ಯಾಜಕಕಾಂಡ 19:8 - ಕನ್ನಡ ಸತ್ಯವೇದವು C.L. Bible (BSI)8 ಅದರಲ್ಲಿ ಏನನ್ನಾದರೂ ತಿಂದವನು ಸರ್ವೇಶ್ವರನ ದ್ರವ್ಯವಾದ ಪರಿಶುದ್ಧತೆಯನ್ನು ಹೊಲೆಮಾಡುತ್ತಾನೆ. ಆದುದರಿಂದ ತನ್ನ ಪಾಪದ ಫಲವನ್ನು ಅನುಭವಿಸಲೇಬೇಕು. ಅವನು ಕುಲದಿಂದ ಬಹಿಷ್ಕೃತನಾಗಬೇಕು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20198 ಅದರಲ್ಲಿ ಏನಾದರೂ ತಿಂದವನು ಯೆಹೋವನ ಪವಿತ್ರ ದ್ರವ್ಯವನ್ನು ಹೊಲೆಮಾಡಿದವನಾದುದರಿಂದ ತನ್ನ ಪಾಪದ ಫಲವನ್ನು ಅನುಭವಿಸಬೇಕು; ಅವನನ್ನು ಕುಲದಿಂದ ಹೊರಗೆ ಹಾಕಬೇಕು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)8 ಅದರಲ್ಲಿ ಏನಾದರೂ ತಿಂದವನು ಯೆಹೋವನ ದ್ರವ್ಯವನ್ನು ಹೊಲೆಮಾಡಿದವನಾದದರಿಂದ ತನ್ನ ಪಾಪದ ಫಲವನ್ನು ಅನುಭವಿಸಬೇಕು; ಅವನು ಕುಲದಿಂದ ತೆಗೆದುಹಾಕಲ್ಪಡಬೇಕು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್8 ಒಬ್ಬನು ಅದನ್ನು ಮೂರನೆಯ ದಿನದಲ್ಲಿ ತಿಂದರೆ ಅವನು ಪಾಪಮಾಡಿದ ದೋಷಿಯಾಗಿರುವನು. ಯಾಕೆಂದರೆ ಯೆಹೋವನಿಗೆ ಮೀಸಲಾದ ಪವಿತ್ರ ವಸ್ತುಗಳ ವಿಷಯದಲ್ಲಿ ಅವನಿಗೆ ಗೌರವವಿಲ್ಲ; ಆ ವ್ಯಕ್ತಿಯನ್ನು ಅವನ ಜನರಿಂದ ತೆಗೆದುಹಾಕಬೇಕು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ8 ಆದ್ದರಿಂದ ಅದನ್ನು ತಿನ್ನುವ ಪ್ರತಿಯೊಬ್ಬರೂ ತಮ್ಮ ಅಪರಾಧವನ್ನು ಹೊತ್ತುಕೊಳ್ಳಬೇಕು. ಏಕೆಂದರೆ ಯೆಹೋವ ದೇವರಿಗೆ ಪವಿತ್ರವಾದದ್ದನ್ನು ಅವರು ಅಶುದ್ಧಮಾಡಿದ್ದಾನೆ. ಅಂಥವರನ್ನು ತಮ್ಮ ಜನರ ಮಧ್ಯದೊಳಗಿಂದ ತೆಗೆದುಹಾಕಬೇಕು. ಅಧ್ಯಾಯವನ್ನು ನೋಡಿ |