ಯಾಜಕಕಾಂಡ 26:16 - ಕನ್ನಡ ಸತ್ಯವೇದವು C.L. Bible (BSI)16 ನೀವು ಈ ದಂಡನೆಗಳಿಗೆ ಗುರಿಯಾಗುವಿರಿ. ನಿಮಗೆ ಕ್ಷಯ ರೋಗ, ಚಳಿಜ್ವರ ಮುಂತಾದ ಭೀಕರ ವ್ಯಾಧಿಗಳು ಬರುವಂತೆ ಮಾಡುವೆನು. ಇವುಗಳ ನಿಮಿತ್ತ ನೀವು ಕಂಗೆಡುವಿರಿ, ಮನಗುಂದಿ ಹೋಗುವಿರಿ. ನಿಮ್ಮ ಬಿತ್ತನೆಯ ಫಲ ನಿಮಗೆ ಸಿಗದೆ ಹೋಗುವುದು. ಅದು ಶತ್ರುಗಳ ಪಾಲಾಗುವುದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201916 ನಾನು ನಿಮಗೆ ಮಾಡುವುದೇನೆಂದರೆ, ಕ್ಷಯರೋಗ, ಚಳಿಜ್ವರ ಮುಂತಾದ ಭಯಂಕರ ವ್ಯಾಧಿಗಳನ್ನು ನಿಮ್ಮಲ್ಲಿ ಇರುವಂತೆ ಮಾಡುವೆನು; ಇವುಗಳ ದೆಸೆಯಿಂದ ನೀವು ಕಂಗೆಟ್ಟವರಾಗಿಯೂ, ಮನಗುಂದಿದವರಾಗಿಯೂ ಇರುವಿರಿ. ನೀವು ಬೀಜಬಿತ್ತಿದಾಗ ಅದರ ಫಲವು ನಿಮಗೆ ದೊರೆಯದೆ ಹೋಗುವುದು; ಶತ್ರುಗಳು ಬಂದು ಅದನ್ನು ತಿಂದುಬಿಡುವರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)16 ನಾನು ನಿಮಗೆ ಮಾಡುವದೇನಂದರೆ - ಕ್ಷಯರೋಗ, ಚಳಿಜ್ವರ ಮುಂತಾದ ಭಯಂಕರ ವ್ಯಾಧಿಗಳನ್ನು ನಿಮ್ಮಲ್ಲಿ ಇರುವಂತೆ ಮಾಡುವೆನು; ಇವುಗಳ ದೆಸೆಯಿಂದ ನೀವು ಕಂಗೆಟ್ಟವರಾಗಿಯೂ ಮನಗುಂದಿದವರಾಗಿಯೂ ಇರುವಿರಿ. ನೀವು ಬೀಜ ಬಿತ್ತಿದಾಗ ಅದರ ಫಲವು ನಿಮಗೆ ದೊರೆಯದೆ ಹೋಗುವದು; ಶತ್ರುಗಳು ಬಂದು ಅದನ್ನು ತಿಂದುಬಿಡುವರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್16 ಆಗ ನಾನು ನಿಮ್ಮ ಮಧ್ಯೆ ಭಯಂಕರ ಸಂಗತಿಗಳು ನಡೆಯುವಂತೆ ಮಾಡುವೆ. ನೀವು ವ್ಯಾಧಿಯಿಂದಲೂ ಜ್ವರದಿಂದಲೂ ನರಳುವಂತೆ ಮಾಡುವೆ. ಅವು ನಿಮ್ಮ ಕಣ್ಣುಗಳನ್ನು ನಾಶಮಾಡಿ ನಿಮ್ಮ ಪ್ರಾಣವನ್ನು ತೆಗೆದುಬಿಡುತ್ತವೆ; ನೀವು ಬೀಜ ಬಿತ್ತಿದರೂ ಅದರ ಫಲವು ದೊರೆಯುವುದಿಲ್ಲ: ನಿಮ್ಮ ವೈರಿಗಳು ನಿಮ್ಮ ಬೆಳೆಗಳನ್ನು ತಿಂದುಬಿಡುವರು! ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ16 ನಾನು ಸಹ ಇದನ್ನು ನಿಮಗೆ ಮಾಡುವೆನು: ನಿಮ್ಮ ಮೇಲೆ ಭೀತಿಯನ್ನು ಉಂಟುಮಾಡುವ, ಕಣ್ಣುಗಳನ್ನು ಕ್ಷೀಣಿಸುವಂತೆಯೂ ಹೃದಯವು ಕುಗ್ಗಿ ದುಃಖಕ್ಕೊಳಗಾಗುವಂತೆಯೂ ಮಾಡುವ ಕ್ಷಯರೋಗವನ್ನೂ ಚಳಿಜ್ವರವನ್ನೂ ಬರಮಾಡುವೆನು. ನೀವು ವ್ಯರ್ಥವಾಗಿ ಬೀಜವನ್ನು ಬಿತ್ತುವಿರಿ. ಏಕೆಂದರೆ ನಿಮ್ಮ ಶತ್ರುಗಳು ಅದನ್ನು ತಿಂದುಬಿಡುವರು. ಅಧ್ಯಾಯವನ್ನು ನೋಡಿ |
ಅಲ್ಲಿ ಸರ್ವೇಶ್ವರ ಇಸ್ರಯೇಲರಿಗೆ ಒಂದು ನಿಯಮವನ್ನು ಕೊಟ್ಟರು. ಅದು ಮಾತ್ರವಲ್ಲ, ಅವರನ್ನು ಪರೀಕ್ಷಿಸಿದರು. ಅವರಿಗೆ, “ನೀವು ನಿಮ್ಮ ದೇವರಾದ ನನ್ನ ಮಾತನ್ನು ಶ್ರದ್ಧೆಯಿಂದ ಕೇಳಿ, ನನ್ನ ದೃಷ್ಟಿಗೆ ಸರಿಬೀಳುವುದನ್ನೆ ಮಾಡಿ ನನ್ನ ಆಜ್ಞೆಗಳಿಗೆ ವಿಧೇಯರಾಗಿದ್ದು, ನನ್ನ ಕಟ್ಟಳೆಗಳನ್ನೆಲ್ಲ ಅನುಸರಿಸಿ ನಡೆದರೆ ನಾನು ಈಜಿಪ್ಟಿನವರಿಗೆ ಉಂಟುಮಾಡಿದ ವ್ಯಾಧಿಗಳಲ್ಲಿ ಒಂದನ್ನೂ ನಿಮಗೆ ಬರಮಾಡುವುದಿಲ್ಲ. ಸರ್ವೇಶ್ವರನೆಂಬ ನಾನೇ ನಿಮಗೆ ಆರೋಗ್ಯದಾಯಕ,” ಎಂದರು.