Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಜಕಕಾಂಡ 25:4 - ಕನ್ನಡ ಸತ್ಯವೇದವು C.L. Bible (BSI)

4 ಆದರೆ ಏಳನೆಯ ವರ್ಷ ಯಾವ ವ್ಯವಸಾಯವನ್ನೂ ಮಾಡಬಾರದು. ಅದು ವಿಶ್ರಾಂತಿಕಾಲವಾಗಿಯೂ ಸರ್ವೇಶ್ವರನ ಗೌರವಾರ್ಥ ಸಬ್ಬತ್ ಕಾಲವಾಗಿಯೂ ಇರಬೇಕು. ಆ ವರ್ಷ ಹೊಲದಲ್ಲಿ ವ್ಯವಸಾಯ ಮಾಡಬಾರದು; ದ್ರಾಕ್ಷೀ ತೋಟದ ಕೆಲಸವನ್ನೂ ಕೈಬಿಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಆದರೆ ಏಳನೆಯ ವರ್ಷ ಯಾವ ವ್ಯವಸಾಯ ಮಾಡಬಾರದ ವಿಶ್ರಾಂತಿ ಕಾಲವಾಗಿಯೂ ಮತ್ತು ಯೆಹೋವನಿಗೆ ಆಚರಿಸಬೇಕಾದ ಸಬ್ಬತ್ ಕಾಲವಾಗಿಯೂ ಇರಬೇಕು. ಹೊಲದಲ್ಲಿ ಬೀಜವನ್ನು ಬಿತ್ತಬಾರದು, ದ್ರಾಕ್ಷಿತೋಟದ ಕೆಲಸವನ್ನು ಮಾಡಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಆದರೆ ಏಳನೆಯ ವರುಷವು ಯಾವ ಬೇಸಾಯವೂ ನಡೆಯಬಾರದ ವಿಶ್ರಾಂತಿಕಾಲವಾಗಿಯೂ ಯೆಹೋವನಿಗೆ ಆಚರಿಸಬೇಕಾದ ಸಬ್ಬತ್‍ಕಾಲವಾಗಿಯೂ ಇರಬೇಕು; ಹೊಲದಲ್ಲಿ ಬೀಜವನ್ನು ಬಿತ್ತಬಾರದು, ದ್ರಾಕ್ಷೇತೋಟದ ಕೆಲಸವನ್ನು ನಡಿಸಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಆದರೆ ಏಳನೆಯ ವರ್ಷದಲ್ಲಿ ನೀವು ಭೂಮಿಗೆ ವಿಶ್ರಾಂತಿ ಕೊಡುವಿರಿ. ಇದು ಯೆಹೋವನನ್ನು ಸನ್ಮಾನಿಸಲು ನೇಮಕವಾದ ವಿಶ್ರಾಂತಿಯ ವಿಶೇಷ ಸಮಯವಾಗಿರುವುದು. ನೀವು ನಿಮ್ಮ ಹೊಲಗಳಲ್ಲಿ ಬೀಜವನ್ನು ಬಿತ್ತಬಾರದು, ದ್ರಾಕ್ಷಿತೋಟದ ಕೆಲಸವನ್ನು ಮಾಡಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಆದರೆ ಏಳನೆಯ ವರ್ಷವು ನೆಲಕ್ಕೆ ವಿಶ್ರಾಂತಿಕಾಲವಾಗಿರುವುದು. ಅದು ಯೆಹೋವ ದೇವರಿಗೆ ಸಬ್ಬತ್ ಕಾಲವಾಗಿರುವುದು. ನೀವು ಆ ವರ್ಷದಲ್ಲಿ ನಿಮ್ಮ ಹೊಲವನ್ನು ಬಿತ್ತಬಾರದು. ಇಲ್ಲವೆ ದ್ರಾಕ್ಷಿತೋಟವನ್ನು ಕತ್ತರಿಸಬಾರದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಜಕಕಾಂಡ 25:4
6 ತಿಳಿವುಗಳ ಹೋಲಿಕೆ  

ಈ ಪ್ರಕಾರ ಸರ್ವೇಶ್ವರ ಯೆರೆಮೀಯನ ಮುಖಾಂತರ ಹೇಳಿಸಿದ ಮಾತು ನೆರವೇರಿತು; ನಾಡು ತನ್ನ ಸಬ್ಬತ್‍ಕಾಲವನ್ನು ಅನುಭವಿಸುವುದಕ್ಕೆ ಮಾರ್ಗವಾಯಿತು. ಅದು ಎಪ್ಪತ್ತು ವರ್ಷ ಹಾಳುಬಿದ್ದು ಆ ಕಾಲಾವಧಿಯಲ್ಲಿ ವಿಶ್ರಾಂತಿಯನ್ನು ಅನುಭವಿಸುತ್ತಿತ್ತು.


ಆದರೆ ಅವರು ಬಿಟ್ಟುಹೋದ ಸ್ವಂತ ನಾಡು ಮೊಟ್ಟಮೊದಲು ನಿರ್ಜನವಾಗಬೇಕು; ಅದು ತನಗೆ ಸಲ್ಲಬೇಕಾದ ಸಬ್ಬತ್ ವಿಶ್ರಾಂತಿಯನ್ನು ಅನುಭವಿಸಬೇಕು; ಅವರು ಸರ್ವೇಶ್ವರನ ಆಜ್ಞೆ ಬೇಡವೆಂದು ಆತನ ವಿಧಿಗಳನ್ನು ತಾತ್ಸಾರ ಮಾಡಿದ ಕಾರಣ ತಮ್ಮ ಪಾಪದ ಫಲವನ್ನು ಸವಿಯಬೇಕು.


ಹೊಲದಲ್ಲಿ ತಾನಾಗಿ ಬೆಳೆದ ಫಸಲನ್ನು ನೀವು ಕೂಡಿಸಿಟ್ಟುಕೊಳ್ಳಬಾರದು. ತಾನಾಗಿಯೇ ಬೆಳೆದ ದ್ರಾಕ್ಷಿ ಹಣ್ಣನ್ನು ಶೇಖರಿಸಿಟ್ಟುಕೊಳ್ಳಬಾರದು. ಆ ವರ್ಷ ಪೂರ್ತಿ ಭೂಮಿಗೆ ಸಂಪೂರ್ಣ ವಿಶ್ರಾಂತಿಯಿರಬೇಕು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು