Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮಲಾಕಿ 1:13 - ಕನ್ನಡ ಸತ್ಯವೇದವು C.L. Bible (BSI)

13 ಅಯ್ಯೋ, ಎಷ್ಟು ಬೇಸರವಾದುದು ಈ ಸೇವೆ’ ಎಂದುಕೊಂಡು ನೀವು ಅದನ್ನು ತಾತ್ಸಾರಮಾಡುತ್ತೀರಿ. “ಕಳವಿನ ಪಶುವನ್ನು, ರೋಗ ಹಿಡಿದ, ಊನವಾದ ಪ್ರಾಣಿಯನ್ನು ಅರ್ಪಿಸುತ್ತೀರಿ. ಇಂಥ ಕಾಣಿಕೆಯನ್ನು ನಿಮ್ಮ ಕೈಗಳಿಂದ ನಾನು ಸ್ವೀಕರಿಸಲೋ?’ ಎಂದು ಕೇಳುತ್ತಾರೆ ಸೇನಾಧೀಶ್ವರ ಸರ್ವೇಶ್ವರ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಅಯ್ಯೋ, ಈ ಸೇವೆಯು ಎಷ್ಟೋ ಬೇಸರವೆಂದು ನೀವು ಅಂದುಕೊಂಡು ಅದನ್ನು ತಾತ್ಸಾರ ಮಾಡುತ್ತೀರಿ” ಇದು ಸೇನಾಧೀಶ್ವರನಾದ ಯೆಹೋವನ ನುಡಿ. “ಕಳವಾದ ಪಶುವನ್ನೂ, ಊನವಾದದ್ದನ್ನೂ, ರೋಗ ಹಿಡಿದ ಪ್ರಾಣಿಯನ್ನು ತಂದೊಪ್ಪಿಸುತ್ತೀರಿ. ನಾನು ನಿಮ್ಮ ಕೈಯಿಂದ ಸ್ವೀಕರಿಸುವುದಿಲ್ಲ” ಇದು ಯೆಹೋವನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ - ಅಯ್ಯೋ, [ಈ ಸೇವೆಯು] ಎಷ್ಟೋ ಬೇಸರವೆಂದು ನೀವು ಅಂದುಕೊಂಡು ಅದನ್ನು ಛೀಗುಟ್ಟುತ್ತೀರಿ; ಕಳವಿನ ಪಶುವನ್ನೂ ಕುಂಟಾದದ್ದನ್ನೂ ರೋಗಿಯಾದದ್ದನ್ನೂ ತಂದೊಪ್ಪಿಸುತ್ತೀರಿ; ಇಂಥ ನೈವೇದ್ಯವನ್ನು ತಂದೊಪ್ಪಿಸುತ್ತಿರುವಲ್ಲಿ ನಾನು ಅದನ್ನು ನಿಮ್ಮ ಕೈಯಿಂದ ಸ್ವೀಕರಿಸಲೋ; ಇದು ಯೆಹೋವನ ನುಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ನೀವು ಆ ಮೇಜಿನಿಂದ ಆಹಾರವನ್ನು ತೆಗೆದುಕೊಳ್ಳುವದಿಲ್ಲ. ನೀವು ಆಹಾರವನ್ನು ಮೂಸಿನೋಡಿ ಅದನ್ನು ತಿನ್ನಲು ನಿರಾಕರಿಸುತ್ತೀರಿ. ಅದು ಚೆನ್ನಾಗಿಲ್ಲ ಎಂದು ಹೇಳುತ್ತೀರಿ. ಆದರೆ ಅದು ನಿಜವಲ್ಲ. ಆ ಮೇಲೆ, ನೀವು ರೋಗಪೀಡಿತವಾದ ಕುಂಟಾದ ಮತ್ತು ಕಳುವು ಮಾಡಿದ ಪಶುಗಳನ್ನು ನನಗರ್ಪಿಸುತ್ತೀರಿ. ಆದರೆ ಅಂಥಾ ಪಶುಗಳನ್ನು ನಿಮ್ಮಿಂದ ನಾನು ಸ್ವೀಕರಿಸುವದಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 ಇದಲ್ಲದೆ ನೀವು, ‘ಎಂಥಾ ಭಾರ,’ ಎಂದು ಹೇಳಿ, ನೀವು ಅದನ್ನು ತಿರಸ್ಕಾರದಿಂದ ಊದಿಬಿಟ್ಟಿರಿ,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾರೆ. “ಗಾಯವಾದದ್ದನ್ನೂ, ಕುಂಟಾದ ರೋಗವುಳ್ಳ ಪಶುವನ್ನೂ ನನಗೆ ಬಲಿಯಾಗಿ ಅರ್ಪಿಸುತ್ತೀರಿ. ನಾನು ಇದನ್ನು ನಿಮ್ಮ ಕೈಯಿಂದ ಅಂಗೀಕರಿಸಬಹುದೋ?” ಎಂದು ಯೆಹೋವ ದೇವರು ಹೇಳುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮಲಾಕಿ 1:13
28 ತಿಳಿವುಗಳ ಹೋಲಿಕೆ  

ಸರ್ವೇಶ್ವರ ಇಂತೆನ್ನುತ್ತಾರೆ: “ನನ್ನ ಪ್ರಜೆಯೇ, ನಾನು ನಿನಗೇನು ಮಾಡಿದೆ? ಯಾವ ವಿಷಯದಲ್ಲಿ ನಿನಗೆ ಬೇಸರವನ್ನುಂಟುಮಾಡಿದೆ? ಪ್ರಮಾಣವಾಗಿ ಹೇಳು.


“ಉಪವಾಸ ಮಾಡುವಾಗ ಕಪಟಿಗಳಂತೆ ಮುಖ ಸಪ್ಪೆಮಾಡಬೇಡಿ. ಜನರ ಕಣ್ಣಿಗೆ ತಾವು ಉಪವಾಸಿಗಳೆಂದು ತೋರ್ಪಡಿಸಿಕೊಳ್ಳುವುದಕ್ಕಾಗಿ ಅವರು ಮುಖವನ್ನು ಬಾಡಿಸಿಕೊಳ್ಳುತ್ತಾರೆ. ಅವರಿಗೆ ಬರಬೇಕಾದ ಫಲ ಪೂರ್ತಿಯಾಗಿ ದೊರಕಿಯಾಯಿತೆಂದು ನಿಮಗೆ ಖಚಿತವಾಗಿ ಹೇಳುತ್ತೇನೆ.


“ಪ್ರಾರ್ಥನೆ ಮಾಡುವಾಗ ಕಪಟಿಗಳಂತೆ ಮಾಡಬೇಡಿ. ಜನರು ತಮ್ಮನ್ನು ನೋಡಲೆಂದು ಪ್ರಾರ್ಥನಾ ಮಂದಿರಗಳಲ್ಲೂ ಬೀದಿಯ ಚೌಕಗಳಲ್ಲೂ ನಿಂತು ಪ್ರಾರ್ಥನೆ ಮಾಡಲು ಇಚ್ಛಿಸುತ್ತಾರೆ. ಅವರಿಗೆ ಬರಬೇಕಾದ ಪೂರ್ತಿ ಫಲ ಆಗಲೇ ಬಂದಾಯಿತೆಂಬುದು ನಿಮಗೆ ಚೆನ್ನಾಗಿ ತಿಳಿದಿರಲಿ.


ನೀವು ಇನ್ನೊಂದು ಕೆಲಸವನ್ನು ಮಾಡುತ್ತೀರಿ: ‘ಸರ್ವೇಶ್ವರ ನಮ್ಮ ಕಾಣಿಕೆಗಳನ್ನು ಲಕ್ಷಿಸುವುದಿಲ್ಲ. ನಮ್ಮ ಕೈಯಿಂದ ಅವುಗಳನ್ನು ಪ್ರಸನ್ನತೆಯಿಂದ ಸ್ವೀಕರಿಸುವುದಿಲ್ಲ’ ಎಂದುಕೊಂಡು ನರಳುತ್ತಾ ಗೋಳಾಡುತ್ತಾ ಕಣ್ಣೀರಿನಿಂದ ಬಲಿಪೀಠವನ್ನೇ ಮುಳುಗಿಸಿಬಿಡುತ್ತೀರಿ.


“ದವಸಧಾನ್ಯಗಳನ್ನು ಮಾರಬೇಕಲ್ಲ, ಈ ಅಮಾವಾಸ್ಯೆ ತೀರುವುದು ಯಾವಾಗ? ಗೋದಿಯ ವ್ಯಾಪಾರ ಮಾಡಬೇಕಾಗಿದೆ. ಸಬ್ಬತ್ ದಿನ ಕಳೆಯುವುದು ಯಾವಾಗ? ಕೊಳಗವನ್ನು ಕಿರಿದು ಮಾಡೋಣ, ತೊಲವನ್ನು ಹಿರಿದು ಮಾಡೋಣ, ಕಳ್ಳತಕ್ಕಡಿಯನ್ನು ಬಳಸೋಣ;


ಯಾಜಕರು ತಾನಾಗಿ ಸತ್ತುಬಿದ್ದ ಅಥವಾ ಕಾಡುಮೃಗದಿಂದ ಕೊಲ್ಲಲಾದ ಪಕ್ಷಿಯನ್ನಾಗಲಿ, ಪ್ರಾಣಿಯನ್ನಾಗಲಿ ತಿನ್ನಬಾರದು.”


ಅದಕ್ಕೆ ನಾನು, “ಅಯ್ಯೋ, ದೇವರಾದ ಸರ್ವೇಶ್ವರ ನಾನು ಹೊಲಸನ್ನು ಮುಟ್ಟಿದವನಲ್ಲ, ನಾನು ಹುಟ್ಟಿದಂದಿನಿಂದ ಇಂದಿನವರೆಗೂ ಸತ್ತ ಪಶುವಿನ ಮಾಂಸವನ್ನಾಗಲಿ, ಕಾಡುಮೃಗ ಕೊಂದ ಪಶುವಿನ ಮಾಂಸವನ್ನಾಗಲಿ ತಿಂದವನೇ ಅಲ್ಲ; ಯಾವ ಅಸಹ್ಯಪದಾರ್ಥವೂ ನನ್ನ ಬಾಯೊಳಗೆ ಸೇರಲಿಲ್ಲ,” ಎಂದು ಅರಿಕೆಮಾಡಿದೆ.


ಎಲೈ ದುಷ್ಟ ಸಂತಾನವೇ, ಹೊಳೆಯ ನುಣುಪುಗಲ್ಲುಗಳೆಂದರೆ ನಿನಗೆ ಅತಿಪ್ರಿಯ. ಹೌದು, ಅವೇ ನಿನ್ನ ಪಾಲಿನ ಭಾಗ್ಯ. ಅವುಗಳಿಗೆ ಪಾನದ್ರವ್ಯವನ್ನು ನೈವೇದ್ಯವಾಗಿ ಸುರಿದಿರುವೆ, ದವಸ ಧಾನ್ಯಗಳನ್ನು ಕಾಣಿಕೆಯಾಗಿ ಅರ್ಪಿಸಿರುವೆ. ಇದನ್ನೆಲ್ಲ ನೋಡಿ ಕೋಪವನ್ನು ನಾನು ಅಡಗಿಸಿಕೊಳ್ಳಲಾದೀತೆ?


ನನ್ನ ಸನ್ನಿಧಾನಕ್ಕೆ ಬರುವಾಗ ಇದನ್ನೆಲ್ಲ ತರಬೇಕೆಂದು ನಿಮಗೆ ಹೇಳಿದವರಾರು?


ಆದರೆ ನನ್ನ ಪ್ರಜೆ ಇಸ್ರಯೇಲರು ನನ್ನ ಆಜ್ಞಾನುಸಾರ ನನ್ನ ಮಂದಿರಕ್ಕೆ ತರುವ ಬಲಿದಾನಗಳ ಹಾಗು ನೈವೇದ್ಯಗಳ ಘನತೆಯನ್ನು ನೀವು ಭಂಗಪಡಿಸಿದ್ದೀರಿ. ಅವುಗಳ ಶ್ರೇಷ್ಠಭಾಗಗಳಿಂದ ನಿಮ್ಮನ್ನೇ ಕೊಬ್ಬಿಸಿಕೊಳ್ಳುತ್ತಿದ್ದೀರಿ; ಏಕೆ? ನೀನು ನನ್ನನ್ನು ಗೌರವಿಸುವುದಕ್ಕಿಂತ ಹೆಚ್ಚಾಗಿ ನಿನ್ನ ಮಕ್ಕಳನ್ನೇ ಗೌರವಿಸುವುದು ಸರಿಯೇ?


“ಅದು ಕುಂಟಾಗಿ, ಕುರುಡಾಗಿ, ಇಲ್ಲವೆ ಬೇರೆ ವಿಧದಲ್ಲಿ ದೋಷವುಳ್ಳದ್ದಾಗಿದ್ದರೆ ಅದನ್ನು ನಿಮ್ಮ ದೇವರಾದ ಸರ್ವೇಶ್ವರನಿಗೆ ಬಲಿಯಾಗಿ ಸಮರ್ಪಿಸಕೂಡದು;


ತಾನಾಗಿ ಸತ್ತುಬಿದ್ದದ್ದನ್ನು ಅಥವಾ ಕಾಡುಮೃಗ ಕೊಂದದ್ದನ್ನು ಅವನು ತಿಂದು ಅಪವಿತ್ರ ಮಾಡಿಕೊಳ್ಳಬಾರದು. ನಾನು ಸರ್ವೇಶ್ವರ.


ಅಂಥವರು ಆಯಾ ವಸ್ತುಗಳನ್ನು, ಅಂದರೆ ಕದ್ದದ್ದನ್ನು, ಮೋಸದಿಂದ ಪಡೆದದ್ದನ್ನು, ತಮ್ಮ ವಶಕ್ಕೆ ತೆಗೆದುಕೊಂಡದ್ದನ್ನು ಪೂರ್ತಿಯಾಗಿ ಹಿಂದಕ್ಕೆ ತಂದುಕೊಡಬೇಕು. ಅದೂ ಅಲ್ಲದೆ, ಐದನೆಯ ಒಂದು ಪಾಲನ್ನು ಹೆಚ್ಚಾಗಿ ಸೇರಿಸಿಕೊಡಬೇಕು. ಅವರು ಪರಿಹಾರ ಮಾಡುವ ದಿನದಲ್ಲೆ ಅದನ್ನು ಅದರ ನಿಜವಾದ ಒಡೆಯನಿಗೆ ಹಿಂದಕ್ಕೆ ಕೊಡಬೇಕು.


ಅರಸರು ಅರೌನನಿಗೆ, “ಹಾಗಲ್ಲ, ನಾನು ನಿನ್ನಿಂದ ಕ್ರಯಕ್ಕೆ ತೆಗೆದುಕೊಳ್ಳುತ್ತೇನೆ. ನನ್ನ ದೇವರಾದ ಸರ್ವೇಶ್ವರನಿಗೆ ಸುಮ್ಮನೆ ಸಿಕ್ಕಿದ್ದನ್ನು ಬಲಿದಾನವಾಗಿ ಅರ್ಪಿಸಲೊಲ್ಲೆನು,” ಎಂದು ಹೇಳಿ ಆ ಕಣವನ್ನೂ ಹೋರಿಗಳನ್ನೂ ಐವತ್ತು ಬೆಳ್ಳಿ ನಾಣ್ಯಕ್ಕೆ ಕೊಂಡುಕೊಂಡನು.


“ಸರ್ವೇಶ್ವರ ಆದ ನಾನು ನ್ಯಾಯಪ್ರಿಯ. ಸುಲಿಗೆ ಅನ್ಯಾಯ, ನನಗೆ ಅಸಹ್ಯ. ಪ್ರಾಮಾಣಿಕವಾಗಿ ನೀಡುವೆನು ಇವರಿಗೆ ಪ್ರತಿಫಲ ಮಾಡಿಕೊಳ್ಳುವೆನು ಇವರೊಡನೆ ಅಳಿಯದ ಒಪ್ಪಂದ.


“ಇಸ್ರಯೇಲ್, ನಿನ್ನನ್ನು ನಾಶಮಾಡುವೆನು, ನಿನಗೆ ನೆರವಾಗಬಲ್ಲವರು ಯಾರು?


“ನನ್ನ ಬಲಿಪೀಠದ ಮೇಲೆ ಯಾರೂ ಜ್ಯೋತಿಯನ್ನು ವ್ಯರ್ಥವಾಗಿ ಬೆಳಗಿಸದಂತೆ ಮಹಾದೇವಾಲಯದ ಬಾಗಿಲನ್ನು ಮುಚ್ಚಿಬಿಟ್ಟರೆ ಎಷ್ಟೋ ಒಳ್ಳೆಯದು. ನಾನು ನಿಮ್ಮನ್ನು ಮೆಚ್ಚಿಕೊಂಡಿಲ್ಲ. ನಿಮ್ಮ ಕೈಯಿಂದ ಕಾಣಿಕೆಗಳನ್ನು ನಾನು ಸ್ವೀಕರಿಸುವುದಿಲ್ಲ.” ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ.


ಇಂಥ ಕೃತ್ಯವನ್ನು ಎಸಗುವವನು ಎಂಥ ಕುಟುಂಬಕ್ಕಾದರೂ ಸೇರಿರಲಿ - ಅಂಥವನನ್ನು ಸೇನಾಧೀಶ್ವರ ಸರ್ವೇಶ್ವರ ಯಕೋಬನ ಕುಲದಿಂದ ಹೊರಗೆ ಹಾಕುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು