Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 14:40 - ಕನ್ನಡ ಸತ್ಯವೇದವು C.L. Bible (BSI)

40 ಪುನಃ ಶಿಷ್ಯರ ಬಳಿಗೆ ಬಂದಾಗ, ಅವರು ಇನ್ನೂ ನಿದ್ರಾವಸ್ಥೆಯಲ್ಲಿದ್ದರು; ಅವರ ಕಣ್ಣುಗಳು ಬಹುಭಾರವಾಗಿದ್ದವು. ಯೇಸುವಿಗೆ ಏನು ಉತ್ತರಕೊಡಬೇಕೆಂದು ಅವರಿಗೆ ತಿಳಿಯದೆಹೋಯಿತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

40 ಯೇಸು ಹಿಂತಿರುಗಿ ಬಂದಾಗ ಅವರು ಪುನಃ ನಿದ್ರೆ ಮಾಡುವುದನ್ನು ಕಂಡನು ಯಾಕೆಂದರೆ ಅವರ ಕಣ್ಣುಗಳು ಭಾರವಾಗಿದ್ದವು. ಮತ್ತು ಆತನಿಗೆ ಏನು ಉತ್ತರ ಕೊಡಬೇಕೆಂದು ಅವರಿಗೆ ತಿಳಿಯಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

40 ತಿರಿಗಿ ಬಂದಾಗ ಅವರು ನಿದ್ದೆ ಮಾಡುವದನ್ನು ಕಂಡನು; ಅವರ ಕಣ್ಣುಗಳು ಬಹು ಭಾರವಾಗಿದ್ದವು; ಮತ್ತು ಆತನು ಕೇಳಿದ್ದಕ್ಕೆ ಏನು ಉತ್ತರ ಕೊಡಬೇಕೋ ಅವರಿಗೆ ತಿಳಿಯಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

40 ನಂತರ ಯೇಸು ತನ್ನ ಶಿಷ್ಯರ ಬಳಿಗೆ ಹಿಂತಿರುಗಿ ಬಂದಾಗ ಅವರು ನಿದ್ರಿಸುತ್ತಿರುವುದನ್ನು ಕಂಡನು. ಅವರ ಕಣ್ಣುಗಳು ಬಹಳ ಆಯಾಸಗೊಂಡಿದ್ದವು. ಯೇಸುವಿಗೆ ಏನು ಹೇಳಬೇಕೆಂದು ಆ ಶಿಷ್ಯರಿಗೆ ತಿಳಿಯಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

40 ಯೇಸು ಹಿಂತಿರುಗಿದಾಗ, ಅವರು ತಿರುಗಿ ನಿದ್ರೆ ಮಾಡುವುದನ್ನು ಕಂಡರು. ಅವರ ಕಣ್ಣುಗಳು ಭಾರವಾಗಿದ್ದವು. ಯೇಸುವಿಗೆ ಏನು ಉತ್ತರಕೊಡಬೇಕೆಂದು ಅವರಿಗೆ ತಿಳಿಯಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

40 ಮಾನಾ ಜೆಜು ಅಪ್ನಾಚ್ಯಾ‍ ಶಿಸಾನಿಕ್ಡೆ ಫಾಟಿ ಯೆಲೊ ಅನಿ ತೆನಿ ನಿಜಲ್ಲೆ ಬಗಟ್ಲ್ಯಾನ್, ತೆಂಕಾ ಡೊಳೆ ಉಗ್ಡುಕ್ ಸೈತ್ ಹೊಯ್ನಶಿ, ತೆಕಾ ಕಾಯ್ ಸಾಂಗುಚೆ ಮನುನ್ ತೆಂಕಾಚ್ ಕಳಿನಸಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 14:40
6 ತಿಳಿವುಗಳ ಹೋಲಿಕೆ  

ಧರ್ಮಶಾಸ್ತ್ರದ ನೇಮನಿಯಮಗಳು ಆ ಶಾಸ್ತ್ರಕ್ಕೆ ಅಧೀನರಾದವರಿಗೆ ಮಾತ್ರ ಅನ್ವಯಿಸುತ್ತವೆಂದು ನಾವು ಬಲ್ಲೆವು. ಆದ್ದರಿಂದ ಯಾರೂ ಯಾವ ನೆಪವನ್ನು ಹೇಳಲೂ ಬಾಯಿ ತೆರೆಯುವಂತಿಲ್ಲ. ಜಗತ್ತೆಲ್ಲವೂ ದೇವರ ನ್ಯಾಯತೀರ್ಪಿಗೆ ಗುರಿಯಾಗಿದೆ.


ಅದಕ್ಕೆ ಯೆಹೂದನು, “ನಮ್ಮೊಡೆಯರಿಗೆ ನಾವು ಏನು ಹೇಳೋಣ? ಯಾವ ಉತ್ತರ ಕೊಡೋಣ? ನಾವು ನಿರ್ದೋಷಿಗಳೆಂದು ತೋರಿಸಲು, ಏನುತಾನೆ ಮಾಡುವುದು? ನಿಮ್ಮ ಸೇವಕರಾದ ನಮ್ಮ ಪಾಪಕೃತ್ಯವನ್ನು ದೇವರೇ ಹೊರಪಡಿಸಿದ್ದಾರೆ. ಆ ಪಾತ್ರೆ ಯಾರ ಬಳಿಯಲ್ಲಿ ಸಿಕ್ಕಿತೋ ಅವನು ಮಾತ್ರವಲ್ಲ, ನಾವೆಲ್ಲರೂ ನಮ್ಮೊಡೆಯರಿಗೆ ಗುಲಾಮರಾದೆವಲ್ಲವೆ?" ಎಂದನು.


ಮರಳಿ ಹಿಂದಕ್ಕೆ ಹೋಗಿ, ಮೊದಲು ಪ್ರಾರ್ಥನೆ ಮಾಡಿದಂತೆಯೇ ಮಾಡಿದರು.


ಯೇಸು ಮೂರನೆಯ ಸಾರಿ ಅವರ ಬಳಿಗೆ ಬಂದು, “ನೀವು ಇನ್ನೂ ನಿದ್ರಿಸಿ ವಿಶ್ರಮಿಸುತ್ತಿರುವಿರಾ? ಸಾಕು, ಸಮಯವು ಸಮೀಪಿಸಿತು;


ಗಾಢ ನಿದ್ರೆಯಲ್ಲಿದ್ದ ಪೇತ್ರ ಮತ್ತು ಸಂಗಡಿಗರು ಎಚ್ಚೆತ್ತಾಗ ಯೇಸುವಿನ ಮಹಿಮೆಯನ್ನೂ ಅವರೊಡನೆ ನಿಂತಿದ್ದ ಆ ಇಬ್ಬರನ್ನೂ ಕಂಡರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು