ಯಾಜಕಕಾಂಡ 6:2 - ಕನ್ನಡ ಸತ್ಯವೇದವು C.L. Bible (BSI)2 “ನಿಮ್ಮಲ್ಲಿ ಯಾರಾದರು ಮತ್ತೊಬ್ಬನಿಂದ ತಮ್ಮ ವಶಕ್ಕೆ ಕೊಡಲಾದ ವಸ್ತುವಿನ ವಿಷಯದಲ್ಲಾಗಲಿ, ತಮ್ಮ ಬಳಿಯಲ್ಲಿ ಇಡಲಾದ ಅಡವಿನ ವಿಷಯದಲ್ಲಾಗಲಿ, ತಾನು ಮಾಡಿದ ಕಳವಿನ ವಿಷಯದಲ್ಲಾಗಲಿ, ಸುಳ್ಳಾಡಿಯೋ, ಮತ್ತೊಬ್ಬನನ್ನು ಮೋಸಗೊಳಿಸಿಯೋ ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20192 “ಯಾವನಾದರೂ ಪಾಪಮಾಡಿ, ಯೆಹೋವನಿಗೆ ವಿರುದ್ಧವಾಗಿ, ಮತ್ತೊಬ್ಬನಿಂದ ತನ್ನ ವಶಕ್ಕೆ ಕೊಡಲ್ಪಟ್ಟ ವಸ್ತುವಿನ ವಿಷಯದಲ್ಲಾಗಲಿ ಅಥವಾ ತನ್ನ ಬಳಿಯಲ್ಲಿ ಇಡಲ್ಪಟ್ಟ ಅಡವಿಟ್ಟ ವಸ್ತುಗಳ ವಿಷಯದಲ್ಲಾಗಲಿ ಸುಳ್ಳಾಡುವುದರಿಂದ, ಮತ್ತೊಬ್ಬನನ್ನು ಮೋಸಗೊಳಿಸಿದ್ದರಿಂದ, ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)2 ಯಾವನಾದರೂ ಮತ್ತೊಬ್ಬನಿಂದ ತನ್ನ ವಶಕ್ಕೆ ಕೊಡಲ್ಪಟ್ಟ ವಸ್ತುವಿನ ವಿಷಯದಲ್ಲಾಗಲಿ ತನ್ನ ಬಳಿಯಲ್ಲಿ ಇಡಲ್ಪಟ್ಟ ಅಡವಿನ ವಿಷಯದಲ್ಲಾಗಲಿ ತಾನು ಮಾಡಿದ ಕಳವಿನ ವಿಷಯದಲ್ಲಾಗಲಿ ಸುಳ್ಳಾಡುವದರಿಂದಲೋ ಮತ್ತೊಬ್ಬನನ್ನು ಮೋಸಗೊಳಿಸಿದ್ದರಿಂದಲೋ ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್2 “ಯಾವನಾದರೂ ಮತ್ತೊಬ್ಬನಿಂದ ತನ್ನ ವಶಕ್ಕೆ ಕೊಡಲ್ಪಟ್ಟ ವಸ್ತುವಿನ ವಿಷಯದಲ್ಲಾಗಲಿ ತನ್ನ ಬಳಿಯಲ್ಲಿ ಅಡವು ಇಟ್ಟ ವಸ್ತುವಿನ ವಿಷಯದಲ್ಲಾಗಲಿ ತಾನು ಮಾಡಿದ ಕಳುವಿನ ವಿಷಯದಲ್ಲಾಗಲಿ ಸುಳ್ಳಾಡುವುದರಿಂದಾಗಲಿ ಮತ್ತೊಬ್ಬನನ್ನು ಮೋಸಗೊಳಿಸುವುದರಿಂದಾಗಲಿ ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ2 “ಯಾರಾದರೂ ಪಾಪಮಾಡಿದರೆ ಮತ್ತು ನೆರೆಯವರಿಗೆ ಮೋಸ ಮಾಡುವ ಮೂಲಕ ಯೆಹೋವ ದೇವರಿಗೆ ವಿಶ್ವಾಸದ್ರೋಹಿ ಆಗಿದ್ದರೆ ಅಥವಾ ಅವರ ಆರೈಕೆಯಲ್ಲಿ ಏನಾದರೂ ಉಳಿಸಿಕೊಂಡಿದ್ದರೆ ಅಥವಾ ಯಾವುದನ್ನಾದರೂ ಕದ್ದುಕೊಂಡಿದ್ದರೆ ಅಥವಾ ಅವರು ತಮ್ಮ ನೆರೆಹೊರೆಯವರಿಗೆ ಮೋಸ ಮಾಡಿದ್ದರೆ, ಅಧ್ಯಾಯವನ್ನು ನೋಡಿ |
“ಯಾರಾದರು ಸರ್ವೇಶ್ವರನಿಗೆ ಸಲ್ಲಿಸಬೇಕಾದ ಪವಿತ್ರವಸ್ತುಗಳನ್ನು ಸಮರ್ಪಿಸುವುದರಲ್ಲಿ ಅಜಾಗ್ರತೆಯಿಂದ ದ್ರೋಹಮಾಡಿ ದೋಷಕ್ಕೆ ಒಳಗಾದರೆ, ಅಂಥವರು ಆ ಅಪರಾಧಕ್ಕೆ ಪರಿಹಾರ ಮಾಡಬೇಕು; ದೇವರ ಸೇವೆಗೆ ನೇಮಕವಾದ ನಾಣ್ಯದ ಮೇರೆಗೆ ಎರಡು ಅಥವಾ ಹೆಚ್ಚು ನಾಣ್ಯ ಬೆಲೆ ಬಾಳುವುದೆಂದು ತೋರುವ ಕಳಂಕರಹಿತವಾದ ಒಂದು ಟಗರನ್ನು ಆಡುಕುರಿಗಳ ಹಿಂಡಿನಿಂದ ತೆಗೆದುಕೊಂಡು ಬಂದು ಸರ್ವೇಶ್ವರನಿಗೆ ಸಮರ್ಪಿಸಬೇಕು.