Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 2:16 - ಕನ್ನಡ ಸತ್ಯವೇದವು C.L. Bible (BSI)

16 ಜ್ಯೋತಿಷಿಗಳಿಂದ ತಾನು ವಂಚಿತನಾದೆ ಎಂದು ಅರಿತ ಹೆರೋದನು ರೋಷಾವೇಶಗೊಂಡನು. ಬೆತ್ಲೆಹೇಮಿಗೂ ಅದರ ಸುತ್ತಮುತ್ತಲಿಗೂ ಆಳುಗಳನ್ನು ಕಳುಹಿಸಿದನು. ತಾನು ಜ್ಯೋತಿಷಿಗಳಿಂದ ತಿಳಿದುಕೊಂಡಿದ್ದ ಕಾಲದ ಆಧಾರದ ಮೇಲೆ ಅಲ್ಲಿದ್ದ, ಎರಡು ವರ್ಷಗಳಿಗೆ ಮೀರದ, ಎಲ್ಲಾ ಗಂಡುಮಕ್ಕಳನ್ನು ಕೊಂದುಹಾಕಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಆಗ ಹೆರೋದನು ತಾನು ಜ್ಞಾನಿಗಳಿಂದ ವಂಚಿತನಾದೆ ಎಂದು ತಿಳಿದು ಬಹಳ ಕೋಪಗೊಂಡು ತನ್ನ ಆಳುಗಳನ್ನು ಕಳುಹಿಸಿ ತಾನು ಜ್ಞಾನಿಗಳಿಂದ ಕೂಸು ಹುಟ್ಟಿದ್ದ ಗಳಿಗೆಯನ್ನು ತಿಳಿದುಕೊಂಡಿದ್ದ ಕಾಲಕ್ಕೆ ಸರಿಯಾಗಿ, ಬೇತ್ಲೆಹೇಮಿನಲ್ಲಿಯೂ ಅದರ ಎಲ್ಲಾ ನೆರೆಹೊರೆ ಹಳ್ಳಿಗಳಲ್ಲಿಯೂ ಹುಟ್ಟಿದ ಎರಡು ವರ್ಷದೊಳಗಿನ ಗಂಡು ಕೂಸುಗಳನ್ನೆಲ್ಲಾ ಕೊಲ್ಲಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

16 ಆಗ ಹೆರೋದನು ತನಗೆ ಜೋಯಿಸರು ಮೋಸ ಮಾಡಿದರೆಂದು ತಿಳಿದು ಬಹಳ ಸಿಟ್ಟಾಗಿ ಆಳುಗಳನ್ನು ಕಳುಹಿಸಿ ತಾನು ಜೋಯಿಸರಿಂದ ತಿಳುಕೊಂಡ ಕಾಲಕ್ಕೆ ಸರಿಯಾಗಿ, ಬೇತ್ಲೆಹೇವಿುನಲ್ಲಿಯೂ ಅದರ ಎಲ್ಲಾ ನೆರೆಹೊರೆ ಹಳ್ಳಿಗಳಲ್ಲಿಯೂ ಎರಡು ವರುಷದೊಳಗಿನ ಗಂಡುಕೂಸುಗಳನ್ನೆಲ್ಲಾ ಕೊಲ್ಲಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

16 ಜ್ಞಾನಿಗಳು ತನಗೆ ಮೋಸಮಾಡಿದರೆಂಬುದು ತಿಳಿದಾಗ ಹೆರೋದನು ಬಹಳ ಕೋಪಗೊಂಡನು. ಆ ಮಗು ಹುಟ್ಟಿದ ಸಮಯವನ್ನು ಹೆರೋದನು ಜ್ಞಾನಿಗಳಿಂದ ತಿಳಿದುಕೊಂಡಿದ್ದನು. ಆ ಮಗು ಹುಟ್ಟಿ ಎರಡು ವರ್ಷಗಳಾಗಿದ್ದವು. ಆದ್ದರಿಂದ ಹೆರೋದನು ಬೆತ್ಲೆಹೇಮಿನಲ್ಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿದ್ದ ಎರಡು ವರ್ಷದ ಮತ್ತು ಅವರಿಗಿಂತ ಚಿಕ್ಕವರಾದ ಗಂಡುಮಕ್ಕಳನ್ನೆಲ್ಲಾ ಕೊಲ್ಲಬೇಕೆಂದು ಆಜ್ಞಾಪಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

16 ಜ್ಞಾನಿಗಳು ತನಗೆ ಮೋಸಮಾಡಿದರೆಂದು ತಿಳಿದ ಹೆರೋದನು ಬಹಳ ಕೋಪಗೊಂಡನು, ಜ್ಞಾನಿಗಳಿಂದ ಸೂಕ್ಷ್ಮವಾಗಿ ವಿಚಾರಿಸಿಕೊಂಡ ಪ್ರಕಾರವೇ, ಬೇತ್ಲೆಹೇಮ್ ಮತ್ತು ಅದರ ಸುತ್ತಮುತ್ತಲ ಪ್ರದೇಶದಲ್ಲಿದ್ದ ಎರಡು ವರ್ಷದೊಳಗಿನ ಎಲ್ಲಾ ಗಂಡು ಮಕ್ಕಳನ್ನು ಕೊಂದುಹಾಕಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ದೆವಾಚಿ ಖರಿ ಖಬರ್

16 ತ್ಯಾ ಭೆಟುಕ್ ಯೆಲ್ಲ್ಯಾನಿ ಅಪ್ನಾಕ್ ಪಸ್ವುಲ್ಯಾನಿ ಮನುನ್ ಹೆರೊದಾಕ್ ಕಳ್ಳೆ, ತನ್ನಾ ಹೆರೊದ್ ರಾಜಾಕ್ ಕಡ್ಕಡುನ್ ರಾಗ್ ಯೆಲೊ ತ್ಯಾ ಭೆಟುಕ್ ಯೆಲ್ಲ್ಯಾನಿಕ್ನಾ ಆಯ್ಕುನ್ ಘೆಟಲ್ಲ್ಯಾ ಎಳಾಚೊ ಅಂದಾಜ್ ಕರುನ್ ಘೆವ್ನ್ ಬೆತ್ಲೆಹೆಮಾತ್ ಅನಿ ಭೊತ್ಯಾನಿ ಹೊತ್ತ್ಯಾ ಗಾವಾನಿತ್ಲ್ಯಾ ದೊನ್ ವರ್ಸಾಚ್ಯಾ ಭುತ್ತುರ್‍ಲ್ಯಾ ಝಿಲ್ ಪೊರಾಕ್ನಿ ಜಿವಾನಿ ಮಾರಾ ಮನುನ್ ಅಪ್ನಾಚ್ಯಾ ಸೈನಿಕಾಕ್ನಿ ಧಾಡುನ್ ದಿಲ್ಯಾನ್. ಅನಿ ತೆನಿ ಸಗ್ಳ್ಯಾ ಪೊರಾಕ್ನಿ ಜಿವಾನಿ ಮಾರ್‍ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 2:16
21 ತಿಳಿವುಗಳ ಹೋಲಿಕೆ  

ನಿಮ್ಮ ಕಾಲುಗಳು ಓಡುವುದು ಕೇಡಿಗಾಗಿ, ನೀವು ತವಕಪಡುವುದು ನಿರಪರಾಧಿಯ ರಕ್ತಪಾತಕ್ಕಾಗಿ. ನಿಮ್ಮ ಈ ಆಲೋಚನೆಗಳು ದುಷ್ಟವಾದುವು, ನೀವು ಹಿಡಿದ ಹಾದಿಗಳು ತರುವುದು ನಾಶವಿನಾಶವನ್ನೇ.


ದಲಿತರನ್ನಾಳುವ ದುರುಳರಾಜ ಗರ್ಜಿಸುವ ಸಿಂಹ, ಹುಡುಕಾಡುವ ಕರಡಿ.


ದೇವಜನರ ರಕ್ತವನ್ನು ಮತ್ತು ಕ್ರಿಸ್ತೇಸುವಿಗೋಸ್ಕರ ಹುತಾತ್ಮರಾದವರ ರಕ್ತವನ್ನು ಹೀರಿ ಮತ್ತಳಾಗಿದ್ದಳು ಅವಳು. ಇದನ್ನು ಕಂಡು ನನಗೆ ದಿಗ್ಭ್ರಮೆಯಾಯಿತು.


ಎಂತಲೇ ನಿನ್ನ ಜಾತಿಜನಾಂಗಗಳ ವಿರುದ್ಧ ಯುದ್ಧ ಘೋಷಣೆ ಮೊಳಗುವುದು. ಕಾಳಗದ ದಿನದಲ್ಲಿ ಕೋಟೆಕೊತ್ತಲಗಳು ಸೂರೆಯಾಗುವುವು. ಶಲ್ಮಾನ ರಾಜನು ಬೇತ್‍ಅರ್ಬೇಲ್ ಪಟ್ಟಣವನ್ನು ನೆಲಸಮಮಾಡಿದಂತೆ ಆಗುವುದು. ತಾಯಿ ಮಕ್ಕಳನ್ನು ಬಂಡೆಗೆ ಅಪ್ಪಳಿಸಿ ಸಾಯಿಸಿದಂತೆ ಇದೆಲ್ಲ ನಡೆಯುವುದು.


ನೆಬೂಕದ್ನೆಚ್ಚರನು ಉಗ್ರಕೋಪಗೊಂಡು ಶದ್ರಕ್, ಮೇಶಕ್, ಅಬೇದ್‍ನೆಗೋ ಎಂಬವರನ್ನು ಹಿಡಿದುತರಲು ಆಜ್ಞಾಪಿಸಿದನು.


ಇಗೋ, ಸರ್ವೇಶ್ವರ ಜಗದ ಜನಕ್ಕೆ ಅವರವರ ಪಾಪದ ಫಲವನ್ನು ಉಣಿಸಲು ತಮ್ಮ ನಿವಾಸದಿಂದ ಹೊರಟಿರುವರು. ಭೂಮಿ ತನ್ನಲ್ಲಿ ಇಂಗಿದ ರಕ್ತವನ್ನು ಬೆಳಕಿಗೆ ತರುವುದು; ಭೂನಿವಾಸಿಗಳಲ್ಲಿ ಹತರಾದವರನ್ನು ಇನ್ನು ಮರೆಮಾಚದು.


ಹಜಾಯೇಲನು, “ನನ್ನೊಡೆಯಾ, ಏಕೆ ಅಳುತ್ತೀರಿ?” ಎಂದು ಕೇಳಿದನು. ಅದಕ್ಕೆ ಅವನು, “ನೀನು ಇಸ್ರಯೇಲರಿಗೆ ಎಷ್ಟು ಕೇಡು ಮಾಡುವೆಯೆಂಬುದು ನನಗೆ ಪ್ರಕಟವಾಯಿತು. ನೀನು ಅವರ ಕೋಣೆಗಳಿಗೆ ಬೆಂಕಿ ಹೊತ್ತಿಸುವೆ; ಯೌವನಸ್ಥರನ್ನು ಕತ್ತಿಯಿಂದ ಸಂಹರಿಸುವೆ; ಮಕ್ಕಳನ್ನು ಬಂಡೆಗೆ ಅಪ್ಪಳಿಸುವೆ; ಗರ್ಭಿಣಿಯರ ಹೊಟ್ಟೆಯನ್ನು ಸೀಳುವೆ,” ಎಂದು ಉತ್ತರಕೊಟ್ಟನು.


ದೆಲೀಲಳು ಮತ್ತೊಮ್ಮೆ ಸಂಸೋನನಿಗೆ, “ನೀವು ನನ್ನನ್ನು ವಂಚಿಸಿದಿರಿ; ಸುಳ್ಳಾಡದೆ ನಿಮ್ಮನ್ನು ಯಾವುದರಿಂದ ಕಟ್ಟಬಹುದೆಂಬುದನ್ನು ದಯವಿಟ್ಟು ನನಗೆ ತಿಳಿಸಿ,” ಎಂದಳು.


ಅವರ ಕೋಪ ಭೀಕರ, ಅದಕ್ಕಿರಲಿ ಧಿಕ್ಕಾರ! ಅವರ ರೌದ್ರ - ಕ್ರೂರ, ಅದಕ್ಕಿರಲಿ ಧಿಕ್ಕಾರ! ವಿಭಾಗಿಸುವೆನವರನು ಯಕೋಬ ಕುಲದಲಿ ಚದರಿಸುವೆನವರನು ಇಸ್ರಯೇಲರಲಿ.


ನರಹತ್ಯಮಾಡಿದ ಪಾಪಾತ್ಮನು ಪಾತಾಳದತ್ತ ಓಡೋಡುತ್ತಿರುವನು; ಅವನನ್ನು ಯಾರೂ ತಡೆಯಬಾರದು.


ನೀತಿವಂತನೂ ನಿರ್ದೋಷಿಯೂ ಆದ ನಾನು ದೇವರನ್ನು ಪ್ರಾರ್ಥಿಸಿ ಪ್ರತ್ಯುತ್ತರಕ್ಕಾಗಿ ಕಾದಿರಲು ಗೆಳೆಯರ ಗೇಲಿಪರಿಹಾಸ್ಯಕೆ ಗುರಿಯಾದೆನು.


ಇದನ್ನು ಕೇಳಿ ಬಾಲಾಕನಿಗೆ ಬಿಳಾಮನ ಮೇಲೆ ಕಡುಕೋಪ ಉಂಟಾಯಿತು. ಅವನು ಕೈಕೈಹಿಸಿಕಿಕೊಂಡು ಬಿಳಾಮನಿಗೆ, “ಶತ್ರುಗಳನ್ನು ಶಪಿಸುವುದಕ್ಕೆ ನಿನ್ನನ್ನು ಕರೆಸಿದೆ; ಆದರೆ ನೀನು ಮೂರು ಸಾರಿಯೂ ಅವರನ್ನೇ ಆಶೀರ್ವದಿಸಿದೆ.


ಅದಕ್ಕೆ ಬಿಳಾಮನು, “ನೀನು ಇಷ್ಟಬಂದಂತೆ ನನ್ನನ್ನು ಅತ್ತಿತ್ತ ಆಡಿಸಿದೆ; ನನ್ನ ಕೈಯಲ್ಲಿ ಕತ್ತಿಯಿದ್ದಿದ್ದರೆ ನಿನ್ನನ್ನು ಕೊಂದು ಹಾಕಿಬಿಡುತ್ತಿದ್ದೆ,” ಎಂದನು.


ಪತಿ ಬಂದಾಗ ಆಕೆ ಅವನಿಗೆ ಅದೇ ಮಾತನ್ನು ಹೇಳುತ್ತಾ, “ನೀವು ಮನೆಗೆ ಸೇರಿಸಿಕೊಂಡ ಆ ಹಿಬ್ರಿಯ ಸೇವಕನು ನನ್ನನ್ನು ಮಾನಭಂಗಪಡಿಸುವುದಕ್ಕಾಗಿ ನನ್ನ ಬಳಿಗೆ ಬಂದ. ನಾನು ಕೂಗಿಕೊಂಡೆ.


“ನೋಡಿ, ನನ್ನ ಯಜಮಾನರು ಮಾಡಿರುವ ಕೆಲಸ, ಒಬ್ಬ ಹಿಬ್ರಿಯನನ್ನು ಮನೆಗೆ ಸೇರಿಸಿಕೊಂಡು ನಮ್ಮನ್ನು ಅವಮಾನಕ್ಕೆ ಗುರಿಮಾಡಿದ್ದಾರೆ. ಅವನು ಅತ್ಯಾಚಾರಕ್ಕಾಗಿ ನನ್ನ ಹತ್ತಿರಕ್ಕೆ ಬಂದ; ನಾನು ಗಟ್ಟಿಯಾಗಿ ಕೂಗಿಕೊಂಡೆ.


ಯೇಸುಸ್ವಾಮಿ ಜನಿಸಿದ್ದು ಹೆರೋದರಸನ ಕಾಲದಲ್ಲಿ: ಜುದೇಯ ನಾಡಿನ ಬೆತ್ಲೆಹೇಂ ಎಂಬ ಊರಿನಲ್ಲಿ.ಕೆಲವು ಜ್ಯೋತಿಷಿಗಳು ಪೂರ್ವದಿಕ್ಕಿನಿಂದ ಹೊರಟು ಜೆರುಸಲೇಮಿಗೆ ಬಂದರು.


ಆಗ ಹೆರೋದನು ಆ ಜ್ಯೋತಿಷಿಗಳನ್ನು ಗೋಪ್ಯವಾಗಿ ಬರಮಾಡಿಕೊಂಡು ಅವರಿಗೆ ನಕ್ಷತ್ರ ಕಾಣಿಸಿಕೊಂಡ ಕಾಲವನ್ನು ಸ್ಪಷ್ಟವಾಗಿ ಕೇಳಿ ತಿಳಿದುಕೊಂಡನು.


“ಕೇಳಿಬರುತಿದೆ ರಮಾ ಊರಿನೊಳು ರೋದನ, ಗೋಳಾಟ, ಅಘೋರ ಆಕ್ರಂದನ; ಕಳೆದುಕೊಂಡ ಮಕ್ಕಳಿಗಾಗಿ ಗೋಳಿಡುತಿಹಳು ರಾಖೇಲಳು ಇನ್ನಿಲ್ಲದವುಗಳಿಗಾಗಿ ಉಪಶಮನ ಒಲ್ಲೆನೆನುತಿಹಳು,”


ಅದು ತನ್ನ ಬಾಲದಿಂದ ಮೂರನೆಯ ಒಂದು ಭಾಗದಷ್ಟು ನಕ್ಷತ್ರಗಳನ್ನು ಆಕಾಶದಿಂದ ಸೆಳೆದೆಳೆದು ಅವುಗಳನ್ನು ಭೂಮಿಗೆ ಎಸೆಯಿತು. ಮಗು ಹುಟ್ಟಿದ ಕೂಡಲೇ ಅದನ್ನು ನುಂಗಿಬಿಡಬೇಕೆಂದು ಘಟಸರ್ಪವು ಆ ತುಂಬು ಗರ್ಭಿಣಿಯ ಬಳಿಯಲ್ಲಿಯೇ ಕಾಯ್ದುಕೊಂಡಿತ್ತು.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು