ಮಲಾಕಿ 2:5 - ಕನ್ನಡ ಸತ್ಯವೇದವು C.L. Bible (BSI)5 “ನಾನು ಲೇವಿಯರೊಂದಿಗೆ ಮಾಡಿಕೊಂಡ ಒಡಂಬಡಿಕೆ ಜೀವದಾತ ಹಾಗು ಬದುಕಿನಲ್ಲಿ ಶಾಂತಿ ತರುವಂಥ ಒಡಂಬಡಿಕೆ. ಅವರು ಭಯಭಕ್ತಿಯಿಂದ ಬಾಳಲೆಂದೇ ನಾನು ಅದನ್ನು ಅವರಿಗೆ ವಿಧಿಸಿದ್ದು. ಅಂತೆಯೇ ಹಿಂದೆ ಅವರು ನನ್ನಲ್ಲಿ ಭಯಭಕ್ತಿಯಿಟ್ಟು ನಡೆದುಕೊಂಡರು; ನನ್ನ ನಾಮಕ್ಕೆ ಅಂಜಿ ಬಾಳಿದರು. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20195 “ನಾನು ಲೇವಿಯರೊಂದಿಗೆ ಮಾಡಿಕೊಂಡ ಒಡಂಬಡಿಕೆ ಜೀವದಾತ ಹಾಗು ಬದುಕಿನಲ್ಲಿ ಶಾಂತಿ, ಸುಖ ತರುವಂಥ ಒಡಂಬಡಿಕೆ. ಅವರು ಭಯ ಭಕ್ತಿಯಿಂದ ಬಾಳಲೆಂದೇ ನಾನು ಅದನ್ನು ಅವರಿಗೆ ವಿಧಿಸಿದೆನು. ಅದರಂತೆ ಅವರು ನನ್ನಲ್ಲಿ ಭಯಭಕ್ತಿಯಿಟ್ಟು ನನ್ನ ನಾಮಕ್ಕೆ ಹೆದರಿ ನಡೆದುಕೊಂಡರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)5 ನಾನು ಅವರೊಂದಿಗೆ ಮಾಡಿಕೊಂಡ ಒಡಂಬಡಿಕೆಯಲ್ಲಿ [ವಾಗ್ದಾನ ಮಾಡಿದ್ದು] ಜೀವ, ಸುಖ; ಅದರಂತೆ ಇವುಗಳನ್ನು ಅವರಿಗೆ ದಯಪಾಲಿಸಿದೆನು; [ಒಡಂಬಡಿಕೆಯಲ್ಲಿ ವಿಧಿಸಿದ್ದು] ಭಯಭಕ್ತಿ; ಅದರಂತೆ ಅವರು ನನ್ನಲ್ಲಿ ಭಯಭಕ್ತಿಯಿಟ್ಟು ನನ್ನ ನಾಮಕ್ಕೆ ಅಂಜಿದರು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್5 ಯೆಹೋವನು ಹೀಗೆನ್ನುತ್ತಾನೆ, “ಆ ಒಡಂಬಡಿಕೆಯನ್ನು ನಾನು ಲೇವಿಯರೊಂದಿಗೆ ಮಾಡಿದೆನು. ನಾನು ಅವನಿಗೆ ಜೀವ ಮತ್ತು ಸಮಾಧಾನವನ್ನು ವಾಗ್ದಾನ ಮಾಡಿ ಅವನಿಗೆ ಅದನ್ನು ಕೊಟ್ಟೆನು. ಲೇವಿಯು ನನ್ನನ್ನು ಘನಪಡಿಸಿದನು. ನನ್ನ ಹೆಸರನ್ನು ಗೌರವಿಸಿದನು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ5 “ನಮ್ಮ ಒಡಂಬಡಿಕೆಯು ಜೀವದ ಹಾಗೂ ಶಾಂತಿಯ ಒಡಂಬಡಿಕೆಯಾಗಿತ್ತು. ಅವುಗಳನ್ನು ನಾನೇ ಅವನಿಗೆ ಕೊಟ್ಟೆನು. ಅವನು ನನಗೆ ಭಯಪಟ್ಟು, ನನ್ನ ಹೆಸರನ್ನು ಘನಪಡಿಸಿದನು. ಅಧ್ಯಾಯವನ್ನು ನೋಡಿ |