Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಜಕಕಾಂಡ 25:19 - ಕನ್ನಡ ಸತ್ಯವೇದವು C.L. Bible (BSI)

19 ನಿಮ್ಮ ಭೂಮಿ ಫಲವತ್ತಾಗುವುದು; ನಿಮಗೆ ಸಮೃದ್ಧಿಯಾದ ಊಟ ದೊರಕುವುದು ಮತ್ತು ಆ ನಾಡಿನಲ್ಲಿ ನಿರ್ಭಯವಾಗಿ ವಾಸಮಾಡುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ನಿಮ್ಮ ಭೂಮಿಯು ಫಲವತ್ತಾಗುವುದು, ನೀವು ಸಮೃದ್ಧಿಯಾಗಿ ಊಟಮಾಡುವಿರಿ ಮತ್ತು ಆ ದೇಶದಲ್ಲಿ ನೀವು ನಿರ್ಭಯವಾಗಿ ವಾಸಮಾಡುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ನಿಮ್ಮ ಭೂವಿುಯು ಫಲವತ್ತಾಗುವದು, ನೀವು ಸಮೃದ್ಧಿಯಾಗಿ ಊಟಮಾಡುವಿರಿ, ಮತ್ತು ಆ ದೇಶದಲ್ಲಿ ನೀವು ನಿರ್ಭಯವಾಗಿ ವಾಸಮಾಡುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ಮತ್ತು ಭೂಮಿಯು ಒಳ್ಳೆಯ ಪೈರುಗಳನ್ನು ಕೊಡುವುದು. ಆಗ ನಿಮಗೆ ಬೇಕಾದಷ್ಟು ಆಹಾರವಿರುವುದು ಮತ್ತು ನೀವು ದೇಶದಲ್ಲಿ ಸುರಕ್ಷಿತವಾಗಿ ಜೀವಿಸುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಭೂಮಿಯು ತನ್ನ ಫಲವನ್ನು ಕೊಡುವುದು. ನೀವು ತಿಂದು ತೃಪ್ತರಾಗುವಿರಿ, ಅದರಲ್ಲಿ ಸುರಕ್ಷಿತವಾಗಿ ವಾಸಿಸುವಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಜಕಕಾಂಡ 25:19
17 ತಿಳಿವುಗಳ ಹೋಲಿಕೆ  

ನೀವು ಹೊಟ್ಟೆತುಂಬ ಊಟಮಾಡಿ ತೃಪ್ತರಾಗುವಿರಿ; ನಿಮಗಾಗಿ ಮಹತ್ಕಾರ್ಯಗಳನ್ನು ಎಸಗಿದ ದೇವರಾದ ಸರ್ವೇಶ್ವರಸ್ವಾಮಿಯ ನಾಮವನ್ನು ಕೊಂಡಾಡುವಿರಿ; ನನ್ನ ಜನರಿಗೆ ಎಂದಿಗೂ ಆಶಾಭಂಗವಾಗದು.


ಪ್ರಭು ಕೊಟ್ಟೇ ತೀರುವನು ಒಳಿತನು I ನಮ್ಮ ನಾಡು ನೀಡುವುದು ಬೆಳೆಯನು II


ಕಣತುಳಿಸುವ ಕೆಲಸ ದ್ರಾಕ್ಷಿ ಬೆಳೆಯ ಪರ್ಯಂತರವೂ ದ್ರಾಕ್ಷೀ ಬೆಳೆಯನ್ನು ಕೂಡಿಸುವ ಕೆಲಸ ಬಿತ್ತನೆಯ ಕಾಲದ ಪರ್ಯಂತರವೂ ನಡೆಯುವುವು. ಸಮೃದ್ಧಿಯಾಗಿ ಊಟಮಾಡುವಿರಿ, ನಾಡಿನಲ್ಲಿ ನಿರ್ಭಯವಾಗಿ ವಾಸಮಾಡುವಿರಿ.


ಕಣಗಳಲ್ಲಿ ಗೋದಿ ರಾಶಿರಾಶಿಯಾಗಿರುವುದು. ತೊಟ್ಟಿಗಳಲ್ಲಿ ದ್ರಾಕ್ಷಾರಸ, ತೈಲಗಳು ತುಂಬಿರುವುವು.


ನೀವು ಕ್ಷಾಮದೇಶದವರೆಂದು ಜನಾಂಗಗಳು ಇನ್ನು ನಿಮ್ಮನ್ನು ನಿಂದಿಸದಂತೆ ನಾನು ಮರದ ಹಣ್ಣನ್ನೂ ಹೊಲದ ಬೆಳೆಯನ್ನೂ ಹೆಚ್ಚಿಸುವೆನು.


ಆಗ ಸರ್ವೇಶ್ವರ ಹೊಲದ ಬಿತ್ತನೆಗೆ ಬೇಕಾದ ಮಳೆಯನ್ನು ನಿಮಗೆ ಸುರಿಸುವರು. ಆ ಹೊಲದ ಬೆಳೆಯಿಂದ ಸಾರವತ್ತಾದ ಆಹಾರವನ್ನು ಸಮೃದ್ಧಿಯಾಗಿ ಒದಗಿಸುವರು. ಅಂದು ನಿಮ್ಮ ದನಕರುಗಳು ವಿಶಾಲವಾದ ಹುಲ್ಲುಗಾವಲುಗಳಲ್ಲಿ ಮೇಯುವುವು.


ಇತ್ತನೆಮ್ಮ ದೇವನು ಆಶೀರ್ವಾದವನು I ಕೊಟ್ಟಿತೆಮ್ಮ ಭೂಮಿಯು ಸಂತುಷ್ಟ ಬೆಳೆಯನು II


“ನನ್ನ ಆಜ್ಞಾವಿಧಿಗಳನ್ನು ನೀವು ಅನುಸರಿಸಿ ನಡೆಯಬೇಕು. ಆಗ ನೀವು ನಾಡಿನಲ್ಲಿ ನಿರ್ಭಯವಾಗಿ ಬಾಳುವಿರಿ.


ಆದರೆ ಆ ಏಳನೆಯ ವರ್ಷದಲ್ಲಿ ಬಿತ್ತನೆ ಮಾಡುವುದಕ್ಕಾಗಲಿ, ಬೆಳೆದದ್ದನ್ನು ಕೂಡಿಸಿಟ್ಟುಕೊಳ್ಳುವುದಕ್ಕಾಗಲಿ ಅಪ್ಪಣೆಯಿರುವುದಿಲ್ಲ. ಹಾಗಾದರೆ ಆ ವರ್ಷ ಏನು ತಿನ್ನಬೇಕೆಂದು ವಿಚಾರಿಸುತ್ತೀರೋ? ನಾನು ಹೇಳುವುದನ್ನು ಕೇಳಿ:


ನಾನು ಮುಂಗಾರು ಹಿಂಗಾರು ಮಳೆಗಳನ್ನು ಕಾಲಕಾಲಕ್ಕೆ ಸರಿಯಾಗಿ ಬರಮಾಡುವೆನು. ನಿಮ್ಮ ಹೊಲಗಳು ಒಳ್ಳೆಯ ಬೆಳೆಯನ್ನು ಕೊಡುವುವು. ತೋಟದ ಮರಗಳು ಹೇರಳವಾದ ಫಲಕೊಡುವುವು.


ನಿಮ್ಮ ನಾಡಿಗೆ ಸುಕ್ಷೇಮವನ್ನು ಅನುಗ್ರಹಿಸುವೆನು. ಯಾರ ಭಯವೂ ಇಲ್ಲದೆ ನೀವು ನಿದ್ರಿಸುವಿರಿ; ದುಷ್ಟಮೃಗಗಳ ಕಾಟ ನಿಮ್ಮ ನಾಡಿಗಿರದು; ನಿಮ್ಮ ನಾಡು ಶತ್ರುಗಳ ಕತ್ತಿಗೆ ತುತ್ತಾಗದು.


ಆದರೆ ನೀವು ಜೋರ್ಡನ್ ನದಿಯನ್ನು ದಾಟಿ ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಸೊತ್ತಾಗಿ ಕೊಡುವ ಆ ನಾಡಿನಲ್ಲಿ ಮನೆಮಾಡಿಕೊಂಡಿರುವಾಗ ನಿಮ್ಮ ಸುತ್ತಲು ಶತ್ರುಗಳು ಯಾರೂ ಇಲ್ಲದಂತೆ ಸರ್ವೇಶ್ವರ ಮಾಡುವರು;


ಸರ್ವೇಶ್ವರ ನನ್ನ ತಂದೆ ದಾವೀದನಿಗೆ, ‘ನಾನು ನಿನ್ನ ಸ್ಥಾನದಲ್ಲಿ ಸಿಂಹಾಸನದ ಮೇಲೆ ಕುಳ್ಳಿರಿಸುವ ನಿನ್ನ ಮಗ, ನನ್ನ ಹೆಸರಿಗೆ ಒಂದು ಆಲಯವನ್ನು ಕಟ್ಟಲಿ,’ ಎಂದು ಹೇಳಿದ್ದರು. ಆದುದರಿಂದ ನಾನು ನನ್ನ ದೇವರಾದ ಸರ್ವೇಶ್ವರನಿಗೆ ಒಂದು ಆಲಯವನ್ನು ಕಟ್ಟಬೇಕೆಂದಿರುತ್ತೇನೆ.


ನನ್ನ ಮಾತಿಗೆ ಕಿವಿಗೊಡುವವರಾದರೋ ಸುರಕ್ಷಿತವಾಗಿರುವರು, ಕೇಡಿಗೆ ಭಯಪಡದೆ ನೆಮ್ಮದಿಯಾಗಿ ಬಾಳುವರು.


ನೀವು ಮನಃಪೂರ್ವಕವಾಗಿ ನನಗೆ ವಿಧೇಯರಾದರೆ ಈ ನಾಡಿನ ಸತ್ಫಲವನ್ನು ಸವಿಯುವಿರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು