Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಜಕಕಾಂಡ 27:25 - ಕನ್ನಡ ಸತ್ಯವೇದವು C.L. Bible (BSI)

25 ದೇವರ ಸೇವೆಯಲ್ಲಿ ಬಳಕೆಯಲ್ಲಿರುವ ‘ಶೆಕೆಲ್’ ಒಂದಕ್ಕೆ ಇಪ್ಪತ್ತು ‘ಗೇರಾ’ ತೂಕದ ನಾಣ್ಯದ ಮೇರೆಗೆ ಬೆಲೆಯನ್ನು ನಿಗದಿಮಾಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

25 ದೇವರ ಸೇವೆಯಲ್ಲಿ ನೇಮಕವಾದ ಎಲ್ಲಾ ತೂಕವು ದೇವಾಲಯದ ಶೆಕೆಲ್ ಮೇರೆಗೆ ಇರಬೇಕು. ಇಪ್ಪತ್ತು ಗೇರಾ ತೂಕವು ಒಂದು ಶೆಕೆಲಿಗೆ ಸಮವಾಗಿರಬೇಕೆಂದು ಯಾವಾಗಲೂ ನಿರ್ಣಯಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

25 ದೇವರ ಸೇವೆಯಲ್ಲಿ ನೇಮಕವಾದ ಇಪ್ಪತ್ತು ಗೇರಾ ತೂಕದ ರೂಪಾಯಿಯ ಮೇರೆಗೆ ನೀವು ಬೆಲೆಯನ್ನು ಯಾವಾಗಲೂ ನಿರ್ಣಯಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

25 “ನೀವು ಅಧಿಕೃತ ಅಳತೆಯನ್ನು ಉಪಯೋಗಿಸಿ ಆ ಬೆಲೆಗಳನ್ನು ಕೊಡಬೇಕು. ಒಂದು ಶೆಕೆಲ್‌ನ ಬೆಲೆಯನ್ನು ಇಪ್ಪತ್ತು ಗೇರಾ ತೂಕದ ಪ್ರಕಾರ ನೀವು ಯಾವಾಗಲೂ ನಿರ್ಣಯಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

25 ಪವಿತ್ರ ಸ್ಥಳದ ಶೆಕೆಲ್ ಅನುಸಾರವಾಗಿ ನೇಮಿಸುವ ಕ್ರಯವು ಇಪ್ಪತ್ತು ಗೇರಾ ತೂಕದ ಶೆಕೆಲ್ ಮೇರೆಗೆ ನೀವು ಕ್ರಯವನ್ನು ನಿಗದಿಮಾಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಜಕಕಾಂಡ 27:25
9 ತಿಳಿವುಗಳ ಹೋಲಿಕೆ  

ಲೆಕ್ಕಿತರಾದವರಲ್ಲಿ ಪ್ರತಿಯೊಬ್ಬನು ನನಗೆ ಅರ್ಧ ಶೆಕೆಲ್‍ ನಾಣ್ಯದ ಮೇರೆಗೆ ತೆರಿಗೆ ಕಟ್ಟಬೇಕು. ದೇವರ ಸೇವೆಗೆ ನೇಮಕವಾದ ಇಪ್ಪತ್ತು ‘ಗೇರಾ’ ತೂಕದ ನಾಣ್ಯದ ಮೇರೆಗೆ ಅರ್ಧರ್ಧ ನಾಣ್ಯವನ್ನು ತೆರಿಗೆಯಾಗಿ ಕೊಡಬೇಕು.


ಹೀಗೆ ಬಿಟ್ಟುಬಿಡಬೇಕಾದ ಶಿಶುಗಳು ಒಂದು ತಿಂಗಳಿನ ಪ್ರಾಯಕ್ಕೆ ಬಂದಾಗಲೆ ಗೊತ್ತಾದ ಈಡನ್ನು ಅಂದರೆ ದೇವರ ಸೇವೆಗೆ ನಿಗದಿಯಾದ ಇಪ್ಪತ್ತು ‘ಗೇರಾ’ ತೂಕದ ನಾಣ್ಯದ ಮೇರೆಗೆ ಐದು ಶೆಕೆಲ್ ನಾಣ್ಯವನ್ನು ತೆಗೆದುಕೊಂಡು ಅವುಗಳನ್ನು ಬಿಟ್ಟುಬಿಡು.


ದೇವರ ಸೇವೆಗೆ ನಿಗದಿಯಾದ ನಾಣ್ಯಗಳ ಮೇರೆಗೆ ತೆಗೆದುಕೊಳ್ಳಬೇಕು.


ಒಂದು ಶೇಕೆಲ್ ಇಪ್ಪತ್ತು ಗೇರಾ ತೂಕವಾಗಿರಬೇಕು; ನಿಮ್ಮಲ್ಲಿ ಸಲ್ಲುವ ಮಾನೆಯು ಇಪ್ಪತ್ತು, ಇಪ್ಪತ್ತೈದು ಅಥವಾ ಹದಿನೈದು ಶೆಕೆಲ್ ತೂಕದ್ದಾಗಿರಲಿ.


ಇಪ್ಪತ್ತರಿಂದ ಅರವತ್ತು ವರ್ಷ ವಯಸ್ಸುಳ್ಳ ಪುರುಷನ ಪರವಾಗಿ ಐವತ್ತು ಬೆಳ್ಳಿನಾಣ್ಯಗಳನ್ನು ಹಾಗು


ದೇವಮಂದಿರದ ವಿವಿಧ ಕೆಲಸದಲ್ಲಿ ಉಪಯೋಗಿಸಿದ ಕಾಣಿಕೆಯ ಬಂಗಾರದ ತೂಕ ದೇವರ ಸೇವೆಗೆ ನೇಮಕವಾದ ತೂಕದ ಮೇರೆಗೆ ಸುಮಾರು ಒಂದು ಸಾವಿರ ಕಿಲೋಗ್ರಾಂ ಇತ್ತು.


ಜೂಬಿಲಿ ಸಂವತ್ಸರದಲ್ಲಿ ಆ ಹೊಲವು ಮಾರಿದವನಿಗೆ, ಅಂದರೆ ಯಾರ ಪಿತ್ರಾರ್ಜಿತ ಭೂಮಿಗೆ ಸೇರಿದೆಯೋ ಅವರಿಗೆ ಅದನ್ನು ಮರಳಿಸಬೇಕು.


ದೇವಸ್ಥಾನದ ನಾಣ್ಯತೂಕದ ಮೇರೆಗೆ 130 ಶೆಕೆಲ್ ತೂಕದ ಒಂದು ಹರಿವಾಣ, 70 ಶೆಕೆಲ್ ತೂಕದ ಒಂದು ಬೆಳ್ಳಿಯ ಬಟ್ಟಲು; ಈ ಎರಡರ ತುಂಬ ನೈವೇದ್ಯಕ್ಕಾಗಿ ಎಣ್ಣೆಬೆರೆಸಿದ ಗೋದಿಯ ಹಿಟ್ಟು


“ಯಾರಾದರು ಸರ್ವೇಶ್ವರನಿಗೆ ಸಲ್ಲಿಸಬೇಕಾದ ಪವಿತ್ರವಸ್ತುಗಳನ್ನು ಸಮರ್ಪಿಸುವುದರಲ್ಲಿ ಅಜಾಗ್ರತೆಯಿಂದ ದ್ರೋಹಮಾಡಿ ದೋಷಕ್ಕೆ ಒಳಗಾದರೆ, ಅಂಥವರು ಆ ಅಪರಾಧಕ್ಕೆ ಪರಿಹಾರ ಮಾಡಬೇಕು; ದೇವರ ಸೇವೆಗೆ ನೇಮಕವಾದ ನಾಣ್ಯದ ಮೇರೆಗೆ ಎರಡು ಅಥವಾ ಹೆಚ್ಚು ನಾಣ್ಯ ಬೆಲೆ ಬಾಳುವುದೆಂದು ತೋರುವ ಕಳಂಕರಹಿತವಾದ ಒಂದು ಟಗರನ್ನು ಆಡುಕುರಿಗಳ ಹಿಂಡಿನಿಂದ ತೆಗೆದುಕೊಂಡು ಬಂದು ಸರ್ವೇಶ್ವರನಿಗೆ ಸಮರ್ಪಿಸಬೇಕು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು