ಮಾರ್ಕ 14:53 - ಕನ್ನಡ ಸತ್ಯವೇದವು C.L. Bible (BSI)53 ಅನಂತರ ಆ ಜನರು ಯೇಸುಸ್ವಾಮಿಯನ್ನು ಪ್ರಧಾನ ಯಾಜಕನ ಬಳಿಗೆ ಕರೆದೊಯ್ದರು. ಅಲ್ಲಿ ಎಲ್ಲಾ ಮುಖ್ಯಯಾಜಕರು, ಪ್ರಮುಖರು ಹಾಗು ಧರ್ಮಶಾಸ್ತ್ರಿಗಳು ಸಭೆ ಸೇರಿದ್ದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 201953 ಅವರು ಯೇಸುವನ್ನು ಮಹಾಯಾಜಕನ ಬಳಿಗೆ ಕರೆದುಕೊಂಡು ಹೋದರು. ಆತನ ಸಂಗಡ ಮುಖ್ಯಯಾಜಕರೆಲ್ಲರೂ, ಹಿರಿಯರು, ಶಾಸ್ತ್ರಿಗಳು ಕೂಡಿಬಂದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)53 ಅಷ್ಟರಲ್ಲಿ ಅವರು ಯೇಸುವನ್ನು ಮಹಾಯಾಜಕನ ಬಳಿಗೆ ತೆಗೆದುಕೊಂಡು ಹೋದರು. ಇವನ ಬಳಿಗೆ ಮಹಾಯಾಜಕರು ಹಿರಿಯರು ಶಾಸ್ತ್ರಿಗಳು ಇವರೆಲ್ಲರೂ ಕೂಡಿಬಂದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್53 ಯೇಸುವನ್ನು ಬಂಧಿಸಿದ್ದ ಜನರು ಪ್ರಧಾನಯಾಜಕನ ಮನೆಗೆ ಆತನನ್ನು ಕರೆದುಕೊಂಡು ಹೋದರು. ಎಲ್ಲಾ ಮಹಾಯಾಜಕರುಗಳು, ಹಿರಿಯ ಯೆಹೂದ್ಯನಾಯಕರುಗಳು, ಹಾಗೂ ಧರ್ಮೋಪದೇಶಕರು ಅಲ್ಲಿ ಸೇರಿದ್ದರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ53 ಅವರು ಯೇಸುವನ್ನು ಮಹಾಯಾಜಕನ ಬಳಿಗೆ ತೆಗೆದುಕೊಂಡು ಹೋದರು. ಯೇಸುವಿನ ಸಂಗಡ ಮುಖ್ಯಯಾಜಕರೂ ಹಿರಿಯರೂ ನಿಯಮ ಬೋಧಕರೂ ಅವನ ಬಳಿಗೆ ಸಭೆ ಕೂಡಿಬಂದರು. ಅಧ್ಯಾಯವನ್ನು ನೋಡಿದೆವಾಚಿ ಖರಿ ಖಬರ್53 ತ್ಯಾ ಧರುನ್ ಹಾನಲ್ಲ್ಯಾ ಲೊಕಾನಿ ಜೆಜುಕ್ ಮಹಾಯಾಜಕಾಚ್ಯಾ ಘರಾಕ್ಡೆ ಘೆವ್ನ್ ಗೆಲ್ಯಾನಿ.ಥೈ ಸಗ್ಳಿ ಮುಖ್ಯ ಯಾಜಕಾ, ಜಾನ್ತಿ ಲೊಕಾ ಅನಿ ಖಾಯ್ದೆ ಸಿಕ್ವುತಲೆ ಥೈ ಯೆವ್ನ್ ಜಮಲ್ಲೆ. ಅಧ್ಯಾಯವನ್ನು ನೋಡಿ |