Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮೀಕ 2:4 - ಕನ್ನಡ ಸತ್ಯವೇದವು C.L. Bible (BSI)

4 ಆ ದಿನದಲ್ಲಿ ಜನರು ನಿಮ್ಮ ಬಗ್ಗೆ ಪರಿಹಾಸ್ಯಮಾಡಿ, ಲಾವಣಿ ಕಟ್ಟುವರು. “ಅಯ್ಯೋ, ಸಂಪೂರ್ಣವಾಗಿ ಸೂರೆಹೋದೆವಲ್ಲಾ. ಸ್ವಾಮಿ ನಮ್ಮ ಜನರ ಸ್ವತ್ತನ್ನು ಪರಾಧೀನ ಮಾಡಿಬಿಟ್ಟಿರಲ್ಲಾ. ಅಕಟಾ, ನಮ್ಮ ಹೊಲಗದ್ದೆಗಳನ್ನು ಕಸಿದುಕೊಂಡು ದೇವದ್ರೋಹಿಗಳಿಗೆ ಹಂಚಿಕೊಟ್ಟರಲ್ಲಾ!” ಎಂದು ರೋದಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಆ ದಿನದಲ್ಲಿ ಜನರು ನಿಮ್ಮ ವಿಷಯವಾಗಿ ಅಪಹಾಸ್ಯ ಮಾಡಿ ಲಾವಣಿಕಟ್ಟಿ ಹಾಡುವರು. ‘ಅಯ್ಯೋ, ನಾವು ತೀರಾ ಸೂರೆಹೋದೆವಲ್ಲಾ ಯೆಹೋವನು ನಮ್ಮವರ ಸ್ವತ್ತನ್ನು ಪರಾಧೀನಮಾಡುತ್ತಿದ್ದಾನೆ. ಅಯ್ಯೋ, ಅದನ್ನು ನಮ್ಮಿಂದ ತೊಲಗಿಸಿದ್ದಾನಲ್ಲಾ, ನಮ್ಮ ಭೂಮಿಯನ್ನು ದೇವದ್ರೋಹಿಗಳಿಗೆ ಹಂಚಿಕೊಟ್ಟಿದ್ದಾನೆ’” ಎಂದು ಶೋಕಗೀತವಾಗಿ ಹಾಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಆ ದಿನದಲ್ಲಿ ಜನರು ನಿಮ್ಮ ವಿಷಯವಾಗಿ ಪದ್ಯವನ್ನೆತ್ತಿ - ಅಯ್ಯೋ, ನಾವು ತೀರಾ ಸೂರೆ ಹೋದೆವಲ್ಲಾ! [ಯೆಹೋವನು] ನಮ್ಮವರ ಸ್ವಾಸ್ತ್ಯವನ್ನು ಪರಾಧೀನಮಾಡಿದ್ದಾನೆ; ಅಕಟಾ, ಅದನ್ನು ನಮ್ಮಿಂದ ತೊಲಗಿಸಿದ್ದಾನಲ್ಲಾ! ನಮ್ಮ ಭೂವಿುಯನ್ನು ದೇವದ್ರೋಹಿಗಳಿಗೆ ಹಂಚಿಕೊಟ್ಟಿದ್ದಾನೆ ಎಂದು ಶೋಕಗೀತವಾಗಿ ಹಾಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಆಗ ಜನರು ನಿಮ್ಮ ಬಗ್ಗೆ ಹಾಡನ್ನು ಹಾಡುವರು. ಜನರು ಶೋಕಗೀತೆಯನ್ನು ಹಾಡುವರು. ‘ನಾವು ನಾಶವಾದೆವು! ಯೆಹೋವನು ನಮ್ಮ ದೇಶವನ್ನು ನಮ್ಮಿಂದ ತೆಗೆದುಕೊಂಡು ಇತರ ಜನರಿಗೆ ಕೊಟ್ಟನು. ಹೌದು, ಆತನು ನಮ್ಮ ಭೂಮಿಯನ್ನು ನಮ್ಮಿಂದ ತೆಗೆದುಕೊಂಡುಬಿಟ್ಟನು, ನಮ್ಮ ಗದ್ದೆಗಳನ್ನು ಯೆಹೋವನು ನಮ್ಮ ವೈರಿಗಳಿಗೆ ಪಾಲು ಮಾಡಿಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಆ ದಿನದಲ್ಲಿ ಜನರು ನಿಮ್ಮನ್ನು ಅಪಹಾಸ್ಯ ಮಾಡುವರು. ‘ನಾವು ಸಂಪೂರ್ಣವಾಗಿ ಹಾಳಾಗಿದ್ದೇವೆ. ನನ್ನ ಪ್ರಜೆಗಳ ಆಸ್ತಿ ವಿಭಾಗವಾಗಿದೆ. ಆತನು ಅದನ್ನು ನನ್ನಿಂದ ತೆಗೆದುಕೊಳ್ಳುವನು. ಆತನು ನಮ್ಮ ಹೊಲಗಳನ್ನು ದ್ರೋಹಿಗಳಿಗೆ ಹಂಚಿಕೊಟ್ಟಿದ್ದಾನೆ,’ ” ಎಂಬ ದುಃಖದಾಯಕ ಸಂಗೀತದಿಂದ ಹಾಸ್ಯಮಾಡುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮೀಕ 2:4
35 ತಿಳಿವುಗಳ ಹೋಲಿಕೆ  

ಆದರೆ ಹೀಗೆ ಅವನಿಂದ ಆಕರ್ಷಿತರಾದವರೆಲ್ಲ ಅವನ ಸಮಾಚಾರವೆತ್ತಿ ಗೇಲಿಯ ಲಾವಣಿಕಟ್ಟುವರು. “ತನ್ನದಲ್ಲದನ್ನು ಹೆಚ್ಚು ಹೆಚ್ಚಾಗಿ ತುಂಬಿಸಿಕೊಂಡವನಿಗೆ ಧಿಕ್ಕಾರ! ಬಡ್ಡಿಗಾಗಿ ಅಡವಿಟ್ಟ ವಸ್ತುಗಳನ್ನು ರಾಶಿಮಾಡಿಕೊಂಡವನಿಗೆ ಧಿಕ್ಕಾರ! ಎಷ್ಟುಕಾಲ ಹೀಗೆ ಮಾಡಿಯಾನು?’


ಮಾರೇಷದವರೇ, ಆಕ್ರಮಣಕಾರನೊಬ್ಬನನ್ನು ನಿಮ್ಮ ಬಳಿಗೆ ಬರಮಾಡುವೆನು. ಇಸ್ರಯೇಲಿನ ವೈಭವವು ಅದುಲ್ಲಾಮಿನ ಪಾಲಾಗುವುದು.


ನಾನು : ಪರ್ವತಗಳಿಗಾಗಿ ಅತ್ತು ಗೋಳಾಡುವೆನು ಅಡವಿಯ ಕಾವಲುಗಳಿಗಾಗಿ ಶೋಕಗೀತೆಯನ್ನು ಹಾಡುವೆನು ಅವು ಸುಟ್ಟುಹೋಗಿವೆ, ಯಾರೂ ಅಲ್ಲಿ ಹಾದುಹೋಗರು. ದನಕರುಗಳ ಸದ್ದೂ ಕಿವಿಗೆ ಬೀಳದು ತೊಲಗಿಹೋಗಿವೆ ಮೃಗಪಕ್ಷಿಗಳೂ !


ಬೆಟ್ಟ ಬರಿದಾಗಿ ಸಂಪೂರ್ಣ ಸುಲಿಗೆಯಾಗುವುದು ಜಗವು, ಸರ್ವೇಶ್ವರ ಸ್ವಾಮಿಯ ನುಡಿಗಳಿವು:


ಅದಕ್ಕೆ ನಾನು: “ಸ್ವಾಮಿ, ಈ ಪರಿಸ್ಥಿತಿ ಎಷ್ಟರ ತನಕ?” ಎಂದು ಕೇಳಿದೆನು. ಅದಕ್ಕೆ ಪ್ರತ್ಯುತ್ತರವಾಗಿ :


ಕುರುಡರಂತೆ ನಡುಮಧ್ಯಾಹ್ನದಲ್ಲೂ ಕತ್ತಲಾಯಿತೆಂದು ನೀವು ತಡವರಿಸುವಿರಿ; ನೀವು ಮಾಡುವ ಕೆಲಸ ಯಾವುದೂ ಕೈಗೂಡುವುದಿಲ್ಲ. ಅನ್ಯರು ನಿಮ್ಮನ್ನು ನಿರಂತರವಾಗಿ ಪೀಡಿಸುತ್ತಾ ನಿಮ್ಮ ಸೊತ್ತನ್ನು ಸೂರೆಮಾಡುತ್ತಾ ಇರುವರು. ನಿಮಗೆ ಸಹಾಯ ಮಾಡಲು ಯಾರೂ ಇರುವುದಿಲ್ಲ.


“ಬಾಲಾಕನು ನನ್ನನ್ನು ಕರೆಸಿದ ಅರಾಮಿನಿಂದ ಮೋವಾಬರಸ ನನ್ನ ಬರಮಾಡಿದ ಮೂಡಲಗುಡ್ಡೆಗಳಿಂದ. ‘ನನ್ನ ಪರವಾಗಿ ಯಕೋಬವಂಶಜರನ್ನು ಶಪಿಸೆಂದ’ ‘ಹಾಕು ಇಸ್ರಯೇಲರಿಗೆ ಧಿಕ್ಕಾರ’ ಎಂದು ಹೇಳಿದ.


ತಮ್ಮನ್ನು ಕುರಿತೇ ಈ ಸಾಮತಿಯನ್ನು ಹೇಳುತ್ತಿದ್ದಾರೆಂದು ಅರ್ಥಮಾಡಿಕೊಂಡ ಆ ಯೆಹೂದ್ಯ ಮುಖಂಡರು ಯೇಸುವನ್ನು ಹಿಡಿದು ಬಂಧಿಸಲು ಯತ್ನಿಸಿದರು. ಆದರೆ ಜನಸಮೂಹಕ್ಕೆ ಭಯಪಟ್ಟು ಅವರನ್ನು ಬಿಟ್ಟುಹೋದರು.


ಸರ್ವೇಶ್ವರ ಇಂತೆಂದರು - “ನಾನು ಭೂಮಂಡಲದ ಮೇಲೆ ಏನೂ ಇಲ್ಲದಂತೆ ಸಮಸ್ತವನ್ನು ಅಳಿಸಿಬಿಡುವೆನು.


ಎದ್ದು ತೊಲಗಿರಿ! ಇದು ನಿಮ್ಮ ನೆಮ್ಮದಿಯ ನೆಲೆಯಲ್ಲ. ನಿಮಗೆ ನಾಶವನ್ನು, ವಿಪರೀತ ನಾಶವನ್ನು ಉಂಟುಮಾಡುವ ಹೊಲಸು ಈ ನಾಡಿಗೆ ಅಂಟಿಕೊಂಡಿದೆ.


ಪ್ರತಿಯೊಂದು ದ್ರಾಕ್ಷಾತೋಟದಲ್ಲಿ ಜನರು ರೋದಿಸುವರು. ಏಕೆಂದರೆ ನಿಮ್ಮನ್ನು ದಂಡಿಸಲು ನಿಮ್ಮ ಮಧ್ಯೆ ಹಾದುಹೋಗಲಿದ್ದೇನೆ, ಇದು ಸರ್ವೇಶ್ವರಸ್ವಾಮಿಯ ನುಡಿ.”


ಇಸ್ರಯೇಲಿನ ಜನರೇ, ನಿಮ್ಮನ್ನು ಕುರಿತು ನಾನು ಹಾಡುವ ಈ ಶೋಕಗೀತೆಯನ್ನು ಕೇಳಿ:


ಯಾಜಕರೇ, ಗೋಣಿತಟ್ಟನ್ನುಟ್ಟು ರೋದಿಸಿರಿ; ಬಲಿಪೀಠದ ಪರಿಚಾರಕರೇ, ಪ್ರಲಾಪಿಸಿರಿ; ದೇವರ ದಾಸರೇ, ಬನ್ನಿ; ಗೋಣಿತಟ್ಟನ್ನುಟ್ಟು ಜಾಗರಣೆ ಮಾಡಿರಿ. ದೇವರ ಆಲಯದಲ್ಲಿ ಧಾನ್ಯಪಾನ ನೈವೇದ್ಯಗಳು ನಿಂತುಹೋಗಿವೆ.


ಮದುವೆಯಾಗಲಿದ್ದ ಯುವಕನನ್ನು ಕಳೆದುಕೊಂಡದ್ದಕ್ಕಾಗಿ ಗೋಣಿತಟ್ಟನ್ನು ಉಟ್ಟು ಗೋಳಾಡುವ ಯುವತಿಯಂತೆ ರೋದಿಸಿರಿ.


“ಗಾದೆಗಳಲ್ಲಿ ಜಾಣರು ‘ತಾಯಿಯಂತೆ ಮಗಳು’ ಎಂಬ ಗಾದೆಯನ್ನು ನಿನ್ನ ಬಗ್ಗೆ ಖಂಡಿತವಾಗಿ ನುಡಿಯುವರು.


ಆ ಸುರುಳಿಯನ್ನು ನನ್ನೆದುರಿನಲ್ಲೆ ಬಿಚ್ಚಿದರು. ಅದರ ಎರಡು ಬದಿಗಳಲ್ಲಿಯೂ ಬರೆದಿತ್ತು: ಅದು ಪ್ರಲಾಪ, ಶೋಕ, ಶಾಪ ಇವುಗಳ ಬರಹದಿಂದ ಕೂಡಿತ್ತು.


ಊರುಬಿಟ್ಟು ಹೊರಗೆ ಹೋದರೆ ಅಲ್ಲಿ ಕಾಣಿಸುತ್ತಾರೆ ಖಡ್ಗದಿಂದ ಸತ್ತವರು. ಊರ ಒಳಗೆ ಬಂದರೆ ಅಲ್ಲಿ ಕಾಣಿಸುತ್ತಾರೆ ಕ್ಷಾಮದಿಂದ ನರಳುವವರು. ಅಪರಿಚಿತನಾಡಿಗೆ ಗಡೀಪಾರಾಗಿದ್ದಾರೆ ಪ್ರವಾದಿಗಳು ಮತ್ತು ಯಾಜಕರು’.”


ಮೇಘಗಳೋಪಾದಿಯಲ್ಲಿ ಶತ್ರು ಬರುತ್ತಿರುವುದನ್ನು ನೋಡು. ಅವನ ರಥಗಳು ಬಿರುಗಾಳಿಯಂತೆ ! ಅವನ ಕುದುರೆಗಳು ರಣಹದ್ದುಗಳಂತೆ ! ಅಯ್ಯೋ ನಮಗೆ ಕೇಡು, ಇನ್ನು ನಮ್ಮ ಗತಿ ಮುಗಿಯಿತು !


ಬಿದ್ದುಹೋದನಿದೊ ವಿಧ್ವಂಸಕ ಸದ್ದಿಲ್ಲದಾಗಿದೆ ಅವನ ಅಟ್ಟಹಾಸದ ಬಿಂಕ.


ಯೋಬನು ಮತ್ತೆ ಪ್ರಸ್ತಾಪವೆತ್ತಿ ಹೀಗೆಂದನು:


ಯೆರೆಮೀಯನು ಯೋಷೀಯನನ್ನು ಕುರಿತು ಶೋಕಗೀತೆಯನ್ನು ರಚಿಸಿದನು. ಎಲ್ಲ ಗಾಯಕರೂ ಗಾಯಕಿಯರೂ ಅವನನ್ನು ಇಂದಿನವರೆಗು ತಮ್ಮ ಶೋಕಗೀತೆಗಳಲ್ಲಿ ವರ್ಣಿಸುತ್ತಿರುತ್ತಾರೆ. ಆ ಗೀತೆಗಳನ್ನು ಹಾಡುವುದು ಇಸ್ರಯೇಲರಲ್ಲಿ ಒಂದು ಪದ್ಧತಿಯಾಗಿದೆ. ಅವು ಶೋಕಗೀತೆ ಗ್ರಂಥದಲ್ಲಿ ಲಿಖಿತವಾಗಿವೆ.


ದಾವೀದನು ಸೌಲ-ಯೋನಾತಾನರ ಮೇಲೆ ಒಂದು ಶೋಕಗೀತೆಯನ್ನು ರಚಿಸಿದನು.


ಪದ್ಯರೂಪವಾಗಿ ಹೀಗೆಂದನು: ಬೆಯೋರನ ಮಗ ಬಿಳಾಮನು ನುಡಿದ ಭವಿಷ್ಯವಾಣಿ:


ಆಗ ಅವನು ದೇವಾತ್ಮಪ್ರೇರಿತನಾಗಿ ಪದ್ಯರೂಪದಲ್ಲಿ ಇಂತೆಂದು ಭವಿಷ್ಯ ನುಡಿದನು: “ಇದು ಬೆಯೋರನ ಮಗ ಬಿಳಾಮನ ಭವಿಷ್ಯವಾಣಿ: ಮನೋದೃಷ್ಟಿಯಿಂದ ನೋಡುವ ಪುರುಷನ ವಾಣಿ


ಬಿಳಾಮನು ಪದ್ಯರೂಪವಾಗಿ ಹೀಗೆಂದು ನುಡಿದನು: “ಬಾಲಾಕನೇ, ಕಿವಿಗೊಟ್ಟು ಕೇಳು: ಚಿಪ್ಪೋರನ ಪುತ್ರನೇ, ನನ್ನ ಮಾತನ್ನು ಆಲಿಸು:


ಅವರ ಹೆಂಡತಿ, ಮನೆ, ಹೊಲ, ಗದ್ದೆ ಎಲ್ಲವೂ ಅನ್ಯರ ಪಾಲಾಗುವುದು.” “ನಾಡಿನ ನಿವಾಸಿಗಳ ಮೇಲೆ ಕೈಮಾಡುವೆನೆಂಬುದು ಖಚಿತ. ಇದು ಸರ್ವೇಶ್ವರನಾದ ನನ್ನ ನುಡಿ.


ಆದುದರಿಂದಲೇ ಇವರ ಹೆಂಡತಿಯರನ್ನು ಅನ್ಯರಿಗೂ ಇವರ ಹೊಲಗದ್ದೆಗಳನ್ನು ಆಕ್ರಮಿಸುವವರಿಗೂ ಕೊಟ್ಟುಬಿಡುವೆನು. ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ ಎಲ್ಲರೂ ಅನ್ಯಾಯವಾಗಿ ದೋಚಿಕೊಳ್ಳುತ್ತಲೇ ಇದ್ದಾರೆ. ಪ್ರವಾದಿಗಳು ಮೊದಲಾಗಿ ಯಾಜಕರವರೆಗೆ ಸಕಲರೂ ಮೋಸಮಾಡುತ್ತಾರೆ.


ಆಗ ಮೀಕನು: “ಇದಕ್ಕಾಗಿ ನಾನು ಗೋಳಾಡಿ ರೋದಿಸುವೆನು; ಬೆತ್ತಲೆಯಾಗಿ ಬರಿಗಾಲಿನಲ್ಲಿ ಪಾದಯಾತ್ರೆ ಮಾಡುವೆನು; ಗುಳ್ಳೆನರಿಗಳಂತೆ ಊಳಿಡುವೆನು, ಗೂಬೆಯಂತೆ ಘೂಂಕರಿಸುವೆನು.


ಇವರಿಗಾಗಲಿ ಇವರ ಪೂರ್ವಜರಿಗಾಗಲಿ ಪರಿಚಯವಿಲ್ಲದ ಜನಾಂಗಗಳ ನಡುವೆ ಇವರನ್ನು ಚದರಿಸಿಬಿಡುವೆನು. ಇವರು ಅಳಿದು ಹಾಳಾಗುವ ತನಕ ಇವರ ಹಿಂದೆ ಖಡ್ಗವನ್ನು ಕಳಿಸುವೆನು.”


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು