Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 5:17 - ಕನ್ನಡ ಸತ್ಯವೇದವು C.L. Bible (BSI)

17 “ಮೋಶೆಯ ಧರ್ಮಶಾಸ್ತ್ರವನ್ನಾಗಲಿ, ಪ್ರವಾದಿಗಳ ಪ್ರವಚನಗಳನ್ನಾಗಲಿ ರದ್ದುಮಾಡಲು ನಾನು ಬಂದೆನೆಂದು ತಿಳಿಯಬೇಡಿ. ರದ್ದುಮಾಡಲು ಅಲ್ಲ, ಅವುಗಳನ್ನು ಸಿದ್ಧಿಗೆ ತರಲು ಬಂದಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 “ಮೋಶೆಯ ಧರ್ಮನಿಯಮವನ್ನಾಗಲಿ ಪ್ರವಾದಿಗಳ ಪ್ರವಾದನೆಗಳನ್ನಾಗಲಿ ನಿರರ್ಥಕಪಡಿಸುವುದಕ್ಕೆ ನಾನು ಬಂದೆನೆಂದು ನೆನಸಬೇಡಿರಿ; ನಿರರ್ಥಕಪಡಿಸಲು ಬಂದಿಲ್ಲ; ಬದಲಾಗಿ ನೆರವೇರಿಸುವುದಕ್ಕೆ ಬಂದಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಮೋಶೆಯ ಧರ್ಮಶಾಸ್ತ್ರವನ್ನಾಗಲಿ ಪ್ರವಾದಿಗಳ ವಚನಗಳನ್ನಾಗಲಿ ತೆಗೆದುಹಾಕುವದಕ್ಕೆ ನಾನು ಬಂದೆನೆಂದು ನೆನಸಬೇಡಿರಿ. ತೆಗೆದುಹಾಕುವದಕ್ಕೆ ಬಂದಿಲ್ಲ; ನೆರವೇರಿಸುವದಕ್ಕೆ ಬಂದಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 “ನಾನು ಮೋಶೆಯ ಧರ್ಮಶಾಸ್ತ್ರವನ್ನಾಗಲಿ ಪ್ರವಾದಿಗಳ ಉಪದೇಶಗಳನ್ನಾಗಲಿ ತೆಗೆದುಹಾಕುವುದಕ್ಕೆ ಬಂದೆನೆಂದು ನೆನೆಸಬೇಡಿರಿ. ನಾನು ಅವುಗಳನ್ನು ನಾಶಮಾಡುವುದಕ್ಕಾಗಿ ಬರದೆ ಅವುಗಳನ್ನು ನೆರವೇರಿಸುವುದಕ್ಕಾಗಿ ಬಂದೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 “ಮೋಶೆಯ ನಿಯಮವನ್ನಾಗಲಿ, ಪ್ರವಾದನೆಗಳನ್ನಾಗಲಿ ರದ್ದು ಮಾಡುವುದಕ್ಕೆ ನಾನು ಬಂದೆನೆಂದು ಭಾವಿಸಬೇಡಿರಿ; ನಾನು ಅವುಗಳನ್ನು ರದ್ದುಗೊಳಿಸಲು ಬರಲಿಲ್ಲ, ನೆರವೇರಿಸಲು ಬಂದಿದ್ದೇನೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

17 ಮಿಯಾ ಮೊಯ್ಜೆನ್ ದಿಲ್ಲೆ ಖಾಯ್ದೆ ಹೊಂವ್ದಿ, ಪ್ರವಾದ್ಯಾನಿ ಶಿಕ್ವಲ್ಲೆ ಹೊಂವ್ದಿ ಕಾಡುನ್ ಟಾಕುಕ್ ಯೆಲಾ ಮನುನ್ ಯವ್ಜುನಕಾಶಿ. ಮಿಯಾ ತೆ ಕಾಡುನ್ ಟಾಕುಕ್ ಯೆವ್ಕ್ ನಾ ತೆನಿ ಶಿಕ್ವಲ್ಲೆ ಸಗ್ಳೆ ಪುರಾ ಕರುಕ್ ಮನುನ್ ಯೆಲಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 5:17
16 ತಿಳಿವುಗಳ ಹೋಲಿಕೆ  

ದೇವರಲ್ಲಿ ವಿಶ್ವಾಸವಿಡುವ ಪ್ರತಿಯೊಬ್ಬನಿಗೂ ಆ ಸತ್ಸಂಬಂಧ ದೊರಕುವಂತೆ ಕ್ರಿಸ್ತಯೇಸು ಧರ್ಮಶಾಸ್ತ್ರವನ್ನು ಇತಿಗೊಳಿಸಿದರು.


“ಭೂಮ್ಯಾಕಾಶಗಳು ಅಳಿದುಹೋಗಬಹುದು. ಆದರೆ ಧರ್ಮಶಾಸ್ತ್ರದಲ್ಲಿನ ಒಂದು ಚುಕ್ಕೆಯೂ ನಿರರ್ಥಕವಾಗದು.


ಶರೀರ ಸ್ವಭಾವಕ್ಕೆ ಅನುಸಾರವಾಗಿ ನಡೆಯದೆ ಪವಿತ್ರಾತ್ಮ ಅವರ ಚಿತ್ತಕ್ಕನುಸಾರವಾಗಿ ನಡೆಯುವ ನಮ್ಮಲ್ಲಿ ಧರ್ಮಶಾಸ್ತ್ರದ ನೀತಿನಿಯಮಗಳು ನೆರವೇರುವಂತೆ ದೇವರು ಹೀಗೆ ಮಾಡಿದರು.


‘ವಿಶ್ವಾಸದ ಮೂಲಕ’ ಎಂದು ಒತ್ತಿ ಹೇಳುವಾಗ ಧರ್ಮಶಾಸ್ತ್ರವನ್ನು ನಾವು ಅಲ್ಲಗಳೆಯುತ್ತೇವೆಂದು ಅರ್ಥವೆ? ಎಂದಿಗೂ ಇಲ್ಲ. ಬದಲಿಗೆ ಧರ್ಮಶಾಸ್ತ್ರದ ನಿಲುವನ್ನು ಸಮರ್ಥಿಸುತ್ತೇವೆ.


ಸರ್ವೇಶ್ವರ ಮುಕ್ತಿದಾತನಾದುದರಿಂದ ಧರ್ಮಶಾಸ್ತ್ರಕ್ಕೆ ಮಹಿಮೆಯಿತ್ತು ಅದನ್ನು ಮಹತ್ತಾಗಿಸಿದ.


“ಜನರು ನಿಮಗೆ ಏನೇನು ಮಾಡಬೇಕೆಂದು ನೀವು ಅಪೇಕ್ಷಿಸುತ್ತೀರೋ, ಅದನ್ನೇ ನೀವು ಅವರಿಗೆ ಮಾಡಿ, ಧರ್ಮಶಾಸ್ತ್ರದ ಹಾಗೂ ಪ್ರವಾದನೆಗಳ ಸಾರ ಇದೇ.”


ಆದರೆ ಯೇಸು, “ಸದ್ಯಕ್ಕೆ ತಡೆಯದಿರು; ನಾವು ದೈವನಿಯಮಕ್ಕೆ ತಲೆಬಾಗುವುದು ಒಳಿತು,” ಎಂದರು. ಯೊವಾನ್ನನು ಅದಕ್ಕೆ ಸಮ್ಮತಿಸಿದನು.


“ಧರ್ಮಶಾಸ್ತ್ರಕ್ಕೆ ವ್ಯತಿರಿಕ್ತವಾದ ರೀತಿಯಲ್ಲಿ ದೇವರನ್ನು ಆರಾಧಿಸುವಂತೆ ಈ ಮನುಷ್ಯ ಜನರನ್ನು ಪ್ರೇರೇಪಿಸುತ್ತಾ ಇದ್ದಾನೆ,” ಎಂದು ಅಲ್ಲಿ ದೂರಿತ್ತರು.


ಕೆಲವು ಸುಳ್ಳುಸಾಕ್ಷಿಗಳನ್ನು ನೇಮಿಸಿಕೊಂಡು ಅವರಿಂದ, ‘ಇವನು ಯಾವಾಗಲೂ ನಮ್ಮ ಪವಿತ್ರದೇವಾಲಯದ ವಿರುದ್ಧ ಹಾಗೂ ಮೋಶೆಯ ಧರ್ಮಶಾಸ್ತ್ರದ ವಿರುದ್ಧ ಮಾತನಾಡುತ್ತಾನೆ.


ಇಂಥವರನ್ನು ಕಲ್ಲೆಸೆದು ಕೊಲ್ಲಬೇಕೆಂದು ಮೋಶೆಯೇ ಧರ್ಮಶಾಸ್ತ್ರದಲ್ಲಿ ವಿಧಿಸಿದ್ದಾನೆ. ಈ ಕುರಿತು ನಿಮ್ಮ ಅಭಿಪ್ರಾಯವೇನು?” ಎಂದು ಪ್ರಶ್ನಿಸಿದರು.


“ಇಸ್ರಯೇಲಿನ ಮಹಾಜನರೇ, ಬೇಗ ಬನ್ನಿ; ನಮ್ಮ ಜನಾಂಗಕ್ಕೂ ನಮ್ಮ ಧರ್ಮಶಾಸ್ತ್ರಕ್ಕೂ ಈ ಮಹಾದೇವಾಲಯಕ್ಕೂ ವಿರುದ್ಧವಾಗಿ ಬೋಧಿಸುವ ವ್ಯಕ್ತಿ ಇವನೇ; ಎಲ್ಲೆಡೆಯಲ್ಲೂ ಎಲ್ಲರಿಗೂ ಇವನು ನಮಗೆ ವಿರುದ್ಧವಾಗಿ ಬೋಧಿಸುತ್ತಾನೆ. ಅಷ್ಟು ಮಾತ್ರವಲ್ಲ. ಈ ಪವಿತ್ರಾಲಯದೊಳಕ್ಕೆ ಅನ್ಯಧರ್ಮೀಯರನ್ನು ಕರೆತಂದು ಇದನ್ನು ಭ್ರಷ್ಟಗೊಳಿಸಿದ್ದಾನೆ,” ಎಂದು ಕೂಗಿಕೊಂಡರು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು