Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 23:19 - ಕನ್ನಡ ಸತ್ಯವೇದವು C.L. Bible (BSI)

19 ದೃಷ್ಟಿಹೀನರೇ! ಯಾವುದು ಶ್ರೇಷ್ಠ? ಕಾಣಿಕೆಯೋ, ಕಾಣಿಕೆಯನ್ನು ಪಾವನಗೊಳಿಸುವ ಬಲಿಪೀಠವೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

19 ಕುರುಡರೇ, ಮೂರ್ಖರೇ, ಯಾವುದು ಹೆಚ್ಚಿನದು? ಕಾಣಿಕೆಯೋ, ಆ ಕಾಣಿಕೆಯನ್ನು ಪ್ರತಿಷ್ಠೆ ಮಾಡುವ ಯಜ್ಞವೇದಿಯೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

19 ಕುರುಡರೇ, ಯಾವದು ಹೆಚ್ಚಿನದು? ಕಾಣಿಕೆಯೋ, ಆ ಕಾಣಿಕೆಯನ್ನು ಪಾವನ ಮಾಡುವ ಯಜ್ಞವೇದಿಯೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

19 ನೀವು ಕುರುಡರು. ನಿಮಗೇನೂ ಅರ್ಥವಾಗುವುದಿಲ್ಲ. ಯಾವುದು ಹೆಚ್ಚಿನದು? ಕಾಣಿಕೆಯೋ ಅಥವಾ ಯಜ್ಞವೇದಿಕೆಯೋ? ಕಾಣಿಕೆ ಪರಿಶುದ್ಧಗೊಂಡದ್ದು ಯಜ್ಞವೇದಿಕೆಯಿಂದಲೇ. ಆದ್ದರಿಂದ ಯಜ್ಞವೇದಿಕೆಯೇ ಹೆಚ್ಚಿನದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

19 ಕುರುಡರೇ, ಯಾವುದು ದೊಡ್ಡದು? ಕಾಣಿಕೆಯೋ ಕಾಣಿಕೆಯನ್ನು ಪಾವನ ಮಾಡುವ ಬಲಿಪೀಠವೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

19 ಕವ್ಡೆ ಕುಡ್ಡೆ ಹಾಸಿ ತುಮಿ! ಖಲೆ ಲೈ ಮೊಟೆ ದೆನ್ಗಿ ಪವಿತ್ರ್ ಕರ್‍ತಾ ತಿ ಅಲ್ತಾರ್ ಮೊಟಿ, ಕಾಯ್ ದೆನ್ಗಿ ಮೊಟಿ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 23:19
6 ತಿಳಿವುಗಳ ಹೋಲಿಕೆ  

ಹೀಗೆ ಏಳು ದಿನಗಳವರೆಗೆ ಬಲಿಪೀಠದ ನಿಮಿತ್ತ ಪಾಪಪರಿಹಾರಕ ಆಚಾರವನ್ನು ನಡೆಸಿ ಅದನ್ನು ಪ್ರತಿಷ್ಠಾಪಿಸು. ಬಲಿಪೀಠವು ಅತಿಶುದ್ಧವಾಗಿರಬೇಕು. ಅದನ್ನು ಸೋಕಿದ್ದೆಲ್ಲವು ಪರಿಶುದ್ಧವಾಗುವುದು.


ಅವು ಅತಿ ಪರಿಶುದ್ಧವಾಗುವಂತೆ ಪ್ರತಿಷ್ಠಿಸಬೇಕು. ಅವುಗಳಿಗೆ ಸೋಕಿದ್ದೆಲ್ಲವು ಪರಿಶುದ್ಧವಾಗುವುದು.


ಒಬ್ಬನು ತನ್ನ ಬಟ್ಟೆಯ ಸೆರಗಿನಲ್ಲಿ ಪ್ರತಿಷ್ಠಿತ ಮಾಂಸವನ್ನು ಕಟ್ಟಿಕೊಂಡು ಬರುತ್ತಿರುವಾಗ ಆ ಸೆರಗು ರೊಟ್ಟಿಯನ್ನಾಗಲಿ, ಅನ್ನವನ್ನಾಗಲಿ, ದ್ರಾಕ್ಷಾರಸವನ್ನಾಗಲೀ, ಎಣ್ಣೆಯನ್ನಾಗಲೀ ಅಥವಾ ಯಾವ ಆಹಾರ ಪದಾರ್ಥವನ್ನೇ ಆಗಲಿ ಸೋಕಿದರೆ ಅದು ಪವಿತ್ರವಾಗುತ್ತದೋ? ಎಂದು ಧರ್ಮವಿಧಿಯನ್ನು ವಿಚಾರಿಸು.” ಪ್ರವಾದಿ ಹಾಗೆ ವಿಚಾರಿಸಲು ಯಾಜಕರು ‘ಇಲ್ಲ’ ಎಂದು ಉತ್ತರಕೊಟ್ಟರು.


ದೃಷ್ಟಿಗೆಟ್ಟ ಮತಿಭ್ರಷ್ಟರೇ, ಯಾವುದು ಶ್ರೇಷ್ಠ? ಚಿನ್ನವೋ, ಚಿನ್ನವನ್ನು ಪಾವನಗೊಳಿಸುವ ದೇವಾಲಯವೋ? ಅಂತೆಯೇ,


ಒಬ್ಬನು ಬಲಿಪೀಠದ ಮೇಲೆ ಆಣೆಯಿಟ್ಟರೆ ಅದಕ್ಕೇನೂ ಬದ್ಧನಲ್ಲ. ಬಲಿಪೀಠದ ಮೇಲಿರುವ ಕಾಣಿಕೆಗಳ ಮೇಲೆ ಆಣೆಯಿಟ್ಟರೋ, ಅದನ್ನು ಅವನು ನಡೆಸಿಯೇ ತೀರಬೇಕು ಎನ್ನುತ್ತೀರಿ.


ಬಲಿಪೀಠದ ಮೇಲೆ ಆಣೆಯಿಡುವವನು ಬಲಿಪೀಠದ ಮೇಲೆ ಮಾತ್ರವಲ್ಲ, ಅದರ ಮೇಲಿರುವ ಪ್ರತಿಯೊಂದು ಕಾಣಿಕೆಯ ಮೇಲೂ ಆಣೆಯಿಡುತ್ತಾನೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು