ಮೀಕ 3:7 - ಕನ್ನಡ ಸತ್ಯವೇದವು C.L. Bible (BSI)7 ಹೀಗಾಗಿ ದಿವ್ಯದರ್ಶಿಗಳಿಗೆ ಅವಮಾನವಾಗುವುದು. ಕಣಿ ಹೇಳುವವರಿಗೆ ನಾಚಿಕೆಯಾಗುವುದು. ಅವರೆಲ್ಲರೂ ಬಟ್ಟೆಯಿಂದ ಬಾಯಿ ಮುಚ್ಚಿಕೊಳ್ಳಬೇಕಾಗುವುದು. ಕಾರಣ, ಅವರಿಗೆ ದೇವರಿಂದ ಯಾವ ಪ್ರತ್ಯುತ್ತರವೂ ಬರದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20197 ದಿವ್ಯದರ್ಶಿಗಳು ಆಶಾಭಂಗಪಡುವರು, ಕಣಿಯವರು ನಾಚಿಕೊಳ್ಳುವರು. ಎಲ್ಲರೂ ಬಟ್ಟೆಯಿಂದ ಬಾಯಿಮುಚ್ಚಿಕೊಳ್ಳುವರು. ಅವರಿಗೆ ದೈವೋತ್ತರವೇ ದೊರೆಯುವುದಿಲ್ಲ” ಎಂದು ನುಡಿಯುತ್ತಾನೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)7 ದಿವ್ಯದರ್ಶಿಗಳು ಆಶಾಭಂಗಪಡುವರು, ಕಣಿಯವರು ನಾಚಿಕೆಗೊಳ್ಳುವರು, ಎಲ್ಲರೂ ಬಟ್ಟೆಯಿಂದ ಬಾಯಿಮುಚ್ಚಿಕೊಳ್ಳುವರು; ಅವರಿಗೆ ದೈವೋತ್ತರವೇ ದೊರೆಯದು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್7 ದೇವದರ್ಶಿಗಳು ನಾಚಿಕೆಗೊಂಡಿದ್ದಾರೆ. ಭವಿಷ್ಯ ಹೇಳುವವರು ನಾಚಿಕೆಗೊಳಗಾಗಿದ್ದಾರೆ. ಯಾಕೆಂದರೆ ದೇವರು ಅವರ ಕೂಡ ಮಾತನಾಡುವದನ್ನು ನಿಲ್ಲಿಸಿರುವದರಿಂದ ಅವರು ಏನನ್ನೂ ಹೇಳುವದಿಲ್ಲ.” ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ7 ಆಗ ದರ್ಶಿಗಳು ನಾಚಿಕೆಪಡುವರು, ಶಕುನಗಾರರು ಅವಮಾನಗೊಳ್ಳುವರು. ದೇವರಿಂದ ಉತ್ತರವಿಲ್ಲದ ಕಾರಣ, ಎಲ್ಲರೂ ತಮ್ಮ ತುಟಿಗಳನ್ನು ಮುಚ್ಚಿಕೊಳ್ಳುವರು.” ಅಧ್ಯಾಯವನ್ನು ನೋಡಿ |
ಆಗ ಸಮುವೇಲನು ಸೌಲನನ್ನು, “ನೀನು ನನ್ನ ವಿಶ್ರಾಂತಿಯನ್ನು ಕೆಡಿಸಿದ್ದೇಕೆ? ನನ್ನನ್ನು ಇಲ್ಲಿಗೆ ಏಕೆ ಬರಮಾಡಿದೆ?” ಎಂದು ಕೇಳಿದನು. ಅದಕ್ಕೆ ಸೌಲನು, “ನಾನು ಬಲು ಇಕ್ಕಟ್ಟಿನಲ್ಲಿ ಇದ್ದೇನೆ; ಫಿಲಿಷ್ಟಿಯರು ನನಗೆ ವಿರೋಧವಾಗಿ ಯುದ್ಧಕ್ಕೆ ಬಂದಿದ್ದಾರೆ; ದೇವರು ನನ್ನನ್ನು ಕೈಬಿಟ್ಟು ದೂರಹೋಗಿದ್ದಾರೆ; ಅವರು ನನಗೆ ಪ್ರವಾದಿಗಳಿಂದಾಗಲಿ, ಕನಸುಗಳಿಂದಾಗಲಿ ಉತ್ತರಕೊಡಲೊಲ್ಲರು. ಆದುದರಿಂದ ನಾನು ಮಾಡಬೇಕಾದುದನ್ನು ನೀನು ತಿಳಿಸುವೆಯೆಂದು ನಿನ್ನನ್ನು ಇಲ್ಲಿಗೆ ಬರಮಾಡಿದೆನು,” ಎಂದನು.