Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 7:15 - ಕನ್ನಡ ಸತ್ಯವೇದವು C.L. Bible (BSI)

15 “ಸುಳ್ಳು ಪ್ರವಾದಿಗಳ ಬಗ್ಗೆ ಎಚ್ಚರಿಕೆಯಿಂದಿರಿ. ಹೊರಗೆ ಕುರಿಯ ವೇಷದಲ್ಲಿ ಬಂದರೂ ಒಳಗೆ ಅವರು ಕಿತ್ತುತಿನ್ನುವ ತೋಳಗಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 “ಕುರಿವೇಷ ಹಾಕಿಕೊಂಡು ನಿಮ್ಮ ಬಳಿಗೆ ಬರುವ ಸುಳ್ಳುಪ್ರವಾದಿಗಳ ವಿಷಯದಲ್ಲಿ ಎಚ್ಚರವಾಗಿರಿ; ನಿಜವಾಗಿಯೂ ಅವರು ಕಿತ್ತುತಿನ್ನುವ ತೋಳಗಳೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಸುಳ್ಳುಪ್ರವಾದಿಗಳ ವಿಷಯದಲ್ಲಿ ಎಚ್ಚರವಾಗಿರ್ರಿ. ಅವರು ಕುರೀವೇಷ ಹಾಕಿಕೊಂಡು ನಿಮ್ಮ ಬಳಿಗೆ ಬರುತ್ತಾರೆ; ಆದರೆ ಒಳಗೆ ನೋಡಿದರೆ ಅವರು ಹಿಡುಕೊಂಡು ಹೋಗುವ ತೋಳಗಳೇ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 “ಸುಳ್ಳುಪ್ರವಾದಿಗಳ ಬಗ್ಗೆ ಎಚ್ಚರವಾಗಿರಿ. ಅವರು ಕುರಿಗಳ ಹಾಗೆ ಕಾಣಿಸಿಕೊಂಡು ನಿಮ್ಮ ಬಳಿಗೆ ಬರುತ್ತಾರೆ. ಆದರೆ ಅವರು ತೋಳಗಳಂತೆ ನಿಜವಾಗಿಯೂ ಅಪಾಯಕಾರಿಗಳಾಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 “ಕುರಿಯ ವೇಷಹಾಕಿಕೊಂಡು ನಿಮ್ಮ ಬಳಿಗೆ ಬರುವ ಸುಳ್ಳು ಪ್ರವಾದಿಗಳ ಬಗ್ಗೆ ಎಚ್ಚರಿಕೆ. ಏಕೆಂದರೆ ಅವರು ಒಳಗೆ ಕ್ರೂರವಾದ ತೋಳಗಳಾಗಿದ್ದಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

15 ಝುಟ್ಯಾ ಪ್ರವಾದ್ಯಾಂಚ್ಯಾ ವಿಶಯಾತ್ ಉಶಾರ್ಕಿನ್ ರ್‍ಹಾವಾ; ತೆನಿ ಯೆತಾನಾ ಬಕ್ರ್ಯಾ ಸರ್ಕೆ ಸುದ್ದುಳೆ ದಿಸ್ತ್ಯಾತ್, ಖರೆ ಭುತ್ತುರ್ನಾ ತೆನಿ ಝುಲ್‍ ಕುತ್ರ್ಯಾ ಸರ್ಕೆ ರ್‍ಹಾತ್ಯಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 7:15
54 ತಿಳಿವುಗಳ ಹೋಲಿಕೆ  

ಪ್ರಿಯರೇ, “ನಾವು ಪವಿತ್ರಾತ್ಮ ಪ್ರೇರಿತರು” ಎಂದು ಹೇಳುವ ಎಲ್ಲರನ್ನೂ ನಂಬಬಾರದು. ಆ ಪ್ರೇರಣೆ ದೇವರಿಂದ ಬಂದಿದೆಯೇ ಎಂದು ಪರೀಕ್ಷಿಸಿ ನೋಡಬೇಕು. ಏಕೆಂದರೆ, ಎಷ್ಟೋ ಮಂದಿ ಕಪಟ ಪ್ರವಾದಿಗಳು ಎಲ್ಲೆಡೆಯಲ್ಲೂ ಹರಡಿದ್ದಾರೆ.


ಅನೇಕ ಸುಳ್ಳುಪ್ರವಾದಿಗಳು ತಲೆಯೆತ್ತಿಕೊಂಡು ಎಷ್ಟೋಮಂದಿಯನ್ನು ವಂಚಿಸುವರು.


ಪ್ರಪಂಚದ ಪ್ರಬಲ ಶಕ್ತಿಗಳಿಂದಲೂ ಮಾನವ ವಿವೇಚನೆಯ ಶುಷ್ಕತರ್ಕ ಸಿದ್ಧಾಂತಗಳಿಂದಲೂ ಯಾರೂ ನಿಮ್ಮನ್ನು ಮೋಸಗೊಳಿಸಿ ವಶಪಡಿಸಿಕೊಳ್ಳದಂತೆ ಎಚ್ಚರಿಕೆಯಿಂದಿರಿ. ಇವುಗಳು ಪ್ರಾಪಂಚಿಕ ಪಾರಂಪರ್ಯಕ್ಕೆ ಮತ್ತು ವಿಶ್ವದ ಮೂಲಭೂತ ಶಕ್ತಿಗಳಿಗೆ ಸಂಬಂಧಿಸಿದವುಗಳೇ ಹೊರತು ಯೇಸುಕ್ರಿಸ್ತರಿಗಲ್ಲ.


ಮೃಗವನ್ನು ಸೆರೆಹಿಡಿಯಲಾಯಿತು. ಅದರ ಜೊತೆಯಲ್ಲಿ ಕಪಟ ಪ್ರವಾದಿಯೂ ಸೆರೆಸಿಕ್ಕಿಬಿದ್ದನು. ಮೃಗದ ಮುಂದೆ ಪವಾಡ ಕಾರ್ಯಗಳನ್ನೆಸಗಿ ಅದರ ಮುದ್ರೆ ಒತ್ತಿಸಿಕೊಂಡವರನ್ನೂ ಅದರ ವಿಗ್ರಹಕ್ಕೆ ಪೂಜೆ ಮಾಡಿದವರನ್ನು ಮರುಳುಗೊಳಿಸಿದವನು ಇವನೇ. ಇವರಿಬ್ಬರನ್ನೂ ಜೀವಸಹಿತ ಹಿಡಿದು ಗಂಧಕದಿಂದ ಉರಿಯುವ ಅಗ್ನಿಸರೋವರಕ್ಕೆ ಎಸೆಯಲಾಯಿತು.


ಏಕೆಂದರೆ, ಕೆಲವರು ಕಳ್ಳತನದಿಂದ ನಿಮ್ಮ ಸಭೆಯೊಳಗೆ ಸೇರಿಕೊಂಡಿದ್ದಾರೆ. ಇವರು ಭಕ್ತಿಹೀನರು; ನಮ್ಮ ದೇವರ ಅನುಗ್ರಹದ ನೆವದಲ್ಲಿ ತಮ್ಮ ಕಾಮಾಭಿಲಾಷೆಗಳನ್ನು ಸಮರ್ಥಿಸಿಕೊಳ್ಳುತ್ತಿರುವವರು; ನಮ್ಮ ಏಕೈಕ ಒಡೆಯರೂ ಪ್ರಭುವೂ ಆದ ಯೇಸುಕ್ರಿಸ್ತರನ್ನು ನಿರಾಕರಿಸುವವರು. ಇಂಥವರಿಗೆ ದಂಡನೆಯಾಗಬೇಕೆಂದು ಬಹಳ ಹಿಂದೆಯೇ ಪವಿತ್ರಗ್ರಂಥದಲ್ಲಿ ಲಿಖಿತವಾಗಿದೆ.


ನಿಮ್ಮ ಮುಖಂಡರು ಲಂಚಕ್ಕಾಗಿ ನ್ಯಾಯತೀರಿಸುತ್ತಾರೆ. ನಿಮ್ಮ ಯಾಜಕರು ಸಂಬಳಕ್ಕಾಗಿ ಉಪದೇಶಮಾಡುತ್ತಾರೆ. ಆದರೂ ಸರ್ವೆಶ್ವರಸ್ವಾಮಿಯ ಮೇಲೆ ಭಾರಹಾಕಿದವರಂತೆ, “ಸ್ವಾಮಿ ನಮ್ಮೊಡನೆ ಇಲ್ಲವೆ? ನಮಗೆ ಕೇಡು ಸಂಭವಿಸುವುದಾದರೂ ಹೇಗೆ?” ಎಂದುಕೊಳ್ಳುತ್ತಾರೆ.


ಆದಕಾರಣ ಪ್ರಿಯರೇ, ಈ ವಿಷಯಗಳನ್ನು ಮುಂಚಿತವಾಗಿಯೇ ತಿಳಿದುಕೊಂಡಿರುವ ನೀವು ಎಚ್ಚರಿಕೆಯಿಂದಿರಿ. ದುರ್ಜನರ ದುರ್ಬೋಧನೆಗೆ ಮರುಳಾಗದಿರಿ. ನಿಮ್ಮ ಸ್ಥಿರವಿಶ್ವಾಸವನ್ನು ಬಿಟ್ಟು ಭ್ರಷ್ಟರಾಗದಿರಿ.


ಜನರೆಲ್ಲರಿಂದ ಹೊಗಳಿಸಿಕೊಳ್ಳುವಾಗ ನಿಮಗೆ ಧಿಕ್ಕಾರ! ಕಪಟ ಪ್ರವಾದಿಗಳೂ ಈ ಜನರ ಪೂರ್ವಜರಿಂದ ಹೀಗೆಯೇ ಹೊಗಳಿಸಿಕೊಂಡಿದ್ದರು.


ದುಷ್ಕರ್ಮಿಗಳು ಮತ್ತು ದುರ್ಬೋಧಕರು ಇತರರನ್ನು ವಂಚಿಸುತ್ತಾ ತಮ್ಮನ್ನೂ ವಂಚಿಸಿಕೊಳ್ಳುತ್ತಾ ದಿನೇದಿನೇ ಅಧೋಗತಿಗಿಳಿಯುತ್ತಾರೆ.


ಜನರು ಸದ್ಬೋಧನೆಯನ್ನು ಸಹಿಸದೆ, ಸ್ವೇಚ್ಛಾಚಾರಿಗಳಾಗುವ ಕಾಲವು ಬರುತ್ತದೆ. ತಮ್ಮ ದುರಿಚ್ಛೆಗಳಿಗೆ ಅನುಗುಣವಾಗಿ ಬೋಧಿಸುವವರಿಗೆ ಕಾತರದಿಂದ ಕಿವಿಗೊಡಲು ಕೂಡಿಕೊಳ್ಳುತ್ತಾರೆ.


ನಿಮಗೆ ಸುನ್ನತಿಯಾಗಬೇಕೆಂದು ಬೋಧಿಸುವವರ ವಿಷಯದಲ್ಲಿ ಜಾಗರೂಕರಾಗಿರಿ. ಅವರು ದುಷ್ಕರ್ಮಿಗಳು, ಶ್ವಾನಗಳಿಗೆ ಸಮಾನರು.


ಇನ್ನು ಮೇಲೆ ನಾವು ಸಣ್ಣ ಮಕ್ಕಳಂತೆ ದುರ್ಜನರ ವಂಚನೆಗೂ ದುರ್ಬೋಧಕರ ಕುಯುಕ್ತಿಗೂ ಒಳಪಟ್ಟು ಅತ್ತಿತ್ತ ಅಲೆದಾಡುವುದಿಲ್ಲ. ಗಾಳಿ ಬಂದಂತೆ ತೂರಾಡುವುದಿಲ್ಲ.


ಗೂಢಾಚಾರರಾಗಿ ಬಂದಿದ್ದ ಕೆಲವು ಸಹೋದರರು ಅಲ್ಲಿದ್ದುದರಿಂದ ಒತ್ತಾಯ ನಡೆದೀತೆಂಬ ಶಂಕೆ ಇತ್ತು. ಇವರು ಕ್ರಿಸ್ತಯೇಸುವಿನಲ್ಲಿ ನಮಗಿರುವ ಮುಕ್ತ ಸ್ವಾತಂತ್ರ್ಯದ ಬಗ್ಗೆ ಗುಟ್ಟಾಗಿ ವಿಚಾರಿಸಲು ಬಂದಿದ್ದರು. ನಮ್ಮನ್ನು ಪುನಃ ದಾಸತ್ವದಲ್ಲಿ ಸಿಕ್ಕಿಸಬೇಕೆಂಬುದೇ ಅವರ ಉದ್ದೇಶವಾಗಿತ್ತು.


ಅನಂತರ ಜನರನ್ನುದ್ದೇಶಿಸಿ, “ಎಚ್ಚರಿಕೆ, ಯಾವ ವಿಧವಾದ ಲೋಭಕ್ಕೂ ಒಳಗಾಗದಂತೆ ಜಾಗರೂಕರಾಗಿರಿ. ಏಕೆಂದರೆ, ಒಬ್ಬನಿಗೆ ಎಷ್ಟೇ ಸಿರಿಸಂಪತ್ತಿರಲಿ, ಅವನ ನಿಜವಾದ ಜೀವನ ಅದನ್ನು ಅವಲಂಬಿಸಿಲ್ಲ,” ಎಂದು ಹೇಳಿದರು.


ಅಲ್ಲಿನ ಪ್ರಮುಖರು ಸುಲಿಗೆಗಾಗಿ ರಕ್ತ ಸುರಿಸಿ, ನರಪ್ರಾಣಿಗಳನ್ನು ಕಬಳಿಸುವ, ಬೇಟೆಯನ್ನು ಸೀಳುವ ತೋಳಗಳಂತಿದ್ದಾರೆ.


ಇವುಗಳಾದ ಮೇಲೆ ಕಪ್ಪೆಗಳಂತಿದ್ದ ಮೂರು ದುಷ್ಟಾತ್ಮಗಳನ್ನು ನಾನು ಕಂಡೆ. ಅವು ಘಟಸರ್ಪದ ಬಾಯೊಳಗಿಂದಲೂ ಮೃಗದ ಬಾಯೊಳಗಿಂದಲೂ ಕಪಟ ಪ್ರವಾದಿಯ ಬಾಯೊಳಗಿಂದಲೂ ಹೊರಟುಬಂದವು.


ಹುರುಳಿಲ್ಲದ ಮಾತುಗಳನ್ನು ಆಡುವವರಿಗೆ ಮರುಳಾಗದಿರಿ. ಇಂಥ ಕೃತ್ಯಗಳನ್ನು ಮಾಡುವ ದುಷ್ಕರ್ಮಿಗಳ ಮೇಲೆ ದೇವರ ಕೋಪ ಎರಗುತ್ತದೆ.


ಆದುದರಿಂದ ಪ್ರವಾದಿಗಳ ಈ ಮಾತುಗಳು ನಿಮ್ಮಲ್ಲಿ ನಿಜವಾಗದಂತೆ ಎಚ್ಚರಿಕೆಯಾಗಿರಿ:


ಕುರಿಗಾಹಿಯಾಗಲಿ, ಕುರಿಗಳ ಒಡೆಯನಾಗಲಿ ಅಲ್ಲದ ಕೂಲಿಯಾಳು, ತೋಳ ಬರುವುದನ್ನು ಕಂಡದ್ದೇ, ಕುರಿಗಳನ್ನು ಬಿಟ್ಟು ಓಡಿಹೋಗುತ್ತಾನೆ. ತೋಳವು ಬಂದು ಕುರಿಗಳ ಮೇಲೆ ಎರಗಿ, ಮಂದೆಯನ್ನು ಚದರಿಸುತ್ತದೆ.


ಹೀಗಿದ್ದೂ ನಾನು ಈಗ ರೊಟ್ಟಿಯನ್ನು ಕುರಿತು ಎಚ್ಚರಿಸಲಿಲ್ಲವೆಂದು ನೀವು ತಿಳಿಯದೆಹೋದಿರಲ್ಲಾ,” ಎಂದರು.


ಯೇಸುಸ್ವಾಮಿ ಅವರಿಗೆ, “ಎಚ್ಚರಿಕೆ, ಫರಿಸಾಯರ ಹಾಗೂ ಸದ್ದುಕಾಯರ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ!” ಎಂದರು.


ಜನರ ಬಗ್ಗೆ ಜಾಗರೂಕರಾಗಿರಿ! ಅವರು ನಿಮ್ಮನ್ನು ನ್ಯಾಯಸ್ಥಾನಗಳಿಗೆ ಹಿಡಿದೊಪ್ಪಿಸುವರು. ಪ್ರಾರ್ಥನಾಮಂದಿರಗಳಲ್ಲಿ ಕೊರಡೆಗಳಿಂದ ಹೊಡೆಯುವರು.


ಆ ದಿನದಲ್ಲಿ ಯಾವ ಪ್ರವಾದಿಯೂ ತನಗಾಗಿರಬಹುದಾದ ದರ್ಶನಗಳನ್ನು ಪ್ರಕಟಿಸಲು ಹೆಮ್ಮೆಪಡುವುದಿಲ್ಲ. ಪ್ರವಾದಿಯಂತೆ ನಟಿಸುವುದಿಲ್ಲ. ಪ್ರವಾದಿಯ ವೇಷವನ್ನು ಧರಿಸುವುದಿಲ್ಲ.


ಆ ನಾಡಿನೊಳಗೆ ಪ್ರವಾದಿಗಳು ಒಳಸಂಚು ಮಾಡಿಕೊಂಡಿದ್ದಾರೆ, ಬೇಟೆಯನ್ನು ಸೀಳುತ್ತಾ ಗರ್ಜಿಸುವ ಸಿಂಹದಂತಿದ್ದಾರೆ. ನರಪ್ರಾಣಿಗಳನ್ನು ನುಂಗಿದ್ದಾರೆ, ಆಸ್ತಿಯನ್ನೂ ಅಮೂಲ್ಯ ವಸ್ತುಗಳನ್ನೂ ದೋಚಿಕೊಂಡಿದ್ದಾರೆ; ದೇಶದಲ್ಲಿ ಬಹುಮಂದಿಯನ್ನು ವಿಧವೆಯರನ್ನಾಗಿ ಮಾಡಿದ್ದಾರೆ.


“ನಾನು ಎದೆಗುಂದಿಸದ ಶಿಷ್ಯನ ಮನಸ್ಸನ್ನು ನೀವು ಸುಳ್ಳಾಡಿ ಕುಂದಿಸಿದ್ದೀರಿ; ದುಷ್ಟನು ತನ್ನ ದುರ್ಮಾರ್ಗವನ್ನು ಬಿಟ್ಟು ತನ್ನ ಪ್ರಾಣವನ್ನು ಉಳಿಸಿಕೊಳ್ಳದಂತೆ ನೀವು ಅವನನ್ನು ಪ್ರೋತ್ಸಾಹಿಸಿದ್ದೀರಿ.


‘ಇಸ್ರಯೇಲಿನ ಪ್ರವಾದಿಗಳೇ, ಅಶಾಂತಿಯಿದ್ದರೂ ಶಾಂತಿಯ ದರ್ಶನಗಳನ್ನು ನೀವು ಕಂಡು ಜೆರುಸಲೇಮಿನ ಬಗ್ಗೆ ಪ್ರವಾದಿಸಿದ್ದೀರಲ್ಲವೆ? ಗೋಡೆ ಇಲ್ಲವಾಯಿತು, ಅದಕ್ಕೆ ಸುಣ್ಣ ಬಳಿದವರೂ ಇಲ್ಲವಾದರು; ಇದು ಸರ್ವೇಶ್ವರನಾದ ದೇವರ ನುಡಿ.’


ಈ ಕಾರಣ, ಇಗೋ, ನಾನು ಆ ನೆಹೆಲಾಮ್ಯನಾದ ಶೆಮಾಯನನ್ನು ಮತ್ತು ಅವನ ಸಂತತಿಯವರನ್ನು ದಂಡಿಸುವೆನು. ಈ ಜನರ ಮಧ್ಯೆ ಅವನಿಗೆ ಯಾವ ಸಂತಾನವೂ ಇರದು. ಜನರಿಗೆ ‘ನಾನು ಮಾಡಬೇಕೆಂದಿರುವ ಒಳಿತನ್ನು ಅವನು ನೋಡದೆಹೋಗುವನು. ಏಕೆಂದರೆ ಅವನು ನನಗೆ ವಿರುದ್ಧ ಪ್ರಚೋದನೆಯ ಮಾತನ್ನು ಆಡಿದ್ದಾನೆ. ಇದು ಸರ್ವೇಶ್ವರನಾದ ನನ್ನ ನುಡಿ’.”


“ಇಸ್ರಯೇಲರ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರ ತಮ್ಮ ಹೆಸರೆತ್ತಿ ಸುಳ್ಳನ್ನು ಸಾರುವ ಕೊಲಾಯನ ಮಗ ಅಹಾಬ ಮತ್ತು ಮಾಸೇಯನ ಮಗ ಚಿದ್ಕೀಯ ಇವರ ವಿಷಯವಾಗಿ ಹೀಗೆನ್ನುತ್ತಾರೆ: ‘ಇಗೋ ನಾನು ಇವರನ್ನು ಬಾಬಿಲೋನಿಯದ ಅರಸ ನೆಬೂಕದ್ನೆಚ್ಚರನ ಕೈಗೆ ಬಿಡುವೆನು. ಅವನು ನಿಮ್ಮ ಕಣ್ಣೆದುರಿಗೆ ಇವರನ್ನು ಕೊಲ್ಲಿಸುವನು.


ದೇವಜನರ ರಕ್ತವನ್ನು ಮತ್ತು ಕ್ರಿಸ್ತೇಸುವಿಗೋಸ್ಕರ ಹುತಾತ್ಮರಾದವರ ರಕ್ತವನ್ನು ಹೀರಿ ಮತ್ತಳಾಗಿದ್ದಳು ಅವಳು. ಇದನ್ನು ಕಂಡು ನನಗೆ ದಿಗ್ಭ್ರಮೆಯಾಯಿತು.


ಅವರು ಆ ದ್ವೀಪದಲ್ಲೆಲ್ಲಾ ಪ್ರಯಾಣಮಾಡುತ್ತಾ ಪಾಫೊಸ್ ಎಂಬ ಊರಿಗೆ ಹೋದರು. ಅಲ್ಲಿ ‘ಬಾರ್‍ಯೇಸು’ ಎಂಬ ಮಂತ್ರವಾದಿಯನ್ನು ಕಂಡರು.


ಆಗ ಆ ಮುದುಕನು, “ನಾನೂ ನಿನ್ನಂತೆ ಪ್ರವಾದಿಯಾಗಿದ್ದೇನೆ; ಒಬ್ಬ ದೇವದೂತನು ನನಗೆ ಕಾಣಿಸಿಕೊಂಡು ನಿನ್ನನ್ನು ಕರೆದುಕೊಂಡು ಬರಬೇಕೆಂದು ಸರ್ವೆಶ್ವರನ ಹೆಸರಿನಲ್ಲಿ ಆಜ್ಞಾಪಿಸಿದ್ದಾನೆ,” ಎಂದು ಹೇಳಿದನು. ಆದರೆ ಈ ಮಾತು ಸುಳ್ಳಾಗಿತ್ತು.


ಹೀಗಾಗುವಾಗ ಅವರಿಗೆ ಅಲ್ಪಸ್ವಲ್ಪ ಸಹಾಯ ದೊರೆಯುವುದು. ಆ ಬಳಿಕ ಬಹುಮಂದಿ ನಯನವಿರಾದ ಮಾತುಗಳನ್ನಾಡುತ್ತಾ ಅವರನ್ನು ಸೇರಿಕೊಳ್ಳುವರು.


ಅಮರ ಜೀವಕ್ಕೆ ಕೊಂಡೊಯ್ಯುವ ಮಾರ್ಗ ದುರ್ಭರ, ಅದರ ಬಾಗಿಲು ಕಿರಿದು; ಅದನ್ನು ಗುರುತಿಸುವವರೋ ಕೆಲವರು.”


ಜನರನ್ನು ಮರುಳುಗೊಳಿಸುತ್ತಿದ್ದ ಪಿಶಾಚಿಯನ್ನು ಗಂಧಕದ ಅಗ್ನಿ ಸರೋವರಕ್ಕೆ ಎಸೆಯಲಾಯಿತು. ಆ ಮೃಗವನ್ನೂ ಕಪಟ ಪ್ರವಾದಿಯನ್ನೂ ಮೊದಲೇ ಅದಕ್ಕೆ ಎಸೆಯಲಾಗಿತ್ತು. ಇವರೆಲ್ಲರೂ ಯುಗಯುಗಾಂತರಗಳವರೆಗೆ ಹಗಲಿರುಳೆನ್ನದೆ ಅಲ್ಲಿಯೇ ಬೇನೆಬೇಗುದಿಗಳಿಂದ ನರಳುವರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು