Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಜಕಕಾಂಡ 5:7 - ಕನ್ನಡ ಸತ್ಯವೇದವು C.L. Bible (BSI)

7 “ಆಡು ಕುರಿಯನ್ನು ಕೊಡಲು ಅವನಿಂದ ಆಗದಿದ್ದಲ್ಲಿ ದೋಷದ ಪ್ರಾಯಶ್ಚಿತ್ತಕ್ಕಾಗಿ ಎರಡು ಬೆಳವಕ್ಕಿಗಳನ್ನಾಗಲಿ ಎರಡು ಮರಿ ಪಾರಿವಾಳಗಳನ್ನಾಗಲಿ ತೆಗೆದುಕೊಂಡು ಬಂದು ದಹನ ಬಲಿಯಾಗಿ ಒಂದನ್ನೂ ದೋಷಪರಿಹಾರಕ ಬಲಿಯಾಗಿ ಮತ್ತೊಂದನ್ನು ಸರ್ವೇಶ್ವರನಿಗೆ ಸಮರ್ಪಿಸಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 “‘ಕುರಿಯನ್ನು ಕೊಡುವುದಕ್ಕೆ ಅವನಿಗೆ ಗತಿಯಿಲ್ಲದ ಪಕ್ಷದಲ್ಲಿ ದೋಷದ ಪ್ರಾಯಶ್ಚಿತ್ತಕ್ಕಾಗಿ ಎರಡು ಬೆಳವಕ್ಕಿಗಳನ್ನಾಗಲಿ ಅಥವಾ ಎರಡು ಪಾರಿವಾಳದ ಮರಿಗಳನ್ನಾಗಲಿ ತೆಗೆದುಕೊಂಡು ಬಂದು, ಒಂದನ್ನು ದೋಷಪರಿಹಾರಕ ಯಜ್ಞವಾಗಿ ಮತ್ತೊಂದನ್ನು ಸರ್ವಾಂಗಹೋಮವಾಗಿ ಯೆಹೋವನಿಗೆ ಸಮರ್ಪಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಕುರಿಯನ್ನು ಕೊಡುವದಕ್ಕೆ ಅವನಿಗೆ ಗತಿಯಿಲ್ಲದ ಪಕ್ಷದಲ್ಲಿ ದೋಷದ ಪ್ರಾಯಶ್ಚಿತ್ತಕ್ಕಾಗಿ ಎರಡು ಬೆಳವಕ್ಕಿಗಳನ್ನಾಗಲಿ ಎರಡು ಪಾರಿವಾಳದ ಮರಿಗಳನ್ನಾಗಲಿ ತೆಗೆದುಕೊಂಡು ಬಂದು ಸರ್ವಾಂಗಹೋಮವಾಗಿ ಒಂದನ್ನೂ ದೋಷಪರಿಹಾರಕ ಯಜ್ಞವಾಗಿ ಮತ್ತೊಂದನ್ನೂ ಯೆಹೋವನಿಗೆ ಸಮರ್ಪಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 “ಅವನು ಕುರಿಮರಿಯನ್ನು ಕೊಡುವುದಕ್ಕೆ ಶಕ್ತನಾಗಿಲ್ಲದಿದ್ದರೆ, ಎರಡು ಬೆಳವಕ್ಕಿಗಳನ್ನಾಗಲಿ ಅಥವಾ ಎರಡು ಪಾರಿವಾಳದ ಮರಿಗಳನ್ನಾಗಲಿ ತಂದು ಅವುಗಳಲ್ಲಿ ಒಂದನ್ನು ದೋಷಪರಿಹಾರಕ ಯಜ್ಞವನ್ನಾಗಿಯೂ ಇನ್ನೊಂದನ್ನು ಸರ್ವಾಂಗಹೋಮವಾಗಿಯೂ ಸಮರ್ಪಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 “ ‘ಯಾರಾದರೂ ಒಂದು ಕುರಿಮರಿಯನ್ನು ತರುವುದಕ್ಕೆ ಅಶಕ್ತರಾಗಿದ್ದರೆ, ತಾವು ಮಾಡಿದ ಅಪರಾಧಕ್ಕಾಗಿ ಎರಡು ಬೆಳವಕ್ಕಿಗಳನ್ನಾಗಲಿ, ಇಲ್ಲವೆ ಎರಡು ಪಾರಿವಾಳದ ಮರಿಗಳನ್ನಾಗಲಿ ಯೆಹೋವ ದೇವರಿಗೆ ತರಬೇಕು. ಒಂದನ್ನು ಪಾಪ ಪರಿಹಾರದ ಬಲಿಗಾಗಿ, ಮತ್ತೊಂದನ್ನು ದಹನಬಲಿಗಾಗಿ ತರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಜಕಕಾಂಡ 5:7
24 ತಿಳಿವುಗಳ ಹೋಲಿಕೆ  

ಬಡತನದ ನಿಮಿತ್ತ ಕುರಿಯನ್ನು ಕೊಡುವುದಕ್ಕೆ ಆಗದಿದ್ದರೆ ಎರಡು ಬೆಳವಕ್ಕಿಗಳನ್ನಾಗಲಿ, ಎರಡು ಮರಿಪಾರಿವಾಳಗಳನ್ನಾಗಲಿ ತಂದು ದಹನಬಲಿಗಾಗಿ ಒಂದನ್ನು, ದೋಷಪರಿಹಾರಕ್ಕಾಗಿ ಒಂದನ್ನು ಸಮರ್ಪಿಸಬೇಕು. ಯಾಜಕನು ಅವಳ ಪರವಾಗಿ ದೋಷಪರಿಹಾರವನ್ನು ಮಾಡಿದಾಗ ಆಕೆ ಶುದ್ಧಳಾಗುವಳು.


“ಗಮನಿಸಿರಿ, ತೋಳಗಳ ನಡುವೆ ಕುರಿಗಳನ್ನು ಬಿಟ್ಟಂತೆ ನಾನು ನಿಮ್ಮನ್ನು ಕಳುಹಿಸುತ್ತಿದ್ದೇನೆ. ಆದುದರಿಂದ ಸರ್ಪಗಳಂತೆ ಸೂಕ್ಷ್ಮಬುದ್ಧಿಯುಳ್ಳವರೂ ಪಾರಿವಾಳಗಳಂತೆ ಸರಳಜೀವಿಗಳೂ ಆಗಿರಿ.


ಒಬ್ಬನು ಕೊಡುವುದಕ್ಕೆ ಮನಸ್ಸುಳ್ಳವನಾಗಿದ್ದರೆ, ಅವನು ತನ್ನಲ್ಲಿ ಇರುವುದಕ್ಕೆ ತಕ್ಕಂತೆ ಕೊಟ್ಟರೆ ಸಾಕು. ನಿಮ್ಮಲ್ಲಿ ಇಲ್ಲದ್ದನ್ನು ದೇವರು ಬಯಸುವುದಿಲ್ಲ.


ಯೇಸು ದೀಕ್ಷಾಸ್ನಾನ ಪಡೆದು ನೀರಿನಿಂದ ಮೇಲಕ್ಕೆ ಬಂದದ್ದೇ ಆಕಾಶವು ಫಕ್ಕನೆ ತೆರೆಯಿತು. ದೇವರಾತ್ಮ ಪಾರಿವಾಳದ ರೂಪದಲ್ಲಿ ತಮ್ಮ ಮೇಲೆ ಇಳಿದುಬಂದು ನೆಲಸುವುದನ್ನು ಕಂಡರು.


ಪಾರಿವಾಳದ ಮರಿಗಳಲ್ಲಿಯಾಗಲಿ ದೋಷಪರಿಹಾರಕ ಬಲಿಯಾಗಿ ಒಂದನ್ನೂ ದಹನಬಲಿಯಾಗಿ ಒಂದನ್ನೂ ನೈವೇದ್ಯದ್ರವ್ಯವನ್ನೂ ಸಮರ್ಪಿಸಬೇಕು. ಹೀಗೆ ಯಾಜಕನು ಶುದ್ಧಿಮಾಡಿಸಿಕೊಳ್ಳುವವನ ಪರವಾಗಿ ಸರ್ವೇಶ್ವರನ ಸನ್ನಿಧಿಯಲ್ಲಿ ದೋಷಪರಿಹಾರವನ್ನು ಮಾಡುವನು.


ಅಲ್ಲದೆ, ಧರ್ಮಶಾಸ್ತ್ರದಲ್ಲೇ ಉಲ್ಲೇಖಿಸಿರುವಂತೆ ಒಂದು ಜೋಡಿ ಬೆಳವಹಕ್ಕಿಗಳನ್ನಾಗಲಿ, ಎರಡು ಪಾರಿವಾಳದ ಮರಿಗಳನ್ನಾಗಲಿ, ಬಲಿಯನ್ನಾಗಿ ಅರ್ಪಿಸಬೇಕಾಗಿತ್ತು.


ಇಸ್ರಯೇಲರ ಸಮಾಜದಿಂದ ದೋಷಪರಿಹಾರಕ ಬಲಿಗಾಗಿ ಎರಡು ಹೋತಗಳನ್ನೂ ದಹನಬಲಿಗಾಗಿ ಒಂದು ಟಗರನ್ನೂ ತೆಗೆದುಕೊಂಡು ಬರಬೇಕು.


ಯಾಜಕನು ದೋಷಪರಿಹಾರಕ ಬಲಿಗಾಗಿ ಒಂದನ್ನೂ ದಹನಬಲಿಗಾಗಿ ಇನ್ನೊಂದನ್ನೂ ಸಮರ್ಪಿಸಬೇಕು. ಹೀಗೆ ಯಾಜಕನು ಅವಳ ಸ್ರಾವದಿಂದುಂಟಾದ ಅಪರಿಶುದ್ಧತೆಯ ವಿಷಯವಾಗಿ ಸರ್ವೇಶ್ವರನ ಸನ್ನಿಧಿಯಲ್ಲಿ ಅವಳ ಪರವಾಗಿ ದೋಷಪರಿಹಾರ ಮಾಡುವನು.


ಮತ್ತು ನೀನು ಇಸ್ರಯೇಲರ ಸಂಗಡ ಮಾತಾಡಿ ಅವರಿಗೆ, ‘ಈ ದಿನ ಸರ್ವೇಶ್ವರ ಸ್ವಾಮಿ ಪ್ರತ್ಯಕ್ಷರಾಗುತ್ತಾರೆ. ಆದುದರಿಂದ ನೀವು ಅವರ ಸನ್ನಿಧಿಯಲ್ಲಿ ಸಮರ್ಪಿಸಲು ದೋಷಪರಿಹಾರಕ್ಕಾಗಿ ಒಂದು ಹೋತವನ್ನು, ದಹನಬಲಿಗಾಗಿ ಒಂದು ವರ್ಷದ ಕಳಂಕರಹಿತವಾದ ಒಂದು ಕರು ಹಾಗು ಒಂದು ಕುರಿಯನ್ನು,


“ಎರಡು ಬೆಳವಕ್ಕಿಗಳನ್ನಾಗಲಿ, ಎರಡು ಮರಿ ಪಾರಿವಾಳಗಳನ್ನಾಗಲಿ ಕೊಡಲು ಅವನಿಂದ ಆಗದೆ ಹೋದಲ್ಲಿ ಅವನು ದೋಷಪರಿಹಾರಕ್ಕಾಗಿ ಮೂರು ಸೇರು ಗೋದಿ ಹಿಟ್ಟನ್ನು ತರಬೇಕು. ಆ ಹೋಮದ್ರವ್ಯವು ದೋಷಪರಿಹಾರಾರ್ಥವಾದ್ದರಿಂದ ಅದರ ಮೇಲೆ ಎಣ್ಣೆ ಹೊಯ್ಯಕೂಡದು, ಸಾಂಬ್ರಾಣಿಯನ್ನು ಇಡಕೂಡದು.


ಯೇಸುಸ್ವಾಮಿ ಮಹಾದೇವಾಲಯಕ್ಕೆ ಹೋದರು. ಅಲ್ಲಿ ಮಾರುತ್ತಿದ್ದವರನ್ನೂ ಕೊಳ್ಳುತ್ತಿದ್ದವರನ್ನೂ ಹೊರಗಟ್ಟಿದರು. ನಾಣ್ಯ ವಿನಿಮಯ ಮಾಡುತ್ತಿದ್ದ ವ್ಯಾಪಾರಿಗಳ ಮೇಜುಗಳನ್ನು ಕೆಡವಿದರು. ಪಾರಿವಾಳಗಳನ್ನು ಮಾರುತ್ತಿದ್ದವರ ಮಣೆಗಳನ್ನು ಉರುಳಿಸಿದರು.


“ಪ್ರಾಯಶ್ಚಿತ್ತ ಬಲಿ ನಿಯಮಗಳು ಹೀಗಿವೆ: ಈ ಬಲಿ ಮಹಾಪರಿಶುದ್ಧವಾದುದು.


ಗಂಡುಮಗುವನ್ನು ಹೆತ್ತರೂ ಹೆಣ್ಣುಮಗುವನ್ನು ಹೆತ್ತರೂ ಆಕೆಯ ಶುದ್ಧೀಕರಣ ದಿನಗಳು ಮುಗಿದಾಗ ಆಕೆ ದಹನಬಲಿಗಾಗಿ ಒಂದು ವರ್ಷದ ಕುರಿಯನ್ನು, ದೋಷಪರಿಹಾರಕ್ಕಾಗಿ ಒಂದು ಮರಿ ಪಾರಿವಾಳವನ್ನು, ಇಲ್ಲವೆ ಬೆಳವಕ್ಕಿಯನ್ನು ದೇವದರ್ಶನದ ಗುಡಾರದ ಬಾಗಿಲಿಗೆ ತಂದು ಯಾಜಕನಿಗೆ ಒಪ್ಪಿಸಬೇಕು.


ತರುವಾಯ ಅವನು ತನ್ನ ಸ್ಥಿತಿಗೆ ತಕ್ಕಂತೆ ತಂದ ಎರಡು ಬೆಳವಕ್ಕಿಗಳಲ್ಲಿಯಾಗಲಿ


ಯಾವ ಗಂಡಸೇ ಆಗಲಿ ಹೆಂಗಸೇ ಆಗಲಿ, ಮತ್ತೊಬ್ಬನನ್ನು ಮೋಸಗೊಳಿಸಿ ಸರ್ವೇಶ್ವರನಲ್ಲಿ ವಿಶ್ವಾಸ ಕಳೆದುಕೊಳ್ಳುವಂತೆ ಮಾಡಿದರೆ, ಅಂಥವರು ಅಪರಾಧಿಗಳು.


ಎಂಟನೆಯ ದಿನದಲ್ಲಿ ಅವನು ಎರಡು ಬೆಳವಕ್ಕಿಗಳನ್ನಾಗಲಿ, ಎರಡು ಪಾರಿವಾಳದ ಮರಿಗಳನ್ನಾಗಲಿ ದೇವದರ್ಶನದ ಗುಡಾರದ ಬಾಗಿಲಿಗೆ ತಂದು ಯಾಜಕನಿಗೆ ಕೊಡಬೇಕು.


ಯಾಜಕನು ದೋಷಪರಿಹಾರ ಬಲಿಯನ್ನಾಗಿ ಒಂದನ್ನೂ ಸಂಪೂರ್ಣ ದಹನ ಬಲಿಯನ್ನಾಗಿ ಇನ್ನೊಂದನ್ನೂ ಸಮರ್ಪಿಸಲಿ. ಹೀಗೆ ಶವಸೋಂಕಿದವನಿಗಾಗಿ ದೋಷಪರಿಹಾರಮಾಡಿ ಅವನ ತಲೆಗೂದಲು ಅಂದಿನಿಂದ ಪವಿತ್ರವೆಂದು ನಿರ್ಣಯಿಸಲಿ.


ಯಾವನಾದರು ಬಡವನಾಗಿದ್ದು ನೇಮಕವಾದ ನಾಣ್ಯವನ್ನು ಕೊಡಲಾಗದೆ ಹೋದರೆ ಅವನು ಹರಕೆ ಮಾಡಿ ಪ್ರತಿಷ್ಠಿಸಿದ ವ್ಯಕ್ತಿಯನ್ನು ಯಾಜಕನ ಮುಂದೆ ನಿಲ್ಲಿಸಬೇಕು. ಯಾಜಕನು ಹರಕೆ ಮಾಡಿದವನ ಸ್ಥಿತಿಗತಿಗೆ ತಕ್ಕಂತೆ ಅವನು ತೆರಬೇಕಾದ ನಾಣ್ಯ ಇಷ್ಟೆಂದು ನಿಗದಿ ಮಾಡಬೇಕು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು