Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಲಾಕಿ 2:15 - ಕನ್ನಡ ಸತ್ಯವೇದವು C.L. Bible (BSI)

15 ದೇವರು ನಿನ್ನ ಮತ್ತು ಆಕೆಯ ತನುಮನಗಳನ್ನು ಒಂದಾಗಿ ಮಾಡಲಿಲ್ಲವೆ? ಅವರ ಉದ್ದೇಶವಾದರೂ ಏನಾಗಿತ್ತು? ದೇವರ ಮಕ್ಕಳಾಗಿ ಬಾಳುವ ಸಂತಾನಪ್ರಾಪ್ತಿಯೇ ಅವರ ಉದ್ದೇಶವಾಗಿತ್ತು. ಆದಕಾರಣ ಯೌವ್ವನದಲ್ಲಿ ಮಡದಿಗೆ ದ್ರೋಹವೆಸಗದಂತೆ, ಪ್ರತಿಯೊಬ್ಬನೂ ಎಚ್ಚರಿಕೆಯಿಂದಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ದೇವರು ನಿನ್ನ ಮತ್ತು ನಿನ್ನ ಪತ್ನಿಯ ತನುಮನಗಳನ್ನು ಒಂದು ಮಾಡಿ ಒಡಂಬಡಿಸಲಿಲ್ಲವೇ? ದೇವರ ಉದ್ದೇಶವೇನು? ದೇವರ ಮಕ್ಕಳಾಗಿ ಬಾಳುವ ಸಂತಾನ ದಯಪಾಲಿಸುವ ಉದ್ದೇಶ ಆತನದಾಗಿತ್ತು. ಆದುದರಿಂದ ಮದುವೆಯಾದ ಪತ್ನಿಗೆ ದ್ರೋಹಮಾಡದೆ ಪ್ರತಿಯೊಬ್ಬನೂ ಎಚ್ಚರಿಕೆಯಿಂದಿರಲಿ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಪರಮಾತ್ಮಾಂಶನಾದ ಯಾವನೂ ಹೀಗೆ ಮಾಡಲಿಲ್ಲ; ಆ ಪ್ರಸಿದ್ಧನೊಬ್ಬನು ಏಕೆ ಇಂಥ ಕೃತ್ಯಮಾಡಿದನು? ದೇವರ ವರವಾದ ಸಂತಾನವನ್ನು ಹಾರೈಸಿಯೇ. ಹೀಗಿರಲು ನಿಮ್ಮ ಆತ್ಮವನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿರಿ, ಯಾವನೂ ತನ್ನ ಯೌವನದ ಪತ್ನಿಗೆ ದ್ರೋಹಮಾಡದಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ದೇವರ ಇಚ್ಫೆಗನುಸಾರವಾಗಿ ಗಂಡಹೆಂಡತಿಯರು ದೇಹದಲ್ಲಿಯೂ ಆತ್ಮದಲ್ಲಿಯೂ ಒಂದಾಗಿರಬೇಕು. ಆಗ ಅವರ ಮಕ್ಕಳೂ ಪರಿಶುದ್ಧರಾಗಿರುವರು. ಆದ್ದರಿಂದ ಆತ್ಮಿಕ ಅನ್ಯೋನ್ಯತೆಯನ್ನು ಕಾಪಾಡಿಕೊಳ್ಳಿ. ನಿಮ್ಮ ಹೆಂಡತಿಯರಿಗೆ ಮೋಸಮಾಡಬೇಡಿ. ಯಾಕೆಂದರೆ ಯೌವನ ಪ್ರಾಯದಿಂದಲೂ ಆಕೆ ನಿಮ್ಮ ಹೆಂಡತಿಯಾಗಿದ್ದಾಳೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ನಿನ್ನನ್ನು ಸೃಷ್ಟಿಸಿದವನು ಒಬ್ಬನೇ ಅಲ್ಲವೇ? ನೀವು ದೇಹ ಮತ್ತು ಆತ್ಮದಲ್ಲಿ ಅವರಿಗೆ ಸೇರಿದವರು. ಮತ್ತು ಒಬ್ಬರೇ ದೇವರಾಗಿರುವ ದೇವರು ಏನು ಹುಡುಕುತ್ತಾರೆ? ದೈವಿಕ ಸಂತಾನ. ಆದ್ದರಿಂದ ನೀವು ಜಾಗರೂಕರಾಗಿರಿ ಮತ್ತು ನಿಮ್ಮ ಯೌವನದ ಹೆಂಡತಿಗೆ ವಿಶ್ವಾಸದ್ರೋಹ ಮಾಡಬೇಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಲಾಕಿ 2:15
39 ತಿಳಿವುಗಳ ಹೋಲಿಕೆ  

ಇದಕ್ಕೆ ಕಾರಣವೇನೆಂದು ಕೇಳುತ್ತೀರೋ? ಕಾರಣ ಇದೇ: ನಿನಗೂ ನಿನ್ನ ಹೆಂಡತಿಗೂ ಯೌವನದಲ್ಲಿ ಆದ ವಿವಾಹದ ಒಪ್ಪಂದಕ್ಕೆ ಸರ್ವೇಶ್ವರಸ್ವಾಮಿಯೇ ಸಾಕ್ಷಿ. ಆದರೂ ನಿನ್ನ ಅರ್ಧಾಂಗಿ ಹಾಗು ನ್ಯಾಯವಾದ ಧರ್ಮಪತ್ನಿ ಆದ ಆಕೆಗೆ ದ್ರೋಹಮಾಡಿರುವೆ.


ಅಕ್ಕರೆಯಿಂದ ನಾನಾಗ ನಿಮ್ಮನ್ನು ಸ್ವಾಗತಿಸುವೆನು ತಂದೆಯಾಗಿರುವೆನು ನಾನು ನಿಮಗೆ ಪುತ್ರಪುತ್ರಿಯರಾಗಿರುವಿರಿ ನೀವು ನನಗೆ.” - ಎಂದು ನುಡಿದಿಹರು ಸರ್ವಶಕ್ತ ಪ್ರಭು.


ಏಕೆಂದರೆ, ಕ್ರೈಸ್ತವಿಶ್ವಾಸಿಯಾದ ಸತಿಯ ಮುಖಾಂತರ ಪತಿ ದೇವಜನರೊಂದಿಗೆ ಸಂಬಂಧಪಡೆಯುತ್ತಾನೆ. ಅಂತೆಯೇ ಕ್ರೈಸ್ತವಿಶ್ವಾಸಿಯಾದ ಪತಿಯ ಮುಖಾಂತರ ಸತಿ ದೇವಜನರೊಂದಿಗೆ ಸಂಬಂಧಪಡೆಯುತ್ತಾಳೆ. ಇಲ್ಲದಿದ್ದರೆ ನಿಮ್ಮ ಮಕ್ಕಳು ಅಪವಿತ್ರರಾಗುತ್ತಿದ್ದರು. ಈಗಲಾದರೋ ಅವರು ದೇವಜನರೊಂದಿಗೆ ಸಂಬಂಧ ಉಳ್ಳವರಾಗಿದ್ದಾರೆ.


ಸೃಷ್ಟಿಸಿದರು ನರರನ್ನು ತಮ್ಮ ಹೋಲಿಕೆಯಲ್ಲಿ ಸೃಷ್ಟಿಸಿದರವರನ್ನು ದೇವಾನುರೂಪದಲ್ಲಿ ಸೃಷ್ಟಿಸಿದರವರನ್ನು ಸ್ತ್ರೀಪುರುಷರನ್ನಾಗಿ.


ನಾನು ಕೊಟ್ಟ ಸಲಹೆಗಳನ್ನು ಜ್ಞಾಪಿಸಿಕೋ; ಸಭಾಹಿರಿಯನು ನಿಂದಾರಹಿತನೂ ಏಕಪತ್ನಿ ವ್ರತಸ್ಥನೂ ಆಗಿರಬೇಕು. ಆತನ ಮಕ್ಕಳು ವಿಶ್ವಾಸಿಗಳಾಗಿರಬೇಕು. ಅವರು ಸ್ವೇಚ್ಛಾಚಾರಿಗಳಾಗಿರಬಾರದು, ಅವಿಧೇಯರಾಗಿರಬಾರದು.


ಆದರೂ ಇಸ್ರಯೇಲ್ ಜನಾಂಗ ಅಳೆಯುವುದಕ್ಕೂ ಎಣಿಸುವುದಕ್ಕೂ ಅಸಾಧ್ಯವಾದ ಕಡಲತೀರದ ಮರಳಿನಂತಾಗುವುದು. ದೇವರು ಅವರಿಗೆ ಇಂದು, “ನೀವು ನನ್ನ ಪ್ರಜೆಯಲ್ಲ” ಎಂದಿದ್ದಾರೆ; ಆದರೂ, “ನೀವು ಜೀವಸ್ವರೂಪಿಯಾದ ದೇವರ ಮಕ್ಕಳು” ಎನಿಸಿಕೊಳ್ಳುವ ದಿನ ಬರುವುದು.


ನನ್ನಲ್ಲಿ ಜೀವ ಉಸಿರಾಡುತ್ತಿರುವವರೆಗೆ, ನನ್ನ ಮೂಗಲ್ಲಿ ದೇವರು ಊದಿದ ಶ್ವಾಸವಿರುವವರೆಗೆ,


ತಂದೆತಾಯಿಗಳೇ, ನಿಮ್ಮ ಮಕ್ಕಳನ್ನು ಕೆಣಕಿ ಕೆರಳಿಸಬೇಡಿ. ಪ್ರತಿಯಾಗಿ ಪ್ರಭುವಿಗೆ ಮೆಚ್ಚುಗೆಯಾಗುವ ರೀತಿಯಲ್ಲಿ ಅವರಿಗೆ ಶಿಕ್ಷಣವನ್ನು ಕೊಟ್ಟು ಶಿಸ್ತಿನಿಂದ ಸಾಕಿಸಲಹಿರಿ.


ಹೃದಯದಿಂದ ದುರಾಲೋಚನೆ, ಕೊಲೆ, ವ್ಯಭಿಚಾರ, ಅನೈತಿಕತೆ, ಕಳ್ಳತನ, ಸುಳ್ಳುಸಾಕ್ಷಿ, ಅಪದೂರು, ಇವು ಹೊರಬರುತ್ತವೆ.


ಅತ್ಯುತ್ತಮ ಬೀಜದಿಂದ ಬೆಳೆದ ಒಳ್ಳೆಯ ದ್ರಾಕ್ಷಾಲತೆಯನ್ನಾಗಿ ನಿನ್ನನ್ನು ನೆಟ್ಟಿದೆ. ಆದರೆ ನೀನು ಕಾಡುದ್ರಾಕ್ಷೀಬಳ್ಳಿಯ ಹಾಳು ರೆಂಬೆಗಳಾದದ್ದು ಹೇಗೆ?


ನಿಮ್ಮ ಹೃದಯ ಅವಳ ದಾರಿಯತ್ತ ತಿರುಗದಿರಲಿ; ಅಪ್ಪಿತಪ್ಪಿ ನಿಮ್ಮ ಕಾಲು ಅವಳ ಹಾದಿಯನ್ನು ತುಳಿಯದಿರಲಿ.


ನಿನ್ನ ಹೃದಯ ಅವಳ ಬೆಡಗನ್ನು ಮೋಹಿಸದಿರಲಿ; ಕಣ್ಣು ಮಿಟುಕಿಸಿ ಅವಳು ನಿನ್ನನ್ನು ವಶಮಾಡಿಕೊಳ್ಳದಿರಲಿ.


ಹಾಗೆ ಮಾಡಿದರೆ ಅವರು ನಿಮ್ಮ ಮಕ್ಕಳನ್ನು ಸರ್ವೇಶ್ವರನಿಂದ ವಿಮುಖಗೊಳಿಸಿ ಇತರ ದೇವರುಗಳನ್ನು ಪೂಜಿಸುವಂತೆ ಮಾಡಬಹುದು. ಆಗ ಸರ್ವೇಶ್ವರ ನಿಮ್ಮ ಮೇಲೆ ಕೋಪಗೊಂಡು ಬೇಗನೆ ನಿಮ್ಮನ್ನು ನಾಶಮಾಡುವರು.


ಈ ಮನುಷ್ಯಪುತ್ರಿಯರ ಚೆಲುವನ್ನು ಕಂಡು ದೇವಪುತ್ರರು ತಮಗೆ ಇಷ್ಟಬಂದವರನ್ನೆಲ್ಲ ಮದುವೆಯಾದರು.


ಲೈಂಗಿಕ ಪ್ರಲೋಭನೆಗಳು ಪ್ರಬಲವಾಗಿರುವುದರಿಂದ ಪ್ರತಿಯೊಬ್ಬನಿಗೂ ಸ್ವಂತ ಸತಿ ಇರಲಿ, ಪ್ರತಿಯೊಬ್ಬಳಿಗೂ ಸ್ವಂತ ಪತಿ ಇರಲಿ.


ದೇವರು ಪ್ರವಾದಿಗಳ ಮುಖಾಂತರ ಮಾಡಿದ ವಾಗ್ದಾನಗಳಿಗೂ ನಿಮ್ಮ ಪೂರ್ವಜರೊಂದಿಗೆ ಮಾಡಿದ ಒಡಂಬಡಿಕೆಗೂ ನೀವು ಉತ್ತರಾಧಿಕಾರಿಗಳು; ಪೂರ್ವಜ ಅಬ್ರಹಾಮನಿಗೆ, ‘ನಿನ್ನ ಸಂತತಿಯ ಮುಖಾಂತರ ವಿಶ್ವದ ಎಲ್ಲಾ ಜನಾಂಗಗಳು ಧನ್ಯರಾಗುವರು’ ಎಂದಿದ್ದಾರೆ ದೇವರು.


ಅನಂತರ ಅವರ ಮೇಲೆ ಉಸಿರೂದಿ, “ಪವಿತ್ರಾತ್ಮರನ್ನು ಸ್ವೀಕರಿಸಿರಿ.


ಮಣ್ಣಿನ ದೇಹ ತನ್ನ ಭೂಮಿಗೆ ಸೇರಿಹೋಗುವುದು; ಆತ್ಮವು ತನ್ನನ್ನು ದಯಪಾಲಿಸಿದ ದೇವರ ಬಳಿಗೆ ಸೇರುವುದು. (ಇಷ್ಟರೊಳಗೆ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸದಿರಬೇಡ).


ನಿನ್ನ ಹೃದಯವನ್ನು ಕಾಪಾಡು ಜಾಗರೂಕತೆಯಿಂದ; ಏಕೆಂದರೆ ಜೀವಧಾರೆ ಹೊರಡುವುದು ಅದರಿಂದ.


ಅವರ ಮಕ್ಕಳಲ್ಲಿ ಅರ್ಧಮಂದಿ ಜುದೇಯದ ಭಾಷೆಯಲ್ಲಿ ಮಾತಾಡಲರಿಯದೆ ಅಷ್ಡೋದ್ಯ ಮುಂತಾದ ಜನರ ಭಾಷೆಯನ್ನಾಡುತ್ತಾರೆ ಎಂದು ತಿಳಿಯಿತು.


ಇಸ್ರಯೇಲ್ ದೇವರ ವಿಧಿಗಳ ಬಗ್ಗೆ ಗೌರವವಿದ್ದವರೆಲ್ಲರು ಸೆರೆಯಿಂದ ಬಂದವರ ದ್ರೋಹದ ಸಲುವಾಗಿ ಕಳವಳಗೊಂಡು, ನನ್ನನ್ನು ಕೂಡಿಕೊಂಡರು. ನಾನು ಸಂಧ್ಯಾನೈವೇದ್ಯ ಸಮರ್ಪಣೆಯ ಹೊತ್ತಿನವರೆಗೂ ಸ್ತಬ್ಧವಾಗಿ ಕುಳಿತುಕೊಂಡಿದ್ದೆ;


ಅನಂತರ ರೆಬೆಕ್ಕಳು ಇಸಾಕನಿಗೆ, “ಹಿತ್ತಿಯರಾದ ಈ ಹೆಣ್ಣುಗಳ ದೆಸೆಯಿಂದ ನನ್ನ ಬಾಳು ಬೇಸರವಾಗಿದೆ. ಯಕೋಬನು ಕೂಡ ಈ ನಾಡಿನ ಹೆಣ್ಣನ್ನು ಆರಿಸಿಕೊಂಡು ಇಂಥ ಹಿತ್ತಿಯ ಹುಡುಗಿಯನ್ನೇ ಮದುವೆಮಾಡಿಕೊಂಡರೆ ನಾನು ಇನ್ನು ಬದುಕಿ ಪ್ರಯೋಜನ ಇಲ್ಲ,” ಎಂದು ಹೇಳಿದಳು.


"ಕುಡಿಯಪ್ಪಾ, ಮತ್ತು ನಿನ್ನ ಒಂಟೆಗಳಿಗೂ ನೀರು ತಂದುಕೊಡುತ್ತೇನೆ’ ಎನ್ನುವಳೋ ಅವಳೇ ಸರ್ವೇಶ್ವರ ಸ್ವಾಮಿಯಿಂದ ನನ್ನೊಡೆಯನ ಮಗನಿಗೆ ಚುನಾಯಿತಳಾದ ಕನ್ನಿಕೆಯಾಗಿರಲಿ' ಎಂದೆ,


ಹೀಗಿರಲು ದೇವರಾದ ಸರ್ವೇಶ್ವರ ನೆಲದ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದರು. ಆಗ ಮನುಷ್ಯನು ಜೀವಾತ್ಮನಾದನು.


“ಯಾವನಾದರು ಪರಪತ್ನಿಯೊಡನೆ ವ್ಯಭಿಚಾರ ಮಾಡಿದರೆ ಅವರಿಬ್ಬರಿಗೂ ಮರಣಶಿಕ್ಷೆಯಾಗಬೇಕು.


ಬೆತ್ಲೆಹೇಮಿನಲ್ಲಿ ಘನವಂತನಾಗು! ಆ ಯುವತಿಯ ಮುಖಾಂತರ ಸರ್ವೇಶ್ವರ ನಿನಗೆ ಅನುಗ್ರಹಿಸುವ ಸಂತಾನದಿಂದ ನಿನ್ನ ಮನೆತನವು, ಯೆಹೂದನಿಗೆ ತಾಮಾರಳಿಂದ ಹುಟ್ಟಿದ ಪೆರೆಚನ ಮನೆತನದಂತೆ ಪ್ರಖ್ಯಾತವಾಗಲಿ!” ಎಂದು ಹರಸಿದರು.


ಎಲ್ಕಾನನಿಗೆ ಏಲಿ, “ನೀನು ಸರ್ವೇಶ್ವರನಿಗೆ ಸಮರ್ಪಿಸಿಬಿಟ್ಟ ಈ ಮಗನಿಗೆ ಬದಲಾಗಿ ಈ ಹನ್ನಳಿಂದ ನಿನಗೆ ಬೇರೆ ಮಕ್ಕಳಾಗಲಿ!” ಎಂದು ಹೇಳಿ ಅವನನ್ನೂ ಅವನ ಹೆಂಡತಿಯನ್ನೂ ಆಶೀರ್ವದಿಸುತ್ತಿದ್ದನು. ಅನಂತರ ಅವರು ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದರು.


ನಿನ್ನನ್ನು ಅದು ತಪ್ಪಿಸುವುದು ತನ್ನ ಯೌವನಕಾಲದ ಪ್ರಿಯನನ್ನು ತ್ಯಜಿಸಿದವಳಿಂದ, ತನ್ನ ದೇವರ ಮುಂದೆ ಮಾಡಿದ ಒಪ್ಪಂದವನ್ನು ಮರೆತವಳಿಂದ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು