Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಜಕಕಾಂಡ 17:4 - ಕನ್ನಡ ಸತ್ಯವೇದವು C.L. Bible (BSI)

4 ಪಾಳೆಯದ ಒಳಗಾಗಲಿ, ಹೊರಗಾಗಲಿ ಕೊಯ್ದರೆ ಅಂಥವನನ್ನು ಕೊಲೆಪಾತಕ ಮಾಡಿದವನೆಂದು ನೀವು ನಿರ್ಣಯಿಸಬೇಕು. ಅವನು ರಕ್ತವನ್ನು ಸುರಿಸಿದವನಾದ್ದರಿಂದ ಕುಲದಿಂದ ಬಹಿಷ್ಕೃತನಾಗಬೇಕು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಅದನ್ನು ಯೆಹೋವನಿಗೆ ಸಮರ್ಪಿಸುವುದಕ್ಕಾಗಿ ಆತನ ಗುಡಾರದ ಬಾಗಿಲಿಗೆ ತಾರದೆ, ಪಾಳೆಯದ ಒಳಗಾಗಲಿ ಅಥವಾ ಹೊರಗಾಗಲಿ ವಧಿಸಿದರೆ ಅವನನ್ನು ಕೊಲೆಪಾತಕನೆಂದು ನೀವು ನಿರ್ಣಯಿಸಬೇಕು. ಅವನು ರಕ್ತವನ್ನು ಸುರಿಸಿದವನಾದುದರಿಂದ ಕುಲದಿಂದ ಹೊರಗೆ ಹಾಕಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಪಾಳೆಯದ ಒಳಗಾಗಲಿ ಹೊರಗಾಗಲಿ ಕೊಯಿದರೆ ಅವನನ್ನು ಕೊಲೆಪಾತಕ ಮಾಡಿದವನೆಂದು ನೀವು ನಿರ್ಣಯಿಸಬೇಕು. ಅವನು ರಕ್ತವನ್ನು ಸುರಿಸಿದವನಾದದರಿಂದ ಕುಲದಿಂದ ತೆಗೆದುಹಾಕಲ್ಪಡಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಅವನು ಆ ಪ್ರಾಣಿಯನ್ನು ದೇವದರ್ಶನಗುಡಾರದ ಬಾಗಿಲಿಗೆ ತರಬೇಕು. ಅವನು ಆ ಪಶುವಿನ ಒಂದು ಭಾಗವನ್ನು ಯೆಹೋವನಿಗೆ ಕಾಣಿಕೆಯಾಗಿ ಕೊಡಬೇಕು. ಅವನು ರಕ್ತವನ್ನು ಸುರಿಸಿದ್ದರಿಂದ ತನ್ನ ಕಾಣಿಕೆಯನ್ನು ಯೆಹೋವನ ಪವಿತ್ರ ಗುಡಾರದೊಳಗೆ ತೆಗೆದುಕೊಂಡು ಹೋಗಬೇಕು. ಅವನು ಪ್ರಾಣಿಯ ಒಂದು ಭಾಗವನ್ನು ಯೆಹೋವನಿಗೆ ಉಡುಗೊರೆಯಾಗಿ ತೆಗೆದುಕೊಂಡು ಹೋಗದಿದ್ದರೆ, ಅವನನ್ನು ಅವನ ಜನರಿಂದ ಬಹಿಷ್ಕರಿಸಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಯೆಹೋವ ದೇವರಿಗೆ ಸಮರ್ಪಿಸುವುದಕ್ಕಾಗಿ ದೇವದರ್ಶನದ ಗುಡಾರದ ಬಾಗಿಲ ಮುಂದೆ ತಾರದಿದ್ದರೆ, ಆ ಮನುಷ್ಯನ ಮೇಲೆ ರಕ್ತಾಪರಾಧವು ಹೊರಿಸಬೇಕು. ಅವನು ರಕ್ತ ಸುರಿಸಿರುವವನು, ಆ ಮನುಷ್ಯನು ತನ್ನ ಜನರ ಮಧ್ಯದೊಳಗಿಂದ ತೆಗೆದುಹಾಕಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಜಕಕಾಂಡ 17:4
30 ತಿಳಿವುಗಳ ಹೋಲಿಕೆ  

ಅದಕ್ಕೆ ಯೇಸು, “ಮಾರ್ಗವೂ ಸತ್ಯವೂ ಜೀವವೂ ನಾನೇ. ನನ್ನ ಮುಖಾಂತರ ಬಾರದ ಹೊರತು ಯಾರೂ ಪಿತನ ಬಳಿಗೆ ಬರಲಾರರು.


ಹೌದು, ನಾನೇ ಬಾಗಿಲು, ನನ್ನ ಮೂಲಕ ಒಳಹೋಗುವವನು ಸುರಕ್ಷಿತನಾಗಿರುತ್ತಾನೆ. ಅವನು ಒಳಗೆ ಹೋಗುತ್ತಾನೆ, ಹೊರಗೆ ಬರುತ್ತಾನೆ; ಮೇವನ್ನು ಕಂಡುಕೊಳ್ಳುತ್ತಾನೆ.


ಆದುದರಿಂದ ಯೇಸು ಸ್ವಾಮಿ, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ಕುರಿಗಳಿಗೆ ನಾನೇ ಬಾಗಿಲು.


ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನಾಡಿನಲ್ಲಿ ಇಸ್ರಯೇಲ್ ವಂಶದವರೆಲ್ಲರೂ ನನ್ನ ಪರಿಶುದ್ಧ ಬೆಟ್ಟದಲ್ಲೇ, ಇಸ್ರಯೇಲಿನ ಪರ್ವತಾಗ್ರದಲ್ಲೇ, ನನ್ನನ್ನು ಪೂಜಿಸುವರು; ಅಲ್ಲೇ ಅವರಿಗೆ ಪ್ರಸನ್ನನಾಗುವೆನು, ಅಲ್ಲೇ ನಿಮ್ಮ ಕಾಣಿಕೆಗಳನ್ನೂ ಉತ್ತಮ ನೈವೇದ್ಯಗಳನ್ನೂ ಮೀಸಲಾದುದೆಲ್ಲವನ್ನೂ ಅಂಗೀಕರಿಸುವೆನು.


“ಜನರು ಮನಬಂದ ಮಾರ್ಗವನ್ನು ಅನುಸರಿಸುತ್ತಾರೆ; ತಮ್ಮ ಅಸಹ್ಯಕಾರ್ಯಗಳಲ್ಲಿ ಅತ್ಯಾನಂದಪಡುತ್ತಾರೆ. ಹೋರಿಯನ್ನು ಬಲಿಕೊಡುವವನು ನರಬಲಿಯನ್ನು ಕೊಡುತ್ತಾನೆ; ಕುರಿ ಕಡಿಯುವವನು ನಾಯಿಯ ಕತ್ತನ್ನು ಮುರಿಯುತ್ತಾನೆ. ಕಾಣಿಕೆ ಒಪ್ಪಿಸುವವನು ಹಂದಿಯ ನೆತ್ತರನ್ನು ಅರ್ಪಿಸುತ್ತಾನೆ; ಧೂಪಾರತಿ ಎತ್ತುವವನು ವಿಗ್ರಹಾರಾಧನೆಯನ್ನು ಮಾಡುತ್ತಾನೆ.


ಸುನ್ನತಿ ಮಾಡಿಸಿಕೊಳ್ಳದ ಗಂಡಸು ನನ್ನ ಒಡಂಬಡಿಕೆಯನ್ನು ಉಲ್ಲಂಘಿಸಿದವನಾದ ಕಾರಣ, ಅವನು ಕುಲದಿಂದ ಬಹಿಷ್ಕೃತನಾಗಬೇಕು.


ಧರ್ಮಶಾಸ್ತ್ರದ ಪ್ರವೇಶ ಆದಂತೆ, ಅಪರಾಧಗಳು ಹೆಚ್ಚಿದವು. ಅಪರಾಧಗಳು ಹೆಚ್ಚಿದಂತೆ, ದೇವರ ಅನುಗ್ರಹವು ಹೆಚ್ಚುಹೆಚ್ಚು ಆಯಿತು.


ಧರ್ಮಶಾಸ್ತ್ರವನ್ನು ಕೊಡುವುದಕ್ಕೆ ಮೊದಲೇ ಪಾಪವು ಲೋಕದಲ್ಲಿತ್ತು. ಆದರೆ ಧರ್ಮಶಾಸ್ತ್ರ ಇಲ್ಲದೆ ಇದ್ದುದರಿಂದ ಪಾಪವನ್ನು ಗಣನೆಗೆ ತಂದುಕೊಳ್ಳಲಾಗಲಿಲ್ಲ.


ಅಂತೆಯೇ ಸತ್ಕಾರ್ಯಸಂಪಾದನೆ ಇಲ್ಲದಿದ್ದರೂ ಯಾರು ದೇವರೊಡನೆ ಸತ್ಸಂಬಂಧದಲ್ಲಿ ಇರುತ್ತಾರೋ ಅಂಥವರು ಭಾಗ್ಯವಂತರು! ಇದನ್ನು ಕುರಿತು ದಾವೀದನು ಹೀಗೆನ್ನುತ್ತಾನೆ:


ಯಾರಪರಾಧವನು ಪ್ರಭು ಎಣಿಸಿಲ್ಲವೋ I ಯಾರಂತರಂಗದಲಿ ಕುತಂತ್ರವಿಲ್ಲವೋ ಅವರೇ ಧನ್ಯರು II


ಯಾವನಾದರೂ ಮುಟ್ಟಾದ ಸ್ತ್ರೀಯನ್ನು ಸಂಗಮಿಸಿದರೆ ಅವನು ಅವಳ ಶೋಣಿತಸ್ಥಾನವನ್ನು ಬಯಲುಪಡಿಸಿದವನು, ಅವಳು ಬಯಲುಪಡಿಸಿಕೊಂಡವಳು; ಆದ್ದರಿಂದ ಅವರಿಬ್ಬರೂ ಕುಲದಿಂದ ತೆಗೆದುಹಾಕಲ್ಪಡಬೇಕು.


ಯಾವ ಸ್ತ್ರೀಯಾದರೂ ಪ್ರಾಣಿಯಿಂದ ಸಂಗಮಮಾಡಿಸಿಕೊಂಡರೆ ಆ ಸ್ತ್ರೀಯನ್ನೂ ಪ್ರಾಣಿಯನ್ನು ಕೊಲ್ಲಿಸಬೇಕು; ಅವಳಿಗೂ ಅದಕ್ಕೂ ಮರಣವೇ ವಿಧಿ. ಆ ಮರಣ ಶಿಕ್ಷೆಗೆ ತಾವೇ ಕಾರಣರು.


ಅವನು ತನ್ನ ಮಕ್ಕಳಲ್ಲಿ ಒಂದನ್ನು ಮೋಲೆಕ ದೇವತೆಗೆ ಅರ್ಪಿಸಿ ನನ್ನ ದೇವಸ್ಥಾನವನ್ನು ಅಶುದ್ಧಮಾಡಿ ನನ್ನ ಪವಿತ್ರ ನಾಮಕ್ಕೆ ಅಪಕೀರ್ತಿ ತಂದಿದ್ದಾನೆ. ಆದ್ದರಿಂದ ನಾನು ಅವನಿಗೆ ವಿಮುಖನಾಗಿ ಅವನನ್ನು ನನ್ನ ಜನತೆಯಿಂದ ತೆಗೆದುಹಾಕುವೆನು.


ಯಾರಾದರೂ ಈ ಅಸಹ್ಯವಾದ ಕಾರ್ಯಗಳಲ್ಲಿ ಒಂದನ್ನು ಮಾಡಿದ್ದೇ ಆದರೆ ಅವನನ್ನು ಕುಲದಿಂದ ತೆಗೆದುಬಿಡಬೇಕು.


ಏಕೆಂದರೆ ಪ್ರತಿ ದೇಹಕ್ಕೂ ರಕ್ತವೇ ಪ್ರಾಣಾಧಾರ. ಆದಕಾರಣ ಸರ್ವೇಶ್ವರ ಇಸ್ರಯೇಲರಿಗೆ, ಪ್ರತಿ ಪ್ರಾಣಿಗೂ ರಕ್ತವೇ ಪ್ರಾಣಾಧಾರವಾದ್ದರಿಂದ ನೀವು ಯಾವ ವಿಧವಾದ ಪ್ರಾಣಿಯ ರಕ್ತವನ್ನೂ ಉಣ್ಣಬಾರದು; ರಕ್ತಭೋಜನ ಮಾಡಿದವನಿಗೆ ಬಹಿಷ್ಕಾರ ಹಾಕಬೇಕು,’ ಎಂದು ಆಜ್ಞಾಪಿಸಿದ್ದಾರೆ.


“ಅಷ್ಟುಮಾತ್ರವಲ್ಲ, ಇಸ್ರಯೇಲರಲ್ಲಾಗಲಿ, ಅವರ ನಡುವೆ ವಾಸಿಸುವ ಅನ್ಯದೇಶದವರಲ್ಲಾಗಲಿ ಯಾರಾದರು ರಕ್ತಭೋಜನ ಮಾಡಿದರೆ ಸರ್ವೇಶ್ವರ ಅಂಥ ವ್ಯಕ್ತಿಯ ವಿರುದ್ಧ ಉಗ್ರಕೋಪಗೊಳ್ಳುವರು; ಅವನನ್ನು ತನ್ನ ಪ್ರಜೆಯಿಂದ ತೆಗೆದುಹಾಕುವರು.


ಆ ಬಲಿಪ್ರಾಣಿಯ ಮಾಂಸದಲ್ಲಿ ಸ್ವಲ್ಪವನ್ನಾದರೂ ಮೂರನೆಯ ದಿನದಲ್ಲಿ ಊಟಮಾಡಿದ್ದೇ ಆದರೆ ಆ ಬಲಿ ಸ್ವೀಕೃತವಾಗುವುದಿಲ್ಲ. ಅರ್ಪಿಸಿದವನಿಗೆ ಅದರಿಂದ ಫಲವೇನೂ ದೊರಕುವುದಿಲ್ಲ. ಅದು ಹೇಯವಾದುದರಿಂದ ಅದನ್ನು ತಿಂದವನು ಆ ಪಾಪದ ಫಲವನ್ನು ಅನುಭವಿಸಬೇಕು.


ಅಂಥವನು ದನಕರುಗಳನ್ನು ದಹನಬಲಿಯನ್ನಾಗಿ ಸಮರ್ಪಿಸುವುದಾದರೆ ಆ ಪ್ರಾಣಿ ಕಳಂಕರಹಿತವಾದ ಗಂಡಾಗಿರಬೇಕು. ಸರ್ವೇಶ್ವರನಿಗೆ ಒಪ್ಪಿಗೆಯಾಗುವಂತೆ ಅದನ್ನು ದೇವದರ್ಶನದ ಗುಡಾರದ ಬಳಿಗೆ ತರಬೇಕು.


ಏಳು ದಿನ ನಿಮ್ಮ ಮನೆಗಳಲ್ಲಿ ಹುಳಿಹಿಟ್ಟೇ ಇರಕೂಡದು. ಹುಳಿ ಬೆರಸಿದ್ದನ್ನು ತಿನ್ನುವವನು ಪರದೇಶದವನಾಗಿರಲಿ, ಸ್ವದೇಶದವನಾಗಿರಲಿ ಇಸ್ರಯೇಲ್ ಜನರಿಂದ ಬಹಿಷ್ಕೃತನು.


ಏಳು ದಿವಸ ನೀವು ಹುಳಿರಹಿತ ರೊಟ್ಟಿಗಳನ್ನು ತಿನ್ನಬೇಕು. ಮೊದಲನೆಯ ದಿನದಲ್ಲೇ ಹುಳಿಹಿಟ್ಟನ್ನೆಲ್ಲಾ ನಿಮ್ಮ ಮನೆಗಳಿಂದ ತೆಗೆದುಬಿಡಬೇಕು. ಆ ಏಳು ದಿನಗಳಲ್ಲಿ ಯಾವನಾದರೂ ಹುಳಿಬೆರಸಿದ್ದನ್ನು ತಿಂದರೆ ಅವನನ್ನು ಇಸ್ರಯೇಲರಿಂದ ಬಹಿಷ್ಕರಿಸಬೇಕು.


ಇಸ್ರಯೇಲರಲ್ಲಿ ಯಾರಾದರು ಹೋರಿಯನ್ನಾಗಲಿ, ಕುರಿಯನ್ನಾಗಲಿ, ಆಡನ್ನಾಗಲಿ ಬಲಿಕೊಡುವಾಗ ಅದನ್ನು ಸರ್ವೇಶ್ವರನಿಗೆ ಸಮರ್ಪಿಸಲು ದೇವಗುಡಾರದ ಬಾಗಿಲಿಗೆ ತರದೆ


ಏಕೆಂದರೆ ಬಲಿಪ್ರಾಣಿಗಳನ್ನು ಬಯಲಿನಲ್ಲಿ ವಧಿಸುತ್ತಿದ್ದ ಇಸ್ರಯೇಲರು ಇನ್ನು ಮೇಲೆ ಅವುಗಳನ್ನು ದೇವದರ್ಶನದ ಗುಡಾರದ ಬಾಗಿಲಿಗೆ ಯಾಜಕನ ಬಳಿಗೆ ತಂದು ಸರ್ವೇಶ್ವರನ ಮುಂದೆ ಶಾಂತಿಸಮಾಧಾನದ ಬಲಿಯಾಗಿ ಸರ್ವೇಶ್ವರನಿಗೆ ಸಮರ್ಪಿಸಬೇಕು.


ಆ ಪ್ರಾಣಿಯನ್ನು ಸರ್ವೇಶ್ವರನಿಗೆ ಸಮರ್ಪಿಸುವುದಕ್ಕಾಗಿ ದೇವದರ್ಶನದ ಗುಡಾರದ ಬಾಗಿಲಿಗೆ ತರದಿದ್ದರೆ ಅವನನ್ನು ಕುಲದಿಂದ ತೆಗೆದುಹಾಕಬೇಕು.


ಇದರಂತೆ ತೈಲವನ್ನು ಮಾಡುವವನು ಹಾಗು ಇದನ್ನು ಯಾಜಕನಲ್ಲದವನ ಮೇಲೆ ಹಚ್ಚುವವನು ತನ್ನ ಕುಲದಿಂದ ಬಹಿಷ್ಕೃತನಾಗಬೇಕು.


ಕೇವಲ ಸುವಾಸನೆಗಾಗಿ ಅಂಥದ್ದನ್ನು ಮಾಡಿಕೊಳ್ಳುವವನನ್ನು ಅವನ ಕುಲದಿಂದ ಬಹಿಷ್ಕರಿಸಬೇಕು.”


ಅವನು ಆ ಪ್ರಾಣಿಯನ್ನು ಸರ್ವೇಶ್ವರನ ಸನ್ನಿಧಿಗೆ ತಂದು ಅದರ ತಲೆಯ ಮೇಲೆ ಕೈಯಿಡಬೇಕು; ದೇವದರ್ಶನದ ಗುಡಾರದ ಬಾಗಿಲಲ್ಲಿ ವಧಿಸಬೇಕು. ಆರೋನನ ವಂಶದವರಾದ ಯಾಜಕರು ಅದರ ರಕ್ತವನ್ನು ಬಲಿಪೀಠದ ಸುತ್ತಲೂ ಚಿಮುಕಿಸಬೇಕು.


ಸರ್ವೇಶ್ವರಾ, ನೀವು ಬಿಡುಗಡೆ ಮಾಡಿದ ನಿಮ್ಮ ಜನರನ್ನು ಕ್ಷಮಿಸಬೇಕು; ಅನ್ಯಾಯ ಆದ ನರಹತ್ಯ ದೋಷಫಲವು ನಿಮ್ಮ ಜನರಾದ ಇಸ್ರಯೇಲರಿಗೆ ತಗಲದಿರಲಿ’ ಎಂದು ಹೇಳಬೇಕು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು