ಯಾಜಕಕಾಂಡ 23:12 - ಕನ್ನಡ ಸತ್ಯವೇದವು C.L. Bible (BSI)12 ನೀವು ಒಂದು ವರ್ಷದ ಕಳಂಕರಹಿತವಾದ ಟಗರನ್ನು ದಹನಬಲಿಯಾಗಿ ಸರ್ವೇಶ್ವರನಿಗೆ ಸಮರ್ಪಿಸಬೇಕು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201912 ಆ ಸಿವುಡನ್ನು ನೈವೇದ್ಯವಾಗಿ ನಿವಾಳಿಸುವ ದಿನದಲ್ಲಿ ನೀವು ಒಂದು ವರ್ಷದ ಪೂರ್ಣಾಂಗವಾದ ಟಗರನ್ನು ಸರ್ವಾಂಗಹೋಮವಾಗಿ ಯೆಹೋವನಿಗೆ ಸಮರ್ಪಿಸಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)12 ಆ ಸಿವುಡನ್ನು ನೈವೇದ್ಯವಾಗಿ ನಿವಾಳಿಸುವ ದಿನದಲ್ಲಿ ನೀವು ಒಂದು ವರುಷದ ಪೂರ್ಣಾಂಗವಾದ ಟಗರನ್ನು ಸರ್ವಾಂಗಹೋಮವಾಗಿ ಯೆಹೋವನಿಗೆ ಸಮರ್ಪಿಸಬೇಕು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್12 “ನೀವು ಸಿವುಡನ್ನು ನಿವಾಳಿಸುವ ದಿನದಲ್ಲಿ ಒಂದು ವರ್ಷದ ಗಂಡು ಕುರಿಮರಿಯನ್ನು ಅರ್ಪಿಸಬೇಕು. ಆ ಕುರಿಮರಿಯಲ್ಲಿ ಯಾವ ದೋಷವೂ ಇರಬಾರದು. ಅದು ಯೆಹೋವನಿಗೆ ಸರ್ವಾಂಗಹೋಮವಾಗಿ ಅರ್ಪಿತವಾಗುವುದಕ್ಕಾಗಿ ನೇಮಿತವಾಗಿರುವುದು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ12 ನೀವು ಸಿವುಡನ್ನು ಅರ್ಪಿಸುವ ದಿನದಲ್ಲಿ ಯೆಹೋವ ದೇವರಿಗೆ ದಹನಬಲಿಯಾಗಿ ಸಮರ್ಪಿಸುವಂತೆ ಒಂದು ವರ್ಷದ ಮತ್ತು ಕಳಂಕರಹಿತವಾದ ಕುರಿಮರಿಯನ್ನು ಅರ್ಪಿಸಬೇಕು. ಅಧ್ಯಾಯವನ್ನು ನೋಡಿ |