ಯಾಜಕಕಾಂಡ 6:9 - ಕನ್ನಡ ಸತ್ಯವೇದವು C.L. Bible (BSI)9 “ನೀನು ಆರೋನನಿಗೂ ಅವನ ವಂಶದವರಿಗೂ ಈ ಕೆಳಕಂಡ ದಹನ ಬಲಿಯ ಈ ನಿಯಮಗಳನ್ನು ಆಜ್ಞಾಪಿಸು: ದಹನ ಬಲಿ ದ್ರವ್ಯವು ರಾತ್ರಿಯೆಲ್ಲಾ, ಮರುದಿನದ ಬೆಳಗಿನವರೆಗೂ ಬಲಿಪೀಠದ ಮೇಲೆ ಉರಿಯುತ್ತಿರಬೇಕು. ಅದರಿಂದಲೇ ಬಲಿಪೀಠದ ಮೇಲಿನ ಬೆಂಕಿ ಹೊತ್ತಿ ಉರಿಯುತ್ತಿರಬೇಕು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20199 “ನೀನು ಆರೋನನಿಗೂ ಮತ್ತು ಅವನ ವಂಶದವರಿಗೂ ಮುಂದಿನ ಸಂಗತಿಗಳನ್ನು ಆಜ್ಞಾಪಿಸು, ‘ಇವು ಸರ್ವಾಂಗಹೋಮ ವಿಷಯವಾದ ನಿಯಮಗಳು: ಸರ್ವಾಂಗಹೋಮದ್ರವ್ಯವು ರಾತ್ರಿಯೆಲ್ಲಾ ಮತ್ತು ಮರುದಿನದ ಬೆಳಗಿನ ವರೆಗೂ ಯಜ್ಞವೇದಿಯ ಮೇಲೆ ಉರಿಯುತ್ತಾ ಇರಬೇಕು. ಅದು ನಂದಬಾರದು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್9 “ಆರೋನನಿಗೂ ಅವನ ಪುತ್ರರಿಗೂ ಈ ಅಪ್ಪಣೆಯನ್ನು ಕೊಡು: ಸರ್ವಾಂಗಹೋಮದ ನಿಯಮ ಇದಾಗಿದೆ. ಸರ್ವಾಂಗಹೋಮವು ವೇದಿಕೆಯ ಒಲೆಯಲ್ಲಿ ರಾತ್ರಿಯೆಲ್ಲಾ ಮರುದಿನ ಮುಂಜಾನೆಯವರೆಗೆ ಉರಿಯುತ್ತಿರಬೇಕು. ವೇದಿಕೆಯಲ್ಲಿ ಬೆಂಕಿಯು ಉರಿಯುತ್ತಿರಬೇಕು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ9 “ಆರೋನನಿಗೂ ಅವನ ಪುತ್ರರಿಗೂ ಆಜ್ಞಾಪಿಸಿ ಹೀಗೆ ಹೇಳು, ‘ಇದು ದಹನಬಲಿಯ ನಿಯಮವಾಗಿದೆ. ದಹನಬಲಿ ಇಡೀ ರಾತ್ರಿ, ಅಂದರೆ ಬೆಳಗಿನವರೆಗೆ ಬಲಿಪೀಠದ ಅಗ್ನಿಕುಂಡದ ಮೇಲೆ ಇರಬೇಕು. ಬಲಿಪೀಠದ ಬೆಂಕಿಯು ಅದರೊಳಗೆ ಸುಡುತ್ತಾ ಇರುವುದು. ಅಧ್ಯಾಯವನ್ನು ನೋಡಿ |