Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಾರ್ಕ 13:7 - ಕನ್ನಡ ಸತ್ಯವೇದವು C.L. Bible (BSI)

7 ಇದಲ್ಲದೆ, ರಣಕಹಳೆಗಳನ್ನೂ ಸಮರಸುದ್ದಿಗಳನ್ನೂ ಕೇಳುವಿರಿ. ಆಗ ನೀವು ಕಳವಳಪಡಬೇಡಿ. ಇವೆಲ್ಲವೂ ಸಂಭವಿಸಲೇಬೇಕು. ಆದರೂ ಇದಿನ್ನೂ ಅಂತ್ಯಕಾಲವಲ್ಲ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಇದಲ್ಲದೆ ಯುದ್ಧಗಳಾಗುವುದನ್ನೂ, ಯುದ್ಧವಾಗುವ ಹಾಗಿದೆ ಎಂಬ ಸುದ್ದಿಗಳನ್ನೂ ನೀವು ಕೇಳುವಾಗ ಕಳವಳಪಡಬೇಡಿರಿ. ಹಾಗಾಗುವುದು ಅಗತ್ಯ. ಆದರೂ ಇದು ಇನ್ನೂ ಅಂತ್ಯಕಾಲವಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಇದಲ್ಲದೆ ಯುದ್ಧಗಳಾಗುವದನ್ನೂ ಯುದ್ಧವಾಗುವ ಹಾಗಿದೆ ಎಂಬ ಸುದ್ದಿಗಳನ್ನೂ ನೀವು ಕೇಳುವಾಗ ಕಳವಳಪಡಬೇಡಿರಿ. ಹಾಗಾಗುವದು ಅಗತ್ಯ; ಆದರೂ ಇದು ಇನ್ನೂ ಅಂತ್ಯಕಾಲವಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಸಮೀಪದಲ್ಲಿ ನಡೆಯುತ್ತಿರುವ ಯುದ್ಧಗಳ ಶಬ್ಧವನ್ನೂ ಬಹುದೂರದಲ್ಲಿ ನಡೆಯುತ್ತಿರುವ ಯುದ್ಧಗಳ ಬಗ್ಗೆ ಸುದ್ದಿಯನ್ನೂ ನೀವು ಕೇಳುವಿರಿ. ಆದರೆ ಭಯಪಡಬೇಡಿ. ಅಂತ್ಯಕಾಲ ಬರುವುದಕ್ಕಿಂತ ಮುಂಚೆ ಈ ಸಂಗತಿಗಳು ನಡೆಯಲೇಬೇಕು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಇದಲ್ಲದೆ ಯುದ್ಧಗಳನ್ನೂ, ಯುದ್ಧಗಳ ಸುದ್ದಿಗಳನ್ನೂ ನೀವು ಕೇಳುವಾಗ ಕಳವಳಪಡಬೇಡಿರಿ. ಏಕೆಂದರೆ ಇವೆಲ್ಲವು ಸಂಭವಿಸುವುದು ಅಗತ್ಯ. ಆದರೆ ಇದು ಇನ್ನೂ ಅಂತ್ಯವಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

7 ಜಗ್ಗೊಳ್ ಹೊತಲ್ಯಾ ಝಗ್ಡ್ಯಾಂಚೊ ಅವಾಜ್ ಅನಿ ಧುರ್‍ಲ್ಯಾ ಗಾಂವಾತ್ನಿ ಹೊತಲ್ಯಾ ಝಗ್ಡ್ಯಾಂಚ್ಯಾ ಖಬ್ರಿಯಾ ತುಮ್ಕಾ ಆಯ್ಕುಕ್ ಗಾವ್ತ್ಯಾತ್. ಖರೆ ತುಮಿ ಭಿಂವುನಕಾಶಿ. ಹೆ ಸಗ್ಳೆ ಹೊವ್ಕುಚ್ ಪಾಜೆ, ಹೆಚೊ ಅರ್ತ್‍ ಅಂತ್ಕಾಲ್ ಯೆಲೊ ಮನುನ್ ನ್ಹಯ್”.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಾರ್ಕ 13:7
17 ತಿಳಿವುಗಳ ಹೋಲಿಕೆ  

ನಾನು ಶಾಂತಿಸಮಾಧಾನವನ್ನು ನಿಮಗೆ ಬಿಟ್ಟುಹೋಗುತ್ತೇನೆ; ನನ್ನ ಶಾಂತಿಸಮಾಧಾನವನ್ನು ನಿಮಗೆ ಕೊಡುತ್ತೇನೆ. ಈ ಲೋಕವು ಕೊಡುವ ರೀತಿಯಲ್ಲಿ ನಾನದನ್ನು ನಿಮಗೆ ಕೊಡುವುದಿಲ್ಲ. ನೀವು ಹೃದಯದಲ್ಲಿ ಕಳವಳಗೊಳ್ಳದಿರಿ, ಭಯಪಡಬೇಡಿ.


ಪವಿತ್ರಗ್ರಂಥದ ಪ್ರಕಾರ ಲೋಕೋದ್ಧಾರಕನು ಯಾತನೆಯನ್ನು ಅನುಭವಿಸಬೇಕಾಗಿತ್ತೆಂದೂ ಮರಣಹೊಂದಿ ಪುನರುತ್ಥಾನ ಹೊಂದಬೇಕಾಗಿತ್ತೆಂದೂ ಪ್ರತಿಪಾದಿಸಿದನು. ‘ನಾನು ನಿಮಗೆ ಸಾರುತ್ತಿರುವ ಯೇಸುಸ್ವಾಮಿಯೇ ಆ ಉದ್ಧಾರಕ’ ಎಂದು ಸ್ಪಷ್ಟಪಡಿಸಿದನು.


ಪಾಪಕ್ಕೆ ಪ್ರಚೋದಿಸುವ ಲೋಕಕ್ಕೆ ಧಿಕ್ಕಾರ!


ನಿಮ್ಮ ಎದೆ ಕುಂದದಿರಲಿ. ನಾಡಿನಲ್ಲಿ ಕಿವಿಗೆ ಬೀಳುವ ಸುದ್ದಿ ನಿಮ್ಮನ್ನು ಹೆದರಿಸದಿರಲಿ. ಒಂದು ವರ್ಷ ಒಂದು ಸುದ್ದಿಯಾದರೆ ಮತ್ತೊಂದು ವರ್ಷ ಮತ್ತೊಂದು ಸುದ್ದಿ. ಹಿಂಸಾಚಾರ ಪ್ರಬಲವಾಗುತ್ತಿದೆ ನಾಡಿನಲ್ಲಿ. ಅಧಿಕಾರಿಗೆ ಅಧಿಕಾರಿಯೇ ವಿರೋಧಿ ಅಲ್ಲಿ.


“ಈ ಜನರು ಮಾಡುವ ಕುತಂತ್ರಕ್ಕೆ ಒಳಗಾಗಬೇಡ. ಅವರು ಯಾವುದಕ್ಕೆ ಭಯಪಡುತ್ತಾರೋ ಅದಕ್ಕೆ ನೀನು ಭಯಪಡಬೇಡ, ನಡುಗಲೂ ಬೇಡ.


ಆಕಸ್ಮಿಕ ಅಪಾಯಕ್ಕೆ ನೀನು ಅಂಜಲಾರೆ, ದುರುಳರಿಗೆ ಬಂದೊದಗುವ ನಾಶಕ್ಕೆ ಹೆದರಲಾರೆ.


ಅಶುಭವಾರ್ತೆಯ ಭಯಭೀತಿ ಯಾವುದೂ ಅವನಿಗಿಲ್ಲ I ಪ್ರಭುವಿನಲಿ ಭರವಸೆಯಿಟ್ಟ ಆ ಮನವು ಅಸ್ಥಿರವಲ್ಲ II


ಸೇನೆ ಸಮೇತ ಶತ್ರು ಬಂದರೂ ಎದೆಗುಂದೆನು I ಸಮರಕ್ಕೆರಗಿದರೂ ನಾ ಭರವಸೆಯಿಂದಿರುವೆನು II


ನೆಲದ ಮೇಲೆ ಚೆಲ್ಲಿ ತಿರುಗಿ ತುಂಬಿಕೊಳ್ಳಲಾಗದ ನೀರಿನಂತೆ ಇದ್ದೇವೆ ನಾವು. ಮನುಷ್ಯರ ಪ್ರಾಣತೆಗೆಯುವುದಕ್ಕೆ ದೇವರಿಗೆ ಇಷ್ಟ ಇಲ್ಲ; ಹೊರದೂಡಲಾದವನು ತಿರುಗಿ ಬಳಿಗೆ ಬರುವ ಹಾಗೆ ಅವರು ಸದುಪಾಯಗಳನ್ನು ಕಲ್ಪಿಸುವವರಾಗಿರುತ್ತಾರೆ.


ಯೇಸು ಸ್ವಾಮಿ ತಮ್ಮ ಮಾತನ್ನು ಮುಂದುವರಿಸುತ್ತಾ ಶಿಷ್ಯರಿಗೆ, “ನೀವು ಹೃದಯದಲ್ಲಿ ಕಳವಳಗೊಳ್ಳದಿರಿ; ದೇವರಲ್ಲಿ ವಿಶ್ವಾಸವಿಡಿ; ನನ್ನಲ್ಲಿಯೂ ವಿಶ್ವಾಸವಿಡಿ.


ಇದನ್ನು ಕೇಳಿದ್ದೇ ಹೆರೋದರಸನು ಬಹಳ ತಳಮಳಗೊಂಡನು; ಅಂತೆಯೇ ಜೆರುಸಲೇಮ್ ಆದ್ಯಂತವು ಗಲಿಬಿಲಿಗೊಂಡಿತು.


ಅನೇಕರು ನನ್ನ ಹೆಸರನ್ನು ಇಟ್ಟುಕೊಂಡು ಬಂದು, ‘ನಾನೇ ಕ್ರಿಸ್ತ’, ‘ನಾನೇ ಕ್ರಿಸ್ತ’ ಎನ್ನುತ್ತಾ ಎಷ್ಟೋ ಜನರನ್ನು ತಪ್ಪುದಾರಿಗೆ ಎಳೆಯುವರು.


ಜನಾಂಗಕ್ಕೆ ವಿರುದ್ಧ ಜನಾಂಗ, ರಾಷ್ಟ್ರಕ್ಕೆ ವಿರುದ್ಧ ರಾಷ್ಟ್ರ ಯುದ್ಧಕ್ಕೆ ಇಳಿಯುವುವು. ಅಲ್ಲಲ್ಲಿ ಭೂಕಂಪಗಳು ಆಗುವುವು. ಕ್ಷಾಮ-ಡಾಮರಗಳು ತಲೆದೋರುವುವು. ಇವೆಲ್ಲವೂ ಪ್ರಸವವೇದನೆಯ ಪ್ರಾರಂಭ ಮಾತ್ರ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು