Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಜಕಕಾಂಡ 26:7 - ಕನ್ನಡ ಸತ್ಯವೇದವು C.L. Bible (BSI)

7 ನೀವೇ ನಿಮ್ಮ ವೈರಿಗಳನ್ನು ಓಡಿಸುವಿರಿ; ಕತ್ತಿಯಿಂದ ಸಂಹರಿಸುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ನೀವು ನಿಮ್ಮ ವೈರಿಗಳನ್ನು ಓಡಿಸುವಿರಿ ಮತ್ತು ಅವರನ್ನು ಕತ್ತಿಯಿಂದ ಸಂಹರಿಸುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ನೀವು ನಿಮ್ಮ ವೈರಿಗಳನ್ನು ಓಡಿಸುವಿರಿ, ಅವರನ್ನು ಕತ್ತಿಯಿಂದ ಸಂಹರಿಸುವಿರಿ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 “ನೀವು ನಿಮ್ಮ ವೈರಿಗಳನ್ನು ಸೋಲಿಸಿ ಓಡಿಸಿಬಿಡುವಿರಿ. ನಿಮ್ಮ ಕತ್ತಿಗಳಿಂದ ಅವರನ್ನು ಕೊಲ್ಲುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ನೀವು ನಿಮ್ಮ ಶತ್ರುಗಳನ್ನು ಹಿಂದಟ್ಟುವಾಗ, ಅವರು ಖಡ್ಗದಿಂದ ನಿಮ್ಮ ಮುಂದೆ ಬೀಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಜಕಕಾಂಡ 26:7
13 ತಿಳಿವುಗಳ ಹೋಲಿಕೆ  

ನಿಮ್ಮ ನಾಡಿಗೆ ಸುಕ್ಷೇಮವನ್ನು ಅನುಗ್ರಹಿಸುವೆನು. ಯಾರ ಭಯವೂ ಇಲ್ಲದೆ ನೀವು ನಿದ್ರಿಸುವಿರಿ; ದುಷ್ಟಮೃಗಗಳ ಕಾಟ ನಿಮ್ಮ ನಾಡಿಗಿರದು; ನಿಮ್ಮ ನಾಡು ಶತ್ರುಗಳ ಕತ್ತಿಗೆ ತುತ್ತಾಗದು.


ನಿಮ್ಮಲ್ಲಿ ಐದು ಮಂದಿ ನೂರು ಮಂದಿಯನ್ನೂ, ನೂರು ಮಂದಿ ಹತ್ತು ಸಾವಿರ ಮಂದಿಯನ್ನೂ ಓಡಿಸುವರು. ಶತ್ರುಗಳು ನಿಮ್ಮ ಕತ್ತಿಯಿಂದ ಹತರಾಗುವರು.


ಒಬ್ಬನಿಂದ ಸಾವಿರ ಮಂದಿ ಸೋತುಹೋದುದು’ ಒಬ್ಬರಿಗಂಜಿ ಹತ್ತುಸಾವಿರ ಓಡಿಹೋದುದು, ಅವರ ಪೊರೆಬಂಡೆಯಾತ ಅವರನು ವೈರಿಗೊಪ್ಪಿಸಿದ್ದರಿಂದಲ್ಲವೆ? ಅವರ ಸರ್ವೇಶ್ವರನು ಅವರನು ಕೈಬಿಟ್ಟುದರಿಂದಲ್ಲವೆ?


ಹಾಗೆಯೆ ಇತರ ರಾಜಸಂಸ್ಥಾನಗಳಲ್ಲೂ ಯೆಹೂದ್ಯರು ತಮ್ಮ ವಿರೋಧಿಗಳ ಕಾಟವನ್ನು ನಿಲ್ಲಿಸಿ, ತಮ್ಮ ಪ್ರಾಣರಕ್ಷಣೆಗಾಗಿ ಒಟ್ಟಾಗಿ ಸೇರಿ, ತಮ್ಮ ವೈರಿಗಳಲ್ಲಿ ಎಪ್ಪತ್ತೈದು ಸಾವಿರಮಂದಿಯನ್ನು ಕೊಂದುಹಾಕಿದರು. ಆದರೆ, ಸುಲಿಗೆಗೆ ಕೈಹಾಕಲಿಲ್ಲ.


“ನಿಮ್ಮಲ್ಲಿ ಯಾರ್ಯಾರು ಶತ್ರುದೇಶಗಳಲ್ಲಿ ಅಳಿದುಳಿದಿರುವಿರೋ ಅವರ ಅಂತರಾಳದಲ್ಲಿ ಭಯಭೀತಿಯನ್ನು ಹುಟ್ಟಿಸುವೆನು. ಗಾಳಿಗೆ ತೂರಾಡುವ ತರಗೆಲೆಯ ಸಪ್ಪಳವೂ ಅವರಲ್ಲಿ ದಿಗಿಲು ಹುಟ್ಟಿಸುವುದು.ಆ ಸಪ್ಪಳ ಕೇಳಿ, ಖಡ್ಗಕ್ಕೆ ಹೆದರಿ ಓಡಿಹೋಗುವವರಂತೆ ಫೇರಿಕೀಳುವರು. ಯಾರೂ ಬೆನ್ನಟ್ಟಿಬಾರದಿದ್ದರೂ ಅವರು ಎದ್ದುಬಿದ್ದು ಓಡುವರು.


“ನಿಮ್ಮ ಮೇಲೆ ಎರಗುವ ಶತ್ರುಗಳು ನಿಮ್ಮಿಂದ ಸೋತುಹೋಗುವಂತೆ ಸರ್ವೇಶ್ವರ ಮಾಡುವರು; ಅವರು ಒಂದೇ ದಾರಿಯಿಂದ ನಿಮ್ಮ ಮೇಲೆ ಬಂದರೂ ಏಳು ದಾರಿಗಳಿಂದ ಓಡಿಹೋಗುವರು.


ನಿಮ್ಮ ದೇವರಾದ ಸರ್ವೇಶ್ವರ ತಮ್ಮ ವಾಗ್ದಾನದಂತೆ ನಿಮ್ಮ ಪರವಾಗಿ ಯುದ್ಧಮಾಡಿದರು. ಆದ್ದರಿಂದಲೇ ನಿಮ್ಮಲ್ಲಿ ಒಬ್ಬನು ಸಾವಿರ ಜನರನ್ನು ಓಡಿಸುವಷ್ಟು ಶಕ್ತನಾದ.


ಬಾರಾಕನು ಅವನ ಸೈನ್ಯರಥಗಳನ್ನು ಮ್ಲೇಚ್ಛರ ಹರೋಷೆತಿನವರೆಗೂ ಹಿಂದಟ್ಟಿದನು. ಸೀಸೆರನ ಸೈನ್ಯದವರೆಲ್ಲರು ಕತ್ತಿಯಿಂದ ಹತರಾದರು; ಒಬ್ಬನೂ ಉಳಿಯಲಿಲ್ಲ.


ಇಸ್ರಯೇಲರಾದ ನಫ್ತಾಲಿ, ಆಶೇರ್ ಕುಲಗಳವರೂ ಮನಸ್ಸೆಕುಲದ ಜನರೆಲ್ಲರೂ ಕೂಡಿಬಂದು ಮಿದ್ಯಾನ್ಯರನ್ನು ಹಿಂದಟ್ಟಿದರು.


ಅಲ್ಲೇ ಒಂದು ಕತ್ತೆಯ ದವಡೆ ಎಲುಬು ಬಿದ್ದಿತ್ತು. ಅದು ಇನ್ನೂ ಹಸಿ ಇತ್ತು. ಅವನು ಅದನ್ನು ತೆಗೆದುಕೊಂಡು ಅದರಿಂದ ಸಾವಿರ ಜನರನ್ನು ಹತಿಸಿಬಿಟ್ಟು,


ಯೋನಾತಾನನೂ ಅವನ ಆಯುಧಗಳನ್ನು ಹೊರುವ ಸೇವಕನೂ ತಮ್ಮ ಮೊಣಕಾಲನ್ನು ಹಾಗು ಕೈಗಳನ್ನು ಊರುತ್ತಾ ಕಣಿವೆಯಿಂದ ಮೇಲೆ ಬಂದರು. ಯೋನಾತಾನನು ಫಿಲಿಷ್ಟಿಯರನ್ನು ನೆಲಕ್ಕೆ ಉರುಳಿಸುತ್ತಾ ಹೋದನು; ಅವನ ಸೇವಕನು ಹಿಂದಿನಿಂದ ಅವರನ್ನು ಕೊಲ್ಲುತ್ತಾ ನಡೆದನು.


ಇವರು ಓಡಿಹೋಗುವುದನ್ನು ಅಮ್ಮೋನಿಯರು ಕಂಡು ಅವರೂ ಅವನ ತಮ್ಮ ಅಬೀಷೈಯ ಎದುರಿನಿಂದ ಓಡಿಹೋಗಿ ಪಟ್ಟಣವನ್ನು ಹೊಕ್ಕರು. ಯೋವಾಬನು ಜೆರುಸಲೇಮಿಗೆ ಹೋದನು.


“ಮುದುರಿಕೊಳ್ಳುತ್ತಿದ್ದರಾ ಎದುರಾಳಿಗಳು ಅವರ ಮುಂದೆ I ಅಳಿಯದೆ ಉಳಿದುಕೊಳ್ಳುತ್ತಿತ್ತು ಅವರಿಗಾದ ದಂಡನೆ ಮುಗಿವಿಲ್ಲದೆ, II


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು