Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಲಾಕಿ 2:2 - ಕನ್ನಡ ಸತ್ಯವೇದವು C.L. Bible (BSI)

2 ನನ್ನ ನಾಮಕ್ಕೆ ಮಹಿಮೆ ಸಲ್ಲಿಸಬೇಕು. ಇದನ್ನು ನೀವು ಮನದಟ್ಟು ಮಾಡಿಕೊಳ್ಳಬೇಕು. ನನ್ನ ಈ ಮಾತಿಗೆ ಕಿವಿಗೊಡದಿದ್ದರೆ ನಿಮಗೆ ಶಾಪವನ್ನು ತರುವೆನು. ನಿಮ್ಮ ವರಮಾನಗಳನ್ನೆಲ್ಲ ಶಾಪವಾಗಿ ಮಾರ್ಪಡಿಸುವೆನು; ಈಗಾಗಲೇ ಮಾರ್ಪಡಿಸಿರುವೆನು. ನನ್ನ ಆಜ್ಞೆಯನ್ನು ನಿಮ್ಮಲ್ಲಿ ಯಾರೂ ಮನದಟ್ಟು ಮಾಡಿಕೊಂಡಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

2 ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ನನ್ನ ನಾಮವನ್ನು ಘನಪಡಿಸಬೇಕೆಂಬ ಆಜ್ಞೆಯನ್ನು ನೀವು ಆಲಿಸಿ ಮನನಮಾಡಿ ಅರ್ಥಮಾಡಿಕೊಳ್ಳದಿದ್ದರೆ, ನಾನು ನಿಮಗೆ ಶಾಪವನ್ನು ಬರಮಾಡುವೆನು, ನಿಮಗೆ ಆಶೀರ್ವಾದವಾಗಿ ದಯಪಾಲಿಸಿದವುಗಳೆಲ್ಲವನ್ನೂ ಶಪಿಸುವೆನು; ಹೌದು, ಈ ನನ್ನ ಆಜ್ಞೆಯನ್ನು ನಿಮ್ಮಲ್ಲಿ ಯಾರೂ ಮನದಟ್ಟು ಮಾಡಿಕೊಳ್ಳದ ಕಾರಣ ನಾನು ನಿಮ್ಮನ್ನು ಶಪಿಸುತ್ತೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

2 ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ - ನನ್ನ ನಾಮವನ್ನು ಘನಪಡಿಸಬೇಕೆಂಬ ಆಜ್ಞೆಯನ್ನು ನೀವು ಆಲಿಸಿ ಮಂದಟ್ಟುಮಾಡಿಕೊಳ್ಳದಿದ್ದರೆ ನಾನು ನಿಮಗೆ ಶಾಪವನ್ನು ಬರಮಾಡುವೆನು, ನಿಮಗೆ ಆಶೀರ್ವಾದವಾಗಿ ದಯಪಾಲಿಸಿದವುಗಳನ್ನೂ ಶಪಿಸುವೆನು; ಹೌದು, ಈ ನನ್ನ ಆಜ್ಞೆಯನ್ನು ನಿಮ್ಮಲ್ಲಿ ಯಾರೂ ಮಂದಟ್ಟುಮಾಡಿಕೊಳ್ಳದ ಕಾರಣ ಅವುಗಳನ್ನು ಶಪಿಸೇ ಇದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

2 ನನ್ನ ನಾಮವನ್ನು ಘನಪಡಿಸದೆ ಹೋದರೆ ಕೆಟ್ಟ ವಿಷಯಗಳು ನಿಮಗೆ ಪ್ರಾಪ್ತಿಯಾಗುವವು. ನೀವು ಆಶೀರ್ವದಿಸುವಿರಿ. ಆದರೆ ಅದು ಶಾಪವಾಗುವದು. ಕೆಟ್ಟ ವಿಷಯಗಳು ನೆರವೇರುವಂತೆ ನಾನು ಮಾಡುವೆನು. ಯಾಕೆಂದರೆ ನೀವು ನನ್ನ ಹೆಸರನ್ನು ಘನಪಡಿಸುವದಿಲ್ಲ.” ಇದನ್ನು ಸರ್ವಶಕ್ತನಾದ ಯೆಹೋವನು ನುಡಿದಿದ್ದಾನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

2 ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ,” ನೀವು ಕಿವಿಗೊಡದೆ ನನ್ನ ಹೆಸರಿಗೆ ಮಹಿಮೆಯನ್ನು ಸಲ್ಲಿಸಲು ನಿಮ್ಮ ಹೃದಯಗಳನ್ನು ದೃಢಪಡಿಸಿಕೊಳ್ಳದೆ ಹೋದರೆ, “ನಿಮ್ಮ ಮೇಲೆ ಶಾಪವನ್ನು ಕಳುಹಿಸುವೆನು. ನಿಮ್ಮ ಆಶೀರ್ವಾದಗಳನ್ನು ಶಪಿಸುವೆನು. ಹೌದು, ಅವುಗಳನ್ನು ಆಗಲೇ ಶಪಿಸಿದ್ದಾಯಿತು, ಏಕೆಂದರೆ ನೀವು ನನ್ನನ್ನು ಘನಪಡಿಸಲು ನಿಮ್ಮ ಹೃದಯಗಳನ್ನು ದೃಢಪಡಿಸಿಕೊಳ್ಳಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಲಾಕಿ 2:2
31 ತಿಳಿವುಗಳ ಹೋಲಿಕೆ  

ಆತನು ಮಹಾಶಬ್ದದಿಂದ, “ದೇವರಲ್ಲಿ ಭಯಭಕ್ತಿಯುಳ್ಳವರಾಗಿರಿ; ಅವರಿಗೆ ಸ್ತುತಿಸ್ತೋತ್ರ ಸಲ್ಲಿಸಿರಿ. ಏಕೆಂದರೆ, ಅವರು ತೀರ್ಪುಕೊಡುವ ಗಳಿಗೆಯು ಬಂದಿದೆ. ಆದ್ದರಿಂದ ಭೂಸ್ವರ್ಗಗಳನ್ನೂ ಕಡಲುಕಾರಂಜಿಗಳನ್ನೂ ಸೃಷ್ಟಿಸಿದ ದೇವರಿಗೆ ಆರಾಧನೆ ಸಲ್ಲಿಸಿರಿ,” ಎಂದು ಹೇಳಿದನು.


ದೇವರನ್ನು ಸ್ತುತಿಸುವುದಕ್ಕೆ ಈ ಹೊರನಾಡಿನವನು ಹೊರತು ಬೇರಾರೂ ಬರಲಿಲ್ಲವೇ?” ಎಂದರು.


ಅವರಿಗೆ ಬಡಿಸಿದ ಊಟವೇ ಅವರಿಗೆ ಉರುಲಾಗಲಿ I ಅವರ ಹಬ್ಬದೌತಣವೇ ಅವರಿಗೆ ಬೋನಾಗಲಿ II


ಬೋಧಿಸುವ ವರವನ್ನು ಪಡೆದವನು ದೇವರ ವಾಕ್ಯವನ್ನು ಬೋಧಿಸುವವನಂತೆ ಬೋಧನೆಮಾಡಲಿ. ಸೇವೆಮಾಡುವ ವರವನ್ನು ಪಡೆದವನು, ದೇವರಿಂದ ಶಕ್ತಿಯನ್ನು ಪಡೆದವನಂತೆ ಸೇವೆಮಾಡಲಿ. ಇದರಿಂದ ಯೇಸುಕ್ರಿಸ್ತರ ಮುಖಾಂತರ ಎಲ್ಲದರಲ್ಲಿಯೂ ದೇವರಿಗೆ ಸ್ತುತಿಯುಂಟಾಗುವುದು. ಅವರಿಗೆ ಸದಾಕಾಲ ಮಹಿಮೆಯೂ ಸರ್ವಾಧಿಕಾರವೂ ಸಲ್ಲಲಿ. ಆಮೆನ್.


ನೀವೂ ನಿಮ್ಮ ಜನಾಂಗವೆಲ್ಲವೂ ನನಗೆ ಮೋಸಮಾಡುವುದರಿಂದ ನೀವೆಲ್ಲರೂ ಶಾಪಗ್ರಸ್ತರು.


ಇಸ್ರಯೇಲ್ ವಂಶದವರೋ ನಿನಗೆ ಕಿವಿಗೊಡಲು ಸಿದ್ಧರಿಲ್ಲ; ನನಗೂ ಕಿವಿಗೊಡಲು ಸಿದ್ಧರಿಲ್ಲ; ಅವರೆಲ್ಲರು ಗರ್ವಿಗಳು ಹಾಗೂ ಹಟಮಾರಿಗಳು.


ಮನುಷ್ಯರು ಆ ಕಡು ಕಾವಿನಲ್ಲಿ ಬೆಂದು ನರಳಿದರು. ಈ ಮಾರಕ ವ್ಯಾಧಿಗಳ ಮೇಲೆ ಅಧಿಕಾರ ಇದ್ದ ದೇವರನ್ನೂ ದೂಷಿಸಿದರು. ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು ಅವರು ದೇವರಿಗೆ ಅಭಿಮುಖರಾಗಲಿಲ್ಲ; ಅವರ ಮಹಿಮೆಯನ್ನು ಸ್ತುತಿಸಲಿಲ್ಲ.


ನೀವು ನಿರೀಕ್ಷಿಸಿದ್ದು ಸಮೃದ್ಧಿ ಸುಗ್ಗಿ. ಆದರೆ ಸಿಕ್ಕಿದ್ದು ಕಿಂಚಿತ್ತು ಮಾತ್ರ; ಅದನ್ನು ಮನೆಗೆ ತಂದಾಗ ನಾನದನ್ನು ಗಾಳಿಗೆ ತೂರಿಬಿಟ್ಟೆ. ಇದಕ್ಕೆ ಕಾರಣವೇನು?” ಎನ್ನುತ್ತಾರೆ ಸೇನಾಧೀಶ್ವರ ಸರ್ವೇಶ್ವರ. “ಕಾರಣವೇನೆಂದರೆ ನನ್ನ ಆಲಯ ಪಾಳುಬಿದ್ದಿರುವಾಗ ನಿಮ್ಮಲ್ಲಿ ಪ್ರತಿ ಒಬ್ಬನೂ ತನ್ನ ಸ್ವಂತ ಮನೆಯ ಕೆಲಸದಲ್ಲಿ ಮಗ್ನನಾಗಿದ್ದಾನೆ.


ನೀವು ಬಿತ್ತಿದ ಬೀಜ ಬಹಳ, ಪಡೆದ ಫಲ ವಿರಳ; ತಿನ್ನುತ್ತೀರಿ, ಆದರೆ ತೃಪ್ತಿಯಿಲ್ಲ; ಕುಡಿಯುತ್ತೀರಿ, ಆದರೆ ದಾಹ ನೀಗುವುದಿಲ್ಲ. ಹೊದೆಯುತ್ತೀರಿ, ಆದರೆ ಚಳಿ ಹೋಗುವುದಿಲ್ಲ. ದುಡಿಮೆಗಾರನ ದುಡ್ಡಿನ ಚೀಲ ತೂತಿನ ಚೀಲ.”


ಆದಕಾರಣ ಸರ್ವೇಶ್ವರನಾದ ನಾನು ಹೇಳುವುದು ಇದು - ನೀವು ನನ್ನ ಮಾತನ್ನು ಕೇಳಲಿಲ್ಲ, ನಿಮ್ಮ ಸಹೋದರರಿಗೂ ನೆರೆಹೊರೆಯವರಿಗೂ ಬಿಡುಗಡೆಯನ್ನು ಪ್ರಕಟಿಸಲಿಲ್ಲ. ಇಗೋ ಸರ್ವೇಶ್ವರನಾದ ನನ್ನ ನುಡಿ: ಖಡ್ಗ-ವ್ಯಾಧಿ-ಕ್ಷಾಮ ಇವುಗಳಿಗೆ ನೀವು ಗುರಿ ಆಗುವಂತೆ ನಾನು ನಿಮಗೆ ಬಿಡುಗಡೆಯನ್ನು ಪ್ರಕಟಿಸುತ್ತೇನೆ. ಲೋಕದ ಸಮಸ್ತ ರಾಜ್ಯಗಳ ಕಣ್ಣಿಗೆ ನೀವು ಭಯಾಸ್ಪದವಾಗುವಂತೆ ಮಾಡುವೆನು.


ನೀನು ಯಾರಿಗೆ ಹೆದರಿ ಬೆದರಿ, ನನ್ನನ್ನು ಮರೆತು, ನನಗೆ ಸುಳ್ಳಾಡಿ ಮೋಸಮಾಡಿರುವೆ? ಇಂಥ ದ್ರೋಹಕ್ಕೂ ನೀನು ಹಿಂಜರಿಯಲಿಲ್ಲವಲ್ಲಾ! ಬಹುಕಾಲದಿಂದ ನಾನು ಸುಮ್ಮನೆ ಇದ್ದುದರಿಂದಲೇ ನೀನು ನನ್ನನ್ನು ಗೌರವಿಸದೆ ಇರುವುದಕ್ಕೆ ಕಾರಣವಲ್ಲವೆ?


ನನ್ನ ಜನರ ಹಿಂಸೆಬಾಧೆಗಳನ್ನು ಗಮನಿಸದೆ ಬರಲಿರುವ ಪರಿಣಾಮವನ್ನು ನೆನೆಸಿಕೊಳ್ಳದೆ ನೀನೇ ಶಾಶ್ವತ ರಾಣಿಯೆಂದು ಮೆರೆದೆ.


ಎಂದೇ ಸುರಿಸಿದನಾತ ರೋಷಾಗ್ನಿಯನು, ಯುದ್ಧದ ರೌದ್ರವನು ಅವರ ಮೇಲೆಲ್ಲ; ಸುತ್ತಲು ಉರಿ ಹತ್ತಿದರೂ ಅವರು ಅರಿಯಲಿಲ್ಲ, ದಹಿಸಿದರೂ ಅವರು ಕಲಿಯಲಿಲ್ಲ.


ಆಕಾನನಿಗೆ ಯೆಹೋಶುವನು, “ಮಗನೇ, ನೀನು ಇಸ್ರಯೇಲ್ ದೇವರಾದ ಸರ್ವೇಶ್ವರನನ್ನು ಸ್ತುತಿಸಿ ಸ್ತೋತ್ರ ಸಲ್ಲಿಸು. ನೀನು ಮಾಡಿದ್ದನ್ನು ಮುಚ್ಚುಮರೆಯಿಲ್ಲದೆ ನನಗೆ ತಿಳಿಸು, ಎಂದನು


ದುರುಳರ ಮನೆಯನ್ನು ಸರ್ವೇಶ್ವರ ಶಪಿಸುವನು; ನೀತಿವಂತರ ನಿವಾಸವನ್ನು ಆತ ಆಶೀರ್ವದಿಸುವನು.


ಸೇನಾಧೀಶ್ವರ ಸರ್ವೇಶ್ವರ ಯಾಜಕರಿಗೆ ಹೀಗೆ ಹೇಳುತ್ತಾರೆ: “ನಿಮಗೆ ನಾನು ನೀಡುವ ಆಜ್ಞೆಯಿದು:


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು