Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಲಾಕಿ 1:4 - ಕನ್ನಡ ಸತ್ಯವೇದವು C.L. Bible (BSI)

4 ಏಸಾವನ ವಂಶದವರಾದ ಎದೋಮ್ಯರು, “ನಮ್ಮ ನಾಡು ಹಾಳಾಯಿತು; ಆದರೆ ಹಾಳುಬಿದ್ದದ್ದನ್ನು ಮರಳಿ ಕಟ್ಟುವೆವು,” ಎನ್ನಬಹುದು. ಅದಕ್ಕೆ ಸೇನಾಧೀಶ್ವರ ಸರ್ವೇಶ್ವರ ಕೊಡುವ ಉತ್ತರ ಇದು: “ಅವರು ಕಟ್ಟಲಿ; ನಾನು ಅವುಗಳನ್ನು ಕೆಡವಿಹಾಕುವೆ. ‘ಅವರು ಕೇಡಿಗರು. ಸರ್ವೇಶ್ವರಸ್ವಾಮಿಯ ಕೋಪಕ್ಕೆ ಗುರಿಯಾದವರು’ ಎಂದು ಜನರೇ ಆಡಿಕೊಳ್ಳುವರು.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಹೀಗಿರಲು ಎದೋಮ್ಯರು, “ನಾವು ಹಾಳಾದೆವು, ಆದರೆ ಹಾಳುಪ್ರದೇಶಗಳನ್ನು ಮತ್ತೆ ಕಟ್ಟುವೆವು” ಅಂದುಕೊಂಡರೆ ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ಅವರು ಕಟ್ಟಿದರೂ ನಾನು ಕೆಡವಿಹಾಕುವೆನು; ಅವರು ದುಷ್ಟ ಕೇಡಿಗರು, ಯೆಹೋವನ ನಿತ್ಯ ಕೋಪಕ್ಕೆ ಗುರಿಯಾದ ಜನರೂ ಅನ್ನಿಸಿಕೊಳ್ಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಹೀಗಿರಲು ಎದೋಮ್ಯರು - ನಾವು ಹಾಳಾದೆವು, ಆದರೆ ಹಾಳುಪ್ರದೇಶಗಳನ್ನು ಮತ್ತೆ ಕಟ್ಟುವೆವು ಅಂದುಕೊಂಡರೆ ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ - ಅವರು ಕಟ್ಟಿದರೂ ನಾನು ಕೆಡವಿ ಹಾಕುವೆನು; ಅವರು ದುಷ್ಟ ಪ್ರಾಂತದವರೂ, ಯೆಹೋವನ ನಿತ್ಯಕೋಪಕ್ಕೆ ಈಡಾದ ಜನರೂ ಅನ್ನಿಸಿಕೊಳ್ಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಎದೋಮ್ಯರು ಒಂದುವೇಳೆ ಹೀಗೆ ಹೇಳಿಯಾರು: “ನಾವು ನಾಶವಾಗಿದ್ದೇವೆ. ಹೌದು, ಆದರೆ ನಾವು ಹಿಂದೆ ಹೋಗಿ ತಿರುಗಿ ನಮ್ಮ ಪಟ್ಟಣಗಳನ್ನು ಕಟ್ಟುವೆವು.” ಸರ್ವಶಕ್ತನಾದ ಯೆಹೋವನು, “ಅವರು ಪಟ್ಟಣಗಳನ್ನು ತಿರುಗಿ ಕಟ್ಟಿದರೆ ನಾನು ತಿರುಗಿ ನಾಶಮಾಡುವೆನು” ಎಂದು ಹೇಳುತ್ತಾನೆ. ಇದಕ್ಕಾಗಿಯೇ ಜನರು, “ಎದೋಮ್ ದುಷ್ಟ ಪ್ರಾಂತ್ಯವಾಗಿದೆ, ಯೆಹೋವನು ನಿರಂತರವಾಗಿ ಅದನ್ನು ದ್ವೇಷಿಸುತ್ತಾನೆ” ಎಂದು ಅನ್ನುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಎದೋಮ್ಯರು, “ನಾವು ಬಡಕಲಾದೆವು, ಆದರೆ ನಾವು ಮತ್ತೆ ಹಾಳಾದ ಸ್ಥಳಗಳನ್ನು ಕಟ್ಟುವೆವು,” ಎಂದು ಹೇಳಬಹುದು. ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ, “ಅವರು ಕಟ್ಟಬಹುದು, ಆದರೆ ನಾನು ಕೆಡವಿಬಿಡುವೆನು. ಜನರು ಅವರನ್ನು ದುಷ್ಟತನದ ನಾಡೆಂದೂ, ಯೆಹೋವ ದೇವರು ಎಂದೆಂದಿಗೂ ಸಿಟ್ಟು ಮಾಡುವ ಜನವೆಂದೂ ಕರೆಯುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಲಾಕಿ 1:4
37 ತಿಳಿವುಗಳ ಹೋಲಿಕೆ  

ನಾನು ಎದೋಮಿಗೆ ನನ್ನ ಜನರಾದ ಇಸ್ರಯೇಲರ ಕೈಯಿಂದ ಮುಯ್ಯಿತೀರಿಸುವೆನು; ಅವರು ನನ್ನ ಕೋಪರೋಷಗಳಿಗೆ ತಕ್ಕ ಹಾಗೆ ಅದಕ್ಕೆ ಮಾಡುವರು; ನನ್ನ ಪ್ರತೀಕಾರವು ಎದೋಮಿನ ಅನುಭವಕ್ಕೆ ಬರುವುದು; ಇದು ಸರ್ವೇಶ್ವರನಾದ ದೇವರ ನುಡಿ.”


ನಾನು ನಿನ್ನನ್ನು ನಿತ್ಯನಾಶನಕ್ಕೆ ಈಡುಮಾಡುವೆನು; ನಿನ್ನ ಪಟ್ಟಣಗಳು ನಿರ್ಜನವಾಗುವುವು; ಆಗ ನಾನೇ ಸರ್ವೇಶ್ವರ ಎಂದು ನಿನ್ನವರಿಗೆ ನಿಶ್ಚಿತವಾಗುವುದು.


ಸರ್ವೇಶ್ವರ ಇಂತೆನ್ನುತ್ತಾರೆ: “ನಿನ್ನ ಭವಿಷ್ಯದ ಬಗ್ಗೆ ಭರವಸೆಯಿಂದಿರು ನಿನ್ನ ಮಕ್ಕಳು ಹಿಂದಿರುಗಿ ಸ್ವದೇಶ ಸೇರುವರು.


ಅದು ಹಗಲಿರುಳು ಆರದೆ ಉರಿಯುವುದು. ಅದರ ಹೊಗೆ ನಿರಂತರವಾಗಿ ಏರುತ್ತಿರುವುದು. ನಾಡು ತಲತಲಾಂತರಕ್ಕೂ ಹಾಳುಬಿದ್ದಿರುವುದು, ಯುಗಯುಗಾಂತರಕ್ಕೂ ಅಲ್ಲಿ ಯಾರೂ ಹಾದುಹೋಗರು.


ಆಕಾಶದಲ್ಲಿ ನನ್ನ ಖಡ್ಗವು ಆವೇಶದಿಂದ ಕಾರ್ಯಮಾಡಿದೆ. ಇಗೋ, ನಾನು ಶಪಿಸಿದ ಎದೋಮ್ ಎಂಬ ಜನಾಂಗದ ಮೇಲೆ ನ್ಯಾಯತೀರಿಸಲು ಅದು ಎರಗಲಿದೆ.


ಒಟ್ಟಿಗೆ ಎರಗುವರು ಫಿಲಿಷ್ಟಿಯರ ಮೇಲೆ ಪಶ್ಚಿಮದಲ್ಲಿ; ಜೊತೆಯಾಗಿ ಸೂರೆಮಾಡುವರು ಜನರನ್ನು ಪೂರ್ವದಲ್ಲಿ; ಗೆಲ್ಲುವರು ಎದೋಮ್ ಮೊವಾಬ್ ನಾಡುಗಳನ್ನು; ಅಧೀನವಾಗಿಸುವರು ಅಮೋನ್ಯ ಜನರನ್ನು.


ಏಸಾವನನ್ನು ದ್ವೇಷಿಸಿದೆ; ಅಲ್ಲದೆ ಏಸಾವನಿಗೆ ಸೇರಿದ ಮಲೆನಾಡುಗಳನ್ನು ಹಾಳುಮಾಡಿ, ಅವನ ಪಿತ್ರಾರ್ಜಿತ ರಾಜ್ಯವನ್ನು ನಾಯಿನರಿಗಳ ಬೀಡಾಗಿಸಿದೆ,” ಎಂದು ಉತ್ತರಿಸುತ್ತಾರೆ.


ಕಲ್ನೆ ಪಟ್ಟಣಕ್ಕೆ ಹೋಗಿ ನೋಡಿ. ಅಲ್ಲಿಂದ ಪ್ರಖ್ಯಾತ ಪಟ್ಟಣವಾದ ಹಮಾತಿಗೆ ನಡೆಯಿರಿ. ಹಮಾತಿನಿಂದ ಫಿಲಿಷ್ಟಿಯರ ಊರಾದ ಗತ್ ನಗರಕ್ಕೆ ಇಳಿದುಹೋಗಿರಿ. ಅವು ನಿಮ್ಮ ರಾಜ್ಯಗಳಿಗಿಂತ ದೊಡ್ಡವೋ? ಅವುಗಳ ಪ್ರಾಂತ್ಯ, ನಿಮ್ಮ ಪ್ರಾಂತ್ಯಕ್ಕಿಂತ ಹಿರಿದೋ?


ನೀವು ಖಡ್ಗಕ್ಕೆ ತುತ್ತಾಗುವಿರಿ. ಇಸ್ರಯೇಲಿನ ಮೇರೆಯಲ್ಲೆ ನಿಮಗೆ ದಂಡನೆಯನ್ನು ವಿಧಿಸುವೆನು; ನಾನೇ ಸರ್ವೇಶ್ವರ ಎಂದು ನಿಮಗೆ ಗೊತ್ತಾಗುವುದು.


ಸ್ವಾಮಿಯ ಅಪ್ಪಣೆಯಿಲ್ಲದೆ ಯಾರ ಮಾತೂ ಸಾರ್ಥಕವಾಗದು.


ಖೈದಿಗಳೊಂದಿಗೆ ಕಾರಾಗೃಹವನ್ನು ಸೇರುವಿರಿ; ಇಲ್ಲವೆ, ಇತರರ ಸಮೇತ ಹತರಾಗುವಿರಿ. ಇದೇ ನಿಮ್ಮ ಗತಿ. ಇಷ್ಟಾದರೂ ಸರ್ವೇಶ್ವರನ ಕೋಪ ತಣಿಯದು; ಹೊಡೆಯಲು ಎತ್ತಿದ ಕೈ ಇಳಿಯದು.


ಸರ್ವೇಶ್ವರನ ಮುಂದೆ ನಿಲ್ಲಬಲ್ಲ ಜ್ಞಾನವಿಲ್ಲ, ವಿವೇಚನೆಯಿಲ್ಲ, ಆಲೋಚನೆಯಿಲ್ಲ.


ನೆನೆಸಿಕೊ ಪ್ರಭು, ಜೆರುಸಲೇಮಿನ ನಾಶನದಿನ ಅವರಾಡಿದ್ದನು: I “ಕೆಡವಿ ನೆಲಕೆ, ಬುಡಸಹಿತ ಕೆಡವಿ” ಎಂದಾ ಅಧಮ ಎದೋಮ್ಯರನು II


ಪ್ರಭುವೇ ಮನೆಮಠವನು ಕಟ್ಟದ ಹೊರತು I ಅದನು ಕಟ್ಟುವವರ ಪ್ರಯಾಸ ವ್ಯರ್ಥ II ಪ್ರಭುವೇ ಪಟ್ಟಣವನು ಕಟ್ಟಿದ ಹೊರತು I ಕಾವಲುಗಾರನು ಅದನು ಕಾಯುವುದು ವ್ಯರ್ಥ II


ವ್ಯಕ್ತಿಯಾಗಿರಲಿ, ರಾಷ್ಟ್ರವಾಗಿರಲಿ, ಯಾರಾಗಿದ್ದರೇನು? ದೇವರು ಸುಮ್ಮನಿದ್ದರೆ ತಪ್ಪುಹೊರಿಸುವವರಾರು? ವಿಮುಖನಾದರೆ ಆತನ ದರ್ಶನ ಪಡೆಯಬಲ್ಲವರಾರು?


ಆತ ಕೆಡವಿದ್ದನ್ನು ಯಾರಿಂದಲೂ ಕಟ್ಟಲಾಗದು ಆತ ಸೆರೆಹಿಡಿದವರನ್ನು ಯಾರಿಂದಲೂ ಬಿಡಿಸಲಾಗದು.


ದೇವರ ಹೃದಯ ಧೀಮಂತ, ಅವರ ಶಕ್ತಿ ಅತುಳ ಆತನನ್ನು ಪ್ರತಿಭಟಿಸಿ ಜಯಗಳಿಸಿದವನಿಲ್ಲ.


ನನ್ನ ಪರವಾಗಿ ಇಲ್ಲದವನು ನನಗೆ ವಿರೋಧಿಯೇ ಸರಿ. ನನ್ನೊಡನೆ ಶೇಖರಿಸದವನು ಚದರಿಸುತ್ತಾನೆ.


ಅವರು ನಿನ್ನ ದವಸಧಾನ್ಯಗಳನ್ನು ತಿಂದುಬಿಡುವರು. ನಿನ್ನ ಗಂಡುಹೆಣ್ಣುಮಕ್ಕಳನ್ನು ಕೊಲ್ಲುವರು. ನಿನ್ನ ದನಕುರಿಗಳನ್ನು ಕಬಳಿಸಿಬಿಡುವರು. ದ್ರಾಕ್ಷಾಲತೆಗಳನ್ನೂ ಅಂಜೂರದ ಗಿಡಗಳನ್ನೂ ಹಾಳುಮಾಡುವರು. ನೀನು ನಂಬಿಕೊಂಡಿರುವ ಕೋಟೆಕೊತ್ತಲಗಳುಳ್ಳ ಪಟ್ಟಣಗಳನ್ನು ಅಸ್ತ್ರಗಳಿಂದ ಹಾಳುಮಾಡುವರು.


ದೇದಾನಿನವರೇ, ಹಿಂದಿರುಗಿ ಓಡಿಹೋಗಿರಿ. ಒಳ ಪ್ರಾಂತ್ಯವನ್ನು ಸೇರಿ ವಾಸಿಸಿರಿ. ಏಕೆಂದರೆ ನಾನು ಎದೋಮನ್ನು ದಂಡಿಸುವೆನು. ಏಸಾವನಿಗೆ ವಿಧಿಸಿದ್ದ ಆಪತ್ತನ್ನು ಅದರ ಮೇಲೆ ಬರಮಾಡುವೆನು.


ಹೀಗಿರಲು, ಸರ್ವೇಶ್ವರನಾದ ನಾನು, ಎದೋಮಿನ ವಿಷಯವಾಗಿ ಮಾಡಿಕೊಂಡಿರುವ ಆಲೋಚನೆಯನ್ನೂ ತೇಮಾನ್ಯರನ್ನು ಕುರಿತು ಸಂಕಲ್ಪಿಸಿರುವ ಉದ್ದೇಶವನ್ನೂ ಆಲಿಸಿರಿ; ಕಾಡುಮೃಗಗಳು ಹಿಂಡಿನ ಮರಿಗಳನ್ನು ಖಂಡಿತವಾಗಿ ಎಳೆದುಕೊಂಡು ಹೋಗುವುವು. ಅವುಗಳ ನಾಶಕ್ಕಾಗಿ ಹುಲ್ಲುಗಾವಲು ನಿಶ್ಚಯವಾಗಿ ಕಳವಳಪಡುವುದು.


ಹೀಗಿರಲು ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ - ನಾನು ಎದೋಮಿನ ಮೇಲೆ ಕೈಯೆತ್ತಿ, ಅದರೊಳಗಿಂದ ಜನರನ್ನೂ ಪಶುಗಳನ್ನೂ ನಿರ್ಮೂಲಪಡಿಸಿ, ತೇಮೊನಿನಿಂದ ದೆದಾನಿನವರೆಗೂ ಅದನ್ನು ಹಾಳುಮಾಡಿ, ಪ್ರಜೆಗಳನ್ನು ಖಡ್ಗಕ್ಕೆ ಸಿಕ್ಕಿಸುವೆನು.


ನಾನು ನಿನ್ನನ್ನು ಬೋಳುಬಂಡೆಮಾಡುವೆನು; ನೀನು ಬಲೆಗಳಿಗೆ ಹಾಸುಬಂಡೆಯಾಗುವೆ; ಇನ್ನು ನೀನು ಪುನಃ ನಿರ್ಮಾಣ ಹೊಂದಲಾರೆ; ಸರ್ವೇಶ್ವರನಾದ ನಾನು ಅಪ್ಪಣೆಕೊಟ್ಟಿದ್ದೇನೆ; ಇದು ಸರ್ವೇಶ್ವರನಾದ ದೇವರ ನುಡಿ.”


ನಿನ್ನ ಪಟ್ಟಣಗಳು ಹಾಳಾಗುವುವು; ನೀ ಕಾಡಾಗುವೆ. ಆಗ ನಾನೇ ಸರ್ವೇಶ್ವರನೆಂದು ನೀನು ತಿಳಿದುಕೊಳ್ಳುವೆ.


ಚಳಿಗಾಲ, ಬೇಸಿಗೆಕಾಲಗಳ ವಿಹಾರಗೃಹಗಳನ್ನು ವಿನಾಶಮಾಡುವೆನು. ದಂತನಿರ್ಮಿತ ಮಂದಿರಗಳು ಧ್ವಂಸವಾಗುವುವು. ಮಹಾಸೌಧಗಳು ನೆಲಸಮವಾಗುವುವು. ಸರ್ವೇಶ್ವರಸ್ವಾಮಿಯ ನುಡಿಯಿದು.”


ಬಡಬಗ್ಗರನ್ನು ತುಳಿಯುತ್ತೀರಿ; ಅವರ ದವಸಧಾನ್ಯಗಳನ್ನು ಕಸಿದುಕೊಳ್ಳುತ್ತೀರಿ. ಆದ್ದರಿಂದ ನೀವು ಕಟ್ಟಿರುವ ಕೆತ್ತನೆಯ ಕಲ್ಲುಮನೆಗಳಲ್ಲಿ ವಾಸಮಾಡಲಾರಿರಿ. ನೀವು ನೆಟ್ಟಿರುವ ಫಲಭರಿತ ದ್ರಾಕ್ಷಾಬಳ್ಳಿಗಳಿಂದ ರಸವನ್ನು ಕುಡಿಯಲಾರಿರಿ.


ಇಗೋ, ಸರ್ವೇಶ್ವರ ಆಜ್ಞಾಪಿಸಲು, ಕುಸಿದುಬೀಳುವುವು ಮಹಾಸೌಧಗಳು, ನುಚ್ಚುನೂರಾಗುವುವು ಚಿಕ್ಕಚಿಕ್ಕ ಮನೆಗಳು.


ಓಬದ್ಯನು ಕಂಡ ದೈವದರ್ಶನ: ಎದೋಮ್ ನಾಡಿನ ವಿಷಯವಾಗಿ ಸ್ವಾಮಿ ಸರ್ವೇಶ್ವರ ಇಂತೆನ್ನುತ್ತಾರೆ: “ಹೊರಡಿರಿ, ಎದೋಮಿನ ಮೇಲೆ ಯುದ್ಧಮಾಡಲು ತೆರಳೋಣ” ಹೀಗೆಂದು ತಮ್ಮ ದೂತನ ಮುಖಾಂತರ ಸರ್ವೇಶ್ವರ ರಾಷ್ಟ್ರಗಳಿಗೆ ಹೇಳಿಕಳುಹಿಸಿದ್ದಾರೆ. ಅವರಿಂದ ಬಂದ ಈ ಸಮಾಚಾರವನ್ನು ನಾವು ಕೇಳಿದ್ದೇವೆ.


“ನಿನ್ನ ತಮ್ಮನಾದ ಯಕೋಬನ ವಿರುದ್ಧ ನಡೆಸಿದ ಹಿಂಸಾಕೃತ್ಯಗಳಿಗಾಗಿ ನೀನು ಅವಮಾನಕ್ಕೊಳಗಾಗುವೆ. ನಿತ್ಯನಾಶನಕ್ಕೆ ಈಡಾಗುವೆ.


ವ್ಯರ್ಥವಾಗಿಪನು ಪ್ರಭು ರಾಷ್ಟ್ರಯೋಜನೆಗಳನು I ನಿರರ್ಥಕವಾಗಿಪನು ಜನರ ದುಷ್ಟಸಂಕಲ್ಪಗಳನು II


ಎದೋಮನ್ನು ಕುರಿತು ಸೇನಾಧೀಶ್ವರ ಸರ್ವೇಶ್ವರ ಹೀಗೆನ್ನುತ್ತಾರೆ: “ತೇಮಾನ್ ನಾಡಿಗಿದ್ದ ಬುದ್ಧಿ ಏನಾಯಿತು? ವಿವೇಕಿಗಳಿಗಿದ್ದ ಆಲೋಚನಾಶಕ್ತಿ ಅಳಿದುಹೋಯಿತೋ? ಅವರ ಜ್ಞಾನ ಮಾಯವಾಯಿತೋ?


ಸರ್ವೇಶ್ವರ ಇಂತೆನ್ನುತ್ತಾರೆ: ಎದೋಮ್ ಪ್ರಾಂತ್ಯದ ಜನರು ಪದೇಪದೇ ಮಾಡಿದ ದ್ರೋಹಗಳಿಗಾಗಿ ಅವರಿಗೆ ಆಗಬೇಕಾದ ದಂಡನೆಯನ್ನು ನಾನು ರದ್ದುಗೊಳಿಸುವುದಿಲ್ಲ. ಅವರು ತಮ್ಮ ಸೋದರ ನಾಡಿನವರಾದ ಇಸ್ರಯೇಲರನ್ನು ಓಡಿಸಿದರು. ಅವರಿಗೆ ಕರುಣೆತೋರದೆ, ಕೊನೆಯವರೆವಿಗೂ ರೋಷವನ್ನೇ ಸಾಧಿಸಿದರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು