Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಜಕಕಾಂಡ 11:3 - ಕನ್ನಡ ಸತ್ಯವೇದವು C.L. Bible (BSI)

3 ಭೂಮಿಯ ಮೇಲಿರುವ ಚತುಷ್ಪಾದ ಪ್ರಾಣಿಗಳಲ್ಲಿ ಈ ಕೆಳಕಂಡವುಗಳ ಮಾಂಸವನ್ನು ನೀವು ತಿನ್ನಬಹುದು: ಯಾವ ಪ್ರಾಣಿಯ ಕಾಲ್ಗೊರಸು ಸೀಳಿದೆಯೋ ಅದು ಮೆಲುಕು ಹಾಕುವಂಥದಾದರೆ ಅದರ ಮಾಂಸವನ್ನು ತಿನ್ನಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಅವು ಯಾವುವೆಂದರೆ ಯಾವ ಪ್ರಾಣಿಯ ಕಾಲ್ಗೊರಸು ಸೀಳಿದೆಯೋ ಅದು ಮೆಲುಕುಹಾಕುವಂಥದಾದರೆ ಅದರ ಮಾಂಸವನ್ನು ತಿನ್ನಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಯಾವವಂದರೆ - ಯಾವ ಪ್ರಾಣಿಯ ಕಾಲ್ಗೊರಸು ಸೀಳಿದೆಯೋ ಅದು ಮೆಲಕು ಹಾಕುವಂಥದಾದರೆ ಅದರ ಮಾಂಸವನ್ನು ತಿನ್ನಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಕಾಲ್ಗೊರಸು ಸೀಳಿರುವ ಮತ್ತು ಮೆಲಕು ಹಾಕುವ ಮಾಂಸವನ್ನು ತಿನ್ನಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಪ್ರಾಣಿಗಳಲ್ಲಿ ಕಾಲ್ಗೊರಸು ಸೀಳಿದ ಮತ್ತು ಮೇವನ್ನು ಮೆಲುಕಾಡಿಸುವುದನ್ನೂ ನೀವು ತಿನ್ನಬಹುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಜಕಕಾಂಡ 11:3
17 ತಿಳಿವುಗಳ ಹೋಲಿಕೆ  

ಇದಲ್ಲದೆ: ಅನ್ಯಜನರನ್ನು ಬಿಟ್ಟು ಹೊರಬನ್ನಿ ಅವರಿಂದ ಬೇರ್ಪಟ್ಟು ಬಾಳಿರಿ ಮಲಿನವಾದುದನ್ನು ಮುಟ್ಟದಿರಿ.


ನಿನ್ನ ಆಧ್ಯಾತ್ಮಿಕ ಪ್ರಗತಿ ಎಲ್ಲರಿಗೂ ಗೋಚರವಾಗುವಂತೆ ಈ ಕಾರ್ಯಸಾಧನೆಗಳಲ್ಲಿ ನಿರತನಾಗಿರು;


ಅಲ್ಲಿನ ಯೆಹೂದ್ಯರು ಥೆಸಲೋನಿಕದ ಜನರಿಗಿಂತ ವಿಶಾಲ ಮನೋಭಾವವುಳ್ಳವರು; ಶುಭಸಂದೇಶವನ್ನು ಅತ್ಯಾಸಕ್ತಿಯಿಂದ ಸ್ವಾಗತಿಸಿದರು. ಅದು ಪವಿತ್ರಗ್ರಂಥಕ್ಕೆ ಅನುಗುಣವಾಗಿದೆಯೇ ಎಂದು ತಿಳಿದುಕೊಳ್ಳಲು ಪ್ರತಿದಿನವೂ ಅಧ್ಯಯನ ಮಾಡತೊಡಗಿದರು.


ಮೂಢರೇ, ನಿಮ್ಮ ಮೂಢತ್ವವನ್ನು ಬಿಟ್ಟುಬಾಳಿರಿ, ವಿವೇಕ ಮಾರ್ಗದಲ್ಲಿ ನೆಟ್ಟಗೆ ನಡೆಯಿರಿ,” ಎಂದು ಪ್ರಬೋಧಿಸುತ್ತಾಳೆ.


ಜ್ಞಾನ ಉದಯಿಸುವುದು ನಿನ್ನ ಹೃದಯದೊಳಗೆ, ತಿಳುವಳಿಕೆ ಬೆಳಗುವುದು ನಿನ್ನ ಆತ್ಮದೊಳಗೆ.


“ನೀವು ಇಸ್ರಯೇಲರಿಗೆ ತಿಳಿಸಬೇಕಾದ ವಿಷಯಗಳು ಇವು -


ಆದರೆ ಯಾವ ಪ್ರಾಣಿ ಮೆಲುಕು ಹಾಕಿದರೂ ಗೊರಸು ಸೀಳಿರುವುದಿಲ್ಲವೋ ಅವುಗಳ ಮಾಂಸವನ್ನು ನೀವು ತಿನ್ನಬಾರದು. ಉದಾಹರಣೆಗೆ ಒಂಟೆ ಮೆಲುಕುಹಾಕುವಂಥದ್ದಾದರೂ ಅದಕ್ಕೆ ಸೀಳು ಗೊರಸು ಇಲ್ಲ. ಆದುದರಿಂದ ನೀವು ಅದರ ಮಾಂಸವನ್ನು ಅಶುದ್ಧವೆಂದು ತಿಳಿಯಬೇಕು.


(ಬಿಲದ ಮೊಲ ಮೆಲುಕುಹಾಕುವಂಥದ್ದು; ಆದರೂ ಸೀಳು ಗೊರಸು ಇಲ್ಲವಾದ್ದರಿಂದ ಅದು ನಿಮಗೆ ಅಶುದ್ಧ.


ಮೊಲ ಮೆಲುಕುಹಾಕುವಂಥದ್ದು; ಆದರೂ ಸೀಳುಗೊರಸು ಇಲ್ಲವಾದ ಕಾರಣ ಅದು ನಿಮಗೆ ಅಶುದ್ಧ.)


ಹಂದಿಯ ಗೊರಸು ಸೀಳಿದೆ. ಆದರೂ ಅದು ಮೆಲುಕು ಹಾಕುವುದಿಲ್ಲ. ಆದ್ದರಿಂದ ಅದು ನಿಮಗೆ ಅಶುದ್ಧ.


ಅವು ಯಾವುವೆಂದರೆ, ಯಾವ ಪ್ರಾಣಿ ಗೊರಸು ಸ್ವಲ್ಪ ಸೀಳಿದ್ದರೂ ಇಗ್ಗೊರಸಾಗಿಲ್ಲವೋ ಮತ್ತು ಮೆಲುಕು ಹಾಕುವುದಿಲ್ಲವೋ ಅದು ನಿಮಗೆ ಅಶುದ್ಧ. ಅವುಗಳು ಯಾವನಿಗೆ ಸೋಂಕುವುವೋ ಅವನು ಅಶುದ್ಧನಾಗುವನು.


ಯಾವ ಪ್ರಾಣಿಯ ಕಾಲ್ಗೊರಸು ಸೀಳಿದೆಯೋ, ಅದು ಮೆಲುಕು ಹಾಕುವಂಥದ್ದಾದರೆ ಅದರ ಮಾಂಸವನ್ನು ತಿನ್ನಬಹುದು.


ಹಂದಿಯ ಗೊರಸು ಸೀಳಿದ್ದರೂ ಅದು ಮೆಲುಕು ಹಾಕುವುದಿಲ್ಲವಾದುದರಿಂದ ಅದು ನಿಮಗೆ ಅಶುದ್ಧ. ಇವುಗಳ ಮಾಂಸವನ್ನು ನೀವು ತಿನ್ನಕೂಡದು; ಇವುಗಳ ಹೆಣವನ್ನು ಮುಟ್ಟಕೂಡದು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು