Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 13:8 - ಕನ್ನಡ ಸತ್ಯವೇದವು C.L. Bible (BSI)

8 ಜನಾಂಗಕ್ಕೆ ವಿರುದ್ಧ ಜನಾಂಗ, ರಾಷ್ಟ್ರಕ್ಕೆ ವಿರುದ್ಧ ರಾಷ್ಟ್ರ ಯುದ್ಧಕ್ಕೆ ಇಳಿಯುವುವು. ಅಲ್ಲಲ್ಲಿ ಭೂಕಂಪಗಳು ಆಗುವುವು. ಕ್ಷಾಮ-ಡಾಮರಗಳು ತಲೆದೋರುವುವು. ಇವೆಲ್ಲವೂ ಪ್ರಸವವೇದನೆಯ ಪ್ರಾರಂಭ ಮಾತ್ರ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಜನಾಂಗಕ್ಕೆ ವಿರೋಧವಾಗಿ ಜನಾಂಗವೂ, ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು. ಮತ್ತು ನಾನಾ ಕಡೆಗಳಲ್ಲಿ ಭೂಕಂಪಗಳೂ, ಬರಗಾಲಗಳೂ, ಉಂಟಾಗುವವು. ಆದರೆ ಇವೆಲ್ಲಾ ಪ್ರಸವ ವೇದನೆಯ ಪ್ರಾರಂಭ ಮಾತ್ರ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಜನಕ್ಕೆ ವಿರೋಧವಾಗಿ ಜನವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು; ಮತ್ತು ಭೂಕಂಪಗಳು ಅಲ್ಲಲ್ಲಿ ಆಗುವವು; ಬರಗಳು ಬರುವವು; ಇವೆಲ್ಲಾ [ನೂತನ ಕಾಲವು ಹುಟ್ಟುವ] ಪ್ರಸವವೇದನೆಯ ಪ್ರಾರಂಭ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಜನಾಂಗಗಳು ಇತರ ಜನಾಂಗಗಳ ವಿರುದ್ಧ ಹೋರಾಡುತ್ತವೆ. ರಾಜ್ಯಗಳು ಇತರ ರಾಜ್ಯಗಳ ವಿರುದ್ಧ ಹೋರಾಡುತ್ತವೆ. ಜನರಿಗೆ ತಿನ್ನಲು ಏನೂ ಆಹಾರವಿಲ್ಲದಂಥ ಕಾಲ ಬರುತ್ತದೆ. ಅನೇಕ ಸ್ಥಳಗಳಲ್ಲಿ ಭೂಕಂಪಗಳಾಗುತ್ತವೆ. ಈ ಸಂಗತಿಗಳು ಪ್ರಸವವೇದನೆಯಂತಿರುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಜನಾಂಗಕ್ಕೆ ವಿರೋಧವಾಗಿ ಜನಾಂಗವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು. ನಾನಾ ಕಡೆಗಳಲ್ಲಿ ಭೂಕಂಪಗಳಾಗುವವು. ಬರಗಾಲಗಳು ಉಂಟಾಗುವವು, ಇವು ಪ್ರಸವವೇದನೆಯ ಪ್ರಾರಂಭ ಮಾತ್ರ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

8 ಎಕ್ ದೆಸ್ ಅನಿ ಎಕ್ ದೆಸಾವರ್ತಿ ಅನಿ ಎಕ್ ರಾಜ್ ಅನಿ ಎಕ್ ರಾಜಾಚ್ಯಾ ವರ್‍ತಿ ಮಾರಾ-ಮಾರಿ ಕರುಕ್ ಉಟ್ತ್ಯಾತ್. ತಸೆಚ್ ಸಗ್ಳ್ಯಾಕ್ಡೆ ಭುಕಂಪಾ ಹೊತ್ಯಾತ್ ಅನಿ ಬರಗಾಲ್ ಪಡ್ತಾ; ಹೆ ಸಗ್ಳೆ ಎಕಾ ಬಾಯ್ಕೊಮನ್ಸಿಕ್ ಬಾನತ್ಪಾನಾಚೊ ತರಾಸ್ ಯೆಲ್ಯಾ ಬಾಸೆನ್ ರ್‍ಹಾತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 13:8
21 ತಿಳಿವುಗಳ ಹೋಲಿಕೆ  

ಇವೆಲ್ಲವೂ ಪ್ರಸವ ವೇದನೆಯ ಪ್ರಾರಂಭ ಮಾತ್ರ.


ಅವನಿಗೆ ಹೀಗೆಂದು ಹೇಳಿ : ‘ಈ ದಿನ ನಮಗೆ ಮಹಾಸಂಕಟದ ದಿನ, ದಂಡನೆಯ ದಿನ, ನಿಂದೆ ಅವಮಾನದ ದಿನ. ಹೆರಿಗೆಯ ಕಾಲ ಬಂದಿದೆ, ಆದರೆ ಹೆರುವುದಕ್ಕೆ ಶಕ್ತಿ ಸಾಲದು.


ನಡುಗುವಂತಾಯಿತಲ್ಲಿ ಗಡಗಡನೆ I ಪ್ರಸವ ವೇದನೆಯಂತಾಯಿತವರಿಗೆ II


ಆಗ ಕೆಂಪು ಕುದುರೆ ಒಂದು ಹೊರಟುಬಂದಿತು. ಅದರ ಮೇಲೆ ಒಬ್ಬನು ಕುಳಿತಿದ್ದನು. ವಿಶ್ವದಲ್ಲಿ ಶಾಂತಿಯನ್ನು ಅಳಿಸಿಹಾಕಿ ಲೋಕದ ಜನರು ಒಬ್ಬರನ್ನೊಬ್ಬರು ಕೊಲ್ಲುವಂತೆ ಮಾಡುವ ಅಧಿಕಾರವನ್ನು ಅವನಿಗೆ ಕೊಡಲಾಗಿತ್ತು. ಇದಲ್ಲದೆ, ಅವನಿಗೆ ದೊಡ್ಡ ಖಡ್ಗವನ್ನೂ ಸಹ ಕೊಡಲಾಗಿತ್ತು.


ಎಲ್ಲವೂ ಶಾಂತ, ಸುಭದ್ರವೆಂದು ಜನರು ಎಣಿಸುತ್ತಿರುವಾಗಲೇ, ಗರ್ಭಿಣಿಗೆ ಪ್ರಸವವೇದನೆ ಉಂಟಾಗುವಂತೆ, ವಿನಾಶವು ಫಕ್ಕನೆ ಅವರ ಮೇಲೆ ಬಂದೆರಗುವುದು. ಇದರಿಂದ ಯಾರೂ ತಪ್ಪಿಸಿಕೊಳ್ಳುವಂತಿಲ್ಲ.


ಅವರಲ್ಲಿ ಅಗಬ ಎಂಬವನು ಒಬ್ಬನು. ಇವನು ಪವಿತ್ರಾತ್ಮ ಪ್ರೇರಿತನಾಗಿ ಜಗತ್ತಿನಲ್ಲೆಲ್ಲಾ ಭೀಕರ ಕ್ಷಾಮ ಬರಲಿದೆಯೆಂದು ಮುಂತಿಳಿಸಿದನು. (ಇದು ಬಂದೊದಗಿದುದು ಕ್ಲಾಡಿಯಸ್ ಚಕ್ರವರ್ತಿಯ ಕಾಲದಲ್ಲಿ)


ಸರ್ವೇಶ್ವರ ಆ ದಿನದಂದು ನಾಡಿನಲ್ಲಿ ಕೋಲಾಹಲವನ್ನೆಬ್ಬಿಸಲು , ಜನರು ಭಯಭೀತಿಗೆ ಒಳಗಾಗುವರು . ಒಬ್ಬರನ್ನೊಬ್ಬರು ತಡೆಹಿಡಿದು ಹೊಡೆದಾಡುವರು.


ರಾಜ್ಯಗಳ ಸಿಂಹಾಸನವನ್ನು ಕೆಡವಿಬಿಡುವೆನು. ರಾಷ್ಟ್ರಗಳ ಸಂಸ್ಥಾನಬಲವನ್ನು ಧ್ವಂಸಮಾಡುವೆನು. ರಥಗಳನ್ನೂ ರಥಾರೂಢರನ್ನೂ ದಬ್ಬಿಬಿಡುವೆನು. ಕುದುರೆಗಳೂ ರಾಹುತರೂ ಬಿದ್ದುಹೋಗುವರು; ಒಬ್ಬನು ಮತ್ತೊಬ್ಬನ ಕತ್ತಿಗೆ ತುತ್ತಾಗುವನು.”


ಈ ಸುದ್ದಿ ಬಿತ್ತು ಬಾಬಿಲೋನಿನ ಅರಸನ ಕಿವಿಗೆ ಅವನ ಕೈಗಳಿದೋ ಜೋಲುಬಿದ್ದಿವೆ ಅವನನ್ನು ಹಿಡಿದಿದೆ ಪ್ರಸವವೇದನೆಯಂಥ ಯಾತನೆ.


ದಮಸ್ಕಸ್ ಕುಂದಿದೆ, ಓಡಿಹೋಗಲು ಸಿದ್ಧವಿದೆ. ಅದಕ್ಕೆ ನಡುಕ ಹುಟ್ಟಿದೆ. ಪ್ರಸವವೇದನೆಗೆ, ಕಷ್ಟಸಂಕಟಕ್ಕೆ ಅದು ಒಳಗಾಗಿದೆ.


ಸೇನಾಧೀಶ್ವರ ಸರ್ವೇಶ್ವರ ಹೀಗೆನ್ನುತ್ತಾರೆ: ‘ಹರಡುವುದು ಕೇಡು ಜನಾಂಗದಿಂದ ಜನಾಂಗಕ್ಕೆ ಏಳುವುದು ಚಂಡಮಾರುತ ಲೋಕದ ಕಟ್ಟಕಡೆಯಿಂದ’.”


‘ಲೆಬನೋನ್’ ಅರಮನೆಯಲ್ಲಿ ವಾಸಿಸುವವಳೇ, ದೇವದಾರುಗಳ ನಡುವೆ ಗೂಡುಮಾಡಿಕೊಂಡಿರುವವಳೇ, ಪ್ರಸವವೇದನೆಯಂಥ ಸಂಕಟಗಳು ಸಂಭವಿಸಿದಾಗ ನಿನಗೊದಗುವ ಪರಿಸ್ಥಿತಿ ಎಷ್ಟೋ ದುಃಖಕರ !


ನಿನ್ನೊಡನೆ ಗೆಳೆಯರಂತೆ ಬಾಳಲು ನೀನೇ ಪಳಗಿಸಿದವರನ್ನು ನಿನಗೆ ಒಡೆಯರನ್ನಾಗಿ ನಾನು ನೇಮಿಸುವಾಗ ಏನು ಹೇಳುವೆ? ಹೆರುವವಳಿಗೆ ಬರುವಂಥ ವೇದನೆ ಆಗ ನಿನಗೆ ಬರದೆ ಇರುವುದೆ?


ಜೆರುಸಲೇಮಿನ ಜನರು : “ಈ ಸುದ್ದಿಯನ್ನು ಕೇಳಿದಾಗ ನಮ್ಮ ಕೈಗಳು ಜೋಲುಬಿದ್ದುವು. ಪ್ರಸವವೇದನೆಯಂಥ ಯಾತನೆ ನಮ್ಮನ್ನು ಆವರಿಸಿತು.


ಸರ್ವೇಶ್ವರ ಇಂತೆನ್ನುತ್ತಾರೆ : “ನಾನು ಈಜಿಪ್ಟಿನವರಲ್ಲಿ ಒಳಜಗಳವನ್ನು ಎಬ್ಬಿಸುವೆನು. ಅಣ್ಣತಮ್ಮಂದಿರು, ನೆರೆಹೊರೆಯವರು, ನಗರನಗರಗಳು, ರಾಜರಾಜರುಗಳು ಪರಸ್ಪರ ಕಾದಾಡುವರು.


ಸಿಯೋನ್ ನಗರಿ ಪ್ರಸವವೇದನೆ ಪಡುವವಳಂತೆ ಚೊಚ್ಚಲ ಹೆರಿಗೆಯ ವೇದನೆಯನ್ನು ಅನುಭವಿಸುವವಳಂತೆ ಕಿರಿಚಿಕೊಳ್ಳುವ ಕೂಗನ್ನು ನಾನು ಕೇಳಿದ್ದೇನೆ. ಉಬ್ಬಸಪಡುತ್ತಾ ಎರಡು ಕೈಗಳನ್ನೂ ಚಾಚಿ ‘ಅಯ್ಯೋ ನನಗೆ ಕೇಡು, ಕೊಲೆಗಡುಕನ ಮುಂದೆ ನನ್ನ ಪ್ರಾಣ ಉಡುಗುತ್ತಿದೆ’ ಎಂದು ಅರುಚಿಕೊಳ್ಳುತ್ತಿಹಳು.


ಒಂದು ಜನಾಂಗ ಇನ್ನೊಂದು ಜನಾಂಗವನ್ನೂ ಒಂದು ಪಟ್ಟಣದವರು ಇನ್ನೊಂದು ಪಟ್ಟಣದವರನ್ನೂ ಹಾಳುಮಾಡುತ್ತಿದ್ದರು. ದೇವರು ನಾನಾ ತರದ ಕಷ್ಟದಿಂದ ಅವರನ್ನು ತಳಮಳಗೊಳಿಸಿದ್ದರು.


ಗುಡುಗು, ಭೂಕಂಪ, ಮಹಾಗರ್ಜನೆ, ಬಿರುಗಾಳಿ, ಚಂಡಮಾರುತ, ಭಸ್ಮಮಾಡುವಂಥ ಅಗ್ನಿಜ್ವಾಲೆ - ಇವುಗಳ ಮೂಲಕ ಸರ್ವೇಶ್ವರ ನಿನ್ನ ಪರವಾಗಿ ಪ್ರತ್ಯಕ್ಷವಾಗುವರು.


ಇದಲ್ಲದೆ, ರಣಕಹಳೆಗಳನ್ನೂ ಸಮರಸುದ್ದಿಗಳನ್ನೂ ಕೇಳುವಿರಿ. ಆಗ ನೀವು ಕಳವಳಪಡಬೇಡಿ. ಇವೆಲ್ಲವೂ ಸಂಭವಿಸಲೇಬೇಕು. ಆದರೂ ಇದಿನ್ನೂ ಅಂತ್ಯಕಾಲವಲ್ಲ;


“ನಿಮ್ಮ ವಿಷಯದಲ್ಲೂ ಎಚ್ಚರಿಕೆಯಿಂದಿರಿ. ನಿಮ್ಮನ್ನು ನ್ಯಾಯಸ್ಥಾನಗಳಿಗೆ ಎಳೆಯುವರು; ಪ್ರಾರ್ಥನಾಮಂದಿರಗಳಲ್ಲಿ ಹೊಡೆಯುವರು. ನನ್ನ ನಿಮಿತ್ತ ನೀವು ಅಧಿಕಾರಿಗಳ ಮತ್ತು ಅರಸರ ಮುಂದೆ ನಿಲ್ಲಬೇಕಾಗುವುದು. ಅವರ ಮುಂದೆ ನೀವು ನನಗೆ ಸಾಕ್ಷಿಗಳಾಗುವಿರಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು