿ ಇಚ್ಛಿಸಿದ್ದೆನು. ಆದರೆ ಮತ್ತೊಂದು ವಿಷಯದ ಬಗ್ಗೆ ನಾನು ನಿಮಗೆ ಬರೆಯುವುದು ಅಗತ್ಯವೆನಿಸಿತು. ದೇವರು ತನ್ನ ಪರಿಶುದ್ಧ ಜನರಿಗೆ ದಯಪಾಲಿಸಿರುವ ನಂಬಿಕೆಗಾಗಿ ನೀವು ಪ್ರಯಾಸಪಟ್ಟು ಹೋರಾಡುವಂತೆ ನಾನು ನಿಮ್ಮನ್ನು ಪ್ರೋತ್ಸಾಹಿಸಲು ಇಚ್ಛಿಸುತ್ತೇನೆ. ದೇವರು ನಮಗೆ ಈ ನಂಬಿಕೆಯನ್ನು ಒಂದೇಸಲ ದಯಪಾಲಿಸಿದನು. ಅದು ಸರ್ವಕಾಲಗಳಲ್ಲಿಯೂ ಒಳ್ಳೆಯದಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಪ್ರಿಯ ಸ್ನೇಹಿತರೇ, ನಾವು ಹಂಚಿಕೊಳ್ಳುವ ರಕ್ಷಣೆಯ ವಿಷಯದಲ್ಲಿ ನಿಮಗೆ ಬರೆಯುವುದಕ್ಕೆ ಪೂರ್ಣಜಾಗ್ರತೆಯಿಂದ ಪ್ರಯತ್ನ ಮಾಡುತ್ತಿದ್ದಾಗ, ಪರಿಶುದ್ಧರಿಗೆ ಒಂದೇ ಸಾರಿ ಒಪ್ಪಿಸಲಾದ ನಂಬಿಕೆಯನ್ನು ಕಾಪಾಡಿಕೊಳ್ಳುವುದಕ್ಕೆ ನೀವು ಹೋರಾಡಬೇಕೆಂದು ಎಚ್ಚರಿಸಿ ಬರೆಯುವುದು ನನಗೆ ಅವಶ್ಯವೆಂದು ತೋರಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

3 ಮಾಜ್ಯಾ ಪ್ರೆಮಾಚ್ಯಾನು, ಅಮಿ ಸಗ್ಳೆ ವಾಟುನ್ ಘೆಟಲ್ಲ್ಯಾ ಸುಟ್ಕೆಚ್ಯಾ ವಿಶಯಾತ್ ತುಮ್ಕಾ ಲಿವ್ಚೆ ಮನುನ್ ಮಿಯಾ ಉಮ್ಮೆದಿನ್ ತಯಾರಿ ಕರ್ತಾನಾ, ಸಗ್ಳ್ಯಾ ದೆವಾಚ್ಯಾ ಲೊಕಾಕ್ನಿ ಲೈ ತರಾಸಾನ್ ಎಗ್ದಾಚ್ ದಿಲ್ಲ್ಯಾ ವಿಶ್ವಾಸಾಚ್ಯಾ ವಿಶಯಾತ್ ತುಮ್ಚ್ಯಾಕ್ಡೆ ವಿನಂತಿ ಕರ್ತಲೆ ಗರ್ಜೆಚೆ ಮನುನ್ ಮಾಕಾ ದಿಸ್ಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯೂದನು 1:3
44 ತಿಳಿವುಗಳ ಹೋಲಿಕೆ  

ನಿತ್ಯಜೀವವೆಂಬ ಬಹುಮಾನವನ್ನು ಗಳಿಸಲು ವಿಶ್ವಾಸವೆಂಬ ಪಂದ್ಯದಲ್ಲಿ ಉತ್ತಮ ಓಟಗಾರನಾಗಿ ಓಡು. ಇದಕ್ಕಾಗಿಯೇ ದೇವರು ನಿನ್ನನ್ನು ಆರಿಸಿಕೊಂಡರೆಂಬುದನ್ನು ಮರೆಯಬೇಡ. ಈ ಗುರಿಯನ್ನು ಮುಂದಿಟ್ಟುಕೊಂಡೇ ನೀನು ಅನೇಕರ ಮುಂದೆ ವಿಶ್ವಾಸಪ್ರಮಾಣ ಮಾಡಿರುವೆ.


ಅದೇನೇ ಇರಲಿ, ನೀವು ಮಾತ್ರ ಕ್ರಿಸ್ತಯೇಸುವಿನ ಶುಭಸಂದೇಶಕ್ಕೆ ಯೋಗ್ಯರಾಗಿ ನಡೆದುಕೊಳ್ಳಿರಿ. ನಾನು ನಿಮ್ಮಲ್ಲಿಗೆ ಬಂದರೂ ಸರಿ, ಬಾರದಿದ್ದರೂ ಸರಿ, ಇದು ಮುಖ್ಯವಲ್ಲ. ಶುಭಸಂದೇಶವು ನೀಡುವ ವಿಶ್ವಾಸಕ್ಕಾಗಿ ನೀವು ಒಮ್ಮನಸ್ಸಿನಿಂದ, ಕೆಚ್ಚಿನಿಂದ ಹೋರಾಡುವುದೇ ಮುಖ್ಯ. ಇದು ನನಗೆ ತಿಳಿದುಬಂದರೆ ಅಷ್ಟೇ ಸಾಕು.


ಪ್ರಿಯರೇ, ನೀವಾದರೋ ಅತಿ ಪರಿಶುದ್ಧ ವಿಶ್ವಾಸದ ಆಧಾರದ ಮೇಲೆ ನಿರ್ಮಿಸಲಾದ ಮಂದಿರದಂತೆ ಪ್ರವರ್ಧಿಸಿರಿ; ಪವಿತ್ರಾತ್ಮ ಅವರಿಂದ ಪ್ರೇರಿತರಾಗಿ ಪ್ರಾರ್ಥಿಸಿರಿ.


ಜಯಿಸಿದರು ಸೋದರರು ಆ ನಿಂದಕನನ್ನು ಯಜ್ಞದ ಕುರಿಮರಿಯ ರಕ್ತದಿಂದ ಸತ್ಯಕ್ಕೆ ಸಾಕ್ಷಿಯನ್ನಿತ್ತುದರಿಂದ ಜೀವದಾಶೆಯನು ತೊರೆದುದರಿಂದ ಮರಣದ ಭಯವನು ಬಿಸುಟುದರಿಂದ.


ನಿನಗೆ ಬಂದೊದಗಲಿರುವ ಯಾತನೆಯಿಂದಾಗಿ ಎದೆಗುಂದಬೇಡ. ನೋಡು, ಪರಿಶೋಧನೆಗೆ ಗುರಿಯಾಗುವಂತೆ ನಿಮ್ಮಲ್ಲಿ ಕೆಲವರನ್ನು ಸೈತಾನನು ಸೆರೆಮನೆಗೆ ತಳ್ಳುವನು. ಹತ್ತು ದಿನಗಳು ನೀನು ಕಷ್ಟಸಂಕಟಗಳನ್ನು ಅನುಭವಿಸಬೇಕಾಗುವುದು; ಸಾಯಬೇಕಾಗಿ ಬಂದರೂ ಸ್ವಾಮಿನಿಷ್ಠೆಯಿಂದಿರು. ಆಗ ನಾನು ಜೀವವೆಂಬ ಜಯಮಾಲೆಯನ್ನು ನಿನಗೆ ಕೊಡುತ್ತೇನೆ.


ಕ್ರಿಸ್ತಯೇಸುವಿನಲ್ಲಿ ನಮ್ಮದಾಗಿರುವ ವಿಶ್ವಾಸ ಹಾಗೂ ಪ್ರೀತಿಯಲ್ಲಿ ನೀನು ನೆಲೆಗೊಂಡಿರು. ನಾನು ಬೋಧಿಸಿದ್ದನ್ನು ಆದರ್ಶವಾಗಿಟ್ಟುಕೊಂಡು ಅನುಸರಿಸು.


ತಿಮೊಥೇಯನೇ, ನನ್ನ ಕುಮಾರನೇ, ಹಿಂದೆ ನಿನ್ನ ಕುರಿತು ಮಾಡಲಾಗಿರುವ ಪ್ರವಾದನೆಗಳಿಗೆ ಅನುಗುಣವಾಗಿ ನಾನು ನಿನಗೆ ಕೊಡುವ ಆಜ್ಞೆ ಇದು: ಪ್ರವಾದನೆಗಳಿಂದ ಪ್ರೇರಣೆ ಪಡೆದು ದಿಟ್ಟಹೋರಾಟವನ್ನು ಮಾಡು.


ಆದರೆ ನಾವು ಅವರಿಗೆ ಕ್ಷಣಮಾತ್ರವೂ ಬಿಟ್ಟುಕೊಡಲಿಲ್ಲ. ಹೀಗೆ ನಿಮಗೋಸ್ಕರ ಶುಭಸಂದೇಶದ ಸತ್ಯಾರ್ಥವನ್ನು ಸುಭದ್ರವಾಗಿ ಇರಿಸಿದೆವು.


ಸಹೋದರರೇ, ಈ ಬುದ್ಧಿಮಾತುಗಳನ್ನು ತಾಳ್ಮೆಯಿಂದ ಸ್ವೀಕರಿಸಬೇಕೆಂದು ಕೇಳಿಕೊಳ್ಳುತ್ತೇನೆ. ಇವನ್ನು ಸಂಕ್ಷೇಪವಾಗಿಯೇ ನಿಮಗೆ ಬರೆದಿದ್ದೇನೆ.


ಸೌಲನಾದರೋ ಮತ್ತಷ್ಟು ಸಾಮರ್ಥ್ಯದಿಂದ ಪ್ರಭು ಯೇಸುವೇ ಲೋಕೋದ್ಧಾರಕನೆಂದು ರುಜುವಾತುಪಡಿಸಿ ದಮಸ್ಕಸಿನ ಯೆಹೂದ್ಯರ ಬಾಯಿಮುಚ್ಚಿಸಿದನು.


“ಎಲ್ಲೆ ಎಲ್ಲೆಗಳಲ್ಲಿರುವ ಜನರೇ, ತಿರುಗಿಕೊಳ್ಳಿರಿ ನನ್ನ ಕಡೆಗೆ, ಆಗ ಉದ್ಧಾರವಾಗುವಿರಿ. ದೇವರು ಬೇರಾರೂ ಇಲ್ಲ, ನಾನೊಬ್ಬನೆ ಎಂಬುದನರಿಯಿರಿ.


ಆಗ ಸರ್ವೇಶ್ವರ ತಮ್ಮ ಕೈಯಿಂದಲೇ ಬರೆದ ಆ ಎರಡು ಕಲ್ಲಿನ ಹಲಗೆಗಳನ್ನು ನನ್ನ ವಶಕ್ಕೆ ಕೊಟ್ಟರು. ನೀವು ಸಭೆಕೂಡಿದ ದಿನದಲ್ಲಿ ಸರ್ವೇಶ್ವರ ಆ ಬೆಟ್ಟದ ಮೇಲೆ ಅಗ್ನಿಜ್ವಾಲೆಯೊಳಗಿಂದ ನಿಮ್ಮ ಸಂಗಡ ಹೇಳಿದ ಮಾತುಗಳು ಆ ಹಲಗೆಗಳಲ್ಲಿದ್ದವು.


ನಿಮಗೆ ತಿಳಿದಿರುವಂತೆ ನಾವು ನಿಮ್ಮಲ್ಲಿಗೆ ಬರುವ ಮೊದಲೇ ಫಿಲಿಪ್ಪಿ ಪಟ್ಟಣದಲ್ಲಿ ಹಿಂಸೆ, ಅವಮಾನಗಳನ್ನು ಸಹಿಸಿದೆವು. ತೀವ್ರವಾದ ವಿರೋಧವಿದ್ದರೂ ದೇವರ ನೆರವಿನಿಂದ ನಿರ್ಭೀತರಾಗಿ ಶುಭಸಂದೇಶವನ್ನು ನಿಮಗೆ ಸಾರಿದೆವು.


ನಾನು ಪಡೆದುಕೊಂಡದ್ದನ್ನು ಮುಖ್ಯವಾದುದು ಎಂದೆಣಿಸಿ ನಿಮಗೆ ಒಪ್ಪಿಸಿದ್ದೇನೆ. ಅದು ಯಾವುದೆಂದರೆ, ಪವಿತ್ರಗ್ರಂಥದಲ್ಲಿ ಹೇಳಿರುವ ಪ್ರಕಾರ ಕ್ರಿಸ್ತಯೇಸು ನಮ್ಮ ಪಾಪಗಳ ಪರಿಹಾರಕ್ಕಾಗಿ ಪ್ರಾಣತ್ಯಾಗ ಮಾಡಿದರು.


ಇವರಿಂದಲ್ಲದೆ ಬೇರಾರಿಂದಲೂ ನಮಗೆ ಜೀವೋದ್ಧಾರವಿಲ್ಲ. ಇವರ ನಾಮವನ್ನು ಬಿಟ್ಟರೆ ಈ ಧರೆಯಲ್ಲಿರುವ ಬೇರೆ ಯಾವ ನಾಮದಿಂದಲೂ ನಾವು ಜೀವೋದ್ಧಾರ ಹೊಂದುವಂತಿಲ್ಲ.”


ಹೇಗೆಂದರೆ, ಪವಿತ್ರಗ್ರಂಥಾನುಸಾರ ಯೇಸುವೇ ಲೋಕೋದ್ಧಾರಕನೆಂದು ಖಚಿತಪಡಿಸಿ ಯೆಹೂದ್ಯರನ್ನು ಎಲ್ಲರ ಮುಂದೆ ಬಹಿರಂಗವಾಗಿ ಪ್ರತಿಭಟಿಸಿದನು.


ಪವಿತ್ರಗ್ರಂಥದ ಪ್ರಕಾರ ಲೋಕೋದ್ಧಾರಕನು ಯಾತನೆಯನ್ನು ಅನುಭವಿಸಬೇಕಾಗಿತ್ತೆಂದೂ ಮರಣಹೊಂದಿ ಪುನರುತ್ಥಾನ ಹೊಂದಬೇಕಾಗಿತ್ತೆಂದೂ ಪ್ರತಿಪಾದಿಸಿದನು. ‘ನಾನು ನಿಮಗೆ ಸಾರುತ್ತಿರುವ ಯೇಸುಸ್ವಾಮಿಯೇ ಆ ಉದ್ಧಾರಕ’ ಎಂದು ಸ್ಪಷ್ಟಪಡಿಸಿದನು.


ಪ್ರಿಯರೇ, ನಮ್ಮ ಪ್ರಭುವಾದ ಕ್ರಿಸ್ತಯೇಸುವಿನ ಪ್ರೇಷಿತರು. ನಿಮಗೆ ಮುಂಚಿತವಾಗಿ ತಿಳಿಸಿದ ಮಾತುಗಳನ್ನು ನೆನಪುಮಾಡಿಕೊಳ್ಳಿ.


ನಮ್ಮ ದೇವರ ಮತ್ತು ಉದ್ಧಾರಕ ಯೇಸುಕ್ರಿಸ್ತರ ಸತ್ಸಂಬಂಧದ ಮೂಲಕ ನಮ್ಮಂತೆಯೇ ಅಮೂಲ್ಯವಾದ ವಿಶ್ವಾಸವನ್ನು ಹೊಂದಿರುವ ಭಕ್ತಾದಿಗಳಿಗೆ - ಯೇಸುಕ್ರಿಸ್ತರ ದಾಸನೂ ಪ್ರೇಷಿತನೂ ಆದ ಸಿಮೋನ ಪೇತ್ರನು ಬರೆಯುವ ಪತ್ರ:


ನನ್ನ ಈ ಪುಟ್ಟ ಪತ್ರವನ್ನು ನಂಬಿಕಸ್ಥ ಸಹೋದರನಾದ ಸಿಲ್ವಾನನ ಸಹಾಯದಿಂದ ನಿಮಗೆ ಬರೆದಿರುತ್ತೇನೆ. ನಿಮ್ಮನ್ನು ಪ್ರೋತ್ಸಾಹಿಸಲೆಂದು ಮತ್ತು ಇದುವೇ ದೇವರ ನಿಜವಾದ ಅನುಗ್ರಹವೆಂದು ಸ್ಪಷ್ಟೀಕರಿಸಲು ಬರೆದಿದ್ದೇನೆ. ಈ ಅನುಗ್ರಹದಲ್ಲಿ ನೀವು ದೃಢವಾಗಿ ನಿಲ್ಲಿರಿ.


ದೇವರ ಚಿತ್ತಾನುಸಾರ ಕ್ರಿಸ್ತಯೇಸುವಿನ ಪ್ರೇಷಿತನಾದ ಪೌಲನು ಮತ್ತು ಸಹೋದರ ತಿಮೊಥೇಯನು ಬರೆಯುವ ಪತ್ರ. ನಮ್ಮ ತಂದೆಯಾದ ದೇವರ ಅನುಗ್ರಹವೂ ಶಾಂತಿ ಸಮಾಧಾನವೂ ನಿಮ್ಮಲ್ಲಿರಲಿ!


ಕ್ರಿಸ್ತಯೇಸುವಿನಲ್ಲಿ ಜೀವಿಸುವ ಫಿಲಿಪ್ಪಿಯ ದೇವಜನರಿಗೆ, ಧರ್ಮಾಧಿಕಾರಿಗಳಿಗೆ ಹಾಗೂ ಧರ್ಮಸೇವಕರಿಗೆ - ಕ್ರಿಸ್ತಯೇಸುವಿನ ದಾಸರಾದ ಪೌಲ ಮತ್ತು ತಿಮೊಥೇಯರು ಜೊತೆಗೂಡಿ ಬರೆಯುವ ಪತ್ರ.


ಕ್ರಿಸ್ತಯೇಸುವಿನಲ್ಲಿ ವಿಶ್ವಾಸವಿಟ್ಟಿರುವ ಎಫೆಸದ ದೇವಜನರಿಗೆ - ದೇವರ ಚಿತ್ತಾನುಸಾರ ಕ್ರಿಸ್ತಯೇಸುವಿನ ಪ್ರೇಷಿತನಾಗಿ ನೇಮಕಗೊಂಡ ಪೌಲನು ಬರೆಯುವ ಪತ್ರ.


ಈ ದೊಡ್ಡದೊಡ್ಡ ಅಕ್ಷರಗಳನ್ನು ನೋಡಿರಿ; ಇವನ್ನು ನನ್ನ ಸ್ವಂತ ಕೈಯಿಂದಲೇ ಬರೆಯುತ್ತಿದ್ದೇನೆ.


ಎಂದೇ ದೇವರಿಂದ ಬಂದಿರುವ ಜೀವ ಉದ್ಧಾರಕ ಸಂದೇಶವನ್ನು ಯೆಹೂದ್ಯೇತರರಿಗೆ ಕಳುಹಿಸಲಾಗಿದೆ. ಅವರು ಅದಕ್ಕೆ ಕಿವಿಗೊಡುವರು. ಇದು ನಿಮಗೆ ತಿಳಿದಿರಲಿ.”


ಏಕೆಂದರೆ, ದೈವಯೋಜನೆಯನ್ನು ಕಿಂಚಿತ್ತೂ ಮರೆಮಾಚದೆ ತಿಳಿಯಪಡಿಸಿದ್ದೇನೆ.


ಸರ್ವೇಶ್ವರ : “ಸುಳ್ಳಾಡಲು ಬಿಲ್ಲಿನಂತೆ ನಾಲಿಗೆ ಬಗ್ಗಿಸುತ್ತಾರೆ ಸತ್ಯಕ್ಕೆ ಪ್ರತಿಕೂಲವಾಗಿಯೆ ನಾಡಿನಲ್ಲಿ ಪ್ರಬಲಿಸಿದ್ದಾರೆ ಕೇಡಿನಿಂದ ಕೇಡಿಗೆ ಹಾರುತ್ತಾರೆ; ನನ್ನನ್ನಾದರೊ ಅರಿಯದೆ ಇದ್ದಾರೆ.”


ಇಸ್ರಯೇಲಿಗಾದರೋ, ದೊರೆವುದು ಶಾಶ್ವತ ರಕ್ಷಣೆ ಸರ್ವೇಶ್ವರನಿಂದ; ಯುಗಯುಗಾಂತರಕ್ಕೂ ಅದಕ್ಕಾಗದು ಲಜ್ಜೆ, ಮಾನಭಂಗ.”


ನೀವೆಲ್ಲರೂ ಕ್ರಿಸ್ತಯೇಸುವಿನಲ್ಲಿ ಒಂದಾಗಿದ್ದೀರಿ. ಎಂದೇ, ಇನ್ನು ಮೇಲೆ ಯೆಹೂದ್ಯ-ಯೆಹೂದ್ಯನಲ್ಲದವ, ದಾಸ-ದಣಿ, ಗಂಡು-ಹೆಣ್ಣು, ಎಂಬ ಭೇದವಿಲ್ಲ.


ಕೋಪಗೊಂಡು ಅವರನ್ನು ಶಪಿಸಿದೆ; ಅವರಲ್ಲಿ ಕೆಲವರನ್ನು ಹೊಡೆದು ಅವರ ಕೂದಲುಗಳನ್ನು ಕೀಳಿಸಿದೆ.


ಆಗ ಆ ರಕ್ತಾಪರಾಧಕ್ಕೆ ಕ್ಷಮೆ ದೊರಕುವುದು. ಹೀಗೆ ಸರ್ವೇಶ್ವರನ ದೃಷ್ಟಿಯಲ್ಲಿ ಸರಿಯಾದುದನ್ನು ಮಾಡುವುದರಿಂದ ನೀವೇ ಅನ್ಯಾಯವಾದ ನರಹತ್ಯ ದೋಷವನ್ನು ನಿಮ್ಮ ಮಧ್ಯೆಯಿಂದ ತೆಗೆದುಹಾಕುವಿರಿ.


ದೇವರವಾಕ್ಯವು ಪ್ರವರ್ಧಿಸತೊಡಗಿತು. ವಿಶ್ವಾಸಿಗಳ ಸಂಖ್ಯೆ ಜೆರುಸಲೇಮಿನಲ್ಲಿ ಬಹಳವಾಗಿ ಹೆಚ್ಚಿತು. ಬಹುಮಂದಿ ಯಾಜಕರೂ ಆ ವಿಶ್ವಾಸಕ್ಕೆ ಶರಣಾದರು.


ಅನನೀಯ ಪ್ರತ್ಯುತ್ತರವಾಗಿ, “ಪ್ರಭೂ, ಈ ಮನುಷ್ಯ ಜೆರುಸಲೇಮಿನಲ್ಲಿ ತಮ್ಮ ಭಕ್ತರಿಗೆ ಎಷ್ಟು ಕೇಡುಮಾಡಿದ್ದಾನೆಂಬುದನ್ನು ಅನೇಕರ ಬಾಯಿಂದ ಕೇಳಿದ್ದೇನೆ.


ಪ್ರಿಯರೇ, ನಾವು ಈ ರೀತಿ ಹೇಳಿದೆವಾದರೂ ನಿಮ್ಮ ಪರಿಸ್ಥಿತಿ ಉತ್ತಮವಾಗಿದೆ ಮತ್ತು ನೀವು ಜೀವೋದ್ಧಾರದ ಮಾರ್ಗದಲ್ಲಿ ಇದ್ದೀರಿ ಎಂಬ ದೃಢವಾದ ನಂಬಿಕೆ ನನಗಿದೆ.


ಅವರು ನೀತಿಯ ಮಾರ್ಗವನ್ನು ಅರಿತುಕೊಂಡು ತಾವು ಸ್ವೀಕರಿಸಿದ ಪವಿತ್ರ ಆಜ್ಞೆಯನ್ನು ತಿರಸ್ಕರಿಸುವುದಕ್ಕಿಂತ ಅದನ್ನು ಅರಿಯದವರಾಗಿದ್ದರೆ ಒಳ್ಳೆಯದಾಗುತ್ತಿತ್ತು.


ಪಿತನಾದ ದೇವರ ಪ್ರೀತಿಯಲ್ಲೂ ಯೇಸುಕ್ರಿಸ್ತರ ಆಶ್ರಯದಲ್ಲೂ ಬಾಳುತ್ತಿರುವ ಭಕ್ತರಿಗೆ - ಯೇಸುಕ್ರಿಸ್ತರ ದಾಸನೂ ಯಕೋಬನ ಸಹೋದರನೂ ಆದ ಯೂದನು ಬರೆಯುವ ಪತ್ರ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು