Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮೀಕ 4:13 - ಕನ್ನಡ ಸತ್ಯವೇದವು C.L. Bible (BSI)

13 ಸರ್ವೇಶ್ವರ ಇಂತೆನ್ನುತ್ತಾರೆ: “ಸಿಯೋನ್ ನಗರಿಯೇ, ಎದ್ದು ಒಕ್ಕಣೆಮಾಡು. ಇದಕ್ಕಾಗಿ ನಿನ್ನ ಕೊಂಬನ್ನು ಕಬ್ಬಿಣವಾಗಿಸುವೆನು. ನಿನ್ನ ಗೊರಸನ್ನು ಕಂಚನ್ನಾಗಿ ಮಾಡುವೆನು. ಅನೇಕ ರಾಷ್ಟ್ರಗಳನ್ನು ನೀನು ತುಳಿದು ಧ್ವಂಸಮಾಡುವೆ. ಅವುಗಳನ್ನು ಕೊಳ್ಳೆಹೊಡೆದು ತಂದ ಸ್ವತ್ತನ್ನು ಸರ್ವೇಶ್ವರಸ್ವಾಮಿಗೆ ಮೀಸಲಾಗಿಡುವೆ. ಅವುಗಳಿಂದ ಬಂದ ಆಸ್ತಿಯನ್ನು ಲೋಕದೊಡೆಯನಿಗೆ ಪ್ರತ್ಯೇಕಿಸಿಡುವೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಚೀಯೋನ್ ನಗರಿಯೇ ಎದ್ದು ಒಕ್ಕಣೆ ಮಾಡು, ನಾನು ನಿನ್ನ ಕೊಂಬನ್ನು ಕಬ್ಬಿಣದ ಕೊಂಬನ್ನಾಗಿಯೂ, ನಿನ್ನ ಗೊರಸನ್ನು ತಾಮ್ರದ ಗೊರಸನ್ನಾಗಿಯೂ ಮಾಡುವೆನು. ನೀನು ಬಹು ಜನಾಂಗಗಳನ್ನು ಚೂರುಚೂರಾಗಿ ತುಳಿದುಬಿಡುವಿ, ಆ ದೇಶಗಳು ಕೊಳ್ಳೆ ಹೊಡೆದು ಸಂಪಾದಿಸಿದ್ದ ಐಶ್ವರ್ಯವನ್ನು ನೀನು ಯೆಹೋವನಿಗಾಗಿ ಮೀಸಲಾಗಿಡುವೆ. ಅವರ ಆಸ್ತಿಯನ್ನು ಲೋಕದ ಕರ್ತನ ಮುಂದೆ ಸಮರ್ಪಿಸುವಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಚೀಯೋನ್ ನಗರಿಯೇ, ಎದ್ದು ಒಕ್ಕು; ನಾನು ನಿನ್ನ ಕೊಂಬನ್ನು ಕಬ್ಬಿಣವನ್ನಾಗಿಯೂ ನಿನ್ನ ಗೊರಸನ್ನು ತಾಮ್ರವನ್ನಾಗಿಯೂ ಮಾಡುವೆನು; ನೀನು ಬಹು ಜನಾಂಗಗಳನ್ನು ಚೂರುಚೂರಾಗಿ ತುಳಿದುಬಿಡುವಿ; ಅವುಗಳಿಂದ ಹೊಡೆದ ಕೊಳ್ಳೆಯನ್ನು ಕೇವಲ ಯೆಹೋವನದಾಗಿ ಪ್ರತ್ಯೇಕಿಸುವಿ, ಅವುಗಳ ಆಸ್ತಿಯನ್ನು ಲೋಕದ ಕರ್ತನಿಗೆ ಮೀಸಲುಮಾಡುವಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 “ಚೀಯೋನ್ ಕುಮಾರಿಯೇ ಎದ್ದೇಳು, ಆ ಜನರನ್ನು ಪುಡಿಮಾಡು! ನಾನು ನಿನ್ನನ್ನು ಬಲಶಾಲಿಯನ್ನಾಗಿ ಮಾಡುವೆನು. ಕಬ್ಬಿಣದ ಕೊಂಬುಗಳಿರುವಂತೆ, ತಾಮ್ರದ ಗೊರಸುಗಳಿರುವಂತೆ ನಿನ್ನನ್ನು ಮಾಡುವೆನು. ಎಷ್ಟೋ ಜನರನ್ನು ನೀನು ತುಂಡುತುಂಡು ಮಾಡುವೆ. ಅವರ ಐಶ್ವರ್ಯವನ್ನು ನೀನು ಯೆಹೋವನಿಗೆ ಕೊಡುವೆ. ಅವರ ನಿಕ್ಷೇಪಗಳನ್ನು ಇಡೀ ಭೂಮಿಗೆ ಒಡೆಯನಾಗಿರುವ ಯೆಹೋವನಿಗೆ ಅರ್ಪಿಸುವೆ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಚೀಯೋನ್ ಪುತ್ರಿಯೇ, ಎದ್ದು ತುಳಿ. ಏಕೆಂದರೆ ನಿನ್ನ ಕೊಂಬನ್ನು ಕಬ್ಬಿಣವಾಗಿಯೂ ನಿನ್ನ ಗೊರಸುಗಳನ್ನು ಕಂಚಿನದಾಗಿಯೂ ಮಾಡುವೆನು. ನೀನು ಅನೇಕ ಜನಾಂಗಗಳನ್ನು ಚೂರುಚೂರಾಗಿ ಮಾಡುವೆ. ಅವರ ಕೊಳ್ಳೆಹೊಡೆದು ಸಂಪಾದಿಸಿದ್ದ ಸ್ವತ್ತನ್ನು ಯೆಹೋವ ದೇವರಿಗೂ ಅವರ ಸಂಪತ್ತನ್ನು ಲೋಕದ ಕರ್ತ ದೇವರಿಗೂ ಪ್ರತಿಷ್ಠೆಮಾಡುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮೀಕ 4:13
28 ತಿಳಿವುಗಳ ಹೋಲಿಕೆ  

ಆ ರಾಜರ ಕಾಲದಲ್ಲಿ ಪರಲೋಕ ದೇವರು ಒಂದು ಸಾಮ್ರಾಜ್ಯವನ್ನು ಸ್ಥಾಪಿಸುವರು. ಅದು ಎಂದಿಗೂ ಅಳಿಯದು. ಅದರ ಪ್ರಾಬಲ್ಯವು ಬೇರೆ ರಾಷ್ಟ್ರಕ್ಕೆ ಜಾರಿಹೋಗದು. ರಾಷ್ಟ್ರಗಳನ್ನೆಲ್ಲಾ ಭಂಗಪಡಿಸಿ, ನಿರ್ನಾಮಮಾಡಿ ಆ ಸಾಮ್ರಾಜ್ಯ ಶಾಶ್ವತವಾಗಿ ನಿಲ್ಲುವುದು.


ಅವಳ ವ್ಯಾಪಾರದಿಂದ ಬಂದ ಆದಾಯ ಅವಳಿಗೆ ನಿಧಿನಿಕ್ಷೇಪವಾಗದೆ ಸರ್ವೇಶ್ವರ ಸ್ವಾಮಿಗೆ ಮೀಸಲಾಗುವುದು. ಅದು ಸರ್ವೇಶ್ವರ ಸ್ವಾಮಿಯ ಸನ್ನಿಧಾನದಲ್ಲಿ ವಾಸಮಾಡುವವರಿಗೆ ಬೇಕಾದಷ್ಟು ಆಹಾರವನ್ನೂ ಅತ್ಯುತ್ತಮವಾದ ಉಡುಪನ್ನೂ ಒದಗಿಸುವುದು.


ಆಗ ಎತ್ತರವಾದ, ನುಣುಪಾದ ಮೈಕಟ್ಟುಳ್ಳ, ಸರ್ವರಿಗೂ ಭಯಪ್ರದರಾದ, ಪ್ರಬಲ ಆಕ್ರಮಣಕಾರಿಗಳಾದ, ನದಿಗಳಿಂದ ಸೀಳಿಹೋಗಿರುವ ರಾಷ್ಟ್ರದವರು ಸರ್ವೇಶ್ವರ ಸ್ವಾಮಿಯ ಹೆಸರಾಂತ ಸಿಯೋನ್ ಪರ್ವತಕ್ಕೆ ಬರುವರು. ಸೇನಾಧೀಶ್ವರ ಸರ್ವೇಶ್ವರ ಅವರಿಂದ ಕಾಣಿಕೆಗಳನ್ನು ಸ್ವೀಕರಿಸುವರು.


ಈ ಕಾರಣ, ನಿಮ್ಮಲ್ಲಿ ಪ್ರತಿ ಒಬ್ಬನೂ ತನ್ನ ಸಂಪಾದನೆಗೆ ತಕ್ಕಂತೆ ಸ್ವಲ್ಪ ಹಣವನ್ನು ಪ್ರತಿ ವಾರದ ಮೊದಲನೆಯ ದಿನವೇ ಪ್ರತ್ಯೇಕಿಸಿ ಇಡಲಿ.


ಅದಕ್ಕೆ ದೂತನು, “ಇವು ಆಕಾಶದ ನಾಲ್ಕು ಮಾರುತಗಳು; ಭೂಲೋಕದೊಡೆಯನ ಸಾನ್ನಿಧ್ಯದಿಂದ ಇದೀಗಲೆ ಹೊರಟುಬಂದಿವೆ,” ಎಂದನು.


ಅದಕ್ಕೆ ಅವನು, “ಇವು ದೇವರಿಂದ ಆಯ್ಕೆಯಾಗಿ ಎಣ್ಣೆಯಿಂದ ಅಭಿಷಿಕ್ತರಾದ ಇಬ್ಬರು ವ್ಯಕ್ತಿಗಳನ್ನು ಸೂಚಿಸುತ್ತವೆ. ಸರ್ವಲೋಕದ ಒಡೆಯನ ಸನ್ನಿಧಿಯಲ್ಲಿರುವ ಸೇವಕರನ್ನು ಸೂಚಿಸುತ್ತವೆ,” ಎಂದನು.


ಬಾಬಿಲೋನ್ ನಗರವು ತುಳಿದು ತುಳಿದು ಸರಿಮಾಡಿದ ಕಣದಂತಿದೆ. ಇಷ್ಟರಲ್ಲೆ ಕೊಯ್ಲುಕಾಲ ಅದಕ್ಕೆ ಸಂಭವಿಸಲಿದೆ; ಇದು ಇಸ್ರಯೇಲರ ದೇವರೂ ಸೇನಾಧೀಶ್ವರನೂ ಆದ ಸರ್ವೇಶ್ವರನ ನುಡಿ.”


ಜೆರುಸಲೇಮಿನ ನಿನ್ನ ಮಹಾದೇವಾಲಯದ ಪ್ರಯುಕ್ತ I ಅರಸರು ನಿನಗೆ ಕಾಣಿಕೆಯನು ತಂದೊಪ್ಪಿಸುವುದು ಅತಿಸೂಕ್ತ II


ಎಲ್ಲ ಬೆಳ್ಳಿ ಬಂಗಾರ ಹಾಗೂ ತಾಮ್ರ ಕಬ್ಬಿಣ ಪಾತ್ರೆಗಳು ಸರ್ವೇಶ್ವರಸ್ವಾಮಿಗೆ ಮೀಸಲಾಗಿದ್ದು ಅವರ ಭಂಡಾರಕ್ಕೆ ಸೇರತಕ್ಕವುಗಳು,” ಎಂದನು.


ಚೂಪಾಗಿವೆ ಅವರ ಬಾಣಗಳು; ಬಿಗಿದಿವೆ ಬಿಲ್ಲುಗಳು, ಬೆಣಚುಕಲ್ಲಿನಂತಿವೆ ಕುದುರೆಗಳ ಗೊರಸುಗಳು, ಸುತ್ತುತ್ತಿವೆ ಸುಂಟರಗಾಳಿಯಂತವರ ಚಕ್ರಗಳು.


ಕಪ್ಪಗಳನರ್ಪಿಸಲಿ ತಾರ್ಷಿಷ್ ಹಾಗೂ ದ್ವೀಪದ್ವೀಪದ ರಾಜರುಗಳು I ಕಾಣಿಕೆಗಳ ತಂದೊಪ್ಪಿಸಲಿ ಶೆಬಾ ಹಾಗೂ ಸೆಬಾದ ರಾಜರುಗಳು II


ನಿನ್ನ ಕೋಟೆಯ ಬಾಗಿಲು ಕಬ್ಬಿಣದವು ಅವುಗಳ ಅಗುಳಿಗಳು ಕಂಚಿನವು ನೀನಿರುವಷ್ಟು ಕಾಲ ನಿನಗಿರುವುದು ಬಲವು.”


ನನ್ನ ಪ್ರಜೆಯೇ, ನನ್ನ ಕಣಜದ ದವಸವೇ, ಬಡಿತಕ್ಕೆ ಈಡಾದ ಜನರೇ, ಇಸ್ರಯೇಲರ ದೇವರಾದ ಸೇನಾಧಿಶ್ವರ ಸರ್ವೇಶ್ವರ ಸ್ವಾಮಿಯಿಂದ ನಾನು ಕೇಳಿದ್ದನ್ನೇ ತಿಳಿಸುತ್ತಿದ್ದೇನೆ.


“ಬಾಬಿಲೋನೇ, ನೀನು ನನಗೊಂದು ಯುದ್ಧಾಸ್ತ್ರ, ಒಂದು ಗದೆ. ಈ ಗದೆಯಿಂದ ರಾಷ್ಟ್ರಗಳನ್ನು ಬಡಿದುಬಿಡುವೆನು, ರಾಜ್ಯಗಳನ್ನು ಅಳಿಸಿಬಿಡುವೆನು.


“ಎಫ್ರಯಿಮ್ ತೆನೆಹುಲ್ಲನ್ನು ತುಳಿಯುವುದರಲ್ಲಿ ಪಳಗಿರುವ ಹೋರಿಕರು. ಅದರ ಅಂದವಾದ ಹೆಗಲಮೇಲೆ ನೇಗಿಲನ್ನು ಇಟ್ಟಿರಲಿಲ್ಲ. ಜುದೇಯವು ಉಳುವಂತೆ ಮಾಡಿದೆನು. ಯಕೋಬ್ ಕುಂಟೆ ಎಳೆಯುವಂತೆ ಮಾಡಿದೆನು. ಈಗ ಎಫ್ರಯಿಮನ್ನು ನೊಗಕ್ಕೆ ಹೂಡುವೆನು.


ಧರೆಯನು ನೀ ಹಾದುಹೋಗುವೆ ರೌದ್ರದಿಂದ ರಾಷ್ಟ್ರಗಳನು ತುಳಿದುಹಾಕುವೆ ರೋಷದಿಂದ.


ಪೊಡವಿಯೂ ಅದರಲ್ಲಿರುವುದೆಲ್ಲವೂ ಪ್ರಭುವಿನದೇ I ಜಗವೂ ಅದರ ಜೀವಜಂತುಗಳೆಲ್ಲವೂ ಆತನದೇ II


ಸರ್ವೇಶ್ವರಸ್ವಾಮಿಯ ಕೃಪೆಯಿಂದ ಇಬ್ಬನಿಯೂ ತುಂತುರುಮಳೆಯೂ ಮಾನವನ ನೆರವನ್ನು ನಿರೀಕ್ಷಿಸದೆ, ಹುಲ್ಲನ್ನು ಸಮೃದ್ಧಿಗೊಳಿಸುತ್ತವೆ. ಅಂತೆಯೇ ಯಕೋಬನ ಅಳಿದುಳಿದ ವಂಶದವರು ಹಲವಾರು ಜನಾಂಗಗಳ ಮಧ್ಯೆ ನೆಲಸಿ, ಅವರ ಅಭ್ಯುದಯಕ್ಕೆ ಕಾರಣರಾಗುವರು.


ಆ ದಿನದಂದು ಜೆರುಸಲೇಮನ್ನು ಭಾರಿ ಬಂಡೆಯನ್ನಾಗಿ ಮಾಡುವೆನು. ಅದನ್ನು ಎತ್ತಲು ಯತ್ನಿಸುವವರೆಲ್ಲರಿಗೂ ತೀವ್ರ ಗಾಯವಾಗುವುದು. ವಿಶ್ವದ ರಾಷ್ಟ್ರಗಳು ಅದನ್ನು ಎತ್ತಿಹಾಕಲು ಕೂಡಿಬರುವುವು.


“ಆ ದಿನದಂದು ಜುದೇಯದ ಕುಲನಾಯಕರನ್ನು ಕಟ್ಟಿಗೆಯ ಮಧ್ಯೆ ಇರುವ ಅಗ್ಗಿಷ್ಟಿಕೆಯನ್ನಾಗಿಯೂ ಸಿವುಡುಗಳ ನಡುವೆ ಉರಿಯುವ ಪಂಜನ್ನಾಗಿಯೂ ಮಾಡುವೆನು. ಅವರು ಸುತ್ತಮುತ್ತಲಿನ ರಾಷ್ಟ್ರಗಳನ್ನು ಎಡಬಲವೆನ್ನದೆ ನಾಶಮಾಡುವರು. ಜೆರುಸಲೇಮಿನ ನಿವಾಸಿಗಳಾದರೋ ತಮ್ಮ ನಗರದಲ್ಲೇ ಸುರಕ್ಷಿತವಾಗಿರುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು