ಮೀಕ 1:14 - ಕನ್ನಡ ಸತ್ಯವೇದವು C.L. Bible (BSI)14 ಆದಕಾರಣ ನೀವು ಮೋರೆತಷತ್‍ಗಾತ್ ಪಟ್ಟಣ ನಿವಾಸಿಗಳಿಗೆ ಕಪ್ಪಕಾಣಿಕೆಯಿತ್ತು ಬೀಳ್ಕೊಡಬೇಕಾಗುವುದು. ಇಸ್ರಯೇಲಿನ ಅರಸರಿಗೆ ಅಕ್ಜೀಬಿನ ಮನೆತನದವರಿಂದ ವಂಚನೆಯಾಗುವುದು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201914 ಆದಕಾರಣ ನೀವು ಮೋರೆಷತ್ ಗತ್ ಊರಿಗೆ ಬಳುವಳಿ ಕೊಡಬೇಕಾಗುವುದು. ಅಕ್ಜೀಬಿನ ಮನೆಗಳಿಂದ ಇಸ್ರಾಯೇಲಿನ ಅರಸರಿಗೆ ಮೋಸವಾಗುವುದು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)14 ಆದಕಾರಣ ನೀವು ಮೋರೆಷತ್‍ಗತ್ ಊರಿಗೆ ಬಳುವಳಿ ಕೊಡಬೇಕಾಗುವದು; ಅಕ್ಜೀಬಿನ ಮನೆಗಳಿಂದ ಇಸ್ರಾಯೇಲಿನ ಅರಸರಿಗೆ ಮೋಸವಾಗುವದು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್14 ಆದ್ದರಿಂದ ಗತ್‌ನಲ್ಲಿರುವ ಮೋರೆಷತ್‌ಗೆ ಬೀಳ್ಕೊಡುವ ಕಾಣಿಕೆಗಳನ್ನು ಕೊಡು. ಅಕ್ಜೀಬಿನ ಕುಟುಂಬಗಳು ಇಸ್ರೇಲ್ ಅರಸರನ್ನು ಮೋಸಪಡಿಸುವವು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ14 ಹೀಗಿರುವುದರಿಂದ ಮೋರೆಶತ್ ಗತ್ ಊರಿಗೆ ಅಗಲಿ ಹೋಗುವ ಕಾಣಿಕೆಗಳನ್ನು ಕೊಡುವೆ. ಅಕ್ಜೀಬಿನ ಮನೆತನಗಳು ಇಸ್ರಾಯೇಲಿನ ಅರಸರಿಗೆ ಮೋಸಮಾಡುವುವು. ಅಧ್ಯಾಯವನ್ನು ನೋಡಿ |