ಯಾಜಕಕಾಂಡ 27:26 - ಕನ್ನಡ ಸತ್ಯವೇದವು C.L. Bible (BSI)26 “ಶುದ್ಧಪ್ರಾಣಿಯಲ್ಲಿ ಚೊಚ್ಚಲಾಗಿ ಹುಟ್ಟಿದ್ದು ಸರ್ವೇಶ್ವರನಿಗೆ ಸೇರಿದ್ದು. ಆದ್ದರಿಂದ ಅದನ್ನು ಯಾರೂ ಹರಕೆಯಾಗಿ ಕೊಡಕೂಡದು. ಚೊಚ್ಚಲು ಮರಿ ಹೋರಿಯೇ ಆಗಿರಲಿ, ಆಡುಕುರಿಯೇ ಆಗಿರಲಿ. ಅದು ಸರ್ವೇಶ್ವರನ ಸೊತ್ತು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201926 “‘ಶುದ್ಧ ಪಶುವಿನಲ್ಲಿ ಚೊಚ್ಚಲಾಗಿ ಹುಟ್ಟಿದ್ದು ಯೆಹೋವನದಾಗಿರುವುದರಿಂದ ಅದನ್ನು ಯಾರೂ ಹರಕೆಯಾಗಿ ಕೊಡಬಾರದು; ಹೋರಿಯಾಗಿದ್ದರೂ, ಆಡು ಅಥವಾ ಕುರಿಯಾಗಿದ್ದರೂ ಅದು ಯೆಹೋವನ ಸೊತ್ತೇ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)26 [ಶುದ್ಧ] ಪಶುವಿನಲ್ಲಿ ಚೊಚ್ಚಲಾಗಿ ಹುಟ್ಟಿದ್ದು ಯೆಹೋವನದಾಗಿರುವದರಿಂದ ಅದನ್ನು ಯಾರೂ ಹರಕೆಯಾಗಿ ಕೊಡಕೂಡದು; ಹೋರಿಯಾಗಿದ್ದರೂ ಆಡುಕುರಿಯಾಗಿದ್ದರೂ ಅದು ಯೆಹೋವನ ಸೊತ್ತೇ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್26 “ಜನರು ಯೆಹೋವನಿಗೆ ವಿಶೇಷ ಕಾಣಿಕೆಯಾಗಿ ದನಗಳನ್ನು ಮತ್ತು ಕುರಿಗಳನ್ನು ಕೊಡಬಹುದು. ಆದರೆ ಪಶುವು ಚೊಚ್ಚಲಾದದ್ದಾಗಿದ್ದರೆ, ಅದು ಈಗಾಗಲೇ ಯೆಹೋವನದ್ದಾಗಿರುತ್ತದೆ. ಆದ್ದರಿಂದ ಜನರು ಅಂಥ ಪಶುಗಳನ್ನು ಯೆಹೋವನಿಗೆ ವಿಶೇಷ ಕಾಣಿಕೆಯಾಗಿ ಕೊಡಲಾಗುವುದಿಲ್ಲ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ26 “ ‘ಪಶುಗಳ ಚೊಚ್ಚಲ ಮರಿ ಯೆಹೋವ ದೇವರದಾದ್ದರಿಂದ ಅದನ್ನೂ ಹರಕೆಯಾಗಿ ಕೊಡಬಾರದು. ಅದು ಎತ್ತಾಗಲಿ ಇಲ್ಲವೆ ಕುರಿಯಾಗಲಿ, ಅದು ಯೆಹೋವ ದೇವರದೇ. ಅಧ್ಯಾಯವನ್ನು ನೋಡಿ |