Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 8:18 - ಕನ್ನಡ ಸತ್ಯವೇದವು C.L. Bible (BSI)

18 ಕಿವಿಗಳಿದ್ದೂ ಕೇಳಲಾರಿರಾ? ಕಣ್ಣುಗಳಿದ್ದೂ ನೋಡಲಾರಿರಾ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಕಣ್ಣಿದ್ದು ಕಾಣುವುದಿಲ್ಲವೋ? ಕಿವಿಯಿದ್ದು ಕೇಳುವುದಿಲ್ಲವೋ? ನಿಮಗೆ ನೆನಪಿಲ್ಲವೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ನಿಮ್ಮ ಮನಸ್ಸು ಕಲ್ಲಾಗಿದೆಯೋ? ಕಣ್ಣಿದ್ದೂ ಕಾಣುವದಿಲ್ಲವೋ? ಕಿವಿಯಿದ್ದೂ ಕೇಳುವದಿಲ್ಲವೋ? ನಿಮಗೆ ನೆನಪಿಲ್ಲವೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ನಿಮ್ಮ ಕಣ್ಣುಗಳು ಕುರುಡಾಗಿವೆಯೋ? ನಿಮ್ಮ ಕಿವಿಗಳು ಕಿವುಡಾಗಿವೆಯೋ? ಮೊದಲೊಮ್ಮೆ, ನಮ್ಮ ಬಳಿ ಸಾಕಷ್ಟು ರೊಟ್ಟಿಗಳಿಲ್ಲದಿದ್ದಾಗ, ನಾನು ಏನು ಮಾಡಿದೆನೆಂಬುದನ್ನು ಜ್ಞಾಪಿಸಿಕೊಳ್ಳಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಕಣ್ಣುಗಳಿದ್ದೂ ನೀವು ಕಾಣುವುದಿಲ್ಲವೋ? ಕಿವಿಗಳಿದ್ದೂ ನೀವು ಕೇಳುವುದಿಲ್ಲವೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

18 ಡೊಳೆ ರ್‍ಹಾವ್ನ್‌ಬಿ ತುಮ್ಕಾ ದಿಸಿನಾ ಕಾಯ್? ಕಾನಾ ರ್‍ಹಾವ್ನ್‌ಬಿ ತುಮ್ಕಾ ಆಯ್ಕಿನಾ ಕಾಯ್? ಅನಿ ತುಮ್ಕಾ ಯಾದ್ ನಾ ಕಾಯ್?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 8:18
15 ತಿಳಿವುಗಳ ಹೋಲಿಕೆ  

ಕಣ್ಣಿದ್ದರೂ ಕಾಣದ, ಕಿವಿಯಿದ್ದರೂ ಕೇಳದ, ಬುದ್ಧಿಯಿಲ್ಲದ ಜನರೇ, ಸರ್ವೇಶ್ವರನ ಈ ಮಾತನ್ನು ಕೇಳಿರಿ;


‘ಕಣ್ಣಾರೆ ನೋಡಿಯೂ ಅವರು ಕಾಣರು; ಕಿವಿಯಾರೆ ಕೇಳಿಯೂ ಅವರು ಗ್ರಹಿಸರು. ಕಂಡು ಗ್ರಹಿಸಿದರೆ ಅವರು ದೇವರತ್ತ ತಿರುಗಿಯಾರು; ಪಾಪಕ್ಷಮೆ ಹೊಂದಿಯಾರು’,” ಎಂದರು.


“ನರಪುತ್ರನೇ, ನೀನು ದ್ರೋಹಿವಂಶದ ಮಧ್ಯೆ ವಾಸಿಸುತ್ತಿರುವೆ. ಆ ವಂಶದವರು ದ್ರೋಹಿಗಳಾಗಿರುವುದರಿಂದ ಕಣ್ಣಿದ್ದರೂ ಕಾಣರು, ಕಿವಿಯಿದ್ದರೂ ಕೇಳರು.


“ತಮ್ಮ ಕಣ್ಣುಗಳಿಂದ ಅವರು ಕಾಣದಂತೆಯೂ ತಮ್ಮ ಮನದಿಂದ ಗ್ರಹಿಸದಂತೆಯೂ ಹಾಗೂ ಮನತಿರುಗಿ ನನ್ನಿಂದ ಗುಣಹೊಂದದಂತೆಯೂ ಅವರ ಕಣ್ಣುಗಳನ್ನು ಕುರುಡಾಗಿಸಿರುವರು; ಅವರ ಮನಸ್ಸನ್ನು ಕಲ್ಲಾಗಿಸಿರುವರು ದೇವರು.”


“ದೇವರು ಅವರಿಗೆ ಜಡಸ್ವಭಾವವನ್ನು ಕೊಟ್ಟರು. ಇಂದಿನವರೆಗೂ ಅವರು ಕಣ್ಣಿದ್ದೂ ಕಾಣರು, ಕಿವಿಯಿದ್ದೂ ಕೇಳರು,” ಎಂದು ಲಿಖಿತವಾಗಿದೆ. ಇದಲ್ಲದೆ ದಾವೀದನು ಇಂತೆಂದಿದ್ದಾನೆ:


ಇಂಥವರು ಮಂದಮತಿಗಳು, ಏನೂ ಗ್ರಹಿಸಲಾರದವರು; ಅವರ ಕಣ್ಣು ಕಾಣದಂತೆಯೂ ಹೃದಯ ಗ್ರಹಿಸದಂತೆಯೂ ಅವರಿಗೆ ಅಂಟು ಬಳಿಯಲಾಗಿದೆ.


ಆದರೂ ಗ್ರಹಿಸುವ ಬುದ್ಧಿ, ನೋಡುವ ಕಣ್ಣು, ಕೇಳುವ ಕಿವಿ ಇವುಗಳನ್ನು ಸರ್ವೇಶ್ವರ ಇಂದಿನವರೆಗೂ ಅಯ್ಯೋ ನಿಮಗೆ ಅನುಗ್ರಹಿಸಲಿಲ್ಲ!


ಅವರ ಕಣ್ಣು ಮಬ್ಬಾಗಿ ಕಾಣದೆಹೋಗಲಿ I ಅವರ ಸೊಂಟ ಬಿಡುವಿಲ್ಲದೆ ನಡುಗುತ್ತಿರಲಿ II


ಈ ವಿಷಯಗಳೆಲ್ಲಾ ನಿಮಗೆ ತಿಳಿದೇ ಇವೆ; ನೀವು ಅಂಗೀಕರಿಸಿದ ಸತ್ಯದಲ್ಲಿ ಸ್ಥಿರವಾಗಿಯೂ ಇದ್ದೀರಿ. ಆದರೂ ಇವುಗಳನ್ನು ಪದೇ ಪದೇ ನಿಮ್ಮ ಜ್ಞಾಪಕಕ್ಕೆ ತರಲು ಅಪೇಕ್ಷಿಸುತ್ತೇನೆ.


ನಾನು ನಿಮ್ಮೊಡನೆ ಇದ್ದಾಗಲೇ ಇದೆಲ್ಲವನ್ನು ತಿಳಿಸಿದ ನೆನಪು ನಿಮಗಿಲ್ಲವೇ?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು