ಯಾಜಕಕಾಂಡ 27:19 - ಕನ್ನಡ ಸತ್ಯವೇದವು C.L. Bible (BSI)19 ಹರಕೆಮಾಡಿದವನು ಅದನ್ನು ಬಿಡಿಸಿಕೊಳ್ಳಲಾಶಿಸಿದರೆ, ಅದರ ಕ್ರಯದೊಡನೆ ಐದನೆಯ ಒಂದು ಭಾಗವನ್ನು ಹೆಚ್ಚಾಗಿ ಕೊಡಬೇಕು. ಆಗ ಆ ಹೊಲ ಅವನದಾಗುವುದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201919 ಹರಕೆಮಾಡಿದವನು ಅದನ್ನು ಬಿಡಿಸಿಕೊಳ್ಳಬೇಕೆಂದಿರುವ ಪಕ್ಷಕ್ಕೆ ಅದರ ಕ್ರಯದೊಡನೆ ಐದನೆಯ ಒಂದು ಭಾಗವನ್ನು ಹೆಚ್ಚಾಗಿ ಕೊಡಬೇಕು; ಆಗ ಆ ಹೊಲ ಅವನದಾಗಿರುವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)19 ಹರಕೆಮಾಡಿದವನು ಅದನ್ನು ಬಿಡಿಸಿಕೊಳ್ಳಬೇಕೆಂದಿರುವ ಪಕ್ಷಕ್ಕೆ ಅದರ ಕ್ರಯದೊಡನೆ ಐದನೆಯ ಭಾಗವನ್ನು ಹೆಚ್ಚಾಗಿ ಕೊಡಬೇಕು; ಆಗ ಆ ಹೊಲ ಅವನದಾಗಿರುವದು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್19 ಹೊಲವನ್ನು ಕೊಟ್ಟವನು ಅದನ್ನು ಮರಳಿ ಕೊಂಡುಕೊಳ್ಳಬೇಕೆಂದು ಬಯಸುವುದಾದರೆ, ಅವನು ಅದರ ಬೆಲೆಗೆ ಐದನೆಯ ಒಂದಂಶವನ್ನು ಸೇರಿಸಿ ಕೊಡಬೇಕು. ಆಗ ಹೊಲವು ತಿರುಗಿ ಅವನದಾಗುವುದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ19 ಇದಲ್ಲದೆ ಆ ಹೊಲವನ್ನು ಪರಿಶುದ್ಧ ಮಾಡಿದವನು ಅದನ್ನು ಅವನು ವಿಮೋಚಿಸಬೇಕೆಂದಿದ್ದರೆ, ಅವನು ಕಟ್ಟಿದ ಕ್ರಯಕ್ಕಿಂತ ಹೆಚ್ಚಾಗಿ ಐದನೆಯ ಒಂದು ಪಾಲನ್ನು ಕೊಡಬೇಕು. ಆಗ ಅದು ಸ್ಥಿರವಾಗಿರುವುದು. ಅಧ್ಯಾಯವನ್ನು ನೋಡಿ |