Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಯಾಜಕಕಾಂಡ 10:9 - ಕನ್ನಡ ಸತ್ಯವೇದವು C.L. Bible (BSI)

9 “ನೀನೂ ನಿನ್ನ ಪುತ್ರರು ದ್ರಾಕ್ಷಾರಸವನ್ನಾಗಲಿ, ಮದ್ಯವನ್ನಾಗಲಿ ಕುಡಿದು ದೇವದರ್ಶನದ ಗುಡಾರದೊಳಗೆ ಬರಬಾರದು, ಹಾಗೆ ಬಂದರೆ ಸಾಯುವಿರಿ. ಇದು ನಿನಗೂ ನಿನ್ನ ಸಂತತಿಯವರೆಲ್ಲರಿಗೂ ಶಾಶ್ವತ ನಿಯಮ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 “ನೀನೂ ಹಾಗು ನಿನ್ನ ಮಕ್ಕಳೂ ದ್ರಾಕ್ಷಾರಸವನ್ನಾಗಲಿ ಅಥವಾ ಮದ್ಯವನ್ನಾಗಲಿ ಕುಡಿದು ದೇವದರ್ಶನದ ಗುಡಾರದೊಳಗೆ ಬರಬಾರದು; ಹಾಗೆ ಬಂದರೆ ಸಾಯುವಿರಿ. ಇದು ನಿನಗೂ ಮತ್ತು ನಿನ್ನ ಸಂತತಿಯವರೆಲ್ಲರಿಗೂ ಶಾಶ್ವತನಿಯಮ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 “ನೀನು ಮತ್ತು ನಿನ್ನ ಪುತ್ರರು ದೇವದರ್ಶನದ ಗುಡಾರದೊಳಗೆ ಬರುವಾಗ ದ್ರಾಕ್ಷಾರಸವನ್ನಾಗಲಿ ಮದ್ಯವನ್ನಾಗಲಿ ಕುಡಿಯಬಾರದು. ನೀವು ಅವುಗಳನ್ನು ಕುಡಿದರೆ ಸಾಯುವಿರಿ. ಈ ಕಟ್ಟಳೆಯು ನಿಮ್ಮ ಸಂತತಿಯವರಿಗೆ ಶಾಶ್ವತವಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 “ನೀನು ಸಾಯದಂತೆ ದೇವದರ್ಶನದ ಗುಡಾರಕ್ಕೆ ಬರುವಾಗ ನೀನೂ ಇಲ್ಲವೆ ನಿನ್ನ ಪುತ್ರರೂ ದ್ರಾಕ್ಷಾರಸವನ್ನಾಗಲಿ, ಮದ್ಯವನ್ನಾಗಲಿ ಕುಡಿಯಬಾರದು. ಇದು ನಿಮ್ಮ ವಂಶಾವಳಿಯು ಇರುವವರೆಗೂ ಶಾಶ್ವತವಾಗಿರುವ ಕಟ್ಟಳೆಯಾಗಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಯಾಜಕಕಾಂಡ 10:9
17 ತಿಳಿವುಗಳ ಹೋಲಿಕೆ  

ಸರ್ವೇಶ್ವರನ ದೃಷ್ಟಿಯಲ್ಲಿ ಅವನು ಮಹಾತ್ಮನಾಗುವನು. ದ್ರಾಕ್ಷಾರಸವನ್ನಾಗಲಿ, ಮದ್ಯವನ್ನಾಗಲಿ ಅವನು ಸೇವಿಸನು; ತಾಯಿಯ ಉದರದಿಂದಲೇ ಪವಿತ್ರಾತ್ಮಭರಿತನಾಗುವನು.


ಅವನು ಕುಡುಕನು, ಕಲಹಪ್ರಿಯನು ಮತ್ತು ಹೊಡೆದಾಡುವವನು ಆಗಿರಬಾರದು. ಶಾಂತನೂ ದಯಾವಂತನೂ ಹಣದ ವ್ಯಾಮೋಹ ಇಲ್ಲದವನೂ ಆಗಿರಬೇಕು.


ಏಕೆಂದರೆ, ಸಭಾಧ್ಯಕ್ಷನು ದೇವರ ಸೇವೆಯಲ್ಲಿ ಮೇಲ್ವಿಚಾರಕನಾಗಿರುವುದರಿಂದ ನಿಂದಾರಹಿತನಾಗಿರಬೇಕು. ಆತನು ಗರ್ವಿ ಅಥವಾ ಮುಂಗೋಪಿಯಾಗಿರಬಾರದು. ಕುಡಿತವಾಗಲಿ, ಹಿಂಸಾಚಾರವಾಗಲಿ, ಹಿಂಸಾಪ್ರವೃತ್ತಿಯಾಗಲಿ ಅವನಲ್ಲಿರಬಾರದು. ಅವನು ಲಾಭಕೋರನಾಗಿರಬಾರದು.


ಮದ್ಯಪಾನಮಾಡಿ ಮತ್ತರಾಗಬೇಡಿ. ಅದು ಪಾಪಕೃತ್ಯಗಳಿಗೆ ಎಡೆಮಾಡುತ್ತದೆ. ಬದಲಿಗೆ ಪವಿತ್ರಾತ್ಮಭರಿತರಾಗಿರಿ.


ಒಳಗಿನ ಪ್ರಾಕಾರವನ್ನು ಪ್ರವೇಶಿಸುವಾಗ ಯಾವ ಯಾಜಕನೂ ದ್ರಾಕ್ಷಾರಸವನ್ನು ಕುಡಿದಿರಬಾರದು.


ಯಾಜಕರು, ಪ್ರವಾದಿಗಳು ಮದ್ಯಪಾನದಿಂದ ಮತ್ತರಾಗಿದ್ದಾರೆ; ದ್ರಾಕ್ಷಾರಸದಿಂದ ಓಲಾಡುತ್ತಿದ್ದಾರೆ; ಕುಡಿತದಿಂದ ತೂರಾಡುತ್ತಿದ್ದಾರೆ. ದ್ರಾಕ್ಷಾರಸವೇ ಅವರನ್ನು ಮುಳುಗಿಸಿಬಿಟ್ಟಿದೆ. ಹೌದು, ಅವರು ಮದ್ಯದಲ್ಲಿ ತೇಲಾಡುತ್ತಿದ್ದಾರೆ. ದೈವದರ್ಶನವಾಗುತ್ತಿರುವಾಗಲೂ ಅವರು ಓಲಾಡುತ್ತಾರೆ.


ಸಭಾಸೇವಕರು ಸಜ್ಜನರಾಗಿರಬೇಕು. ಎರಡು ನಾಲಿಗೆಯುಳ್ಳವರೂ ಕುಡುಕರೂ ಲಾಭಕೋರರೂ ಆಗಿರಬಾರದು.


ದ್ರಾಕ್ಷಾರಸವನ್ನು ಹಾಗೂ ಮದ್ಯಪಾನವನ್ನು ಮುಟ್ಟಬಾರದು; ದ್ರಾಕ್ಷಾರಸದ ಹುಳಿಯನ್ನಾಗಲಿ ಬೇರೆ ಮದ್ಯದ ಹುಳಿಯನ್ನಾಗಲಿ ಕುಡಿಯಬಾರದು. ದ್ರಾಕ್ಷಿಹಣ್ಣಿನಿಂದ ಮಾಡಿದ ಯಾವ ಪಾನವನ್ನೂ ಕುಡಿಯಬಾರದು; ಹಸಿ ಅಥವಾ ಒಣಗಿದ ದ್ರಾಕ್ಷಿಹಣ್ಣನ್ನು ತಿನ್ನಬಾರದು.


ಆಗಾಗ್ಗೆ ನೀನು ಅಸ್ವಸ್ಥನಾಗುವುದುಂಟು. ಆದ್ದರಿಂದ ಬರೀ ನೀರನ್ನು ಕುಡಿದರೆ ಸಾಲದು. ನಿನ್ನ ಜೀರ್ಣಶಕ್ತಿಯ ಸುಧಾರಣೆಗಾಗಿ ಸ್ವಲ್ಪ ದ್ರಾಕ್ಷಾರಸವನ್ನೂ ಸೇವಿಸು.


“ಮದ್ಯಪಾನ, ದ್ರಾಕ್ಷಾರಸ - ಇವು ಜನರನ್ನು ಬುದ್ಧಿಹೀನರನ್ನಾಗಿ ಮಾಡುತ್ತವೆ.


ದ್ರಾಕ್ಷಾರಸದಿಂದ ನಗೆಯಾಟ, ಮಧ್ಯದಿಂದ ಕೂಗಾಟ; ಇವುಗಳಿಂದ ತೂರಾಟಕ್ಕೆ ತುತ್ತಾಗುವವನು ಜ್ಞಾನಿಯಲ್ಲ.


ಇದು ನೈವೇದ್ಯವಾಗಿ ಆರತಿಯೆತ್ತುವ ಎದೆಯ ಭಾಗದಂತೆ ಹಾಗೂ ಯಾಜಕರಿಗಾಗಿ ಪ್ರತ್ಯೇಕಿಸುವ ತೊಡೆಯಂತೆ ಯಾಜಕನಿಗೆ ಸಲ್ಲಬೇಕು. ಇದಾದ ನಂತರ ನಾಜೀರ ವ್ರತಸ್ಥನು ದ್ರಾಕ್ಷಾರಸವನ್ನು ಪಾನಮಾಡಬಹುದು.


ಕೊಬ್ಬನ್ನಾಗಲಿ, ರಕ್ತವನ್ನಾಗಲಿ ತಿನ್ನಕೂಡದೆಂಬುದು ನಿಮಗೂ ನಿಮ್ಮ ಸಂತತಿಯವರಿಗೂ ನೀವು ವಾಸಿಸುವ ಎಲ್ಲ ಸ್ಥಳಗಳಲ್ಲಿಯೂ ಶಾಶ್ವತ ನಿಯಮವಾಗಿದೆ.”


ಆರೋನನಿಗೆ, ಸರ್ವೇಶ್ವರ,


ದೇವದರ್ಶನದ ಗುಡಾರದಲ್ಲಿ, ಆಜ್ಞಾಶಾಸನಗಳ ಮಂಜೂಷದ ಮುಂದಿರುವ ತೆರೆಯ ಹೊರಗೆ, ಆರೋನನು ಮತ್ತು ಅವನ ಮಕ್ಕಳು ಸಂಜೆಯಿಂದ ಮುಂಜಾನೆಯವರೆಗೆ ಸರ್ವೇಶ್ವರನಾದ ನನ್ನ ಸನ್ನಿಧಿಯಲ್ಲಿ ಆ ದೀಪವನ್ನು ಸರಿಪಡಿಸುತ್ತಾ ಉರಿಸುತ್ತಿರಬೇಕು. ಈ ನಿಯಮವನ್ನು ಇಸ್ರಯೇಲರು ಮತ್ತು ಅವರ ಸಂತತಿಯವರು ತಲತಲಾಂತರದವರೆಗೂ ಅನುಸರಿಸಬೇಕು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು