Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಜಕಕಾಂಡ 6:19 - ಕನ್ನಡ ಸತ್ಯವೇದವು C.L. Bible (BSI)

19 ಮೋಶೆಗೆ ಸರ್ವೇಶ್ವರ ಹೀಗೆಂದು ತಿಳಿಸಿದರು:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಯೆಹೋವನು ಮೋಶೆಯೊಂದಿಗೆ ಪುನಃ ಮಾತನಾಡಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ಯೆಹೋವನು ಮೋಶೆಗೆ ಹೇಳಿದ್ದೇನಂದರೆ -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ:

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಯೆಹೋವ ದೇವರು ಮೋಶೆಯೊಡನೆ ಮಾತನಾಡಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಜಕಕಾಂಡ 6:19
8 ತಿಳಿವುಗಳ ಹೋಲಿಕೆ  

ಹುಳಿಯಿಲ್ಲದ ರೊಟ್ಟಿಗಳನ್ನು ಎಣ್ಣೆಮಿಶ್ರವಾದ ಹುಳಿಯಿಲ್ಲದ ಹೋಳಿಗೆಗಳನ್ನು ಹಾಗು ಎಣ್ಣೆ ಹೊಯಿದು ಹುಳಿಯಿಲ್ಲದ ಕಡುಬುಗಳನ್ನು ಗೋದಿ ಹಿಟ್ಟಿನಿಂದ ಮಾಡಿಸಿ ಒಂದೇ ಪುಟ್ಟಿಯಲ್ಲಿ ತುಂಬಿಸಿಕೊ.


ಆರೋನನ ವಂಶಜರಾದ ಗಂಡಸರೆಲ್ಲರು ಅದನ್ನು ತಿನ್ನಬಹುದು. ಸರ್ವೇಶ್ವರನಿಗೆ ಹೋಮವಾಗಿ ಅರ್ಪಿತವಾದ ದ್ರವ್ಯಗಳಲ್ಲಿ ಅದು ಶಾಶ್ವತ ನಿಯಮವಾಗಿ ಆರೋನನ ಸಂತತಿಗೆ ಸಲ್ಲತಕ್ಕದು. ಆ ದ್ರವ್ಯಗಳಿಗೆ ಸೋಂಕಿದೆಲ್ಲವೂ ಪರಿಶುದ್ಧವಾಗುವುದು.


“ಆರೋನನಿಗೆ ಅಭಿಷೇಕವಾದ ದಿನ ಮೊದಲ್ಗೊಂಡು ಅವನೂ ಅವನ ವಂಶಜರೂ ಸರ್ವೇಶ್ವರನಿಗೆ ಸಮರ್ಪಿಸಬೇಕಾದ ಧಾನ್ಯನೈವೇದ್ಯದ ಕ್ರಮ ಇದು: ಅವರು ದಿನನಿತ್ಯವೂ ಮೂರು ಸೇರು ಗೋದಿಹಿಟ್ಟನ್ನು, ಬೆಳಿಗ್ಗೆ ಅರ್ಧ, ಸಂಜೆ ಅರ್ಧ, ಸಮರ್ಪಿಸಬೇಕು.


“ನೀನು ಆರೋನನಿಗೂ ಅವನ ವಂಶದವರಿಗೂ ಈ ಕೆಳಕಂಡ ದಹನ ಬಲಿಯ ಈ ನಿಯಮಗಳನ್ನು ಆಜ್ಞಾಪಿಸು: ದಹನ ಬಲಿ ದ್ರವ್ಯವು ರಾತ್ರಿಯೆಲ್ಲಾ, ಮರುದಿನದ ಬೆಳಗಿನವರೆಗೂ ಬಲಿಪೀಠದ ಮೇಲೆ ಉರಿಯುತ್ತಿರಬೇಕು. ಅದರಿಂದಲೇ ಬಲಿಪೀಠದ ಮೇಲಿನ ಬೆಂಕಿ ಹೊತ್ತಿ ಉರಿಯುತ್ತಿರಬೇಕು.


ಅದರ ರಕ್ತವನ್ನು ಪವಿತ್ರಸ್ಥಾನದೊಳಕ್ಕೆ ತರಲಿಲ್ಲವಾದ ಕಾರಣ ನಾನು ಆಜ್ಞಾಪಿಸಿದಂತೆ ನೀವು ಅದರ ಮಾಂಸವನ್ನು ದೇವಸ್ಥಾನದ ಪ್ರಾಕಾರದೊಳಗೆ ತಿನ್ನಬೇಕಾಗಿತ್ತು,” ಎಂದನು.


ಅಗ್ನಿಯಲ್ಲಿ ದಹನಮಾಡದೆ ಉಳಿಸುವ ಮಹಾಪರಿಶುದ್ಧ ಪದಾರ್ಥಗಳೆಲ್ಲ ಅಂದರೆ ಇಸ್ರಯೇಲರು ನನಗೆ ಸಮರ್ಪಿಸುವ ಎಲ್ಲ ಧಾನ್ಯ ದ್ರವ್ಯ, ನೈವೇದ್ಯ ದ್ರವ್ಯ, ಪಾಪ ಪರಿಹಾರಕ ಬಲಿ, ಪ್ರಾಯಶ್ಚಿತ್ತ ಬಲಿಕಾಣಿಕೆ, ಇವುಗಳಲ್ಲಿ ದಹನವಾಗದೆ ಉಳಿದ ಭಾಗಗಳು ಮಹಾಪರಿಶುದ್ಧವಾದುವುಗಳು. ಅವು ನಿನಗೂ ನಿನ್ನ ಸಂತತಿಯವರಿಗೂ ಸಲ್ಲತಕ್ಕವು.


ಹೀಗೆ ನೀವು ಸಮರ್ಪಿಸುವ ಹತ್ತನೆಯ ಪಾಲು, ಕಣದಲ್ಲಿನ ದವಸದಿಂದ ಹಾಗೂ ದ್ರಾಕ್ಷಿತೊಟ್ಟಿಯ ರಸದಿಂದ ಬರಬೇಕಾದ ದಶಾಂಶವೆಂದು ಪರಿಗಣಿತವಾಗುವುದು.


ಆಗ ನನಗೆ, ‘ದೀಕ್ಷಿತರ ಪ್ರಾಕಾರದ ಉತ್ತರ ದಕ್ಷಿಣ ಕಡೆಗಳಲ್ಲಿನ ಕೋಣೆಗಳು ಪರಿಶುದ್ಧವಾದವು; ಅಲ್ಲಿ ಸರ್ವೇಶ್ವರನ ಸನ್ನಿಧಿಸೇವಕರಾದ ಯಾಜಕರು ಮಹಾಪರಿಶುದ್ಧ ಪದಾರ್ಥಗಳನ್ನು ಭುಜಿಸುತ್ತಾರೆ, ಮತ್ತು ಧಾನ್ಯನೈವೇದ್ಯ ದೋಷಪರಿಹಾರಕಬಲಿದ್ರವ್ಯ, ಪ್ರಾಯಶ್ಚಿತ್ತಬಲಿದ್ರವ್ಯ ಎಂಬೀ ಮಹಾಪರಿಶುದ್ಧ ಪದಾರ್ಥಗಳನ್ನು ಅಲ್ಲಿಡುತ್ತಾರೆ. ಆ ಸ್ಥಳ ಪರಿಶುದ್ಧ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು