“ಯಾರಾದರು ಸರ್ವೇಶ್ವರನಿಗೆ ಸಲ್ಲಿಸಬೇಕಾದ ಪವಿತ್ರವಸ್ತುಗಳನ್ನು ಸಮರ್ಪಿಸುವುದರಲ್ಲಿ ಅಜಾಗ್ರತೆಯಿಂದ ದ್ರೋಹಮಾಡಿ ದೋಷಕ್ಕೆ ಒಳಗಾದರೆ, ಅಂಥವರು ಆ ಅಪರಾಧಕ್ಕೆ ಪರಿಹಾರ ಮಾಡಬೇಕು; ದೇವರ ಸೇವೆಗೆ ನೇಮಕವಾದ ನಾಣ್ಯದ ಮೇರೆಗೆ ಎರಡು ಅಥವಾ ಹೆಚ್ಚು ನಾಣ್ಯ ಬೆಲೆ ಬಾಳುವುದೆಂದು ತೋರುವ ಕಳಂಕರಹಿತವಾದ ಒಂದು ಟಗರನ್ನು ಆಡುಕುರಿಗಳ ಹಿಂಡಿನಿಂದ ತೆಗೆದುಕೊಂಡು ಬಂದು ಸರ್ವೇಶ್ವರನಿಗೆ ಸಮರ್ಪಿಸಬೇಕು.
“ಆಡು ಕುರಿಯನ್ನು ಕೊಡಲು ಅವನಿಂದ ಆಗದಿದ್ದಲ್ಲಿ ದೋಷದ ಪ್ರಾಯಶ್ಚಿತ್ತಕ್ಕಾಗಿ ಎರಡು ಬೆಳವಕ್ಕಿಗಳನ್ನಾಗಲಿ ಎರಡು ಮರಿ ಪಾರಿವಾಳಗಳನ್ನಾಗಲಿ ತೆಗೆದುಕೊಂಡು ಬಂದು ದಹನ ಬಲಿಯಾಗಿ ಒಂದನ್ನೂ ದೋಷಪರಿಹಾರಕ ಬಲಿಯಾಗಿ ಮತ್ತೊಂದನ್ನು ಸರ್ವೇಶ್ವರನಿಗೆ ಸಮರ್ಪಿಸಲಿ.