Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಜಕಕಾಂಡ 25:5 - ಕನ್ನಡ ಸತ್ಯವೇದವು C.L. Bible (BSI)

5 ಹೊಲದಲ್ಲಿ ತಾನಾಗಿ ಬೆಳೆದ ಫಸಲನ್ನು ನೀವು ಕೂಡಿಸಿಟ್ಟುಕೊಳ್ಳಬಾರದು. ತಾನಾಗಿಯೇ ಬೆಳೆದ ದ್ರಾಕ್ಷಿ ಹಣ್ಣನ್ನು ಶೇಖರಿಸಿಟ್ಟುಕೊಳ್ಳಬಾರದು. ಆ ವರ್ಷ ಪೂರ್ತಿ ಭೂಮಿಗೆ ಸಂಪೂರ್ಣ ವಿಶ್ರಾಂತಿಯಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

5 ಹೊಲದಲ್ಲಿ ತಾನಾಗಿ ಬೆಳೆದ ಪೈರನ್ನು ನೀವು ಕೂಡಿಸಿಟ್ಟುಕೊಳ್ಳಬಾರದು, ನೀವು ನೋಡಿಕೊಳ್ಳದೆ ಬಿಟ್ಟ ದ್ರಾಕ್ಷಾಲತೆಗಳಲ್ಲಿ ಬಂದ ಹಣ್ಣನ್ನು ಸಂಗ್ರಹಿಸಬಾರದು. ಆ ವರ್ಷವೆಲ್ಲಾ ಭೂಮಿಗೆ ಸಂಪೂರ್ಣವಾಗಿ ವಿಶ್ರಾಂತಿಯಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

5 ಹೊಲದಲ್ಲಿ ತಾನಾಗಿ ಬೆಳೆದ ಪೈರನ್ನು ನೀವು ಕೂಡಿಸಿಟ್ಟುಕೊಳ್ಳಬಾರದು; ನೀವು ನೋಡಿಕೊಳ್ಳದೆ ಬಿಟ್ಟ ದ್ರಾಕ್ಷಾಲತೆಗಳಲ್ಲಿ ಬಂದ ಹಣ್ಣನ್ನು ಸಂಗ್ರಹಿಸಬಾರದು. ಆ ವರುಷವೆಲ್ಲಾ ಭೂವಿುಗೆ ಸಂಪೂರ್ಣವಾಗಿ ವಿಶ್ರಾಂತಿಯಿರಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

5 ಕೊಯ್ಲಿನ ನಂತರ ತನ್ನಷ್ಟಕ್ಕೆ ತಾನೇ ಬೆಳೆದ ಪೈರನ್ನೂ ಕೊಯ್ಯಬಾರದು. ನೀವು ನೋಡಿಕೊಳ್ಳದೆ ಬಿಟ್ಟ ದ್ರಾಕ್ಷಾಲತೆಗಳಲ್ಲಿ ಬಂದ ದ್ರಾಕ್ಷಿಯನ್ನು ಸಂಗ್ರಹಿಸಬಾರದು. ಭೂಮಿಗೆ ಒಂದು ವರ್ಷದ ವಿಶ್ರಾಂತಿಯಿರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

5 ತನ್ನಷ್ಟಕ್ಕೆ ತಾನೇ ಬೆಳೆದಿರುವ ಪೈರನ್ನು ನೀವು ಕೊಯ್ಯಬಾರದು. ಇಲ್ಲವೆ ಕತ್ತರಿಸದಿರುವ ದ್ರಾಕ್ಷಿಯ ಬಳ್ಳಿಯ ದ್ರಾಕ್ಷಿಹಣ್ಣುಗಳನ್ನು ಕೂಡಿಸಬಾರದು. ಏಕೆಂದರೆ ಅದು ದೇಶಕ್ಕೆ ವಿಶ್ರಾಂತಿಯ ವರ್ಷವಾಗಿರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಜಕಕಾಂಡ 25:5
5 ತಿಳಿವುಗಳ ಹೋಲಿಕೆ  

ಬಳಿಕ ಯೆಶಾಯನು ರಾಜ ಹಿಜ್ಕೀಯನಿಗೆ, “ಈ ಮಾತುಗಳು ನೆರವೇರುತ್ತವೆಂಬುದಕ್ಕೆ ಸೂಚನೆ ಇದು : ಈ ವರ್ಷದಲ್ಲಿ ನೀವು ಕೂಳೆಬೆಳೆಯನ್ನು, ಮುಂದಿನ ವರ್ಷದಲ್ಲಿ ತನ್ನಷ್ಟಕ್ಕೆ ತಾನೇ ಅದು ಬೆಳೆದುದನ್ನು, ಆದರೆ ಮೂರನೆಯ ವರ್ಷ ಹೊಲಗಳಲ್ಲಿ ಬಿತ್ತಿ ಕೊಯ್ದುದನ್ನು, ದ್ರಾಕ್ಷಿತೋಟದಲ್ಲಿ ವ್ಯವಸಾಯಮಾಡಿ ಶೇಖರಿಸಿದ್ದನ್ನು ಅನುಭವಿಸುವಿರಿ.


ಬಳಿಕ ಯೆಶಾಯನು ರಾಜ ಹಿಜ್ಕೀಯನಿಗೆ ಹೀಗೆಂದನು: “ಈ ಮಾತುಗಳು ನೆರವೇರುತ್ತವೆಂಬುದಕ್ಕೆ ಸೂಚನೆ ಇದು: ಈ ವರ್ಷದಲ್ಲಿ ನೀವು ಕೂಳೆಬೆಳೆಯನ್ನು, ಮುಂದಿನ ವರ್ಷದಲ್ಲಿ ತನ್ನಷ್ಟಕ್ಕೆ ತಾನೇ ಅದು ಬೆಳೆದುದನ್ನು, ಆದರೆ ಮೂರನೆಯ ವರ್ಷ ಹೊಲಗಳಲ್ಲಿ ಬಿತ್ತಿ ಕೊಯ್ದುದನ್ನು, ದ್ರಾಕ್ಷಿತೋಟದಲ್ಲಿ ವ್ಯವಸಾಯ ಮಾಡಿ ಶೇಖರಿಸಿದ್ದನ್ನು ಅನುಭವಿಸಿರಿ.


ಆದರೆ ಏಳನೆಯ ವರ್ಷ ಯಾವ ವ್ಯವಸಾಯವನ್ನೂ ಮಾಡಬಾರದು. ಅದು ವಿಶ್ರಾಂತಿಕಾಲವಾಗಿಯೂ ಸರ್ವೇಶ್ವರನ ಗೌರವಾರ್ಥ ಸಬ್ಬತ್ ಕಾಲವಾಗಿಯೂ ಇರಬೇಕು. ಆ ವರ್ಷ ಹೊಲದಲ್ಲಿ ವ್ಯವಸಾಯ ಮಾಡಬಾರದು; ದ್ರಾಕ್ಷೀ ತೋಟದ ಕೆಲಸವನ್ನೂ ಕೈಬಿಡಬೇಕು.


ಆದರೆ ಅಂಥ ಸಬ್ಬತ್ ಸಂವತ್ಸರದಲ್ಲಿ ಭೂಮಿ ತಾನಾಗಿಯೇ ಬೆಳೆದದ್ದು ನಿಮಗೆ, ನಿಮ್ಮ ದಾಸದಾಸಿಯರಿಗೆ, ಕೂಲಿಯವರಿಗೆ


ಆ ಐವತ್ತನೆಯ ವರ್ಷದಲ್ಲಿ, ಅಂದರೆ ‘ಜೂಬಿಲಿ’ ಸಂವತ್ಸರದಲ್ಲಿ ನೀವು ಬಿತ್ತನೆ ಮಾಡಬಾರದು; ತಾನಾಗಿ ಬೆಳೆದ ಫಸಲನ್ನು ಕೂಡಿಸಿಟ್ಟುಕೊಳ್ಳಬಾರದು; ನೀವು ಕೃಷಿಮಾಡದೆ ಬಿಟ್ಟ ದ್ರಾಕ್ಷೀತೋಟದ ಹಣ್ಣನ್ನು ಸಂಗ್ರಹಿಸಬಾರದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು