Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಜಕಕಾಂಡ 2:15 - ಕನ್ನಡ ಸತ್ಯವೇದವು C.L. Bible (BSI)

15 ಅದು ನೈವೇದ್ಯ ವಸ್ತುವಾದುದರಿಂದ ಅದರ ಮೇಲೆ ಎಣ್ಣೆ ಹೊಯ್ಯಬೇಕು; ಸಾಂಬ್ರಾಣಿ ಇಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಅದು ಧಾನ್ಯನೈವೇದ್ಯ ವಸ್ತುವಾದ್ದರಿಂದ ನೀವು ಅದರ ಮೇಲೆ ಎಣ್ಣೆ ಹೊಯ್ದು ಧೂಪವಿಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಅದು ನೈವೇದ್ಯ ವಸ್ತುವಾದದರಿಂದ ಅದರ ಮೇಲೆ ಎಣ್ಣೆ ಹೊಯಿದು ಧೂಪವಿಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ನೀವು ಅದಕ್ಕೆ ಎಣ್ಣೆಯನ್ನು ಹಾಕಿ ಅದರ ಮೇಲೆ ಧೂಪವನ್ನಿಡಬೇಕು. ಅದು ಧಾನ್ಯಸಮರ್ಪಣೆಯಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ನೀನು ಅದರ ಮೇಲೆ ಎಣ್ಣೆಯನ್ನು ಸಾಂಬ್ರಾಣಿಯನ್ನು ಹಾಕು. ಇದೇ ಧಾನ್ಯ ಸಮರ್ಪಣೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಜಕಕಾಂಡ 2:15
7 ತಿಳಿವುಗಳ ಹೋಲಿಕೆ  

“ನೀವು ಸರ್ವೇಶ್ವರನಿಗೆ ಪ್ರಥಮ ಧಾನ್ಯ ನೈವೇದ್ಯವನ್ನು ಮಾಡಬೇಕಾದರೆ ಅದು ಬೆಂಕಿಯಲ್ಲಿ ಸುಟ್ಟ ಗೋದಿಯ ಹಸಿ ತೆನೆಗಳಾಗಿರಬೇಕು.


ಯಾಜಕನು ಅದು ದೇವರಿಗೆ ಸಮರ್ಪಿತವಾದುದೆಂದು ಸೂಚಿಸುವುದಕ್ಕಾಗಿ ಆ ಗೋದಿ ತೆನೆಯಿಂದಲೂ, ಎಣ್ಣೆಯಿಂದಲೂ ಸ್ವಲ್ಪ ಭಾಗವನ್ನು ತೆಗೆದುಕೊಂಡು ಸಾಂಬ್ರಾಣಿಯನ್ನೆಲ್ಲ ಅದಕ್ಕೆ ಸೇರಿಸಿ ಅಗ್ನಿಯ ಮೂಲಕ ಸರ್ವೇಶ್ವರನಿಗೆ ಹೋಮಮಾಡಲಿ.


ಹುಳಿಯಿಲ್ಲದ ರೊಟ್ಟಿಗಳನ್ನು ಎಣ್ಣೆಮಿಶ್ರವಾದ ಹುಳಿಯಿಲ್ಲದ ಹೋಳಿಗೆಗಳನ್ನು ಹಾಗು ಎಣ್ಣೆ ಹೊಯಿದು ಹುಳಿಯಿಲ್ಲದ ಕಡುಬುಗಳನ್ನು ಗೋದಿ ಹಿಟ್ಟಿನಿಂದ ಮಾಡಿಸಿ ಒಂದೇ ಪುಟ್ಟಿಯಲ್ಲಿ ತುಂಬಿಸಿಕೊ.


ಸರ್ವೇಶ್ವರ ಮೋಶೆಗೆ ಮತ್ತೆ ಆಜ್ಞಾಪಿಸಿದ್ದೇನೆಂದರೆ: “ನೀನು ಹಾಲುಮಡ್ಡಿ, ಗುಗ್ಗುಲ ಹಾಗು ಗಂಧದಚೆಕ್ಕೆ ಎಂಬ ಪರಿಮಳ ದ್ರವ್ಯಗಳನ್ನು ಮತ್ತು ಸ್ವಚ್ಚವಾದ ಧೂಪವನ್ನು ಸಮಭಾಗವಾಗಿ ತೆಗೆದುಕೊಂಡು ಸುವಾಸನೆಯುಳ್ಳ ಬುಕ್ಕಿಟ್ಟಾಗಿರುವಂತೆ


“ಯಾರಾದರು ಸರ್ವೇಶ್ವರ ಸ್ವಾಮಿಗೆ ಧಾನ್ಯವನ್ನು ನೈವೇದ್ಯ ಮಾಡಬೇಕೆಂದಿದ್ದರೆ ಅದು ಗೋದಿ ಹಿಟ್ಟಾಗಿರಬೇಕು. ಅದರ ಮೇಲೆ ಎಣ್ಣೆಹೊಯ್ದು, ಸಾಂಬ್ರಾಣಿಯನ್ನಿಟ್ಟು, ಅದನ್ನು ಆರೋನನ ವಂಶಜರಾದ ಯಾಜಕರ ಬಳಿಗೆ ತರಬೇಕು.


“ಎರಡು ಬೆಳವಕ್ಕಿಗಳನ್ನಾಗಲಿ, ಎರಡು ಮರಿ ಪಾರಿವಾಳಗಳನ್ನಾಗಲಿ ಕೊಡಲು ಅವನಿಂದ ಆಗದೆ ಹೋದಲ್ಲಿ ಅವನು ದೋಷಪರಿಹಾರಕ್ಕಾಗಿ ಮೂರು ಸೇರು ಗೋದಿ ಹಿಟ್ಟನ್ನು ತರಬೇಕು. ಆ ಹೋಮದ್ರವ್ಯವು ದೋಷಪರಿಹಾರಾರ್ಥವಾದ್ದರಿಂದ ಅದರ ಮೇಲೆ ಎಣ್ಣೆ ಹೊಯ್ಯಕೂಡದು, ಸಾಂಬ್ರಾಣಿಯನ್ನು ಇಡಕೂಡದು.


ಆ ಬಲಿಪ್ರಾಣಿಯೊಂದಿಗೆ ಧಾನ್ಯನೈವೇದ್ಯಕ್ಕಾಗಿ ಒಂದೂವರೆ ಸೇರು ಎಣ್ಣೆ ಬೆರೆಸಿದ ಮೂರು ಸೇರು ಗೋದಿಯ ಹಿಟ್ಟನ್ನು ತರಬೇಕು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು